ಮಧುಮೇಹವು ಇಂದಿನ ದಿನಗಳಲ್ಲಿ ವಿಶ್ವ ಮಟ್ಟದಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಇದು ಯಾರಿಗೂ ಬರಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವು ಅಸಮಾನ್ಯವಾದ ವೇಳೆ ಮಧುಮೇಹವು ಕಾಣಿಸುವುದು. ದೇಹದಲ್ಲಿ ಸರಿಯಾಗಿ ಇನ್ಸುಲಿನ್ ಬಿಡುಗಡೆ ಆಗದೆ ಇರುವುದು ಅಥವಾ ಇನ್ಸುಲಿನ್‌ನ್ನು ಸರಿಯಾಗಿ ಬಳಸದೆ ಇರುವ ಪರಿಣಾಮವಾಗಿ ಮಧುಮೇಹವು ಕಾಣಿಸಿಕೊಳ್ಳಬಹುದು.
ಇದಕ್ಕೆಲ್ಲಾ ಕಾರಣಜೀವನ ಶೈಲಿ:-ಸಾಮಾನ್ಯವಾಗಿ ಜೀವನಶೈಲಿ ಬದಲಾವಣೆಯಿಂದಾಗಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ದೇಹವನ್ನು ಕಾಡುವುದು ಮಾತ್ರಲ್ಲದೆ ಇದು ದೀರ್ಘಕಾಲಕ್ಕೆ ಅಪಾಯಕಾರಿ ಆಗಿರುವುದು ಮತ್ತು ಕೆಲವೊಂದು ರೋಗಗಳು ಸಂಪೂರ್ಣ ಗುಣಮುಖವಾಗದೆ ಇರಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಗ್ಲೂಕೋಸ್ ಮಟ್ಟವು ಹೆಚ್ಚಾದ ವೇಳೆ ಮಧುಮೇಹ ಸಮಸ್ಯೆಯು ಕಾಣಿಸುವುದು. ದೇಹವು ಇನ್ಸುಲಿನ್ ಹಾರ್ಮೋನ್ ನ್ನು ನೈಸರ್ಗಿಕವಾಗಿ ಉತ್ಪಾದಿಸಲು ನಿಲ್ಲಿಸಿದ ವೇಳೆ ಮತ್ತು ಗ್ಲೂಕೋಸ್ ಹೊರಗೆ ಹೋಗದೆ ಇರುವ ಸಂದರ್ಭದಲ್ಲಿ ಮಧುಮೇಹ ಆರಂಭವಾಗಿ, ಇತರ ಸಮಸ್ಯೆಗಳು ಕಾಡಬಹುದು.
ಮಧುಮೇಹದಲ್ಲಿ ಎರಡು ವಿಧ:-ಮಧುಮೇಹದಲ್ಲಿ ಟೈಪ್ 1 ಮತ್ತು ಟೈಪ್ 2 ಎನ್ನುವ ಎರಡು ವಿಧವಿದೆ. ಮೊದಲನೇಯದಾಗಿ ದೇಹವು ಉತ್ಪತ್ತಿ ಆಗುವಂತಹ ಇನ್ಸುಲಿನ್ ನ್ನು ಸರಿಯಾಗಿ ಬಳಸಿಕೊಳ್ಳಲು ವಿಫಲವಾಗಿರುವುದು ಮತ್ತು ಎರಡನೇಯದಾಗಿ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಆಗದೆ ಇರುವುದು. ಟೈಪ್ 2 ಮಧುಮೇಹವು ಹೆಚ್ಚಾಗಿ ಅನುವಂಶೀಯವಾಗಿ ಬರುವುದು. ಮಧುಮೇಹದಿಂದ ಬಳಲುತ್ತಿರುವ ಜನರು ಚರ್ಮದ ಸಮಸ್ಯೆ, ಕಣ್ಣಿನ ಸಮಸ್ಯೆ, ಹೃದಯ ಮತ್ತು ಕಿಡ್ನಿಯ ಸಮಸ್ಯೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿರುವುದು.
ಮಧುಮೇಹ ಪರೀಕ್ಷೆ ಮಾಡಿಸಿಕೊಂಡರೆ ತುಂಬಾ ಒಳ್ಳೆಯದು ಮತ್ತು ಮಧುಮೇಹವಿದ್ದರೆ ಆಗ ನಿತ್ಯವೂ ವ್ಯಾಯಾಮ, ಸಕ್ಕರೆ ಕಡಿಮೆ ಇರುವ ಆಹಾರ ಕ್ರಮ ಮತ್ತು ಚಟುವಟಿಕೆ ಇರುವ ಜೀವನಶೈಲಿ ಅಳವಡಿಸಿಕೊಳ್ಳಬೇಕು. ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೂ ಅದನ್ನು ನಿಯಮಿತವಾಗಿ ಗಮನಿಸುತ್ತಿರಬೇಕು. ಮಧುಮೇಹವು ಬಂದ ಬಳಿಕ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತೀ ಅಗತ್ಯವಾಗಿರುವುದು. ಅದರಲ್ಲೂ ಕ್ಯಾರೆಟ್ ಜ್ಯೂಸ್ ನಲ್ಲಿ ಅಧಿಕ ಮಟ್ಟದ ನಾರಿನಾಂಶವಿದ್ದು, ಇದು ಮಧುಮೇಹವನ್ನು ಸಮತೋಲನದಲ್ಲಿ ಇಡುವ ಪ್ರಮುಖ ಆಹಾರವಾಗಿದೆ.
ಕ್ಯಾರೆಟ್ ನಮ್ಮ ಆರೋಗ್ಯಕ್ಕೆ ಅತೀ ಲಾಭಕಾರಿ ಆಗಿದೆ. ಕ್ಯಾರೆಟ್ ಕಣ್ಣಿನ ದೃಷ್ಟಿ ಸುಧಾರಿಸುವುದು ಮಾತ್ರವಲ್ಲದೆ, ಇನ್ನೂ ಹಲವಾರು ರೀತಿಯ ಆರೋಗ್ಯ ಲಾಭಗಳು ಇದರಿಂದ ಸಿಗುವುದು. ಕ್ಯಾರೆಟ್ ಕೇಸರಿ, ಕೆಂಪು ಅಥವಾ ನೇರಳೆ ಬಣ್ಣದಲ್ಲಿ ಲಭ್ಯವಾಗುತ್ತದೆ. ಈ ಜ್ಯೂಸ್ ನಲ್ಲಿ ಕಬ್ಬಿನಾಂಶ, ಪೊಟಾಶಿಯಂ ಸಮೃದ್ಧವಾಗಿದೆ. ಇದೆಲ್ಲವೂ ನೈಸರ್ಗಿಕವಾಗಿ ದೇಹಕ್ಕೆ ಶಕ್ತಿ ನೀಡುವುದು. ಕ್ಯಾರೇಟ್ ಜ್ಯೂಸ್ ಕುಡಿದರೆ ಅದು ರಕ್ತದಲ್ಲಿನ ಸಕ್ಕರೆ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುವುದು. ಕಣ್ಣಿನ ದೃಷ್ಟಿ ಉತ್ತಮವಾಗಿಡುವ ಜತೆಗೆ ಇನ್ನಿತರ ಆರೋಗ್ಯ ಲಾಭಗಳು ಲಭ್ಯವಾಗುವುದು. ಅಷ್ಟೇ ಅಲ್ಲದೆ ರಕ್ತದೊತ್ತಡ ಕಡಿಮೆ ಮಾಡುವುದು,ನರಕ್ಕೆ ಹಾನಿ ಆಗುವುದನ್ನು ತಗ್ಗಿಸುವುದು,ಪ್ರತಿರೋಧಕ ಶಕ್ತಿ ವೃದ್ಧಿಸುವುದು.
ಕ್ಯಾರೆಟ್ ಉನ್ನತ ಮಟ್ಟದ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಇರುವ ಕಾರಣದಿಂದಾಗಿ ಇದು ಕಾಯಿಲೆಗಳು ಬರದಂತೆ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಈ ಪ್ರಬಲ ಜ್ಯೂಸ್ ನಲ್ಲಿ ಅಧಿಕ ಆ್ಯಂಟಿಆಕ್ಸಿಡೆಂಟ್ ಇದ್ದು, ಫ್ರೀ ರ್ಯಾಡಿಕಲ್ ನ್ನು ಇದು ದೂರವಿಡುವುದು.