ನಮಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಕಳೆದುಕೊಳ್ಳಲು ನಾವು ಬಯಸುವುದಿಲ್ಲ. ಯಾವುದೇ ರೀತಿಯ ಕಳ್ಳತನವೂ ಅಶುಭವೆಂದೇ ನೋಡಲಾಗುತ್ತದೆ. ಆದರೆ ಇದಕ್ಕೊಂದು ಅಪವಾದವೆಂದರೆ ಚಪ್ಪಲಿ ಕಳುವು. ಹೌದು, ಜ್ಯೋತಿಷ್ಯದಲ್ಲಿ ಚಪ್ಪಲಿ, ಶೂ ಕಳೆದುಕೊಂಡರೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಈ ಕಳುವು ಶನಿವಾರದಂದೇ ಆದರೆ ಮತ್ತೂ ಶುಭವೆನ್ನಲಾಗುತ್ತದೆ. ಇದಕ್ಕೆ ಕಾರಣವೇನು ನೋಡೋಣ.
ಕಳ್ಳತನವು ನಿಮ್ಮ ಹಣದ ನಷ್ಟವನ್ನು ಸೂಚಿಸುತ್ತದೆಯಾದರೂ, ಶೂಗಳು ಮತ್ತು ಚಪ್ಪಲಿಗಳ ಕಳ್ಳತನ ಮಂಗಳಕರ. ಹೌದು, ಈಗೀಗ ಶೂ, ಚಪ್ಪಲಿಗಳಿಗೂ ಸಾವಿರಾರು ರೂಪಾಯಿ ಖರ್ಚು ಮಾಡಿರುತ್ತೇವೆ. ಹಾಗಿದ್ದೂ, ಅವು ಕಳುವಾದಾಗ ಬೇಸರ ಪಡುವ ಅಗತ್ಯವಿಲ್ಲ. ಅದರಲ್ಲೂ ಶನಿವಾರದಂದು ಚರ್ಮದ ಬೂಟುಗಳು ಕದ್ದಿದ್ದರೆ, ಅದಕ್ಕಾಗಿ ನೀವು ಕುಣಿದು ಕುಪ್ಪಳಿಸಬೇಕು. ಇಷ್ಟಕ್ಕೂ ಪಾದರಕ್ಷೆ, ಚಪ್ಪಲಿ ಕಳವು ಮಾಡುವುದರಿಂದ ಆಗುವ ಜ್ಯೋತಿಷ್ಯದ ಲಾಭ ತಿಳಿದವರು ತಮ್ಮ ಪಾದುಕೆ, ಚಪ್ಪಲಿಯನ್ನು ಶನಿದೇವರ ದೇವಸ್ಥಾನಗಳಲ್ಲಿ ಬಿಡುತ್ತಾರೆ.
ಶನಿವಾರ ಪಾದರಕ್ಷೆ ಕದ್ದರೆ, ಚರ್ಮದ ಬೂಟುಗಳನ್ನು ಕದ್ದರೆ ತಮ್ಮ ಎಲ್ಲ ಸಮಸ್ಯೆಗಳು ಕದ್ದವನೊಂದಿಗೆ ಹೋಗುತ್ತವೆ ಎಂದು ನಂಬಲಾಗಿದೆ. ವಾಸ್ತವದಲ್ಲಿ ಈ ನಂಬಿಕೆಯು ಜ್ಯೋತಿಷ್ಯದ ಆಧಾರದ ಮೇಲೆ ಪ್ರಚಲಿತವಾಗಿದೆ. ಜ್ಯೋತಿಷ್ಯದಲ್ಲಿ, ಶನಿಗ್ರಹವನ್ನು ಕ್ರೂರ ಮತ್ತು ಕಠಿಣ ಗ್ರಹವೆಂದು ಪರಿಗಣಿಸಲಾಗಿದೆ. ಶನಿಯು ಒಬ್ಬ ವ್ಯಕ್ತಿಗೆ ಅಹಿತಕರ ಫಲಿತಾಂಶಗಳನ್ನು ನೀಡಿದಾಗ, ಅವನು ಅವನಿಂದ ಕಠಿಣ ಕೆಲಸವನ್ನು ಮಾಡಿಸುತ್ತಾನೆ ಮತ್ತು ನಾಮಮಾತ್ರದ ಪ್ರತಿಫಲವನ್ನು ನೀಡುತ್ತಾನೆ. ಜಾತಕದಲ್ಲಿ ಸದಾಶತಿ ಅಥವಾ ಶನಿ ದಯ್ಯಾ ಇರುವವರು ಅಥವಾ ಶನಿ ಸಾಡೇಸಾತಿ ನಡೆಯುತ್ತಿರುವವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಶನಿ ಕಾಟದಿಂದ ಮುಕ್ತಿ
ಜ್ಯೋತಿಷ್ಯದ ಪ್ರಕಾರ, ಶನಿಯು ದೇಹದ ಕೆಳಭಾಗಕ್ಕೆ, ವಿಶೇಷವಾಗಿ ಪಾದಗಳ ಜೊತೆ ಸಂಬಂಧ ಹೊಂದಿದ್ದಾನೆ. ಶೂ ಮತ್ತು ಚಪ್ಪಲಿಯೊಂದಿಗೆ ಶನಿ ಮತ್ತು ರಾಹುವಿಗೆ ಸಂಬಂಧವಿದೆ. ಶನಿ ಮತ್ತು ರಾಹು ಉತ್ತಮ ಸ್ಥಾನದಲ್ಲಿದ್ದವರು, ಪಾದರಕ್ಷೆ ವ್ಯಾಪಾರದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಾರೆ.
ಶನಿವಾರ ಶನಿಯ ದಿನ. ನಮ್ಮ ದೇಹದ ಅಂಗಾಂಗಗಳೂ ಗ್ರಹಗಳ ಪ್ರಭಾವಕ್ಕೆ ಒಳಗಾಗುತ್ತವೆ. ಶನಿಯು ಚರ್ಮ, ಕೂದಲು ಮತ್ತು ಪಾದಗಳಿಗೆ ಸಂಬಂಧಿಸಿದ ವಿಷಯ ನಿಯಂತ್ರಿಸುತ್ತಾನೆ. ಶನಿಗೆ ಪಾದ ಮತ್ತು ಚರ್ಮಕ್ಕೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಿದರೆ ಅನೇಕ ಶುಭ ಫಲಗಳು ಲಭಿಸುತ್ತವೆ ಮತ್ತು ಪಾದ ಮತ್ತು ಚರ್ಮ ಸಂಬಂಧಿ ಕಾಯಿಲೆಗಳಿಗೆ ಪರಿಹಾರ ದೊರೆಯುತ್ತದೆ.
ಹಾಗಾಗಿ ಶನಿವಾರದಂದು ಚರ್ಮದ ಬೂಟುಗಳನ್ನು ಯಾರಾದರೂ ಕದ್ದರೆ ನಮ್ಮ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ನಾವು ಪರಿಗಣಿಸಬೇಕು. ಶನಿಯು ಇನ್ನು ಮುಂದೆ ತೊಂದರೆ ಕೊಡುವುದಿಲ್ಲ. ಶನಿದೇವರ ದೇವಸ್ಥಾನಗಳಲ್ಲಿ ಪಾದರಕ್ಷೆ ಬಿಡುವುದರಿಂದ ಶನಿಯ ಬಾಧೆಗಳು ಕಡಿಮೆಯಾಗುತ್ತವೆ.
ಶನಿವಾರದಂದು ಬೂಟುಗಳು ಮತ್ತು ಚಪ್ಪಲಿಗಳು ಕಳ್ಳತನವಾದರೆ ಅದನ್ನು ಮಂಗಳಕರ ಚಿಹ್ನೆ ಎಂದು ಪರಿಗಣಿಸಬೇಕು. ಮತ್ತು ಪಾದರಕ್ಷೆಗಳೊಂದಿಗೆ ನಿಮ್ಮ ಸಮಸ್ಯೆಗಳು ಸಹ ದೂರ ಹೋಗಿವೆ ಎಂದು ಅರ್ಥ ಮಾಡಿಕೊಳ್ಳಬೇಕು.
ಅಂದ ಹಾಗೆ, ಮಂಗಳವಾರ, ಶನಿವಾರ ಮತ್ತು ಗ್ರಹಣದ ದಿನಗಳಲ್ಲಿ ಎಂದಿಗೂ ಶೂ ಮತ್ತು ಚಪ್ಪಲಿಗಳನ್ನು ಖರೀದಿಸಬೇಡಿ. ಅಮಾವಾಸ್ಯೆಯ ದಿನ ಪಾದರಕ್ಷೆಗಳನ್ನು ಖರೀದಿಸುವ ತಪ್ಪನ್ನು ಮಾಡಬೇಡಿ.