ಜೀವನದಲ್ಲಿ ನಾವು ಏನಾದರೂ ಮುಖ್ಯವಾದ ಕೆಲಸವನ್ನು ಮಾಡಲು ಮನೆಯಿಂದ ಹೊರಟಾಗ, ಹೋದ ಕೆಲಸ ಆದರೆ ಸಾಕಪ್ಪಾ ಅಂದುಕೊಂಡು ಹೊರಡುತ್ತೇವೆ. ಆದ್ರೆ ಆ ದಿನ ಅಂದುಕೊಂಡ ಕೆಲಸ ಆಗಲಿಲ್ಲವೆಂದರೆ ಅದು ದೈನಂದಿನ ಬದುಕಿನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಕಿರಿಕಿರಿ ಉಂಟಾಗುತ್ತದೆ, ಇವತ್ತಿನ ದಿನ ಹಾಳಾಯ್ತಲ್ಲ ಅಂತ ಬೇಸರದಲ್ಲೇ ಇರ್ತೀವಿ, ಇದರಿಂದ ನಷ್ಟ ಹೆಚ್ಚಾಗುತ್ತದೆ. ಜೊತೆಗೆ ನಮ್ಮ ಸಮಯ ಕೂಡ ಪೋಲಾಗುತ್ತದೆ.
ಹೌದು ಪ್ರತಿ ದಿನ ನಾವಂದುಕೊಂಡ ಕೆಲಸಗಳೆಲ್ಲವೂ ಯಶಸ್ವಿಯಾಗಿ ಆಗಬೇಕೆಂದರೆ ಅದಕ್ಕೆ ಕಠಿಣ ಪರಿಶ್ರಮವಷ್ಟೇ ಅಲ್ಲ, ಅದೃಷ್ಟವೂ ಜೊತೆ ಇರಬೇಕು. ಹಾಗೆ ಅದೃಷ್ಟ ಜೊತೆಗಿರಲು ಮನೆಯಿಂದ ಹೊರಡುವ ಮುನ್ನ ಕೆಲ ಕೆಲಸಗಳನ್ನು ಮಾಡಬೇಕು. ಕೆಲವು ಪದಾರ್ಥಗಳನ್ನ ತಿಂದು ಹೊರಡಬೇಕು. ಇನ್ನು ನಮ್ಮ ಉದ್ದೇಶ ಚೆನ್ನಾಗಿದ್ದಾಗ, ಒಳ್ಳೆಯ ಕೆಲಸಕ್ಕೆ ಹೊರಟಾಗ ಮಾತ್ರ ಈ ಪರಿಹಾರಗಳು ಅದೃಷ್ಟ ತರುತ್ತವೆ. ನಮ್ಮ ಪರಿಶ್ರಮ ಹಾಗೂ ಕೆಲ್ಸದ ಜೊತೆಗೆ ಅದೃಷ್ಠ ಕೂಡ ಕೆಲಸ ಮಾಡುತ್ತೆ. ಹಾಗಾದ್ರೆ ಅಂತಹ ಅದೃಷ್ಟ ತರುವ ಕೆಲಸಗಳು ಯಾವವು, ಯಾವ ವಸ್ತುಗಳನ್ನ ತಿಂದು ಹೊರಟ್ರೆ ಹೋದ ಕೆಲಸ ಯಶಸ್ವಿಯಾಗುತ್ತೆ ನೋಡೋಣ.
ನಮ್ಮ ಜೀವನದಲ್ಲಿ ಯಾವುದೇ ಕೆಲಸ ಕಾರ್ಯಗಳನ್ನ ಆರಂಭಿಸುವ ಮುನ್ನ ದೇವರನ್ನ ನೆನೆದು ದೇವರಿಗೆ ಪೂಜೆ ಸಲ್ಲಿಸಿ ಅನಂತರ ಕೆಲಸ ಕಾರ್ಯಗಳನ್ನ ಆರಂಭ ಮಾಡ್ತೇವೆ. ಅದ್ರಲ್ಲೂ ವಿಘ್ನ ವಿನಾಶಕ ವಿಗ್ನೇಶ್ವರ ಗಣಪತಿಗೆ ಮೊದಲ ಆದ್ಯತೆ. ಅದರಲ್ಲೂ ವಿಶೇಷ ದಿನ ವಿಶೇಷ ಕೆಲ್ಸಗಳಿದ್ರಂತು ಗಣಪತಿಗೆ ಮೊದಲ ಪೂಜೆ ಸಲ್ಲುತ್ತೆ. ಜೊತೆಗೆ ನಾವು ಮನೆಯಿಂದ ಹೊರಗಡೆ ಹೋಗುವ ಮುನ್ನ ಹೋಗುವ ಕೆಲಸದಲ್ಲಿ ಯಾವುದೇ ವಿಘ್ನಗಳಿಲ್ಲದೆ ಅಂದುಕೊಂಡ ಕೆಲಸ ಕಾರ್ಯಗಳು ನಿರ್ವಿಘ್ನ ವಾಗಿ ನಡೆಯಲ್ಲಿ ಅಂತ ದೇವರಿಗೆ ಕೈ ಮುಗಿದುಬ್ಬಹಾಕ್ತಿ ಸಮರ್ಪಸಿ ಹೋಗುತ್ತೇವೆ. ಅದೇ ರೀತಿ ಮನೆಯಿಂದ ಕೆಲಸದ ಮೇಲೆ ಹೊರಹೋಗುವಾಗ ಇವುಗಳನ್ನ ತಿಂದು ಹೋದರೆ ಅದೃಷ್ಟವಂತೆ. ಅಂದುಕೊಂಡಿದ್ದೆಲ್ಲ ಈಡೇರುತ್ತಂತೆ.
ಹೋಗೋ ಕೆಲಸದಲ್ಲಿ ಜಯ ಸಿಗಬೇಕು ಅಂದ್ರೆ ಹೀಗೆ ಮಾಡಿ
ಮನೆಯಿಂದ ಹೊರಗಡೆ ಹೋಗುವಾಗ ವಾರದ 7ದಿನಗಳು ಈ ವಸ್ತುಗಳನ್ನ ತಿಂದು ಮನೆಯಿಂದ ಹೊರಹೋದ್ರೆ ನೀವು ಯಾವ ಕೆಲ್ಸಕ್ಕಾಗಿ ಹೊರಟಿರುತ್ತಿರೋ ಆ ಕೆಲಸದಲ್ಲಿ ಜಯ, ಯಶಸ್ಸು ಅದೃಷ್ಟ ಸಿಗುತ್ತೆ ಅಂತ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇನ್ನು ವಾರದ 7ದಿನಗಳಲ್ಲಿ ತಿನ್ನಬೇಕಾಗದ ವಸ್ತುಗಳು ಯಾವವು ಅಂತ ನೋಡೋಣ. ಮೊದಲಿಗೆ ಭಾನುವಾರದ ದಿನ ಕೆಲ ಪ್ರಮುಖ ಕೆಲಸಗಳಿಗೆ ಅಂತ ನೀವು ಮನೆಯಿಂದ ಹೊರಟಿದ್ರೆ ನೀವು ಶಾಸ್ತ್ರದ ಪ್ರಕಾರ ವೀಳ್ಯದೆಲೆಯನ್ನ ತಿಂದು ಹೊರಗಡೆ ಹೋಗಬೇಕು. ಹೀಗೆ ಮಾಡಿದ್ರಿಂದ ನೀವು ಹೋಗೋ ಕೆಲ್ಸದಲ್ಲಿ ಯಶಸ್ಸು ಸಿಗುತ್ತೆ. ಜೊತೆಗೆ ಆ ಕೆಲಸವೂ ಯಾವುದೇ ಅಡೆ ತಡೆಗಳು ಇಲ್ಲದೆ ಪೂರ್ಣವಾಗುತ್ತೆ.
ಸೋಮವಾರದಂದು ಯಾವುದಾದ್ರೂ ವಿಶೇಷ ಕೆಲ್ಸಗಳಿಗೆ ಅಂತ ನೀವು ಹೊರಟಿದ್ರೆ ಹೊರಡುವ ಮುಂಚೆ ಕನ್ನಡಿಯಲ್ಲಿ ನಿಮ್ಮ ಮುಖವನ್ನ ಒಮ್ಮೆ ನೋಡಿಕೊಳ್ಳಿ ಹೀಗೆ ಮಾಡೋದ್ರಿಂದ ನೀವು ಯಾವ ಕೆಲಸಕ್ಕಾಗಿ ಮನೆಯಿಂದ ಹೊರ ಹೋಗ್ತಿದ್ದೀರೋ ಆ ಕೆಲ್ಸದಲ್ಲಿ ಸುಲಭವಾಗಿ ಯಶಸ್ಸನ್ನ ಪಡೆಯುತ್ತಿರ. ಇನ್ನು ಮಂಗಳವಾರದ ದಿನ ಯಾವುದಾದರು ಒಂದು ವಿಶೇಷ ಕಾರ್ಯಸಿದ್ಧಿಗಾಗಿ ಹೊರಡುತ್ತಿದ್ರೆ ಒಂದು ಚಿಕ್ಕ ಬೆಲ್ಲದ ತುಂಡನ್ನ ಬಾಯಿಗೆ ಹಾಕಿಕೊಂಡು ಹೊರಡಿ ಹೋಗೋ ಕಾರ್ಯದಲ್ಲಿ ಯಶಸ್ಸು ಖಂಡಿತ ಸಿಗುತ್ತೆ. ಕೆಟ್ಟು ಹೋಗಿರೋ ಕೆಲ್ಸಗಳು ಪರಿಪೂರ್ಣವಾಗುತ್ತೆ. ಇನ್ನು ಬಹಳ ದಿನಗಳಿಂದ ನಿಮ್ಮ ಕೆಲ್ಸಗಳು ನಿಂತು ಹೋಗಿದ್ರೆ ಅದನ್ನ ಪೂರ್ಣಗೊಳಿಸಲು ಬುಧವಾರದ ದಿನ ನೀವು ಹೊರಗಡೆ ಹೋಗ್ತಾಯಿದ್ರೆ ಮನೆಯಲ್ಲಿತ್ತಿರುವ ಹಸಿರು ಕೊತ್ತೊಂಬರಿ ಸೊಪ್ಪನ್ನ ಸ್ವಲ್ಪ ತಿನ್ನಿ ಇದರಿಂದ ಉತ್ತಮ ಫಲಿತಾಂಶಗಳನ್ನ ಪಡೆಯುತ್ತಿರ.
ಗುರುವಾರ ಕೆಲವು ವಿಶೇಷ ಕೆಲ್ಸಗಳನ್ನ ಪೂರ್ಣಗೊಳಿಸಲು ಹೋಗ್ತಾಯಿದ್ರೆ ಶಾಸ್ತ್ರದ ಪ್ರಕಾರ ಸ್ವಲ್ಪ ಜೀರಿಗೆಯನ್ನ ತಿನ್ನಿ.ಇದರಿಂದಾಗಿ ನೀವು ಆ ವಿಶೇಷ ಕೆಲಸದಲ್ಲಿ ಯಶಸ್ಸನ್ನ ಪಡೆದುಕೊಳ್ಳುತ್ತಿರ. ಶುಕ್ರವಾರ ಕೆಲ್ಸದ ನಿಮ್ಮಿತ್ತ ಮನೆಯಿಂದ ಹೊರಗಡೆ ಹೋಗ್ತಾಯಿದ್ರೆ ಮೊಸರು ಮತ್ತು ಸಕ್ಕರೆಯನ್ನ ಸೇವಿಸಿ ಇದರಿಂದ ನಿಮಗೆ ಧನತ್ಮಕ ಫಲಿತಾಂಶಗಳು ದೊರೆಯುತ್ತೆ. ಶನಿವಾರ ಯಾವುದಾದ್ರೂ ಕೆಲ್ಸಕ್ಕಾಗಿ ಮನೆಯಿಂದ ಹೋಗ್ತಾಯಿದ್ರೆ ಒಂದು ತುಂಡು ಶುಂಠಿಯನ್ನ ತಿನ್ನಬೇಕು ಈ ಪರಿಹಾರದಿಂದ ಖಂಡಿತ ಯಶಸ್ಸು ಪಡೆಯುತ್ತಿರ.
ವಾರದ ಪ್ರತಿಯೊಂದು ದಿನವೂ ಬಹಳ ವಿಶೇಷವಾಗಿದ್ದು. ಪ್ರತಿದಿನವು ಈ ರೀತಿಯ ಕೆಲಸಗಳನ್ನ ಮಾಡುತ್ತಾ ಹೋದ್ರೆ ನೀವು ಮಾಡೋ ಪ್ರತಿಯೊಂದು ಕೆಲ್ಸದಲ್ಲಿಯೂ ಯಶಸ್ಸು ಸಿಗುತ್ತದೆ.. ಕಠಿಣ ಪರಿಶ್ರಮದ ಜೊತೆಗೆ ಈ ರೀತಿಯ ಕೆಲವೊಂದು ಕ್ರಮಗಳನ್ನ ಅನುಸರಿಸುವುದು ಜೀವನದಲ್ಲಿ ಅತ್ಯುತ್ತಮ ಫಲಿತಾಂಶವನ್ನ ನೀಡುತ್ತದೆ.