ಎಷ್ಟೇ ದಿನದಿಂದ ನಿಮಗೆ ಮಂಡಿ ನೋವು ಇರಲಿ ಈ ಮದ್ದನ್ನು ಒಂದು ಸರಿ ಹಾಕಿದರೆ ಸಾಕು ನಿಮ್ಮ ಮಂಡಿ ನೋವು ಬೇಗನೆ ಕಡಿಮೆ ಆಗುತ್ತದೆ. ಕೆಲವರು ತುಂಬಾ ದಿನದಿಂದ ಮಂಡಿ ನೋವಿನಿಂದ ಬಳಲುತ್ತಿರುತ್ತಾರೆ. ಇನ್ನು ಕೆಲವರಿಗೆ ಚಳಿಗಾಲ ಮಳೆಗಾಲದಲ್ಲಿ ಮಂಡಿ ನೋವು ಶುರು ಆಗುತ್ತದೆ. ಈ ಒಂದು ಮನೆಮದ್ದನ್ನು ಅಪ್ಲೈ ಮಾಡಿ ನೋಡಿ ಎಷ್ಟು ಬೇಗನೆ ಈ ಎಣ್ಣೆಯಿಂದ ರಿಲೀಫ್ ಸಿಗತ್ತೆ.ಈ ಮನೆಮದ್ದು ಮಾಡುವುದಕ್ಕೆ ಮೊದಲು ಬೇಕಾಗಿರೋದು ಸಾಸಿವೆ. ಇದನ್ನು ಅಡುಗೆ ಮಾಡುವಾಗ ಹೊಗ್ಗರಣೆಗೆ ಬಳಸುತ್ತೇವೆ. ಇದು ವಾತ ಕಸವನ್ನು ಗುಣ ಮಾಡುತ್ತಾದೆ. ಸ್ವಲ್ಪ ಸಾಸಿವೆ ತೆಗೆದುಕೊಂಡು ಪುಡಿ ಮಾಡಿಕೊಳ್ಳಿ.
ಇನ್ನು ಹೊಗ್ಗರಣೆ ಸೌಟ್ ತೆಗೆದುಕೊಂಡು 10 ರಿಂದ 15 ಚಮಚ ಆಗುವಷ್ಟು ಎಳ್ಳೆಣ್ಣೆ ಹಾಕಿ ಬಿಸಿ ಮಾಡಿ ಒಂದು ಚಮಚ ಸಾಸಿವೆ ಪುಡಿ ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಇನ್ನು ಕುಪ್ಪೆ ಗಿಡ ಎನ್ನುವುದು ಸಿಗುತ್ತದೆ. ಇದನ್ನು 10 ರಿಂದ 15 ಎಲೆ ತೆಗೆದುಕೊಂಡು ಚಿಕ್ಕ ಪೀಸ್ ಮಾಡಿಕೊಂಡು ಎಳ್ಳೆಣ್ಣೆ ಗೆ ಹಾಕಿ ಕುದಿಸಬೇಕು. ಈ ಎಣ್ಣೆ ನಿಮ್ಮ ಎಷ್ಟೇ ಹಳೆಯ ಮಂಡಿ ನೋವು ಇದ್ದರು ಸಹ ಇದನ್ನು ಹಚ್ಚಿದರೆ ಸಾಕು ನಿವಾರಣೆ ಆಗುತ್ತದೆ. ಇನ್ನು ಕೈ ಕಾಲು ನೀವು ಬಾವು ಬಂದರು ಸಹ ಈ ಎಣ್ಣೆ ಬಳಸಬಹುದು. ಅಷ್ಟೇ ಅಲ್ಲದೆ ಮಕ್ಕಳಿಗೆ ಕೈ ಕಾಲು ನೋವು ಇದ್ದರು ಈ ಎಣ್ಣೆಯನ್ನು ಬಳಸಬಹುದು.