ರಾತ್ರಿ ಹೊತ್ತು ಮಲಗಿದ್ದಾಗ ಕನಸುಗಳು ಬೀಳುವುದು ಸಾಮಾನ್ಯವಾದ ವಿಚಾರವಾಗಿದೆ. ಆದರೆ ಆ ಕನಸುಗಳಲ್ಲಿ ನಾವು ಏನೆಲ್ಲಾ ನೋಡುತ್ತೇವೆ ಮತ್ತು ಹಾಗೆ ಕನಸುಗಳು ಬಿದ್ದರೆ ಅದರ ಅರ್ಥವೇನು ತಿಳಿದುಕೊಳ್ಳುವುದು ತುಂಬಾನೇ ಒಂದು ಕುತೂಹಲಕಾರಿಯಾದ ವಿಷಯ. ಕೆಲವೊಬ್ಬರಿಗೆ ಕನಸಿನಲ್ಲಿ ಒಂದು ನಿರ್ದಿಷ್ಟವಾದ ಅಥವಾ ಅಸ್ಪಷ್ಟವಾದ ಸನ್ನಿವೇಶ ಮತ್ತು ಸಂದರ್ಭಗಳ ದೃಶ್ಯಗಳು ಬಂದರೆ, ಇನ್ನೂ ಕೆಲವರಿಗೆ ಈ ಪ್ರಾಣಿ ಪಕ್ಷಿಗಳು ಕನಸಿನಲ್ಲಿ ಬರುತ್ತವೆ ಪ್ರತಿಯೊಂದು ಕನಸಿಗೂ ಅದರದೇ ಆದ ಒಂದು ಅರ್ಥವಿರುತ್ತದೆ ಎಂದು ಕನಸಿನ ತಜ್ಞರು ಹೇಳುತ್ತಾರೆ.
ಇಲ್ಲಿ ಒಂದು ಪ್ರಾಣಿ ನಿಮ್ಮ ಕನಸಿನಲ್ಲಿ ಪದೇ ಪದೇ ಬರುತ್ತಿದ್ದರೆ, ಅದರ ಅರ್ಥ ಏನು ಅಂತ ವಿವರವಾಗಿ ತಿಳಿಸಿದ್ದಾರೆ ನೋಡಿ ತಜ್ಞರು. ಅದು ಯಾವ ಪ್ರಾಣಿ ಅಂತೀರಾ?ನೀವು ಇತ್ತೀಚೆಗೆ ಈ ಕರಡಿಗಳ ಬಗ್ಗೆ ಸಾಕಷ್ಟು ಕನಸು ಕಾಣುತ್ತಿದ್ದರೆ, ಈ ಕನಸುಗಳು ನಿಮಗೆ ಏನು ಹೇಳಲು ಪ್ರಯತ್ನಿಸುತ್ತಿವೆ ಎಂದು ನೀವು ಆಶ್ಚರ್ಯಪಡುತ್ತಿರಬಹುದು. ಕಂದು ಬಣ್ಣದ ಕರಡಿಗಳಿಂದ ಹಿಡಿದು ಪಾಂಡಾ ಕರಡಿಗಳವರೆಗೆ, ಏನೆಲ್ಲಾ ಅರ್ಥವನ್ನು ತಿಳಿಸುತ್ತವೆ ಅಂತ ತಜ್ಞರು ವಿವರವಾಗಿ ಇಲ್ಲಿ ಹೇಳಿದ್ದಾರೆ ನೋಡಿ.
ಕರಡಿಗಳ ಬಗ್ಗೆ ಕನಸುಗಳು ಎಂದರೇನು ಅರ್ಥ?ವೃತ್ತಿಪರ ಕನಸಿನ ವ್ಯಾಖ್ಯಾನಕಾರ ಲಾರಿ ಲೊವೆನಬರ್ಗ್ ಪ್ರಕಾರ, ನಿಮ್ಮ ನಿರ್ದಿಷ್ಟ ಕನಸಿನ ನಿರ್ದಿಷ್ಟ ಅರ್ಥವನ್ನು ನೀವು ಮಾತ್ರ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಹುದಾದರೂ, ಸಾಮಾನ್ಯವಾಗಿ ಕರಡಿ ಕನಸುಗಳಲ್ಲಿ ಕೆಲವು ಸಾಮಾನ್ಯ ವಿಷಯಗಳಿವೆ. ಅವರು ಮೈಂಡ್ ಬಾಡಿ ಗ್ರೀನ್ಗೆ ನೀಡಿದ ಸಂದರ್ಶನದಲ್ಲಿ “ನಮ್ಮ ಕನಸಿನಲ್ಲಿ ಬರುವ ಪ್ರಾಣಿಗಳಲ್ಲಿ ಕರಡಿಗಳು ತುಂಬಾನೇ ಸಾಮಾನ್ಯವಾಗಿ ಮತ್ತು ಹೆಚ್ಚು ಕನಸುಗಳಲ್ಲಿ ಬರುವ ಪ್ರಾಣಿ” ಎಂದು ಹೇಳಿದ್ದಾರೆ.
ಹೆಚ್ಚು ಜನಕ್ಕೆ ಕರಡಿಯೇ ಕನಸಲ್ಲಿ ಬರುತ್ತಂತೆ!ತಮ್ಮ ಬಳಿ ಬರುವ ಕ್ಲೈಂಟ್ ಗಳಲ್ಲಿ ಹೆಚ್ಚಿನವರು ಕರಡಿ ಕನಸಿನಲ್ಲಿ ಬಂದಿರುವ ಬಗ್ಗೆ ಹೇಳುತ್ತಾರೆ ಎಂದು ಹೇಳಿದ್ದಾರೆ. ಈ ರೀತಿಯಾಗಿ ಕನಸಿನಲ್ಲಿ ಹೆಚ್ಚಾಗಿ ಕರಡಿಗಳು ಬಂದರೆ ಅದರರ್ಥ ನಾವು ಯಾರನ್ನಾದರೂ “ಅತಿಯಾಗಿ ಸಹಿಸಿಕೊಳ್ಳುವ” ವಿಷಯಕ್ಕೆ ಅದು ಸಂಬಂಧಿಸಿರುತ್ತದೆ ಎಂದು ಅವರು ಹೇಳುತ್ತಾರೆ.
ಯಾವುದೇ ಕನಸನ್ನು ಅರ್ಥೈಸುವುದು ಎಂದರೆ ನಿಮ್ಮ ಕನಸಿನ ಮನಸ್ಸಿನಲ್ಲಿ ಯಾವ ನಿಜ ಜೀವನದ ಸನ್ನಿವೇಶವು ಪ್ರವೇಶಿಸುತ್ತಿದೆ ಎಂಬುದನ್ನು ಗುರುತಿಸುವುದು, ಮತ್ತು ಇದಲ್ಲದೆ, ಕನಸಿನಲ್ಲಿ ನೀವು ಹೇಗೆ ಭಾವಿಸುತ್ತೀರಿ ಮತ್ತು ನಿಮ್ಮ ಜೀವನದಲ್ಲಿ ನೀವು ಎಲ್ಲಿ ಮತ್ತು ಯಾವಾಗ ಯಾವ ರೀತಿ ಭಾವಿಸುತ್ತೀರಿ ಎಂಬುದನ್ನು ಗುರುತಿಸುವುದು. ಆದ್ದರಿಂದ ಕರಡಿಗಳ ವಿಷಯಕ್ಕೆ ಬಂದಾಗ, ಕರಡಿ ನಿಮ್ಮನ್ನು ಅಥವಾ ಇನ್ನೊಬ್ಬ ವ್ಯಕ್ತಿಯನ್ನು ಪ್ರತಿನಿಧಿಸುತ್ತದೆಯೇ ಎಂದು ನೀವು ಕಂಡು ಹಿಡಿಯಬೇಕು.
ನಿಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ನೀವು ಒತ್ತಡದಲ್ಲಿದ್ದರೆ ಮತ್ತು ಮಲಗುವ ಕರಡಿಯ ಕನಸು ಕಾಣುತ್ತಿದ್ದರೆ, ಅದು ಖರ್ಚನ್ನು ಕಡಿಮೆ ಮಾಡುವ ಸಂಕೇತವಾಗಿದೆ.ಏಕೆಂದರೆ ಅವು ಹೆಚ್ಚಾಗಿ ನಮ್ಮ ಜೀವನದಲ್ಲಿ ಅತಿರೇಕದ ಜನರನ್ನು ಪ್ರತಿನಿಧಿಸುತ್ತವೆ. ಕರಡಿಯ ನಡವಳಿಕೆ, ಸ್ವಭಾವವನ್ನು ಹೋಲುವ ಜನರು ನಿಮ್ಮ ಸುತ್ತಮುತ್ತಲು ಇದ್ದಾರೆಯೇ ಅಂತ ನೋಡಿಕೊಳ್ಳಿ. ಇಲ್ಲವೇ ನೀವು ಈಗ ವ್ಯವಹರಿಸುತ್ತಿರುವ ನಿಮ್ಮ ಹತ್ತಿರದ ಯಾರಿಗಾದರೂ ಇದು ಸರಿಹೊಂದುತ್ತದೆಯೇ ಎಂದು ಸಹ ನೋಡಿಕೊಳ್ಳಿ ಎಂದು ಅವರು ವಿವರಿಸುತ್ತಾರೆ.
ಅಲ್ಲಿಂದ, ನೀವು ಕನಸಿನಿಂದ ಮೊದಲು ಎಚ್ಚರಗೊಂಡಾಗ ನಿಮಗೆ ಹೇಗೆ ಅನಿಸುತ್ತದೆ ಅಥವಾ ಅದರಲ್ಲಿ ನೀವು ಹೇಗೆ ಭಾವಿಸುತ್ತೀರಿ ಎಂಬುದರ ಬಗ್ಗೆ ಹೆಚ್ಚು ಗಮನ ಹರಿಸಿ ಎಂದು ಅವರು ಹೇಳುತ್ತಾರೆ. ಕರಡಿ ನಿಮ್ಮನ್ನು ಭಯಭೀತಗೊಳಿಸಿದೆಯೇ? ಬಲಿಪಶು ಆದ ಭಾವನೆ ತರುತ್ತದೆಯೇ? ಮೃದುವಾದ ಭಾವನೆ ಬರುತ್ತದೆಯೇ? ನಿಮ್ಮ ಜೀವನದಲ್ಲಿ ಯಾರಾದರೂ ಅಥವಾ ಏನಾದರೂ ನಿಮಗೆ ಅದೇ ರೀತಿ ಅನ್ನಿಸಬಹುದು.