ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ನಮ್ಮ ಜೀವನದ ಅನೇಕ ವಿಷಯಗಳನ್ನು ತಿಳಿದುಕೊಳ್ಳಬಹುದು ಅದರಲ್ಲಿ ಮದುವೆಯೂ ಒಂದು ಮುಖ್ಯ ವಿಷಯ.ಏಕೆಂದರೆ ಮದುವೆ ಎನ್ನುವುದು ಒಂದು ಸುಂದರ ಬಂಧ , ಆ ಬಂಧ ಬೆಸೆಯುವುದು ಋಣಾನುಬಂಧದಿಂದಾಗಿರುತ್ತದೆ.ಇನ್ನು ಮದುವೆಯಾಗುವ ಸಂಗಾತಿ ಯ ಹೆಸರು ಹೆಬ್ಬೆರಳ ಮೇಲೆ ಬರೆದಿರುತ್ತದೆ.ಇನ್ನೂ ಅಂಗೈನ ಹೆಬ್ಬೆರಳು ವ್ಯಕ್ತಿತ್ವದ ಕನ್ನಡಿಯಾಗಿರುತ್ತದೆ ಹಾಗೂ ಇದರ ಮೇಲೆ ನಮ್ಮ ಜೀವನ ಸಂಗಾತಿಯ ಹೆಸರಿನ ಮೊದಲ ಅಕ್ಷರ ಅಡಗಿರುತ್ತದೆ.
ಹೆಬ್ಬೆರಳಿನ ನಲ್ಲಿರುವ ಕೆಲವು ಗೆರೆಗಳಿಂದ ,ಚಿಹ್ನೆಗಳಿಂದ ಸಂಗಾತಿಯ ಹೆಸರು ಮತ್ತು ಯಾವ ವಯಸ್ಸಿನಲ್ಲಿ ನಾವು ಮದುವೆಯಾಗುತ್ತೇವೆ ಎನ್ನುವುದನ್ನು ತಿಳಿದುಕೊಳ್ಳಬಹುದು.ಇನ್ನೂ ಹೆಬ್ಬೆರಳಿನ ಮೇಲ್ಭಾಗವು ಜೀವನದ ಬಗ್ಗೆ ಎಷ್ಟು ಗಂಭೀರವಾಗಿದ್ದಾರೆ ಎನ್ನುವುದನ್ನು ತಿಳಿಸುತ್ತದೆಹೆಬ್ಬೆರಳಿನ ಕೆಳಭಾಗವು ವ್ಯಕ್ತಿಯು ಎಷ್ಟು ಬುದ್ಧಿವಂತ ನಾಗಿರುವನು ಎಂಬುದರ ಬಗ್ಗೆ ತಿಳಿಸುತ್ತದೆ.ಇನ್ನೂ ಹೆಬ್ಬೆರಳಿನ ಹಿಂದೆ ಕೆಲವು ಗೆರೆಗಳನ್ನು ನಾವು ಕಾಣಬಹುದು.ಈ ಗೆರೆಗಳ ಮಧ್ಯೆ ನಿಮ್ಮ ಜೀವನ ಸಂಗಾತಿಯ ಹೆಸರಿನ ಮೊದಲ ಅಕ್ಷರ ಬರೆದಿರುತ್ತದೆ.
ಪುರುಷರು ಬಲ ಗೈ ಹೆಬ್ಬೆರಳನ್ನು ನೋಡಿಕೊಳ್ಳಬೇಕು ಮತ್ತು ಸ್ತ್ರೀಯರು ಈ ಎಡಗೈ ಹೆಬ್ಬೆರಳನ್ನು ನೋಡಿಕೊಳ್ಳಬೇಕು.ಯಾರ ಹೆಬ್ಬೆರಳಿನಲ್ಲಿ ಅಕ್ಷರಗಳು ಕಾಣುವುದೆಲ್ಲವೂ ಅಂಥವರು ತೋರು ಬೆರಳಿನಲ್ಲಿ ಅಥವಾ ಉಂಗುರೊಂದು ಬೆರಳಿನಲ್ಲಿ ನೋಡಿಕೊಳ್ಳಬಹುದು.ಹೆಬ್ಬೆರಳಿನ ಮೇಲೆ ಒಟ್ಟು 9 ಗೆರೆಗಳು ಇರುತ್ತವೆ.ಈ 9 ಗೆರೆಗಳು ನವಗ್ರಹಗಳನ್ನು ಸೂಚಿಸುತ್ತದೆ.ಇವು ಜೀವನದ ಹಲವು ಕೆಲವು ರಹಸ್ಯಗಳನ್ನು ಬಿಚ್ಚಿಡುತ್ತದೆ.
- ಹೆಬ್ಬೆರಳಿನ ಮೊದಲ ಗೆರೆ 10 ವರ್ಷ
- ಹೆಬ್ಬೆರಳಿನ 2ನೇ ಗೆರೆ 20 ವರ್ಷ
- ಹೆಬ್ಬೆರಳಿನ 3ನೇ ಗೆರೆ 30 ವರ್ಷ
- ಹೆಬ್ಬೆರಳಿನ 4ನೇ ಗೆರೆ 40 ವರ್ಷ
- ಹೆಬ್ಬೆರಳಿನ-5ನೇ ಗೆರೆ 50 ವರ್ಷ
- ಹೆಬ್ಬೆರಳಿನ-6ನೇ ಗೆರೆ 60 ವರ್ಷ
- ಹೆಬ್ಬೆರಳಿನ 7ನೇ ಗೆರೆ 70 ವರ್ಷ
- ಹೆಬ್ಬೆರಳಿನ 8ನೇ ಗೆರೆ 80 ವರ್ಷ
- ಹೆಬ್ಬೆರಳಿನ 9ನೇ ಗೆರೆ 90 ವರ್ಷ .
ಈ ರೀತಿಯಾಗಿ ಹೆಬ್ಬೆರಳಿನ ಮೇಲೆ ಇರುವ ಗೆರೆಗಳು ನಮ್ಮ ಆಯುಷ್ಯದ ಬಗ್ಗೆ ತಿಳಿಸುತ್ತದೆ.ಇನ್ನೂ ಸಂಗಾತಿಯ ಹೆಸರು 2ನೇ ಅಥವಾ 3ನೇ ಗೆರೆಯಲ್ಲಿ ಕಾಣಿಸಿದರೆಇದರರ್ಥ ನಿಮ್ಮ ಮದುವೆ 20 ರಿಂದ 30 ವರ್ಷದ ಒಳಗೆ ಆಗಲಿದೆ ಎಂದು ಅರ್ಥ.3ನೇ ಮತ್ತು 4ನೇ ಗೆರೆಗಳಲ್ಲಿ ನಿಮ್ಮ ಸಂಗಾತಿಯ ಹೆಸರು ಕಾಣಿಸಿದರೆ ನಿಮ್ಮ ಮದುವೆಯೂ 30 ರಿಂದ 40 ವರ್ಷದ ಒಳಗೆ ಆಗುತ್ತದೆ ಎಂದು ಅರ್ಥ.ಇನ್ನು ಈ ರೀತಿ ಹೆಬ್ಬೆರಳಿನಲ್ಲಿ ಇರುವ ಗೆರೆಗಳನ್ನಾಧರಿಸಿ ನಮ್ಮ ಮದುವೆ ಯಾವಾಗ ಆಗುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು.
ಹೆಬ್ಬೆರಳಿನ ಕೆಳಭಾಗವು ಮೇಲ್ಭಾಗಕ್ಕಿಂತ ಚಿಕ್ಕದಿದ್ದರೆ ಇಂತಹ ವ್ಯಕ್ತಿಗಳು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಮ್ಮ ಬುದ್ಧಿಶಕ್ತಿಯನ್ನು ಉಪಯೋಗಿಸುವುದಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.ಹೆಬ್ಬೆರಳಿನ ಮೇಲ್ಭಾಗವು ಕೆಳಭಾಗಕ್ಕಿಂತ ಚಿಕ್ಕದಿದ್ದರೆ ಅಂಥವರು ಬಹಳ ಬುದ್ಧಿವಂತರು ,ಸಮರ್ಥರು ಎಂದು ಇದು ಸೂಚಿಸುತ್ತದೆ.