ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಮತ್ತು ಹಲವು ಔಷಧೀಯ ಗುಣಗಳನ್ನು ಒಳಗೊಂಡಿರುವ ಈ ಮೆಂತ್ಯ ಕಾಳುಗಳನ್ನು ಹೇಗೆ ಸೇವಿಸಬೇಕು. ಇದನ್ನು ಯಾರು ಸೇವಿಸಬೇಕು ಹಾಗೂ ಎಂತಹವರು ಸೇವಿಸಬಾರದು ಎಂದು ತಿಳಿಯೋಣ.
ಮೆಂತ್ಯ ಕಾಳು ಉತ್ತಮ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳನ್ನು ಒಳಗೊಂಡಿದೆ. ವಿಟಮಿನ್ ಬಿ 6 ಸಮೃದ್ಧವಾಗಿರುವ ಮೆಂತ್ಯ ಕಾಳಿನಲ್ಲಿ ಐರನ್ ಅಂಶವೂ ಹೆರಳವಾಗಿದೆ. ಅಷ್ಟೇ ಅಲ್ಲದೆ, ಇದರಲ್ಲಿ ಮೆಗ್ನೀಶಿಯಮ್, ಕ್ಯಾಲ್ಸಿಯಂ, ವಿಟಮಿನ್ ಸಿ ಕೂಡ ಕಂಡು ಬರುತ್ತದೆ. ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿರುವ ಮೆಂತ್ಯ ಕಾಳನ್ನು ನೆನೆಸಿಡುವುದರಿಂದ ನೈಟ್ರಿಕ್ ಆಸಿಡ್ ಕೂಡ ಬಿಡುಗಡೆ ಆಗುತ್ತದೆ. ಜೊತೆಗೆ ಇದು ಆಂಟಿ ಫಂಗಲ್, ಆಂಟಿ ಬ್ಯಾಕ್ಟೀರಿಯಾ ಔಷಧೀಯ ತತ್ವಗಳನ್ನು ಕೂಡ ಒಳಗೊಂಡಿದೆ.
ಈ ರೀತಿಯಾಗಿ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಮತ್ತು ಹಲವು ಔಷಧೀಯ ಗುಣಗಳನ್ನುಗಳನ್ನು ಒಳಗೊಂಡಿರುವ ಈ ಮೆಂತ್ಯ ಕಾಳುಗಳನ್ನು ಹೇಗೆ ಸೇವಿಸಬೇಕು. ಇದನ್ನು ಯಾರು ಸೇವಿಸಬೇಕು ಹಾಗೂ ಎಂತಹವರು ಸೇವಿಸಬಾರದು ಎಂದು ತಿಳಿಯೋಣ.
ಮೆಂತ್ಯ ಕಾಳನ್ನು ಹೇಗೆ ಸೇವಿಸಬೇಕು?
- ಮೆಂತ್ಯ ಕಾಳನ್ನು ಹುರಿದು ಪುಡಿಮಾಡಿ ಅದರೊಂದಿಗೆ ಬೆಲ್ಲವನ್ನು ಬೆರೆಸಿ ಉಂಡೆ ತಯಾರಿಸಿ ಸೇವಿಸಬಹುದು. ಆದರೆ, ನೆನೆಪಿಡಿ ತುಂಬಾ ಚಿಕ್ಕ ಉಂಡೆಗಳನ್ನಷ್ಟೇ ತಯಾರಿಸಿ ಸೇವಿಸಿ.
- ಮೆಂತ್ಯ ಕಾಳನ್ನು ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಗಿದು ಸೇವಿಸಬಹುದು.
- ಇದಲ್ಲದೆ, ಮೆಂತ್ಯ ಕಾಳಿನ ಕಷಾಯವನ್ನೂ ಸಹ ತಯಾರಿಸಿ ಸೇವಿಸಬಹುದು.
ಒಂದೆರಡು ಚಮಚ ಮೆಂತ್ಯ ಕಾಳನ್ನು ಅರ್ಧ ಲೀಟರ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಅದು 100 ಮಿ.ಲೀ ಆಗುವವರೆಗೂ ಚೆನ್ನಾಗಿ ಕುದಿಸಿ ನಂತರ ಸೇವಿಸಿ.
ಮೆಂತ್ಯ ಕಾಳನ್ನು ಯಾರು? ಹೇಗೆ ಸೇವಿಸಬೇಕು? ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು?
ಮೆಂತ್ಯ ಕಾಳಿನ ಉಂಡೆಯನ್ನು ಯಾರು ಸೇವಿಸಬಹುದು?
ಮೆಂತ್ಯ ಕಾಳಿನ ಉಂಡೆ ಸೇವನೆಯಿಂದಲೂ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಅವು ಈ ಕೆಳಕಂಡಂತಿವೆ…
ಬಾಣಂತಿಯರು ಮೆಂತ್ಯ ಕಾಳಿನ ಉಂಡೆಯನ್ನು ತುಪ್ಪದೊಂದಿಗೆ ಬೆರೆಸಿ ತಿನ್ನುವುದರಿಂದ ಹಾಲಿನ ಉತ್ಪತ್ತಿ ಹೆಚ್ಚಾಗುತ್ತದೆ. (ನಿತ್ಯ ಒಂದೆರಡು ಚಮಚವಷ್ಟೇ ಸೇವಿಸಿ) ಮೆಂತ್ಯ ಪೇಸ್ಟ್: ಮೆಂತ್ಯ ಕಾಳುಗಳನ್ನು ರಾತ್ರಿಯಿಡೀ ನೆನೆಸಿ, ಬೆಳಿಗ್ಗೆ ನುಣ್ಣಗೆ ರುಬ್ಬಿ ಬಳಸಬಹುದು.
ಇಂತಹವರು ರಾತ್ರಿ ನೆನೆಸಿದ ಮೆಂತ್ಯವನ್ನು ಸೇವಿಸಿ:
ರಾತ್ರಿಯಿಡೀ ಮೆಂತ್ಯವನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ. ಅವುಗಳೆಂದರೆ…
ಮೆಂತ್ಯ ಸೇವನೆಯಿಂದ ಇನ್ಸುಲಿನ್ ಉತ್ಪಾದನೆ ಹೆಚ್ಚಾಗುವುದರಿಂದ ಡಯಾಬಿಟಿಸ್ ಗೆ ತುಂಬಾ ಪ್ರಯೂಜನಕಾರಿ.
ಸ್ತನದ ಗಾತ್ರ ತುಂಬಾ ಚಿಕ್ಕದಿರುವ ಹೆಣ್ಣು ಮಕ್ಕಳು ಮೆಂತ್ಯ ಕಾಳನ್ನು ನೆನೆಸಿ ಸೇವಿಸುವುದರಿಂದ ಸ್ತನದ ಗಾತ್ರವನ್ನು ವೃದ್ಧಿಸಿಕೊಳ್ಳಬಹುದು. ನೆನಪಿನ ಶಕ್ತಿ ವೃದ್ಧಿಯಾಗುತ್ತದೆ. ನೆನೆಸಿದ ಮೆಂತ್ಯ ಸೇವನೆಯಿಂದ ಲಿವರ್ ಸಂಬಂಧಿತ ಕಾಯಿಲೆಗಳಿಂದ ಪರಿಹಾರ ದೊರೆಯುತ್ತದೆ. ಪುರುಷತ್ವದ ಸಮಸ್ಯೆ ಇರುವ ಪುರುಷರಿಗೆ ಇದು ಪ್ರಯೋಜನಕಾರಿ. ಕೆಲವು ಚರ್ಮದ ಸಮಸ್ಯೆಗಳಿಗೆ ಮೆಂತ್ಯ ಸೇವನೆ ಪರಿಣಾಮಕಾರಿ ಮನೆಮದ್ದು. ಆದರೆ, ನೆನಪಿಡಿ ಕಫ ಪ್ರಧಾನವಾಗಿ ಬರುವ ಚರ್ಮವ್ಯಾದಿಗಳಲ್ಲಿ ಚರ್ಮದ ಸಮಸ್ಯೆ ಉಲ್ಬಣಿಸಬಹುದು. ಕಿವಿಯ ಸಮಸ್ಯೆಗಳು ದೂರವಾಗುತ್ತದೆ. ಚರ್ಮದ ಕಾಂತಿ ವೃದ್ಧಿಯಾಗುತ್ತದೆ.
ಇವರು ಮೆಂತ್ಯ ಕಾಳಿನ ಕಷಾಯವನ್ನು ಕುಡಿಯಿರಿ:ಈ ಆರೋಗ್ಯ ಸಮಸ್ಯೆ ಇರುವವರಿಗೆ ತುಂಬಾ ಪ್ರಯೋಜನಕಾರಿ ಮೆಂತ್ಯ ಕಷಾಯ
- ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಮೆಂತ್ಯ ಕಾಳಿನಿಂದ ತಯಾರಿಸಿದ ಕಷಾಯ ತುಂಬಾ ಪ್ರಯೋಜನಕಾರಿ ಆಗಿದೆ.
- ಕಷಾಯ ಕುಡಿಯುವುದರಿಂದ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಬ್ಲಾಕೇಜ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
- ಕಷಾಯ ಸೇವನೆಯಿಂದ ರಕ್ತ ಶುದ್ಧಿಯಾಗುತ್ತದೆ.
- ಸಂಧಿವಾತ ಸಮಸ್ಯೆ ದೂರವಾಗುತ್ತದೆ.
ಮೆಂತ್ಯ ಪೇಸ್ಟ್ ಬಳಕೆ: ಚರ್ಮಕ್ಕೆ ಪ್ರಯೋಜನಕಾರಿ: ಮೆಂತ್ಯ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಒಂದು ಗಂಟೆ ಬಳಿಕ ಮುಖವನ್ನು ಸ್ವಚ್ಛಗೊಳಿಸಿ. ಇದರಿಂದ ಮೊಡವೆ, ಮುಖದ ದದ್ದು, ಡಾರ್ಕ್ ಸರ್ಕಲ್ ಸಮಸ್ಯೆಯಿಂದ ಸುಲಭ ಪರಿಹಾರ ದೊರೆಯುತ್ತದೆ.
ಕೂದಲಿನ ಸರ್ವ ಸಮಸ್ಯೆಗೂ ಶಾಶ್ವತ ಪರಿಹಾರ: ಕೂದಲು ಉದುರುವಿಕೆ, ತಲೆಹೊಟ್ಟು, ಬಿಳಿ ಕೂದಲ ಸಮಸ್ಯೆ ಹೀಗೆ ಕೂದಲಿನ ಸರ್ವ ಸಮಸ್ಯೆಗೂ ಕೂಡ ಮೆಂತ್ಯ ಪೇಸ್ಟ್ ಶಾಶ್ವತ ಪರಿಹಾರವಾಗಿದೆ.