ಗಣಪತಿಯನ್ನು ಯಾಕೆ ನೀರಿಗೆ ಬಿಡುತ್ತಾರೆ!

ಹಿಂದೂ ಪುರಾಣಗಳ ಪ್ರಕಾರ ಯಾವುದೇ ಮಣ್ಣಿನಿಂದ ಮಾಡಿದ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸಬೇಕಂತೆ. ಒಮ್ಮೆ ದೇವರ ಮೂರ್ತಿಯಾದ್ರೆ. ಅದಕ್ಕೆ ಪ್ರತಿದಿನ ಮಡಿಯಿಂದ ಪೂಜೆ ಮಾಡಲೇಬೇಕು. ಪೂಜೆ ಮಾಡದಂತೆ ಇಟ್ಟುಕೊಳ್ಳುವಂತಿಲ್ಲ. ಅದಕ್ಕೆ ಗಣೇಶನನ್ನು ನೀರಿನಲ್ಲಿ ಮುಳುಗಿಸಲಾಗುತ್ತೆ.

ಹಿಂದೂ ಪುರಾಣಗಳ ಪ್ರಕಾರ ಯಾವುದೇ ಮಣ್ಣಿನಿಂದ ಮಾಡಿದ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸಬೇಕಂತೆ. ಒಮ್ಮೆ ದೇವರ ಮೂರ್ತಿಯಾದ್ರೆ. ಅದಕ್ಕೆ ಪ್ರತಿದಿನ ಮಡಿಯಿಂದ ಪೂಜೆ ಮಾಡಲೇಬೇಕು. ಪೂಜೆ ಮಾಡದಂತೆ ಇಟ್ಟುಕೊಳ್ಳುವಂತಿಲ್ಲ. ಅದಕ್ಕೆ ಗಣೇಶನನ್ನು ನೀರಿನಲ್ಲಿ ಮುಳುಗಿಸಲಾಗುತ್ತೆ.

ಮಣ್ಣಿನಿಂದ ಮಾಡಿದ ಮೂರ್ತಿ ಮಣ್ಣಿಗೆ

ಗಣೇಶ ಹೇಗೆ ಹುಟ್ಟಿದ ಎಂಬ ಕಥೆ ನೆನಪಿದೆಯಾ?, ಒಮ್ಮೆ ಪಾರ್ವತಿಯು ಸ್ನಾನ ಮಾಡಲು ಹೊರಟಿರುತ್ತಾಳೆ. ಕಾವಲು ಕಾಯಲು ಯಾರು ಇರುವುದಿಲ್ಲ. ಅದಕ್ಕೆ ಪಾರ್ವತಿ ತನ್ನ ಬೆವರಿನ ಮಣ್ಣಿನಿಂದ ಗಣೇಶನಿಗೆ ಜೀವ ಕೊಟ್ಟಿದ್ದಳು ಎನ್ನುವ ನಂಬಿಕೆ. ವಿವಿಧ ರೀತಿಯ ಮೂರ್ತಿಗಳನ್ನು ಮಾಡಿ ಅದರಲ್ಲಿ ದೇವರನ್ನು ಕಾಣುತ್ತೇವೆ. ಆದರೆ ಮಣ್ಣಿನಿಂದ ಮಾಡಿದ ಯಾವುದೇ ಮೂರ್ತಿಯನ್ನೇ ಆದರೂ ನೀರಿನಲ್ಲಿ ಮುಳುಗಿಸುವ ಮೂಲಕ ಅದು ಮತ್ತೆ ಮಣ್ಣು ಸೇರುವಂತೆ ಮಾಡುಬೇಕು ಎಂದು ಪುರಾಣಗಳು ಹೇಳುತ್ತವೆ.

ಮುಳುಗಿಸದಿದ್ದರೆ ನಿತ್ಯ ಪೂಜೆ ಮಾಡಬೇಕು

ಒಂದು ವೇಳೆ ನಿಮಗೆ ಗಣೇಶನ ಮೂರ್ತಿಯನ್ನು ಮುಳುಗಿಸಲು ಇಷ್ಟವಿಲ್ಲದಿದ್ದರೆ ಅದನ್ನು ಮನೆಯಲ್ಲೇ ಇಟ್ಟುಕೊಂಡು ಪ್ರತಿದಿನ ಪೂಜೆ ಮಾಡಬೇಕು. ಪೂಜೆಯಿಲ್ಲದೆ ಹಾಗೆಯೇ ಮೂರ್ತಿಯನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲ. ಆದ್ದರಿಂದಲೇ 3,5,9 ದಿನಗಳವರೆಗೆ ಗಣೇಶ ಮೂರ್ತಿಯನ್ನು ಪೂಜೆಸಿ, ಅದನ್ನು ವಿಸರ್ಜನೆ ಮಾಡುತ್ತಾರೆ.

ಗಣೇಶನ ವಿಸರ್ಜನೆ ವೇಳೆ ಏನು ಮಾಡಬೇಕು?

ಗಣೇಶ ಮನೆಯಲ್ಲಿರುವಾಗ ಸಾತ್ವಿಕ ಆಹಾರಗಳನ್ನು ಮಾಡಬೇಕು. ಮಣ್ಣಿನ ಗಣಪನ ಮೂರ್ತಿಯಾಗಿರಬೇಕು. ಗಣಪನನ್ನು ವಿಸರ್ಜನೆಗೆ ತೆಗೆದುಕೊಂಡು ಹೋಗುವ ಮುನ್ನ ಆರತಿ ಎತ್ತಬೇಕು. ನೀವು ವಿಸರ್ಜನೆ ಮಾಡುವ ಸ್ಥಳದಲ್ಲಿ ಗಣೇಶನಿಗೆ ಪೂಜೆ ಮಾಡಬೇಕು. ಮುಂದಿನ ವರ್ಷ ಬೇಗ ಬಾರಪ್ಪ ಎಂದು ಪ್ರಾರ್ಥಿಸಿಕೊಂಡು ಗಣೇಶನನ್ನು ಮುಳುಗಿಸಬೇಕು.

ಗಣೇಶನ ವಿಸರ್ಜನೆ ವೇಳೆ ಏನು ಮಾಡಬಾರದು?

ಗಣೇಶನಿಗೆ ಆರತಿ ಮಾಡದೆ ವಿಸರ್ಜನೆಗೆ ಮುಂದಾಗಬಾರದು. ಗಣೇಶನ ಮೆರವಣಿಗೆಯನ್ನು ಶುಭ ಸಮಯದಲ್ಲಿಯೇ ಮಾಡಬೇಕು. ಗಣೇಶನ ಮೂರ್ತಿಯನ್ನು ವಿಸರ್ಜನೆಗೆ ತೆಗೆದುಕೊಂಡು ಹೋಗುವಾಗ ಮನೆಯ ಬಾಗಿಲು ಹಾಕಬಾರದು. ಯಾರಾದರೂ ಒಬ್ಬರು ಮನೆಯಲ್ಲಿಯೇ ಇರಬೇಕು.

ಬುಧವಾರದಂದೆ ಗಣೇಶನಿಗೆ ಶ್ರೇಷ್ಠ ದಿನ

ಹಿಂದೂ ಧರ್ಮದಲ್ಲಿ ಬುಧವಾರವನ್ನು ಗಣೇಶನಿಗೆ ಅರ್ಪಿಸಲಾಗಿದೆ. ಶಿವ-ಪಾರ್ವತಿ ಪುತ್ರ ಗಣೇಶನನ್ನು ಶುಭ ಕಾರ್ಯದ ಆರಂಭದ ಮೊದಲು ಪೂಜಿಸಲಾಗುತ್ತೆ. ಪ್ರಥಮ ಪೂಜಿತ, ವಿಘ್ನಹರ್ತ ಗಣೇಶನನ್ನು ಬುಧವಾರದಂದು ಪೂಜಿಸುವುದರಿಂದ ನಿಮ್ಮ ಜಾತಕದಲ್ಲಿ ಬುಧನ ಸ್ಥಾನವನ್ನು ಬಲಪಡಿಸಬಹುದು ಹಾಗೂ ಗಣೇಶನ ಕೃಪೆಗೆ ಪಾತ್ರರಾಗಬಹುದು.

ಬುಧವಾರದಂದೆ ಗಣೇಶನಿಗೆ ಶ್ರೇಷ್ಠ ದಿನವೆಂದು ಹೇಳಲು ಒಂದು ದಂತ ಕಥೆ ಇದೆ. ಅದೇನೆಂದರೆ ಪಾರ್ವತಿ ದೇವಿ ತನ್ನ ಕೈಯಾರೆ ಗಣೇಶನನ್ನು ಸೃಷ್ಟಿಸುವಾಗ ಬುಧ ದೇವರು ಕೂಡ ಕೈಲಾಸ ಪರ್ವತದಲ್ಲೇ ಇರುತ್ತಾನೆ. ಹೀಗಾಗಿ ಗಣೇಶನಿಗೆ ಬುಧವಾರದಂದು ಪೂಜಿಸಲಾಗುತ್ತೆ. ಅಲ್ಲದೆ ಬುಧವಾರವನ್ನು ಸೌಮ್ಯವಾರ ಎಂದೂ ಸಹ ಕರೆಯಲಾಗುತ್ತೆ. ಗಣೇಶನಿಗೆ ಸೌಮ್ಯತೆ ಇಷ್ಟವಾಗುತ್ತೆ. ಹೀಗಾಗಿ ಗಣೇಶನನ್ನು ಬುಧವಾರದಂದು ಪೂಜಿಸುವುದು ಮಂಗಳಕರವೆಂದು ಭಾವಿಸಲಾಗಿದೆ.

Leave a Comment