ವರಮಹಾಲಕ್ಷ್ಮಿ ಹಬ್ಬದಲ್ಲಿ ಇಡುವ ಅಖಂಡ ಐಶ್ವರ್ಯ ಅಕ್ಷಯ ಪಾತ್ರೆ ಅಮೂಲ್ಯ ವಸ್ತುಗಳ ಖರೀದಿಗೆ ಸಹಕಾರಿ!

ವರಮಹಾಲಕ್ಷ್ಮಿ ಹಬ್ಬದ ದಿನ ಅಕ್ಷಯಪಾತ್ರೆಯನ್ನು ಈ ರೀತಿ ಪ್ರತಿಷ್ಠಾಪನೆ ಮಾಡಬಹುದು. ಅಕ್ಷಯ ಪಾತ್ರೆಯನ್ನು ಇಟ್ಟು ಪೂಜೆ ಮಾಡುವುದರಿಂದ ಹಲವಾರು ರೀತಿಯ ಪ್ರಯೋಜನಗಳು ಸಿಗುತ್ತದೆ. ಮೊದಲು ಅಕ್ಷಯ ಪಾತ್ರೆಯನ್ನು ಇಡುವುದಕ್ಕೆ ಒಂದು ಪೀಠವನ್ನು ತೆಗೆದುಕೊಳ್ಳಬೇಕು.ಅದಕ್ಕೆ ಸ್ವಲ್ಪ ಅರಿಶಿಣವನ್ನು ಹಚ್ಚಬೇಕು ಮತ್ತು ರಂಗೋಲಿಯನ್ನು ಹಾಕಬೇಕು.ನಂತರ ಒಂದು ಮಡಿಕೆ ಮತ್ತು ಬೌಲ್ ಗೆ ಅರಿಶಿಣವನ್ನು ಹಚ್ಚಬೇಕು. ಮೊದಲು ನೀವು ಅಕ್ಷಯಪಾತ್ರೆಯನ್ನು ಪ್ರತಿಷ್ಠಾಪನೆ ಮಾಡುವುದಾದರೆ ಹೊಸ ಮಡಿಕೆಯನ್ನು ತೆಗೆದುಕೊಂಡು ಬನ್ನಿ. ಇನ್ನು ಈ ಪೂಜೆಯನ್ನು ಶುಕ್ರವಾರ ಅಥವಾ ಮಂಗಳವಾರ ದಿನ ಮಾಡಬೇಕು.

ಬೌಲ್ ಮೇಲೆ ಶ್ರೀ ಅಂತ ಕುಂಕುಮದಿಂದ ಬರೆಯಬೇಕು. ಇದನ್ನು ವಾಯುವ್ಯಾ ದಿಕ್ಕಿನಲ್ಲಿ ಇಡಬೇಕು. ನಂತರ ರಂಗೋಲಿ ಮೇಲೆ ಅರಿಶಿನ-ಕುಂಕುಮವನ್ನು ಹಾಕಬೇಕು. ನಂತರ ದೊಡ್ಡ ಬೌಲ್ ಅನ್ನು ರಂಗೋಲಿ ಮೇಲೆ ಇಡಬೇಕು.ಈ ಬೌಲ್ ತುಂಬಾ ಉಪ್ಪನ್ನು ಹಾಕಬೇಕು.ನಂತರ ಅದರ ಮೇಲೆ ಚಿಕ್ಕ ಮಡಿಕೆಯನ್ನು ಇಡಬೇಕು.ಆ ಮಡಿಕೆಗೂ ಅರಿಶಿಣ ಕುಂಕುಮವನ್ನು ಹಚ್ಚಬೇಕು.ನಂತರ ಅದಕ್ಕೆ ನಾಣ್ಯ, ಬೆಳ್ಳಿ ನಾಣ್ಯ ಹಾಗೂ ಬಂಗಾರವನ್ನು, ಅರಿಶಿಣ ಕೊಂಬು, ಕವಡೆ, ಗೋಮತಿ ಚಕ್ರವನ್ನು ಕೂಡ ಹಾಕಬೇಕು.

ಧಾನ್ಯದ ಕೊರತೆ ಬರಬಾರದು ಎಂದು ಉಪ್ಪು ಅಥವಾ ಅಕ್ಕಿಯನ್ನು ಹಾಕಿ ಪೂಜೆ ಮಾಡಬೇಕು.ಇನ್ನು ಈ ಅಕ್ಷಯ ಪಾತ್ರೆಗೆ ಸ್ವಲ್ಪ ಅರಿಶಿಣ ಕುಂಕುಮ ಅಕ್ಷತೆ ಹೂವನ್ನು ಇಟ್ಟು ದೇವರನ್ನು ಪ್ರಾರ್ಥನೆ ಮಾಡಿಕೊಳ್ಳಬೇಕು. ಲಕ್ಷ್ಮೀದೇವಿಯನ್ನು ಮನಃಸ್ಪೂರ್ತಿಯಾಗಿ ಬೇಡಿಕೊಳ್ಳಿ. ಅಕ್ಷಯಪಾತ್ರೆಯಲ್ಲಿ ಹಾಕಿರುವ ವಸ್ತುಗಳು ಎಲ್ಲಾ ದ್ವಿಗುಣ ಆಗಲಿ ಎಂದು ಬೇಡಿಕೊಳ್ಳಿ. ದೀಪವನ್ನು ಹಚ್ಚಿ ಧೂಪವನ್ನು ಬೆಳಗಬೇಕು. ಮಂಗಳಾರತಿಯನ್ನು ಮಾಡಿ ಏನಾದರೂ ನೈವೇದ್ಯಕ್ಕೆ ಸಹ ಇಡಬಹುದು. ಇದನ್ನು ದೇವರ ಮನೆಯಲ್ಲಿ ಲಕ್ಷ್ಮಿ ಫೋಟೋ ಎದುರು ಮಾಡಬಹುದು. ಒಂದು ವೇಳೆ ಅಕ್ಷಯ ತೃತೀಯ ದಿನ ಬಂಗಾರವನ್ನು ತೆಗೆದುಕೊಂಡು ಬಂದರೆ ಲಕ್ಷ್ಮಿ ಎದುರು ಇಟ್ಟು ಪೂಜೆಯನ್ನು ಮಾಡಿದ ನಂತರ ಹಾಕಿಕೊಳ್ಳಬೇಕು.

Leave a Comment