ಯಾವಾಗಲು ಯಂಗ್ ಆಗಿ ಇರಲು 5 ಸೂಪರ್ ಫುಡ್ ತಿನ್ನಿ!

ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಕೆಲವರು ವಯಸ್ಸಾಗುವಿಕೆ ಲಕ್ಷಣ ಹೊಂದುತ್ತಿದ್ದಾರೆ. ಇದು ಅವರನ್ನು ಸಾಕಷ್ಟು ಚಿಂತೆಗೀಡು ಮಾಡಿದೆ. ಆದರೆ ಇದರ ಹಿಂದೆ ನಮ್ಮ ಜೀವನಶೈಲಿ, ಆಹಾರ ಮತ್ತು ದೈಹಿಕ ಚಟುವಟಿಕೆಗಳು ಕಾರಣವಾಗಿವೆ. ಹಾಗಿದ್ರೆ ಇಲ್ಲಿ ನಾವು ದೀರ್ಘಕಾಲ ಯಂಗ್ ಆಗಿರಲು ಏನು ಮಾಡಬೇಕು ತಿಳಿಯೋಣ.

ವಯಸ್ಸು ಕೇವಲ ಒಂದು ಸಂಖ್ಯೆ ಅಂತಾರೆ. ಆದರೆ ಚರ್ಮದ ಮೇಲಿನ ನಸುಕಂದು ಮಚ್ಚೆಗಳು, ಸುಕ್ಕುಗಳು, ದುರ್ಬಲ ಮೂಳೆಗಳು ಮತ್ತು ಮುಖದ ಮೇಲೆ ಹೆಚ್ಚುತ್ತಿರುವ ತೂಕವು ವಯಸ್ಸಿಗೆ ಮುಂಚಿತವಾಗಿ ವೃದ್ಧಾಪ್ಯದತ್ತ ಕೊಂಡೊಯ್ಯುತ್ತದೆ. ಇದು ದೇಹದ ಜೊತೆಗೆ ಗಮನ ಕೇಂದ್ರಿಕರಣ ಮತ್ತು ಸ್ಮರಣೆಯ ನಷ್ಟಕ್ಕೂ ಕಾರಣವಾಗುತ್ತದೆ.

ಮೆದುಳು ಸಹ ವಯಸ್ಸಾಗುತ್ತಿದೆ ಎಂದು ಹೇಳುತ್ತದೆ. ಜೀವನಶೈಲಿಯ ಉತ್ತಮ ಬದಲಾವಣೆಯೇ ಇದಕ್ಕೆ ಉತ್ತಮ ಮದ್ದು ಅಂತಾರೆ ತಜ್ಞರು. ಯಾವಾಗಲೂ ಚೆನ್ನಾಗಿ ಮತ್ತು ಯಂಗ್ ಆಗಿರಲು ಇಲ್ಲಿ ಕೆಲವು ಟಿಪ್ಸ್ ಹೇಳಲಾಗಿದೆ.

ಸದಾ ಯಂಗ್ ಆಗಿರಲು ಕೆಲವರು ಹೆಚ್ಚಾಗಿ ಹೊಸ ಔಷಧ ಸೇವಿಸುತ್ತಾರೆ. ವಯಸ್ಸಾದಂತೆ ಇನ್ನೊಬ್ಬರ ಮೇಲೆ ಅವಲಂಬಿಸಬೇಕಾಗುತ್ತದೆ. ತ್ವಚೆಯು ಮಂದವಾಗುತ್ತದೆ. ಮುಖದಲ್ಲಿ ಹೊಳಪು ಕಡಿಮೆ ಆಗುತ್ತದೆ. ಸುಕ್ಕುಗಳು ಉಂಟಾಗುತ್ತವೆ. ಇದನ್ನು ಕಡಿಮೆ ಮಾಡಿ ನೀವು ದೀರ್ಘಕಾಲ ಯಂಗ್ ಆಗಿರಲು ಕೆಲವು ಸಲಹೆ ಫಾಲೋ ಮಾಡಿ.

ಆಹಾರದಲ್ಲಿ ಉತ್ತಮ ಬದಲಾವಣೆ ಮಾಡಿ. ಸಕ್ಕರೆ ಪದಾರ್ಥ, ಜಂಕ್ ಫುಡ್, ತಂಪು ಪಾನೀಯ ಸೇವನೆ ಬಿಟ್ಟಾಕಿ. ಬದಲಿಗೆ ಆರೋಗ್ಯಕರ ಹಸಿರು ತರಕಾರಿಗಳು, ಮೊಳಕೆಯೊಡೆದ ಧಾನ್ಯಗಳು, ಹಸಿರು ಚಹಾ, ಟೊಮೆಟೊ, ಒಮೆಗಾ-3 ಕೊಬ್ಬಿನಾಮ್ಲ ಹೊಂದಿರುವ ಆಹಾರ ಪದಾರ್ಥ ಸೇವಿಸಿ.

ಹೀಗೆ ಉತ್ತಮ ಆಹಾರವು ನಿಮ್ಮ ಚರ್ಮ ಮತ್ತು ಆರೋಗ್ಯ ಎರಡನ್ನೂ ಉತ್ತಮವಾಗಿಡುತ್ತದೆ. ಫಾಸ್ಟ್ ಫುಡ್ ಸೇವನೆಯು ಹೊಟ್ಟೆ, ಮೂತ್ರಪಿಂಡ ಮತ್ತು ಯಕೃತ್ತನ್ನು ಹಾನಿ ಮಾಡುತ್ತದೆ. ಹೃದಯರಕ್ತನಾಳದ ಕಾಯಿಲೆ ಮತ್ತು ಜ್ಞಾಪಕ ಶಕ್ತಿ ನಷ್ಟ ಉಂಟು ಮಾಡುತ್ತದೆ. ಆರೋಗ್ಯಕರ ಆಹಾರ ಸೇವಿಸಿ.

ದೇಹವನ್ನು ಫಿಟ್ ಆಗಿ ಮತ್ತು ಯಂಗ್ ಆಗಿರಲು ಕಡಿಮೆ ಕೊಬ್ಬು ಮತ್ತು ಉತ್ತಮ ಕೊಬ್ಬು ಹೊಂದಿರುವ ಆಹಾರ ಸೇವಿಸಿ. ಆಲಿವ್ ಎಣ್ಣೆ, ಬೀಜ ಬಳಸಿ. ಪ್ರೋಟೀನ್ ಮತ್ತು ಫೈಬರ್ ಕೊರತೆ ಪೂರೈಸಿ. ತೂಕ ಕಡಿಮೆ ಮಾಡಿ. ದಿನವೂ ವ್ಯಾಯಾಮ ಮಾಡಿ. ಮುಖದ ಹೊಳಪಿಗಾಗಿ ಬಾದಾಮಿ ಹಾಗೂ ಹಣ್ಣುಗಳ ಸೇವನೆ ಮಾಡಿ.

ವಯಸ್ಸಾಗುತ್ತಾ ಹೋದಂತೆ ದೇಹದ ಮಾಂಸಖಂಡಗಳ ಜೊತೆಗೆ ಅಂಗಾಂಗಗಳೂ ಸಡಿಲವಾಗುತ್ತವೆ. ಕೊಲಾಜನ್ ಕಡಿಮೆಯಾಗುತ್ತದೆ. ಇದರಿಂದ ಮುಖದ ಹೊಳಪು ಕಣ್ಮರೆಯಾಗುತ್ತದೆ. ಅದನ್ನು ಕಾಪಾಡಿಕೊಳ್ಳಲು ಬ್ರೊಕೊಲಿ, ಸ್ಟ್ರಾಬೆರಿ, ಬ್ಲಾಕ್ ಬೆರ್ರಿ ಇತ್ಯಾದಿ ಸೇವಿಸಿ.

ಪ್ಯಾಕೇಜ್ ಮಾಡಿದ ಆಹಾರ ಸೇವನೆ ತಪ್ಪಿಸಿ. ಉತ್ತಮ ಪೋಷಕಾಂಶ ಭರಿತ ಆಹಾರವನ್ನು ನೀವೇ ತಯಾರಿಸಿ ತಿನ್ನಿರಿ. ಮನೆಯಲ್ಲಿ ತಯಾರಿಸಿದ ಆಹಾರವನ್ನೇ ಸೇವಿಸಿ. ಆಹಾರವು ದೇಹದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ರೋಗ ನಿರೋಧಕ ಶಕ್ತಿ ಬಲಪಡಿಸುವ ಪದಾರ್ಥ ಸೇವಿಸಿ.

Leave a Comment