ಈ ಒಂದು ಮನೆಮದ್ದನ್ನು ಹಿಂದಿನ ಕಾಲದಲ್ಲಿ ಹಿರಿಯರು ಬಳಸುತ್ತಿದ್ದರು. ಈ ಮನೆಮದ್ದು ಮಾಡುವುದಕ್ಕೆ ಯಾವೆಲ್ಲಾ ಸಾಮಗ್ರಿಗಳು ಬೇಕು ಎಂದರೆ ಗಂಧ, ಇದು ಬ್ಯಾಕ್ಟಿರಿಯಲ್ ಇನ್ಯಾಫಕ್ಷನ್ ಆಗಿದ್ರೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸ್ಕಿನ್ ಗೆ ತುಂಬಾನೇ ಬೆಸ್ಟ್ ಅಂತಾ ಹೇಳಬಹುದು ಮತ್ತು ಜೀರ್ಣಕ್ಕೆ ಕೂಡ ತುಂಬಾ ಒಳ್ಳೆಯದು. ಒಣಶುಂಠಿ ಗಂಟಲಿನಲ್ಲಿ ಇರಿಟೇಷನ್ ಕಫ ಲಂಗ್ಸ್ ಇನ್ಯಾಫಕ್ಷನ್ ಇದ್ರೂ ಕಡಿಮೆ ಮಾಡುತ್ತದೆ.
ಇನ್ನು ಜೇಷ್ಠಮಧು ಇದು ಇಂಮ್ಯೂನಿಟಿ ಬೂಸ್ಟ್ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಇನ್ನು ಕಾಳು ಮೆಣಸು ಶೀತ ಕೆಮ್ಮು ಜ್ವರಕ್ಕೆ ಇದು ಸಹಾಯ ಮಾಡುತ್ತದೆ. ಇನ್ನು ಹಿಪ್ಪೆ ನಲ್ಲಿ ಕೆಮ್ಮು ಕಫ ಕಡಿಮೆ ಮಾಡುವ ಗುಣ ಇದೆ. ಇನ್ನು ಲವಂಗ ಕೂಡ ಕೆಮ್ಮಿಗೆ ಬೆಸ್ಟ್ ಮೆಡಿಸಿನ್ ಅಂತಾ ಹೇಳಬಹುದು, ಜಾಯಿ ಕಾಯಿ, ಬಜೆ ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಮೊದಲು ಗಂಧದ ಕಲ್ಲಿಗೆ ಸ್ವಲ್ಪ ನೀರು ಹಾಕಿ ತೆಗೆದುಕೊಂಡಿರುವ ಸಾಮಗ್ರಿಗಳನ್ನು ತೆಯಬೇಕು. ಚಿಕ್ಕ ಮಕ್ಕಳಿಗೆ ಕೊಡುವುದಾದರೆ ಮೊದಲು ನೆತ್ತಿಗೆ ಸಾವರುತ್ತಾರೆ. ಇದು ಎಲ್ಲಾ ಸಮಸ್ಸೆಗೆ ಒಂದೇ ಪರಿಹಾರ ಎಂದು ಹೇಳಬಹುದು. ಬರೀ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರು ಸಹ ಬಳಸಬಹುದು. ಈ ಒಂದು ಚಮಚ ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ಇರುವ ಹಲವಾರು ಸಮಸ್ಸೆಗಳು ನಿವಾರಣೆ ಆಗುತ್ತದೆ. ಅದರಲ್ಲೂ ಕಫ ಎಷ್ಟೇ ಗಟ್ಟಿಯಾಗಿ ಇರಲಿ ಅದು ಸುಲಭವಾಗಿ ಕರಗಿ ನಿರಾಗಿ ಹೋಗುತ್ತದೆ.