ಆಲೂಗಡ್ಡೆ ಸಕ್ಕರೆ ಕಾಯಿಲೆಗೆ ಎಂಥ ಮನೆಮದ್ದು ಗೊತ್ತೇ!

ಆಲೂಗಡ್ಡೆಯನ್ನ ತರಕಾರಿಗಳ ರಾಜ ಎಂದು ಕರೆಯಲಾಗುತ್ತೆ.. ಕೆಲವರು ಮನೆಯಲ್ಲಿ ಆಲೂಗಡ್ಡೆಯಿಂದ ಮಾಡಿದ ಆಹಾರ ಪದಾರ್ಥಗಳನ್ನ ಮಾಡೋದಕ್ಕು ಬಿಡೋದಿಲ್ಲ..ಆಲೂಗಡ್ಡೆ ತಿಂದ್ರೆ ವಾಯದ ಸಮಸ್ಯೆ ಉಂಟಾಗುತ್ತೆ,ಇದರಲ್ಲಿ ಕಾರ್ಬ್ ಹೆಚ್ಚಾಗಿರೋದ್ರಿಂದ ತೂಕ ಹೆಚ್ಚಳವಾಗುತ್ತೆ ಎನ್ನುವ ಅಂತೆ ಕಂತೆಗಳನ್ನ ಹೇಳ್ತಾರೆ.. ಆದ್ರೆ ವಿಶ್ವದ ಯಾವುದೇ ಭಾಗಕ್ಕೆ ಹೋದರೂ ನಿಮಗೆ ಸಿಗುವ ಸಾಮಾನ್ಯ ತರಕಾರಿ ಆಲೂಗಡ್ಡೆ. ನಮ್ಮ ದೇಶದಲ್ಲಿಯಂತು ಬೆಳಗ್ಗೆ ಉಪಾಹಾರಕ್ಕೆ ಆಲೂಗಡ್ಡೆ ಅಥವಾ ಬಟಾಟೆ ವಡೆಯಿಂದ ಹಿಡಿದು ರಾತ್ರಿ ಊಟಕ್ಕೆ ಆಲೂಗಡ್ಡೆ ಪರೋಟ ಅಥವಾ ಆಲೂಗಡ್ಡೆ ಪಲಾಕ್ ತನಕ ಆಲೂಗಡ್ಡೆ ಬೇಕೆ ಬೇಕು.. ಹೀಗಿರುವಾಗ ಆಲೂಗಡ್ಡೆ ಬಗ್ಗೆ ಇರೋ ಅಂತೆ-ಕಂಥೆಗಳನ್ನೆಲ್ಲ ಬದಿಗಿಟ್ಟು ಆಲೂಗಡ್ಡೆ ಸೇವನೆ ಮಾಡೋದ್ರಿಂದ್ದ ನಮ್ಮ ದೇಹಕ್ಕೆ ಎಷ್ಟೆಲ್ಲ ಪ್ರಯೋಜನಗಳಿವೆ ಅನ್ನೋ ಮಾಹಿತಿ ಇಲ್ಲಿದೆ.

ಆಲೂಗಡ್ಡೆ ಉತ್ತಮ ಪೌಷ್ಠಿಕಾಂಶದ ಆಹಾರ. ಇದರಲ್ಲಿರುವ ಕಾರ್ಬೋಹೈಡ್ರೇಟ್‌ ದೇಹದಲ್ಲಿ ಸಕ್ಕರೆಯಂಶ ಇದ್ದಕ್ಕಿದ್ದಂತೆ ಹೆಚ್ಚಾಗುವುದನ್ನು ತಡೆಯಲು ಸಹಕರಿಸುತ್ತದೆ. ಒಂದು ಸಾಧಾರಣ ಗಾತ್ರದ ಆಲೂಗಡ್ಡೆಯಲ್ಲಿ 163 ಕ್ಯಾಲೋರಿ ಇರುತ್ತದೆ. ಹೀಗಾಗಿ ಆಲೂಗಡ್ಡೆಯನ್ನು ತಿನ್ನದಿದ್ದರೆ ಲಾಭಕ್ಕಿಂತ ನಷ್ಟವೇ ಹೆಚ್ಚು.

೧)ಮಧುಮೇಹ ನಿಯಂತ್ರಣ ಮಾಡಲು :ಮಧುಮೇಹ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚುವುದರಿಂದ ಉಂಟಾಗುವುದು.ಹೀಗಾಗಿ ಮಧುಮೇಹಿಗಳು ಆಲೂಗಡ್ಡೆ ಸೇವನೆ ಮಾಡುತ್ತಾ ಬಂದ್ರೆ, ಆಲೂಗಡ್ಡೆಯು ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುವುದನ್ನ ತಪ್ಪಿಸುತ್ತದೆ.
2)ತೂಕ ಇಳಿಕೆಗೆ ಸಹಕಾರಿ : ಆಲೂಗಡ್ಡೆ ಸೇವೆನೆ ಮಾಡುವುದರಿಂದ ತೂಕ ಹೆಚ್ಚಳಾವುತ್ತೆ ಎನ್ನುವ ತಪ್ಪು ಕಲ್ಪನೆ ಇದೆ.. ಆದ್ರೆ ಆಲೂಗಡ್ಡೆಯಲ್ಲಿ ಕ್ಯಾಲೋರಿಕ್ ಅಂಶ ಕಡಿಮೆ ಇದ್ದು, ಇದು ಧೀರ್ಘಕಾಲದವರೆಗೆ ಹಸಿವಿನ ಭಾವನೆ ಮೂಡದಂತೆ ತಡೆಯುತ್ತದೆ. ಅಲ್ಲದೆ ದೇಹದಲ್ಲಿ ಕೊಲೆಸ್ಟ್ರಾಲ್ ನಿಯಂತ್ರ ಮಾಡುತ್ತದೆ

3)ಹಳೆಯ ಗಾಯಗಳಿಗೆ ಔಷಧಿ : ಬಹಳ ಹಿಂದೆಯೇ ಆಗಿರುವ ಉಳುಕು, ಮೂಗೇಟು,ಸುಟ್ಟಗಾಯಗಳಿಗೆ ಉತ್ತಮ ಪರಿಹಾರ ಅಂದ್ರೆ ಅದು ಆಲೂಗಡ್ಡೆ ಹೀಗಾಗಿ ಹಳೆಯ ಗಾಯಗಳಿಗೆ ಔಷಧೀಯಾಗಿ ಆಲೂಗಡ್ಡೆ ಬಳಸಲಾಗುತ್ತೆ. ಬಹುಮುಖ್ಯವಾಗಿಗರ್ಭಾಶಯ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ವಿರುದ್ಧ ಹೋರಾಡಲು ಆಲೂಗಡ್ಡೆ ಸಹಕಾರಿ

4)ಒತ್ತಡ ನಿವಾರಣೆ : ಆಲೂಗಡ್ಡೆಯಲ್ಲಿ B6 ವಿಟಮಿನ್ ಹೇರಳವಾಗಿದೆ.. ಆಲೂಗಡ್ಡೆ ಸೇವನೆ ಮಾಡುವುದರಿಂದ ದೇಹ ಹಾಗೂ ಮನಸ್ಸಿನ ಒತ್ತಡ ಕಡಿಮೆಯಾಗಲಿದೆ. ಅಲ್ಲದೆ ಆಲೂಗಡ್ಡೆಯು ಒತ್ತಡದ ವಿರುದ್ಧ ಹೋರಾಡಲು ಸಹಾಯ ಮಾಡುವ ಅಡ್ರಿನಾಲಿನ್ ಹಾರ್ಮೋನುಗಳನ್ನ ಉತ್ಪಾದನೆ ಮಾಡಿ ಮೆದುಳು ವಿಶ್ರಾಂತಿಗೆ ಜಾರುವಂತೆ ಮಾಡಲು ಆಲೂಗಡ್ಡೆ ಸಹಕಾರಿ

5)ಉರಿಯೂತ ಕಡಿಮೆ ಮಾಡುವುದು :ಆಲೂಗಡ್ಡೆಯು ಹೊಟ್ಟೆಗೆ ಶಮನ ನೀಡುವುದು, ಹುಣ್ಣಿನ ಪ್ರಭಾವ ಕಡಿಮೆ ಮಾಡುವುದು ಮತ್ತು ಹೊಟ್ಟೆಯ ಅಸಿಡಿಟಿ ಕಡಿಮೆ ಮಾಡುವುದು ಎಂದು ಹೀಲಿಂಗ್ ಫುಡ್ಸ್ ಎನ್ನುವ ಪುಸ್ತಕವು ಹೇಳಿದೆ. ಸಂಧಿವಾತದಿಂದ ಕಾಣಿಸಿಕೊಳ್ಳುವ ಉರಿಯೂತವನ್ನು ಕೂಡ ಇದು ಕಡಿಮೆ ಮಾಡುವುದು.

6)ಮೆದುಳಿನ ಆರೋಗ್ಯ ಸುಧಾರಣೆ : ಆಲೂಗಡ್ಡೆಯಲ್ಲಿ ಇರುವಂತಹ ಅಲ್ಪಾ ಲಿಪೊಲಿಕ್ ಎನ್ನುವಂತಹ ಸಹ ಕಿಣ್ವವು ಅರಿವಿನ ಸಂಪೂರ್ಣ ಆರೋಗ್ಯ ಸುಧಾರಣೆ ಮಾಡುವುದು.ಅಲ್ಝೈಮರ್ ಕಾಯಿಲೆ ಹೊಂದಿರುವವರಿಗೆ ಇದು ಸಹಕಾರಿ ಎಂದು ಹೇಳಲಾಗುತ್ತದೆ. ಇದರಲ್ಲಿ ಹಲವಾರು ವಿಟಮಿನ್ ಗಳು ಮತ್ತು ಖನಿಜಾಂಶಗಳಿದ್ದು, ಇದು ಮೆದುಳಿನ ಕ್ರಿಯೆ ಸುಧಾರಣೆ ಮಾಡುವುದು. ವಿಟಮಿನ್ ಬಿ6 ನರವ್ಯವಸ್ಥೆಯ ಆರೋಗ್ಯ ಕಾಪಾಡುವುದು

7)ಕಿಡ್ನಿ ಸ್ಟೋನ್ ನಿವಾರಣೆ : ಆಲೂಗಡ್ಡೆಯನ್ನು ಸೇವನೆ ಮಾಡುವುದರಿಂದ ಮೂತ್ರ ಪಿಂಡದ ಕಲ್ಲುಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.ಆಲೂಗಡ್ಡೆಯ ಸಿಪ್ಪೆಯಲ್ಲಿ ತಾಮ್ರ, ಮ್ಯಾಂಗನೀಸ್, ಪೊಟ್ಯಾಸಿಯಮ್ ಮತ್ತು ಬಿ-ವಿಟಮಿನ್‌ಗಳಿದ್ದು ಇವುಗಳು ಆರೋಗ್ಯಕ್ಕೆ ಸಹಕಾರಿಯಾಗಿವೆ

8)ಜೀರ್ಣಕ್ರಿಯೆಗೆ ಸಹಕಾರಿ :ಆಲೂಗಡ್ಡೆಯಲ್ಲಿ ಇರುವಂತಹ ನಾರಿನಾಂಶವು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಸರಾಗವಾಗಿಸುವುದು. ನಾರಿನಾಂಶವು ಜೀರ್ಣಕ್ರಿಯೆಗೆ ನೆರವಾಗುವುದು ಮತ್ತು ಕರುಳಿನ ಕ್ರಿಯೆಗಳು ಸರಾಗವಾಗಿ ಆಗಲು ಮತ್ತು ಮಲಬದ್ಧತೆ ಕಡಿಮೆ ಮಾಡುವುದು. ಬಟಾಟೆಯು ಅತಿಸಾರದಿಂದ ಚೇತರಿಸಿಕೊಳ್ಳಲು ಸಹಕಾರಿ.

9)ಚರ್ಮದ ರಕ್ಷಣೆ : ವಯಸ್ಸಾಗುತ್ತಾ ಬಂದಂತೆ ಚರ್ಮದಲ್ಲಿ ನೆರಿಗೆ ಹಾಗೂ ಗೆರೆಗಳು ಮೂಡುವುದು ಸಾಮಾನ್ಯ ವಿಚಾರ.ಹೀಗಾಗಿ ಆಲೂಗಡ್ಡೆ ರಸವನ್ನ ಮುಖಕ್ಕೆ ಲೇಪಿಸುತ್ತ ಬಂದ್ರೆ ಮುಖದಲ್ಲಿನ ನೆರಿಗೆಗಳು ಕಡಿಮೆಯಾಗುವವು. ಇನ್ನೂ ಒಣ ಚರ್ಮದ ಸಮಸ್ಯೆಗೂ ಆಲೂಗಡ್ಡೆ ಪರಿಹಾರ.

Leave a Comment