Commonwealth Games 2022: ಕಾಮನ್ವೆಲ್ತ್ ಕ್ರೀಡಾಕೂಟದ 10ನೇ ದಿನವಾದ ಇಂದೂ ಕೂಡ ಭಾರತೀಯ ಅಥ್ಲೀಟ್ ಗಳ ಪದಕ ಬೇಟೆ ಮುಂದುವರೆದಿದೆ. ಭಾರತೀಯ ಬಾಕ್ಸರ್ ಆಗಿರುವ ಅಮಿತ್ ಪಂಘಾಲ್ ಬಾಕ್ಸಿಂಗ್ ಕ್ರೀಡಾಕೂಟದ 48-51 ಕೆಜಿ ವಿಭಾಗದಲ್ಲಿ ಭಾರತಕ್ಕ ಮತ್ತೊಂದು ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ಈ ವಿಭಾಗದ ಫೈನಲ್ ಪಂದ್ಯದಲ್ಲಿ ಅವರು ಇಂಗ್ಲೆಂಡ್ ಬಾಕ್ಸರ್ ಆಗಿರುವ ಕಿಯಾರನ್ ಮ್ಯಾಕ್ಡೋನಾಲ್ಡ್ ಅವರನ್ನು 5-0 ಅಂಕಗಳ ಅಂತರದಿಂದ ಸೋಲಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
Indian Boxer Amit Panghal wins Gold in the 48-51kg weight category defeating England’s Kiaran Macdonald by 5-0 in #CommonwealthGames2022 pic.twitter.com/mN4AmluSkb
— ANI (@ANI) August 7, 2022
— Irfan (@d_delusionalguy) August 7, 2022
ಇದಕ್ಕೂ ಮುನ್ನ ಸೆಮಿಫೈನಲ್ ಪಂದ್ಯದಲ್ಲಿಯೂ ಕೂಡ ತನ್ನ ಉತ್ತಮ ಪ್ರದರ್ಶನ ತೋರಿದ್ದ ಅಮಿತ್, ಫೈನಲ್ ನಲ್ಲಿಯೂ ಕೂಡ ತನ್ನ ಉತ್ತಮ ಪ್ರದರ್ಶನ ತೋರಿ ಇಂಗ್ಲೆಂಡ್ ನ ಮ್ಯಾಕ್ಡೊನಾಲ್ಡ್ ಅವರನ್ನು ಮಣಿಸಿದ್ದಾರೆ. ಮೊದಲ ರೌಂಡ್ ನಿಂದಲೇ ತನ್ನ ಇಂಗ್ಲೆಂಡ್ ಪ್ರತಿಸ್ಪರ್ಧಿಯ ಮೇಲೆ ಪಾರುಪತ್ಯ ಸಾಧಿಸಿದ ಅಮಿತ್, ಎರಡನೇಯ ಹಾಗೂ ಮೂರನೆಯ ಸುತ್ತಿನಲ್ಲಿಯೂ ಕೂಡ ಮುನ್ನಡೆ ಸಾಧಿಸಿ ಅಂತಿಮವಾಗಿ ವಿಜಯದ ಮಾಲೆಯನ್ನು ತನ್ನ ಕೊರಳಿಗೆ ಹಾಕಿಕೊಂಡಿದ್ದಾರೆ.
ಇದನ್ನೂ ಓದಿ-CWG 2022 Women Hockey: ಭಾರತೀಯ ವನಿತೆಯರ ಕಮಾಲ್, ಭಾರತಕ್ಕೆ ಮತ್ತೊಂದು ಕಂಚು
ಇನ್ನೊಂದೆಡೆ ಭಾರತೀಯ ಮಹಿಳಾ ಬಾಕ್ಸರ್ ಆಗಿರುವ ನೀತು ಗಂಘಾಸ್ ಕೂಡ ಮಿನಿವೇಟ್ ಬಾಕ್ಸಿಂಗ್ (45-48 ಕೆಜಿ) ವರ್ಗದಲ್ಲಿ ಇಂಗ್ಲೆಂಡ್ ನ ರೆಸ್ಜಟಾನ್ ಡೆಮಿ ಜೆಡ್ ಅವರನ್ನು 5-0 ಅಂತರದಿಂದ ಸೋಲಿಸುವ ಮೂಲಕ ಭಾರತಕ್ಕೆ 12ನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಇಲ್ಲಿ ವಿಶೇಷ ಎಂದರೆ, ಕಾಮನ್ವೆಲ್ತ್ ಕ್ರೀಡಾಕೂಟದ ಡೆಬ್ಯೂ ಪಂದ್ಯದಲಿಯೇ ತನ್ನ ಜಬರ್ದಸ್ತ್ ಆತ್ಮವಿಶ್ವಾಸ ತೋರಿದ್ದ ನೀತು ಪಂದ್ಯಾವಳಿಯ ಫೈನಲ್ ನಲ್ಲಿಯೂ ಕೂಡ ತನ್ನ ಅದೇ ಆತ್ಮವಿಶ್ವಾಸವನ್ನು ಪುನಃ ಪ್ರದರ್ಶಿಸಿದ್ದಾರೆ.
ಇದನ್ನೂ ಓದಿ-ಫೈನಲ್ ಲಗ್ಗೆ ಇಟ್ಟ ಪಿವಿ ಸಿಂಧು: ಪದಕ ಖಚಿತ; ಚಿನ್ನಕ್ಕಾಗಿ ಹೋರಾಟ
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.