ಡೈರಿ ಉತ್ಪನ್ನಗಳು ಮಾತ್ರ ಕ್ಯಾಲ್ಸಿಯಂ ಭಂಡಾರವೇ..? ಲ್ಯಾಕ್ಟೋಸ್ ಬಗ್ಗೆ ಆಸಕ್ತಿ ಹೊಂದಿರದ ಜನರು ಕ್ಯಾಲ್ಸಿಯಂ ಪಡೆಯುವುದಾದರೂ ಹೇಗೆ..? ಅಂದರೆ ಡೈರಿ ಪದಾರ್ಥಗಳ ಹೊರತಾಗಿಯೂ ಕ್ಯಾಲ್ಸಿಯಂ ಒಳಗೊಂಡಿರುವ ಬೇರೆ ಆಹಾರಗಳು ಇವೆ.
ಮಕ್ಕಳು, ವಯೋವೃದ್ಧರು ಪ್ರತಿದಿನ ತಮ್ಮ ದಿನಚರಿಯಲ್ಲಿ ಒಂದು ಅಥವಾ ಎರಡು ಲೋಟದ ಹಾಲಿಗೆ ಮಾನ್ಯತೆ ನೀಡಲೇಬೇಕು. ಕೆಲವರು ಹಾಲು ಕುಡಿಯುವುದು ಎಂದರೆ ಮೂಗು ಮುರಿಯುತ್ತಾರೆ. ಆದರೆ ಇದರಲ್ಲಿನ ಪೌಷ್ಟಿಕಾಂಶವು ಶೇಕಡಾ 99ರಷ್ಟು ನಮ್ಮ ಮೂಳೆಗಳು ಮತ್ತು ಹಲ್ಲುಗಳ ರಚನೆಗೆ ಕಾರಣವಾಗುತ್ತದೆ. ಹೌದು ಹಾಲಿನಲ್ಲಿ ಕ್ಯಾಲ್ಸಿಯಂ ಅಂಶ ಇರುವುದರಿಂದ ಹಾಲನ್ನು ಸೇವಿಸಬೇಕು. ಇದು ಸಾಧ್ಯವಾಗದಿದ್ದರೆ ಹಾಲಿನ ಉತ್ಪನ್ನಗಳಾದ ತುಪ್ಪ, ಮೊಸರು, ಚೀಸ್ ಕೂಡ ಮೂಳೆಗಳನ್ನು ಬಲಗೊಳಿಸುವ ಪೋಷಕಾಂಶದ ಸಮೃದ್ಧ ಮೂಲವಾಗಿದೆ. ಡೈರಿ ಉತ್ಪನ್ನಗಳು ಮಾತ್ರ ಕ್ಯಾಲ್ಸಿಯಂ ಭಂಡಾರವೇ..? ಲ್ಯಾಕ್ಟೋಸ್ ಬಗ್ಗೆ ಆಸಕ್ತಿ ಹೊಂದಿರದ ಜನರು ಕ್ಯಾಲ್ಸಿಯಂ ಪಡೆಯುವುದಾದರೂ ಹೇಗೆ..? ಅಂದರೆ ಡೈರಿ ಪದಾರ್ಥಗಳ ಹೊರತಾಗಿಯೂ ಕ್ಯಾಲ್ಸಿಯಂ ಒಳಗೊಂಡಿರುವ ಬೇರೆ ಆಹಾರಗಳು ಇವೆ.
ಆಸ್ಟಿಯೋಪೋರೋಸಿಸ್ ಮತ್ತು ಸಂಧಿವಾತದಿಂದ ಬಳಲುತ್ತಿರುವ ಮಂದಿಗೆ, ಕ್ಯಾಲ್ಸಿಯಂ ಒಂದು ಖನಿಜವಾಗಿದ್ದು ಅದು ವ್ಯಕ್ತಿಯ ದೇಹದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತದೆ. ಆದರೂ, ಈ ಮೂಳೆಗಳನ್ನು ನಿರ್ಮಿಸುವ ಪೌಷ್ಟಿಕಾಂಶದ ದೈನಂದಿನ ಅತ್ಯುತ್ತಮ ಮೂಲವೆಂದು ನೀವು ಭಾವಿಸಿದರೆ, ಅದು ತಪ್ಪಾಗುತ್ತದೆ. ಏಕೆಂದರೆ, ಡೈರಿ ಪದಾರ್ಥಗಳಿಗಿಂತ ದೇಹಕ್ಕೆ ಕ್ಯಾಲ್ಸಿಯಂ ಒದಗಿಸುವ ಸಾಕಷ್ಟು ಆಹಾರ ಪದಾರ್ಥಗಳು ಇವೆ.
ನ್ಯಾಷನಲ್ ಆಸ್ಟಿಯೋಪೊರೋಸಿಸ್ ಫೌಂಡೇಶನ್ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಸಾರ್ಡಿನ್ ಎಂಬ ಮೀನುಗಳು ಡೈರಿ ಉತ್ಪನ್ನಗಳಿಗಿಂತ ಹೆಚ್ಚಿನ ಕ್ಯಾಲ್ಸಿಯಂ ಅನ್ನು ಒಳಗೊಂಡಿರುತ್ತವೆ. 85 ಗ್ರಾಂ ಮೀನಿನಲ್ಲಿ 325 ಮಿಲಿಗ್ರಾಂ ಕ್ಯಾಲ್ಸಿಯಂ ಇರುತ್ತದೆ. 299 ಮಿ.ಗ್ರಾಂ ಪೂರ್ಣ ಕೊಬ್ಬಿನ ಹಾಲಿನಲ್ಲಿ ತುಂಬಿದೆ. ಇದು ವಯಸ್ಕರಿಗೆ ದಿನದಲ್ಲಿ ಒಂದು ಬಾರಿಯಾದರೂ ಸೇವಿಸುವಂತೆ ಸಲಹೆ ನೀಡಲಾಗುತ್ತದೆ.
ಸಾರ್ಡೀನ್ ಮೀನು ಮೂಳೆಗಳನ್ನು ಹೇಗೆ ಬಲಪಡಿಸುತ್ತದೆ?
ಸಾರ್ಡೀನ್ ಮೀನುಗಳು ಮೂಳೆ ಆರೋಗ್ಯ ಮತ್ತು ದೇಹಕ್ಕೆ ಶಕ್ತಿಯನ್ನು ನೀಡುವ ಅದ್ಭುತ ಆಹಾರವಾಗಿದೆ. ಕ್ಯಾಲ್ಸಿಯಂ ಮೂಲವಾಗಿರುವ ಈ ಮೀನು ಮೃದುವಾದ ಮೂಳೆಗಳನ್ನು ಒಳಗೊಂಡಿದ್ದು, ಒಂದು ಮೀನನ್ನು ಸಂಪೂರ್ಣವಾಗಿ ಒಬ್ಬರೇ ತಿನ್ನಬಹುದಾದಷ್ಟು ರುಚಿಯಾಗಿರುತ್ತದೆ. ಇದಲ್ಲದೇ ಇದರಲ್ಲಿ ಪ್ರೋಟೀನ್ ಮತ್ತು ವಿಟಮಿನ್ ಡಿ ಅಂಶವು ಸಮೃದ್ಧವಾಗಿದ್ದು, ಇದು ಆಹಾರದಲ್ಲಿನ ಖನಿಜಾಂಶವನ್ನು ಹೀರಿಕೊಳ್ಳುವ ಮೂಲಕ ಮೂಳೆಯ ಸಾಂದ್ರತೆಯನ್ನು ಹೆಚ್ಚಿಸುತ್ತದೆ.
ಹಲವಾರು ಅಧ್ಯಯನಗಳ ಪ್ರಕಾರ, ಹೆಚ್ಚಿನ ಡೈರಿ ಉತ್ಪನ್ನಗಳ ಸೇವನೆಯು ಜಪಾನ್ ಹೊರತಾಗಿಯೂ ಅಮೆರಿಕದಲ್ಲಿ ಹೆಚ್ಚಾಗಿದ್ದು, ಇದು ಆಸ್ಟಿಯೋಪೊರೋಸಿಸ್ ಸಂಭವಿಸುವಿಕೆಗೆ ಕಾರಣವಾಗಿದೆ ಎಂದು ತೋರಿಸಿದೆ. ಇದನ್ನು ಹೆಚ್ಚಾಗಿ ಜಪಾನ್ ಮತ್ತು ಏಷ್ಯಾದ ಇತರೆ ದೇಶಗಳಲ್ಲಿ ಸೇವಿಸುತ್ತಾರೆ.
ಈ ಕೊಬ್ಬಿನ ಮೀನುಗಳಲ್ಲಿ ಪ್ರೋಟೀನ್ ಕೂಡ ಹೇರಳವಾಗಿರುತ್ತವೆ ಮತ್ತು ಸ್ನಾಯುಗಳ ನಿರ್ಮಾಣದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. 85 ಗ್ರಾಂ ಮೀನಿನಲ್ಲಿ 25 ಗ್ರಾಂ ಪ್ರೋಟೀನ್ ಅಂಶ ಇರುತ್ತದೆ. 80 ಕೆಜಿ ತೂಕದ ವ್ಯಕ್ತಿಗೆ ದಿನಕ್ಕೆ 131 ರಿಂದ 164ರವರೆಗೆ ಪ್ರೋಟೀನ್ ಅಗತ್ಯವಿರುತ್ತದೆ. ನಿಮ್ಮ ದೇಹದ ತೂಕಕ್ಕೆ ಅನುಗುಣವಾಗಿ ಪ್ರೋಟೀನ್ ಭರಿತ ಆಹಾರ ಸೇವಿಸಬಹುದು.
ಕ್ಯಾಲ್ಸಿಯಂಭರಿತ ಆಹಾರಗಳು..
ಬ್ರೋಕೋಲಿ, ಅವರೆಕಾಳು, ಬೀನ್ಸ್, ಬಾದಾಮಿ, ಎಳ್ಳು, ಹಸಿರುಸೊಪ್ಪು, ಮೊಟ್ಟೆ, ಸಾಲ್ಮನ್ ಮೀನು