ಆಯುರ್ವೇದದ ಪ್ರಕಾರ ಎಡ ಮೂಗಿನ ಸೊಳ್ಳೆಯು ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಗೆ ಸಂಬಂಧಿಸಿದೆ . ನಿಮ್ಮ ಎಡ ಮೂಗಿನ ಹೊಳ್ಳೆಗೆ ಮೂಗುತಿಯನ್ನು ಚುಚ್ಚಿದರೆ ಮುಟ್ಟಿನ ಸೆಳೆತ ಮತ್ತು ಹೆರಿಗೆ ನೋವುಗಳನ್ನು ನಿವಾರಿಸಲು ಸಹಾಯವಾಗುತ್ತಂತೆ. ಇದೇ ಕಾರಣಕ್ಕೆ ಹಿಂದೂ ಸಂಪ್ರದಾಯದಲ್ಲಿ ಮೂಗುತಿಗೆ ಇಷ್ಟೊಂದು ಮಹತ್ವ ನೀಡಿರೋದು
ಈ ಕೆಲವು ನಂಬಿಕೆಗಳ ಪ್ರಕಾರ ಮೂಗುತಿ ಧರಿಸುವ ಪದ್ಧತಿಯು ಮಧ್ಯಪ್ರಾಂಚದಲ್ಲಿ ಮೊದಲು ಹುಟ್ಟಿಕೊಂಡಿತ್ತಂತೆ ಮತ್ತು ಇಂದು 16ನೇ ಶತಮಾನದಲ್ಲಿ ಮೊಘಲ್ ಯುಗದಲ್ಲಿ ಭಾರತಕ್ಕೆ ಬಂದಿತು ಎಂದು ಹೇಳಲಾಗುತ್ತದೆ . ಇನ್ನು ಪುರಾತನ ಆಯುರ್ವೇದ ಗ್ರಂಥವಾದ ಸುಶ್ರುತ ಸಂಹಿತೆಯಲ್ಲಿ ಮೂಗುತಿ ಧರಿಸುವುದರ ಆರೋಗ್ಯ ಪ್ರಯೋಜನಗಳನ್ನು ಸಹ ಉಲ್ಲೇಖ ಮಾಡಲಾಗಿದೆ…
ಇದರ ಮೂಲದ ಕಥೆ ಏನೇ ಇರಲಿ ಮೂಗುತಿ ಧರಿಸುವುದು ಅಥವಾ ಮೂಗು ಚುಚ್ಚುವುದು ಭಾರತೀಯ ಮಹಿಳೆಯರು ಅನುಸರಿಸುವ ಪ್ರಮುಖ ಸಂಪ್ರದಾಯವಾಗಿದೆ ವಿವಾಹಿತರು ಮತ್ತು ಅವಿವಾಹಿತರು ಮಹಿಳೆಯರು ಇಬ್ಬರು ಮೂಗುತಿ ಧರಿಸಬಹುದು . ಈ ಸಂಪ್ರದಾಯವು ಹಿಂದೂ ಮಹಿಳೆಯರಲ್ಲಿ ಮಾತ್ರವಲ್ಲದೆ ಇತರ ಧರ್ಮಗಳ ಮಹಿಳೆಯರಲ್ಲಿಯೂ ಸಹ ಪ್ರಚಲಿತವಾಗಿದೆ…
ಭಾರತದಾದ್ಯಂತ ಅನೇಕ ಸಂಸ್ಕೃತಿಗಳನ್ನು ಪಾಲನೆ ಮಾಡಲಾಗುತ್ತದೆ. ಅದರಲ್ಲಿ ಮೂಗುತಿಯನ್ನು ಧರಿಸುವುದು ಕೂಡ ಒಂದಾಗಿದೆ . ಹಿಂದೂ ಧರ್ಮದಲ್ಲಿ ಗಂಡನ ಮರಣದ ನಂತರ ಮಹಿಳೆಯ ಮೂಗುತಿಯನ್ನು ತೆಗೆದುಹಾಕಲಾಗುತ್ತದೆ ಅಲ್ಲದೆ ಹಿಂದಿನ ಕಾಲದಲ್ಲಿ ಸಾಂಪ್ರದಾಯಿಕ ಮದುವೆಯ ವಯಸ್ಸಾದ 16ನೇ ವಯಸ್ಸಿನಲ್ಲಿ ಹುಡುಗಿಯರು ಮೂಗು ಚುಚ್ಚಿಕೊಳ್ಳಬೇಕೆಂದು ಹೇಳಲಾಗುತಿತ್ತು ಮದುವೆಯ ಅಧಿದೇವತೆಯಾದ ಪಾರ್ವತಿ ದೇವಿಗೆ ಗೌರವ ಸಲ್ಲಿಸುವ ಸಲುವಾಗಿ ಮೂಗುತಿ ಚುಚ್ಚಲಾಗುತ್ತಿತ್ತು ಎಂದು ಹೇಳಲಾಗುತ್ತದೆ ..
ಜನಪ್ರಿಯ ನಂಬಿಕೆಗಳ ಪ್ರಕಾರ ಹೆಂಡತಿಯು ನೇರವಾಗಿ ಹೊರಹಾಕುವ ಗಾಳಿಯು ಗಂಡನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮಹಿಳೆಯರು ಮೂಗುತಿ ಧರಿಸಬೇಕು ಅಂತ ಹೇಳಲಾಗುತ್ತದೆ. ಮೂಗುತಿ ಧರಿಸುವುದರಿಂದ ಗಾಳಿಯು ಲೋಹದ ಅಡಚಣೆಯ ಮೂಲಕ ಬರುತ್ತದೆ. ಅದು ಸ್ಪಷ್ಟವಾಗಿ ಯಾವುದೇ ಕೆಟ್ಟ ಆರೋಗ್ಯ ಪರಿಣಾಮಗಳನ್ನು ಬೀರುವುದಿಲ್ಲ. ಇಂದು ಹೆಚ್ಚಾಗಿ ಭಾರತದ ಪೂರ್ವ ಭಾಗಗಳಲ್ಲಿ ಜನಪ್ರಿಯವಾಗಿರುವ ಮೂಡನಂಬಿಕೆಯಾಗಿದೆ…….