ಶ್ರಾವಣ ಮಾಸ ಎಂದರೆ ಶಿವನ ಕುಟುಂಬವನ್ನು ಆರಾಧನೆ ಮಾಡುವುದೇ ಒಂದು ವಿಶೇಷವಾಗಿದೆ. ಶ್ರಾವಣ ಸೋಮವಾರ ನಾಲ್ಕು ವರಗಳು ಬಂದಿವೆ. ಅಂದರೆ 21ನೆ ತಾರೀಕು ಸೋಮವಾರ ಪ್ರಾರಂಭವಾದರೆ ಎರಡನೇ ಸೋಮವಾರ 28ನೇ ತಾರೀಕು ಮತ್ತು 3ನೇ ಸೋಮವಾರ 4ನೇ ತಾರೀಕು ಮತ್ತು ನಾಲ್ಕನೇ ಸೋಮವಾರ 11ನೇ ತಾರೀಕು ಕೋನೇಗೊಳ್ಳುತ್ತದೆ. ಇನ್ನು ಶ್ರಾವಣ ಸೋಮವಾರಡ ಶಿವನ ಪೂಜೆ ಯಾವ ರೀತಿ ಮಾಡುವುದು ಎಂದು ಮಾಹಿತಿಯನ್ನು ಕೊಡುತ್ತೇನೆ.
ಮೊದಲು ಒಂದು ರಂಗೋಲಿ ಹಾಕು ಅಷ್ಟೇ ಹಾಕು ದೀಪವನ್ನು ಹಚ್ಚಿ ಅಭಿಷೇಕವನ್ನು ಶುರು ಮಾಡಬೇಕು. ಒಂದು ಪ್ಲೇಟ್ ಒಳಗೆ ಬಿಲ್ವ ಪತ್ರೆ ಇಟ್ಟು ಅದರ ಮೇಲೆ ಶಿವ ಲಿಂಗವನ್ನು ಪ್ರತಿಷ್ಠಾಪನೆ ಮಾಡಬೇಕು. ನಂತರ ಊದುಬತ್ತಿ ಬೆಳಗಿ ಈಶ್ವರನನ್ನು ಮುಟ್ಟಿ ನಮಸ್ಕಾರ ಮಾಡಬೇಕು.ಓಂ ನಮಃ ಶಿವಯ ಎಂದು ಅಭಿಷೇಕ ಶುರಿ ಮಾಡಬೇಕಾಗುತ್ತದೆ. ಮೊದಲು ಹಾಲಿನಿಂದ ಅಭಿಷೇಕ ಮಾಡಬೇಕಾಗುತ್ತದೆ. ಹಾಲಿನ ನಂತರ ಮೊಸರು, ಜೇನು ತುಪ್ಪ, ಸಕ್ಕರೆ, ತುಪ್ಪದಿಂದ ಅಭಿಷೇಕ ಮಾಡಬೇಕು. ಶಿವನ ಪೂಜೆ ಮಾಡುವಾಗ ಆದಷ್ಟು ಮಡಿ ಯಿಂದ ಪೂಜೆ ಮಾಡಬೇಕಾಗುತ್ತದೆ.
ಶ್ರಾವಣ ಸೋಮವಾರ ನಾಗರ ಪಂಚಮಿ ಇರುವುದರಿಂದ ಮನೇಲಿ ಪೂಜೆ ಮಾಡಿಕೊಂಡು ನಂತರ ಶಿವನ ದೇವಾಲಯಕ್ಕೆ ಹೊಗಿ ರುದ್ರಭಿಷೇಕ ಕೊಟ್ಟರೆ ತುಂಬಾ ಒಳ್ಳೆಯದು. ಇನ್ನು ಮನೆಯಲ್ಲೇ ಶಿವನಿಗೆ ಜಾಲಭಿಷೇಕವನ್ನು ಕೂಡ ಮಾಡಬಹುದು. ಇನ್ನು ಶ್ರಾವಣ ಸೋಮವಾರ ಉಪವಾಸ ಇದ್ದು ವ್ರತವನ್ನು ಮಾಡಿ ಶಿವನ ಪೂಜೆ ಮಾಡಿದರೆ ಅವರ ಇಷ್ಟರ್ಥಗಳು ಎಲ್ಲಾ ಈಡೇರುತ್ತವೆ. ಪಂಚಾಮೃತದಿಂದ ಅಭಿಷೇಕ ಮಾಡಿದ ನಂತರ ಗಂಗಾಜಲದಿಂದ ಅಭಿಷೇಕ ಮಾಡಬೇಕು.
ಶಿವನ ಪೂಜೆ ಮಾಡುವ ವಿಧಾನ
ಅಭಿಷೇಕ ಅದನಂತರ ಶಿವನ ಫೋಟೋವನ್ನು ಇಟ್ಟು ಎರಡು ದೀಪ ಹಚ್ಚಬೇಕು. ನಂತರ ಪೀಠದ ಮೇಲೆ ಒಂದು ಪ್ಲೇಟ್ ಇಡಬೇಕು. ಅದರ ಮೇಲೆ ಒಂದು ಪ್ಲೇಟ್ ಒಳಗೆ ಬಿಲ್ವ ಪತ್ರೆ ಇಟ್ಟು ಶಿವಲಿಂಗವನ್ನು ಇಡಬೇಕು. ನಂತರ ಅರಿಶಿನ ಕುಂಕುಮ ವಿಭೂತಿಯನ್ನು ಹಚ್ಚಿ ಗೆಜ್ಜೆ ವಸ್ತ್ರವನ್ನು ಹಾಕಬೇಕು. ನಂತರ ಹೂವಿನಿಂದ ಅಲಂಕಾರ ಮಾಡಬೇಕು. ಶಿವನ ಮುಂದೆ ಬಸವಣ್ಣನ ವಿಗ್ರಹವನ್ನು ಸಹ ಇಡಬೇಕು. ಶಿವನಿಗೆ ಪ್ರಿಯವಾದ ಹೂವಿನಿಂದ ಅಲಂಕಾರ ಮಾಡಬಹುದು. ಇನ್ನು ಗಣೇಶ ಮತ್ತು ಸುಬ್ರಹ್ಮಣ್ಯ ಇಬ್ಬರನ್ನು ಶಿವನ ಮುಂದೆ ಇಟ್ಟು ಪೂಜೆಯನ್ನು ಮಾಡಬೇಕು.
ಶಿವನಿಗೆ ಪ್ರಸಾದವಾಗಿ ಹಾಲು ಹಣ್ಣು ತಾಂಬೂಲ ಎಲೆ ಆಡಿಕೆ ಬಾಳೆಹಣ್ಣು ಮತ್ತು ಪಂಚಾಮೃತ ಅಭಿಷೇಕವನ್ನು ನೈವೇದ್ಯವಾಗಿ ಇಟ್ಟು ಅದರ ಪೂಜೆ ಅದಬಳಿಕ ಪ್ರಸಾದ ರೂಪದಲ್ಲಿ ತೆಗೆದುಕೊಳ್ಳಬೇಕು.ಇನ್ನು ವಿಶೇಷವಾಗಿ ಅಕ್ಕಿ ಹಿಟ್ಟಿನಿಂದ ದೀಪರಾಧನೆ ಮಾಡಬಹುದು, ದತುರ ಕಾಯಿ ದೀಪರಾಧನೆ ಕೂಡ ಮಾಡಿದರೆ ತುಂಬಾ ಒಳ್ಳೆಯದು. ಇನ್ನು ದೀಪರಾಧನೆ ಮಾಡಿ ಊದುಬತ್ತಿ ಬೆಳಗದ ಮೇಲೆ ಅರ್ಚನೆಯನ್ನು ಶುರು ಮಾಡಬೇಕು. ಇನ್ನು ಶಿವನ ಅಷ್ಟೊತ್ತರ ಹೇಳಿಕೊಂಡು ಅರ್ಚನೆ ಮಾಡಬೇಕು. ಅರ್ಚನೆ ಮುಗಿದ ನಂತರ ಕಾಯಿ ಒಡೆದು ಕೈ ಮುಗಿದ ಬಳಿಕ ಪ್ರಸಾದ ಸ್ವೀಕಾರ ಮಾಡಬೇಕು.ಇದಿಷ್ಟು ಶಿವನ ಪೂಜೆ ಮಾಡುವಂತಹದು.