ನಿಮ್ಮ ಈ ಕೆಟ್ಟ ಅಭ್ಯಾಸಗಳು ಆರ್ಥಿಕ ಸಮಸ್ಸೆ ತರುತ್ತದೆ!

ಹಿಂದೂ ಧರ್ಮದ ನಂಬಿಕೆ ಪ್ರಕಾರ ಲಕ್ಷ್ಮಿ ದೇವಿಯೂ ನಿಮ್ಮಿಂದ ಸಂತೋಷಗೊಂಡರೆ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.ಲಕ್ಷ್ಮಿ ಮಾತೆಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ಅದರೆ ಕೆಲವೊಮ್ಮೆ ನಿಮ್ಮ ಕೆಟ್ಟ ಅಭ್ಯಾಸಗಳು ನಿಮ್ಮ ಅದೃಷ್ಟವನ್ನು ಕಸಿದುಕೊಳ್ಳಬಹುದು ಮತ್ತು ಹಣಕಾಸಿನ ಸಮಸ್ಸೆಗಳನ್ನು ಉಂಟಾಗುತ್ತದೆ.

ಧರ್ಮ ಗ್ರಂಥಗಳ ಪ್ರಕಾರ ಸೂರ್ಯಸ್ತದ ನಂತರ ತುಳಸಿ ಗಿಡವನ್ನು ಮುಟ್ಟುವುದನ್ನು ನಿಷೇದಿಸಲಾಗಿದೆ. ಸೂರ್ಯಸ್ತದ ನಂತರ ತುಳಸಿ ಗಿಡಕ್ಕೆ ನೀರನ್ನು ಹಾಕಬೇಡಿ. ಸಂಜೆ ತುಳಸಿ ಗಿಡದ ಬಳಿ ಮಾತ್ರ ತುಪ್ಪದ ದೀಪವನ್ನು ಹಚ್ಚಿ. ಹೀಗೆ ಮಾಡುವುದರಿಂದ ನೆಗೆಟಿವ್ ಎನರ್ಜಿ ದೂರವಾಗುವುದು ಮತ್ತು ಮನೆಯಲ್ಲಿ ಲಕ್ಷ್ಮಿ ಯೂ ಬರುತ್ತಾಳೆ.

ಊಟವಾದ ತಕ್ಷಣ ಪಾತ್ರೆಗಳನ್ನು ಸ್ವಚ್ಛಗೊಳಿಸದೇ ಇದ್ದರೆ ಶನಿ ಮತ್ತು ಚಂದ್ರನ ಕೆಟ್ಟ ಪ್ರಭಾವ ನಿಮ್ಮ ಮೇಲೆ ಬಿರುತ್ತದೆ. ಊಟ ಮಾಡಿದ ನಂತರ ಪಾತ್ರೆಗಳನ್ನು ಸ್ವಚ್ಛಗೊಳಿಸದೇ ಇದ್ದರೆ ನಿಮ್ನ ಮನೆಯಲ್ಲಿ ಸಮೃದ್ಧಿ ಆಗುವುದಿಲ್ಲ. ಊಟ ಮಾಡಿದ ತಕ್ಷಣ ಪಾತ್ರೆಗಳೆನ್ನೆಲ್ಲಾ ತೊಳೆದು ಇಡಬೇಕು.

ಧರ್ಮ ಗ್ರಂಥಗಳ ಪ್ರಕಾರ ಸೂರ್ಯಸ್ತದ ಸಮಯದಲ್ಲಿ ಅಧ್ಯಯನ ಮಾಡುವುದು ಲಕ್ಷ್ಮಿ ದೇವಿಯನ್ನು ಅಸಮಾಧಾನಗೊಳಿಸುತ್ತದೆ. ಸೂರ್ಯಸ್ತದ ಸಮಯದಲ್ಲಿ ಓದುವ ಬದಲು ಆಟ ಆಡಬೇಕು ಅಥವಾ ಬೇರೆ ಯಾವುದೇ ಕೆಲಸದಲ್ಲಿ ವ್ಯರ್ಥವಾಗಬೇಕು.ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ.ಸಂಜೆ ದೀಪ ಹಚ್ಚುವ ಸಮಯದಲ್ಲಿ ಓದಬಾರದು.

ಸೂರ್ಯಸ್ತದ ಸಮಯದಲ್ಲಿ ಮಲಗುವುದು ನಕಾರಾತ್ಮಕ ಶಕ್ತಿ ತರುತ್ತದೆ ಮತ್ತು ದುರದೃಷ್ಟವು ನಿಮಗೆ ಸಂಭವಿಸುತ್ತದೆ. ಇದು ಬೊಜ್ಜು ಮತ್ತು ಅರೋಗ್ಯ ಸಮಸ್ಸೆಗಳನ್ನು ಸಹ ಉಂಟು ಮಾಡುತ್ತದೆ. ಇನ್ನು ಸಂಜೆ ಸಮಯದಲ್ಲಿ ಮನೆಯ ಹೆಣ್ಣು ಮಕ್ಕಳು ಬಾಗಿಲ ಬಳಿ ಕುಳಿತುಕೊಳ್ಳಬಾರದು. ಶಾಸ್ತ್ರದಲ್ಲಿ ಸಂಜೆ ಸಮಯದಲ್ಲಿ ಬಾಗಿಲ ಬಳಿ ಕುಳಿತುಕೊಳ್ಳುವುದು ಅಶುಭ ಎಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಪ್ರವೇಶಿಸುವುದಿಲ್ಲ.

ಇನ್ನು ಸೂರ್ಯಸ್ತದ ನಂತರ ಮೊಸರು ಹಾಲು ಉಪ್ಪನ್ನು ಯಾರಿಗೂ ಧಾನವಾಗಿ ಕೊಡಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ಬಡತನ ಬರುತ್ತದೆ. ಇದರಿಂದ ನೀವು ಆರ್ಥಿಕ ಸಮಸ್ಸೆಯನ್ನು ಎದುರಿಸಬೇಕಾಗುತ್ತದೆ.

Leave a Comment