ಈ ಪೂಜೆಯನ್ನು ಮಾಡುವಾಗ ತುಂಬಾನೇ ನಿಯಮ ನಿಷ್ಠೆಯನ್ನು ಪಾಲಿಸಬೇಕಾಗುತ್ತದೆ. ಸ್ವಲ್ಪ ತಪ್ಪಾದರೂ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಈ ಪೂಜೆಯನ್ನು ಮಾಡಿದರೆ ಖಂಡಿತ ನಿಮಗೆ ಫಲ ಸಿಗುತ್ತದೆ. ಪೂಜೆ ಮಾಡುವ ದಿನ ಉಪವಾಸ ಮಾಡಬೇಕು ಮತ್ತು ಉಪ್ಪನ್ನು ಮುಟ್ಟಬಾರದು ಹಾಗೂ ಮನೆಯ ಯಾವುದೇ ಕೆಲಸವನ್ನು ಮಾಡಬಾರದು. ಯಾವುದೇ ಕಾರಣಕ್ಕೂ ಪೂಜೆಯನ್ನು ಅರ್ಧಕ್ಕೆ ನಿಲ್ಲಿಸಬಾರದು ಸಂಪೂರ್ಣವಾಗಿ 16 ಸೋಮವಾರ ವ್ರತ ಮಾಡಬೇಕು.ಈ ಪೂಜೆಯನ್ನು ಮಾಡುವಾಗ ಮಡಿಯಿಂದ ಮಾಡಬೇಕು ಮತ್ತು ಪ್ರಸಾದಕ್ಕೆ ಇಟ್ಟಿರುವುದನ್ನು ಮಾತ್ರ ಸೇವಿಸಬೇಕು.
ಶುರು ಮಾಡುವ ಮೊದಲು ಸ್ನಾನ ಮಾಡಿ ಸಂಕಲ್ಪ ಮಾಡಿ ಪೂಜೆ ಮಾಡಿದರೆ ನಿಮಗೆ ಖಂಡಿತ ಫಲ ಸಿಗುತ್ತದೆ.ನಂತರ ಪೂಜೆಯ ಸಿದ್ಧತೆಯನ್ನು ಮಾಡಬೇಕು. ಒಂದು ಹುತ್ತದ ಮಣ್ಣಿನಿಂದ ಶಂಬು ಲಿಂಗವನ್ನು ಮಾಡಿಕೊಳ್ಳಬೇಕು ಮತ್ತು ಇನ್ನೊಂದು ಪ್ರಸಾದಕ್ಕೆ ಅರ್ಧ ಸೇರು ಗೋದಿ ಹಿಟ್ಟು, ಬೆಲ್ಲ ಮತ್ತು ತುಪ್ಪವನ್ನು ತೆಗೆದುಕೊಂಡು 3 ಪದಾರ್ಥವನ್ನು ಸೇರಿಸಿ 3 ಉಂಡೆಯನ್ನು ಮಾಡಿಕೊಳ್ಳಬೇಕು.ಒಂದು ಶಂಬು ಲಿಂಗನಿಗೆ ನೈವೈದ್ಯ ಅರ್ಪಿಸಬೇಕು,ಇನ್ನೊಂದು ಅಕಾಳಿಗೆ ತಿನ್ನಿಸಬೇಕು ಹಾಗೂ ಮೂರನೆಯದು ನಿಮಗೆ ಅಂದರೆ ನಿಮ್ಮ ಪರಿವಾರದಲ್ಲಿ ಎಷ್ಟು ಜನ ಇದ್ದರೂ ಅವರಿಗೆಲ್ಲರಿಗೂ ಪ್ರಸಾದವನ್ನು ಹಂಚಿ ನಂತರ ನೀವು ತೆಗೆದುಕೊಳ್ಳಬೇಕು.ಯಾರು ಈ ಪೂಜೆಯನ್ನು ಮಾಡುತ್ತಾರೋ ಅವರು ಶಿವನಿಗೆ ಇಟ್ಟಿರುವ ಪ್ರಸಾದವನ್ನು ತೆಗೆದುಕೊಳ್ಳಬೇಕು.
ಪೂಜೆ ಶುರು ಮಾಡುವ ಮೊದಲು ಪೀಠವನ್ನು ಮಾಡಿಕೊಳ್ಳಿ.ರಂಗೋಲಿ ಹಾಕಿ, ಮಣೆ ಇಟ್ಟು ನಂತರ ಪ್ಲೇಟ್ ಇಟ್ಟು ಬಿಲ್ವ ಪತ್ರೆ ಹಾಕಿ ಅದರ ಮೇಲೆ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿಕೊಂಡು ಪಂಚಾಮೃತ ಅಭಿಷೇಕವನ್ನು ಮಾಡಬೇಕು.ಶಿವನಿಗೆ ಪಂಚಾಮೃತ ಎಂದರೆ ತುಂಬಾ ಪ್ರೀತಿ.ಈ ಪೂಜೆಯನ್ನು ಸೋಮವಾರ ಸಂಜೆ ಮಾಡಿ. ಇಡೀ ದಿನ ಪೂಜೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ ಅದರಿಂದ ನಿದ್ರೇ ಮಾಡುವ ಆಗಿಲ್ಲ.
ಅಭಿಷೇಕ ಆದನಂತರ ಗಣೇಶ ಮತ್ತು ಸುಬ್ರಹ್ಮಣ್ಯ ಎರಡು ದೇವರನ್ನು ಪ್ರತಿಷ್ಠಾಪನೆ ಮಾಡಿ.ಗೆಜ್ಜೆ ವಸ್ತ್ರ ಹಾಕಿ ನಂತರ ಹೂವಿನ ಅಲಂಕಾರವನ್ನು ಮಾಡಿ ಪೂಜೆ ಮಾಡಿ ಇಟ್ಟುಕೊಳ್ಳಿ. ನಂತರ ಶಂಭುಲಿಂಗವನ್ನು ಒಂದು ಪ್ಲೇಟ್ ಮೇಲೆ ಎಲೆ ಇಟ್ಟು ಪ್ರತಿಷ್ಠಾಪನೆ ಮಾಡಬೇಕು.ಬಿಲ್ವ ಪತ್ರೆಯಿಂದ ಪ್ರತಿಷ್ಠಾಪನೆ ಮಾಡಿಕೊಂಡರೆ ತುಂಬಾ ಒಳ್ಳೆಯದು.ನಂತರ ಎರಡು ಎಳೆ ಗೆಜ್ಜೆ ವಸ್ತ್ರವನ್ನು ಹಾಕಿ. ಶಂಬು ಲಿಂಗದ ಮುಂದೆ ಗಣೇಶನ ಪ್ರತಿಷ್ಠಾಪನೆ ಮಾಡಬೇಕು. ನಂತರ ಹೂವಿನಿಂದ ಅಲಂಕಾರ ಮಾಡಬೇಕು. ಆ ದಿನ ಆದಷ್ಟು ಬಿಲ್ವ ಪತ್ರೆ ಮತ್ತು ಅಕ್ಷತೆ, ಎಕ್ಕದ ಹೂವು, ತುಂಬೆ ಹೂವಿನಿಂದ ಪೂಜೆ ಮಾಡಬೇಕು.
ಶಂಬು ಲಿಂಗಕ್ಕೆ ವಿಭೂತಿ ಹಚ್ಚಿ ಬಿಲ್ವ ಪತ್ರೆ, ಎಕ್ಕದ ಹೂವು, ತುಂಬೆ ಹೂವಿಗೆ ಹಳದಿ ಮಿಕ್ಸ್ ಮಾಡಿ ಅರ್ಚನೆ ಮಾಡಬೇಕು.16 ಸೋಮವಾರದ ವ್ರತದ ಕಥೆಯ ಪುಸ್ತಕವನ್ನು ಓದಲೇಬೇಕು. ಇದರಲ್ಲಿ ಪೂಜೆಯನ್ನು ಯಾವ ರೀತಿ ಮಾಡಬೇಕು ಎಂಬುದರ ಮಾಹಿತಿ ಇದರಲ್ಲಿ ಇದೆ.ಅರ್ಚನೆ ಮಾಡುವ ಮೊದಲು ಊದುಬತ್ತಿಯನ್ನು ಬೆಳಗಿ, ನೈವೇದ್ಯವನ್ನು ಇಟ್ಟು ನಂತರ ಅರ್ಚನೆ ಮಾಡಬೇಕು. ಅರ್ಚನೆ ಮಾಡುವಾಗ ಓಂ ನಮಃ ಶಿವಾಯ ಎಂದು ಹೇಳಬೇಕು.ಅರ್ಚನೆ ಮಾಡಿದ ತಕ್ಷಣ ಧೂಪವನ್ನು ಬೆಳಗಬೇಕು.
ಆ ದಿನ ಚಾಪೆ ಮೇಲೆ ಮಲಗಬೇಕು ಮತ್ತು ಬ್ರಹ್ಮಚರ್ಯ ಪಾಲನೆ ಮಾಡಬೇಕು. ಆದಷ್ಟು ಕೆಟ್ಟ ಮಾತುಗಳನ್ನು ಆಡಬಾರದು ಮತ್ತು ನಿಂದನೆ ಮಾಡಬಾರದು. ಆದಷ್ಟು ಇಡೀ ದಿನ ಶಿವನ ಧ್ಯಾನದಲ್ಲಿ ಇರಬೇಕು.ನಿಮ್ಮ ಯಾವುದೇ ಸಂಕಲ್ಪ ಇದ್ದರೂ ಕೂಡ 16 ವಾರದ ಒಳಗೆ ಅದರ ಉತ್ತರ ಸಿಗುತ್ತದೆ.16 ಸೋಮವಾರ ಮುಗಿದ ನಂತರ 17 ಸೋಮವಾರದಂದು ಅರ್ಚಕರನ್ನು ಕರೆದು ಉದ್ಯಾಪನೆ ಮಾಡಬೇಕು.16 ಲಿಂಗವನ್ನು ಗುರುವಾರದ ದಿನ ನದಿಯ ಬಳಿ ತೆಗೆದುಕೊಂಡು ಹೋಗಿ ಸಂಕಲ್ಪ ಮಾಡಿರುವುದನ್ನು ನೆನೆದು ಪೂಜೆ ಮಾಡಿ ನದಿಗೆ ವಿಸರ್ಜನೆ ಮಾಡಬೇಕು.ಈ ಪೂಜೆಯನ್ನು ಪುರುಷರು ಮತ್ತು ಮಹಿಳೆಯರು ಸಹ ಮಾಡಬಹುದು.