ಊಟಕ್ಕೂ 30 ನಿಮಿಷ ಮುಂಚೆ ಈ ಬಾದಾಮಿ ತಿನ್ನುವುದರಿಂದ ಏನಾಗುತ್ತೆ ಗೊತ್ತಾ?

ನಮ್ಮಲ್ಲಿ ಹೆಚ್ಚಿನವರಿಗೆ, ತಮ್ಮ ದಿನವನ್ನು ನೆನೆಸಿದ ಬಾದಾಮಿಯೊಂದಿಗೆ ಪ್ರಾರಂಭಿಸುವುದು ಸಾಮಾನ್ಯ ಅಭ್ಯಾಸವಾಗಿದೆ. ಬಾದಾಮಿಯು ಅಗತ್ಯವಾದ ಪೋಷಕಾಂಶಗಳ ನಿಧಿಯಾಗಿದೆ.ಒಟ್ಟಾರೆಯಾಗಿ ಈ ರೀತಿಯ ಅಭ್ಯಾಸಗಳಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ಬಾದಾಮಿಯು ಹೆಚ್ಚು ಬೆಲೆಯನ್ನು ಹೊಂದಿದ್ದರೂ ಜನ ಅದನ್ನು ಕೊಂಡುಕೊಳ್ಳುತ್ತಾರೆ. ಕಾರಣ ಬಾದಾಮಿಯು ಪ್ರೋಟೀನ್, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಇ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್‌ನಂತಹ ಇತರ ಅಗತ್ಯ ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಪ್ರಪಂಚದಾದ್ಯಂತದ ವಿವಿಧ ಅಧ್ಯಯನಗಳು ಬಾದಾಮಿಯು ಹೃದಯದ ಆರೋಗ್ಯ, ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ, ಕಣ್ಣುಗಳು ಮತ್ತು ಇನ್ನೂ ಹೆಚ್ಚಿನವುಗಳಿಗೆ ಒಳ್ಳೆಯದು ಎಂದು ಕಂಡುಹಿಡಿದಿದೆ. 

ಹೊಸ ಅದ್ಯಯನಗಳ ಪ್ರಕಾರ ಬಾದಾಮಿಯು ಡಯಾಬಿಟಿಸ್‌ ಅನ್ನು ನಿಯಂತ್ರಿಸುತ್ತದೆ ಎಂದು ತಿಳಿದುಬಂದಿದೆ. ಹೌದು ಸಕ್ಕರೆ ಕಾಯಿಲೆ ಸಾಮಾನ್ಯವಾಗಿ ವಯಸ್ಕರಿಂದ ವಯೋವೃದ್ದರವರೆಗೆ ಎಲ್ಲರಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಅದನ್ನು ನಿಯಂತ್ರಿಸದಿದ್ದರೆ ಮೂತ್ರಪಿಂಡದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಊಟದ ಮುಂಚೆ ಬಾದಾಮಿಯನ್ನು ಶೆವಿಸುವು ಎಷ್ಟು ಉಪಯುಕ್ತ ಎನ್ನುವುದನ್ನು ನೀವೇ ನೋಡಿ.. 

“ದಿನಕ್ಕೆ ಮೂರು ಊಟಕ್ಕೂ ಅರ್ಧ ಗಂಟೆ ಮೊದಲು ನಿಮ್ಮ ಆಹಾರದಲ್ಲಿ ಬಾದಾಮಿಯನ್ನು ಸೇರಿಸುವುದರಿಂದ ಮಧುಮೇಹದ ಬೆಳವಣಿಗೆಯನ್ನು ತಡೆಯಬಹುದು. ಈ ತಂತ್ರದಿಂದ ನಾವು ಪೂರ್ವ ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನವು ತೋರಿಸಿಕೊಟ್ಟಿದೆ.” ಒಟ್ಟಾರೆಯಾಗಿ ಬಾದಾಮಿಯು ದೇಹದಲ್ಲಿನ ಗ್ಲೂಕೋಸ್‌ ಪ್ರಮಾಣವನ್ನು ಕ್ರಮೇಣವಾಗಿ ಕಡಿಮೆ ಮಾಡುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. 

Leave a Comment