ಈ ಬಾರಿ ಬಂದಿರುವ ಹುಣ್ಣಿಮೆಯಲ್ಲಿ ಚಂದ್ರಗ್ರಹಣ ಸಂಭವಿಸಲಿದೆ. ವರ್ಷದಲ್ಲಿ ನಾಲ್ಕು ಬಾರಿ ಚಂದ್ರಗ್ರಹಣ ಸೂರ್ಯ ಗ್ರಹಣ ಸಂಭವಿಸುತ್ತವೆ. ಈ ಬಾರಿ ಈ ವರ್ಷದ ಕೊನೆಯ ಚಂದ್ರಗ್ರಹಣ ಇದಾಗಿರುತ್ತದೆ. ಚಂದ್ರಗ್ರಹಣ ನಮ್ಮ ಭಾರತದ ಮೇಲೆ ಗೋಚರ ಆಗುವುದರಿಂದ ಎಲ್ಲಾ ರಾಶಿ ಚಕ್ರದ ಮೇಲು ಗೋಚರಿಸುತ್ತದೆ. ಇನ್ನು 30 ವರ್ಷಗಳ ನಂತರ ಈ ಹುಣ್ಣಿಮೆಯಲ್ಲಿ ಚಂದ್ರ ಗ್ರಹಣ ಸಂಭವಿಸುತ್ತದೆ. ಈ ಹುಣ್ಣಿಮೆಯಲ್ಲಿ ಗಜಕೇಸರಿಯೋಗವು ಕೂಡ ರೂಪುಗೊಳ್ಳಲಿದೆ.
ವಿಶೇಷವಾಗಿ ಅಶ್ವಿಜ ಮಾಸ ಶುಕ್ಲ ಪೂರ್ಣಿಮೆ ಪ್ರಾರಂಭ 28ನೇ ತಾರೀಕು ಅಕ್ಟೋಬರ್ ಶನಿವಾರ ಬೆಳಗ್ಗೆ 4:18 ನಿಮಿಷಕ್ಕೆ ಪ್ರಾರಂಭವಾಗಿ 28ನೇ ತಾರೀಕು ಶನಿವಾರ ಮಧ್ಯರಾತ್ರಿ 1:54 ನಿಮಿಷಕ್ಕೆ ಮುಕ್ತಾಯ ಆಗುತ್ತದೆ.ಹಾಗಾಗಿ ಹುಣ್ಣಿಮೆ ಅನ್ನು ಶನಿವಾರ ಆಚರಣೆ ಮಾಡಲಾಗುತ್ತದೆ.
ಇನ್ನು ಚಂದ್ರಗ್ರಹಣ ರಾಹುಗ್ರಾಸ್ತ ಚಂದ್ರ ಗ್ರಹಣವಾಗಿರುತ್ತದೆ. ಇದರ ಅವಧಿ 1:20 ನಿಮಿಷದವರೆಗೆ ಇರುತ್ತದೆ. ಅಂದರೆ 28ನೇ ತಾರೀಕು ಶನಿವಾರ ರಾತ್ರಿ ಗ್ರಹಣ ಸ್ಪರ್ಶಕಾಲ ರಾತ್ರಿ 1:04 ನಿಮಿಷಕ್ಕೆ ಇರುತ್ತದೆ. ಗ್ರಹಣದ ಮೋಕ್ಷ ಕಾಲ 2:24 ನಿಮಿಷ. ಇನ್ನು ಶನಿವಾರ ಮಧ್ಯಾಹ್ನ 3:00 ಗಂಟೆ ಒಳಗೆ ಊಟ ಮಾಡಬೇಕು. ಇನ್ನು ಅರೋಗ್ಯವಂತರು ರಾತ್ರಿ ಊಟ ಮಾಡುವುದು ಬೇಡ. ಅದರೆ ರೋಗಿಗಳು ಬಾಣಂತಿಯರು ಸಣ್ಣ ಮಕ್ಕಳು ರಾತ್ರಿ 8:00 ಗಂಟೆ ಒಳಗೆ ಊಟ ಮಾಡುವುದು ಒಳ್ಳೆಯದು.ಆದಷ್ಟು ಸಾತ್ವಿಕ ಆಹಾರ ಸೇವನೆ ಮಾಡಿದರೆ ಒಳ್ಳೆಯದು. ಆದಷ್ಟು ಗ್ರಹಣದ ಸಮಯದಲ್ಲಿ ಹೊರಗೆ ಹೋಗದೆ ಇದ್ದರೆ ಒಳ್ಳೆಯದು.