ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಪಲ್ಲಿ ಅನ್ನು ನೋಡಿಯೇ ಇರುತ್ತೇವೆ. ಇಂಥಹ ಚಿಕ್ಕ ಚಿಕ್ಕ ಜೀವಿಗಳು ಎಲ್ಲರ ಮನೆಯಲ್ಲಿ ಕಾಣುವುದು ಸಹಜ ಕೂಡ ಆಗಿದೆ. ಇದು ಮನೆಯಲ್ಲಿ ಇರುವುದು ಒಳ್ಳೆಯದು ಅಂತ ನಂಬಲಾಗಿದೆ. ಆದರೆ ಈ ಪಲ್ಲಿಗಳು ನಮಗೆ ಹಲವಾರು ಬಗೆಯ ಮುನ್ಸೂಚನೆಗಳನ್ನು ಕೊಡುತ್ತದೆ. ಹಾಗಾದ್ರೆ ಬನ್ನಿ ಇಂದಿನ ಲೇಖನದಲ್ಲಿ ಪಲ್ಲಿಗಳು ಯಾವ ಯಾವ ಸೂಚನೆಗಳನ್ನು ಕೊಡುತ್ತವೆ ಮತ್ತು ಪಲ್ಲಿಗಳು ನಮ್ಮ ಮೇಲೆ ಬಿದ್ದರೆ ಏನು ಅಂತ ಸೂಚಿಸುತ್ತದೆ ಅಂತ ತಿಳಿಯೋಣ.
ಎಲ್ಲರ ಮನೆಯಲ್ಲೂ ಪಲ್ಲಿಯನ್ನು ನೋಡಿರುತ್ತೇವೆ. ಇನ್ನೂ ಮನೆಯಲ್ಲಿ ಹಲ್ಲಿಗಳು ಇರುವುದರಿಂದ ಇದರ ಜೊತೆಗೆ ಚಿಕ್ಕ ಪುಟ್ಟ ಜೀವಿಗಳು ಇರುವುದಿಲ್ಲ ಅನ್ನುವುದು ತುಂಬಾನೇ ಒಳ್ಳೆಯ ಸಂಗತಿ ಕೂಡ ಆಗಿದೆ. ಆದರೆ ಈ ಪಲ್ಲಿಗಳು ಮನೆಯಲ್ಲಿ ಇದ್ದು ಹಲವಾರು ರೀತಿಯ ಮುನ್ಸೂಚನೆಯನ್ನು ಕೊಡುತ್ತವೆ. ಆ ಮುನ್ಸೂಚನೆಗಳು ಏನು? ಹಲ್ಲಿಗಳು ನಮ್ಮ ಮೇಲೆ ಬಿದ್ದರೆ ಏನು ಆಗುತ್ತದೆ ಅಂತ ತಿಳಿಯೋಣ.
ಹಲ್ಲಿ ನಾವು ಯಾವುದಾದರೂ ಕೆಲಸಗಳಿಗೆ ಹೋಗಿರುತ್ತೇವೆ. ಆ ಕೆಲಸವನ್ನು ಮಾಡಿಕೊಂಡು ಬರುತ್ತೇವೆ. ಮನೆಗೆ ಬಂದ ತಕ್ಷಣ ನಾವು ತಕ್ಷಣ ಪಲ್ಲಿಯನ್ನು ನೋಡಿದರೆ ಆ ಕೆಲಸಗಳು ಆಗುವುದಿಲ್ಲ. ಆ ಕೆಲಸದಲ್ಲಿ ನಮಗೆ ಜಯ ಸಿಗುವುದಿಲ್ಲ ನಷ್ಟಗಳು ಆಗುತ್ತದೆ ಅಂತ ಸೂಚನೆ ಕೊಡುತ್ತದೆ. ಆದ ಕಾರಣ ನೀವು ಕೆಲಸವನ್ನು ಮಾಡಿಕೊಂಡು ಮನೆಗೆ ಬಂದ ಮೇಲೆ ಮನೆಯ ಮೇಲ್ಛಾವಣಿಯನ್ನು ನೋಡುವುದನ್ನು ತಪ್ಪಿಸಿ ಅಥವಾ ನೋಡಬೇಡಿ. ಇನ್ನೂ ಮನೆಯಲ್ಲಿ ಪಲ್ಲಿ ನಮ್ಮ ಮೇಲೆ ಬಿದ್ದರೆ ನಮ್ಮ ತಲೆಯ ಮೇಲೆ ಮುಖ್ಯವಾಗಿ ಬಿದ್ದರೆ ಇದು ನಮ್ಮ ಕಷ್ಟಗಳನ್ನು ತೋರಿಸುತ್ತದೆ. ಮುಂದೆ ನಿಮಗೆ ಬಹಳಷ್ಟು ದೊಡ್ಡ ಕಷ್ಟಗಳು ಬರುತ್ತಿವೆ ಯಾವುದೋ ಗಂಡಾಂತರ ಕಾದಿದೆ ಅಂತ ಪಲ್ಲಿ ಈ ರೀತಿ ಮುನ್ಸೂಚನೆ ನೀಡುತ್ತದೆ.
ಇನ್ನೂ ಪಲ್ಲಿ ನಿಮ್ಮ ಬಲ ಭುಜದ ಮೇಲೆ ಬಿದ್ದರೆ ನಿಮಗೆ ಯಾವುದೋ ಒಂದು ರೀತಿಯಲ್ಲಿ ಹಣ ಬರುತ್ತದೆ. ಎಲ್ಲಿಂದಲೋ ನಿಮ್ಗೆ ಲಾಭ ಆಗುತ್ತದೆ ಅಂತ ಮುನ್ಸೂಚನೆ ಕೊಡುತ್ತದೆ. ಇನ್ನೂ ಪಲ್ಲಿ ನೀವು ಯಾವುದಾದರೂ ಹೊಸ ಮನೆಯನ್ನು ಖರೀದಿ ಮಾಡುತ್ತಿದ್ದರೆ ಆ ಸಮಯದಲ್ಲಿ ಪಲ್ಲಿ ಸ ತ್ತು ಬಿದ್ದಿರುವುದನ್ನು ನೀವು ನೋಡಿದರೆ ಇದು ಬಹಳಷ್ಟು ಕೆಟ್ಟದ್ದು.
ಯಾವುದೇ ಕಾರಣಕ್ಕೂ ನೀವು ಅಂಥಹ ಮನೆಗೆ ಹೋಗಬೇಡಿ. ಈ ರೀತಿ ಪಲ್ಲಿ ಸತ್ತ ಬಿದ್ದ ಮನೆಗೆ ಹೋದರೆ ನಿಮಗೆ ಆರೋಗ್ಯದಲ್ಲಿ ಏರುಪೇರು ಆಗುತ್ತದೆ. ಹಲವಾರು ರೀತಿಯ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಹಣದಲ್ಲಿ ಬಹಳಷ್ಟು ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಆದ ಕಾರಣ ಪಲ್ಲಿ ಸತ್ತ ಬಿದ್ದ ಮನೆಗೆ ಹೋಗಬೇಡಿ. ಒಂದು ವೇಳೆ ಹೋಗಲು ಅನಿವಾರ್ಯ ಇದ್ದರೆ ಹೋಮ ಹವನಗಳನ್ನು ಮಾಡಿ ಹೋಗಿರಿ. ಇನ್ನೂ ಯಾವುದೇ ಕಾರಣಕ್ಕೂ ಪಲ್ಲಿಯನ್ನೂ ಸಾಯಿಸಬಾರದು. ಇದು ನೀವು ನಿಮ್ಮ ಕೈಯಿಂದ ಪಲ್ಲಿಯನ್ನು ಕೊಂದರೆ ಇದು ಪಾಪ ಆಗುತ್ತದೆ. ಪ್ರಾಣಿ ಹಿಂಸೆ ಮಾಡುವುದು ತಪ್ಪು. ಅದರಲ್ಲೂ ಪಲ್ಲಿ ಎಲ್ಲಾದರೂ ಇರುತ್ತದೆ ಅದನ್ನು ಹುಡುಕಿ ಕೊಲ್ಲುವುದು ಬಹಳಷ್ಟು ಪಾಪ.
ಅದು ತೊಂದರೆ ಕೊಡುವಾಗ ಅಚಾನಕ್ ಆಗಿ ಕೆಳಗೆ ಬಿದ್ದು ಸತ್ತರೆ ಯಾವುದೇ ತೊಂದರೆಗಳು ಆಗುವುದಿಲ್ಲ. ಆದರೆ ನೀವು ಹುಡುಕಿ ಯಾವುದೇ ಕಾರಣಕ್ಕೂ ಪಲ್ಲಿ ಹೊಡೆಯಬಾರದು. ಇನ್ನೂ ಮುಖ್ಯವಾಗಿ ಅಡುಗೆ ಮನೆಯಲ್ಲಿ ಪಲ್ಲಿ ಇರದೇ ರೀತಿಯಲ್ಲಿ ನೋಡಿಕೊಳ್ಳಬೇಕು. ಪಲ್ಲಿ ಆಹಾರ ಪದಾರ್ಥಗಳಲ್ಲಿ ಬಿದ್ದರೆ ಬಹಳಷ್ಟು ತೊಂದರೆ ಆಗುತ್ತದೆ. ಆರೋಗ್ಯಕ್ಕೆ ಇದು ಬಹಳಷ್ಟು ಕೆಟ್ಟದ್ದು. ಕಾರಣ ಆದಷ್ಟು ಮನೆಯಲ್ಲಿ ಪಲ್ಲಿ ಇರದೇ ರೀತಿಯಲ್ಲಿ ನೋಡಿಕೊಳ್ಳಿ.