ಹಿಂದೂ ಸಂಪ್ರದಾಯದಲ್ಲಿ ಪ್ರಮುಖವಾದ ಹಬ್ಬಗಳಲ್ಲಿ ದೀಪಾವಳಿ ಕೂಡ ಒಂದು. ದೀಪಾವಳಿ ಪೂಜೆಯನ್ನು ಸಮೃದ್ಧಿ ಸಂಪತ್ತು ಮತ್ತು ಅದೃಷ್ಟದಾಂ ಹಿಂದೂ ದೇವರಿಗೆ ಸಮಾರ್ಪಿತವಾದ ಲಕ್ಷ್ಮಿ ಪೂಜೆ ಆಗಿರುತ್ತದೆ.ಈ ದೀಪಾವಳಿ ದಿನ ವಿಶೇಷವಾಗಿ ಲಕ್ಷ್ಮಿ ದೇವಿಪೂಜೆ ಯಾಕೆ ಮಾಡುತ್ತೇವೆ ಎಂದರೆ ಹಿಂದೂ ಪೌರಾಣಿಕದ ಪ್ರಕಾರ ಸಮುಂದ್ರ ಮಂತನದ ಸಮಯದಲ್ಲಿ ದೀಪಾವಳಿ ದಿನದಂದು ಲಕ್ಷ್ಮಿ ದೇವಿಯೂ ಅವತಾರಿಸಿದಳು ಎನ್ನುವ ಪುರಾಣಗಳಲ್ಲಿ ಹೇಳಲಾಗಿದೆ. ಹಾಗಾಗಿ ದೀಪಾವಳಿ ಹಬ್ಬದ ದಿನ ಲಕ್ಷ್ಮಿ ದೇವಿ ಪೂಜೆ ಮಾಡಲು ಇದು ಒಂದು ಕಾರಣವಾಗಿರುತ್ತದೆ.
ಇನ್ನು ದೀಪಾವಳಿ ದಿನ ವಿಷ್ಣು ತಣ್ಣ 5 ನೇ ಅವತರದಲ್ಲಿ ವಾಮನ ಅವತರದಲ್ಲಿ ಲಕ್ಷ್ಮಿ ದೇವಿಯನ್ನೂ ಬಲಿರಾಜನ ಸೆರೆಮನೆಯಿಂದ ರಕ್ಷಿಸಿದನು ಅಂತನು ಕೂಡ ಕಥೆ ಇದೆ. ಯಾರು ತುಂಬಾ ಚೆನ್ನಾಗಿ ಅಚ್ಚು ಕಟ್ಟಾಗಿ ಇಟ್ಟುಕೊಂಡು ಇರುತ್ತಾರೋ ಮತ್ತು ಯಾರ ಮನೆಯಲ್ಲಿ ಲಕ್ಷ್ಮಿ ಪೂಜೆ ಮಾಡುತ್ತಾರೋ ಅವರ ಮನೆಗೆ ಲಕ್ಷ್ಮಿ ಅನುಗ್ರಹ ಹೆಚ್ಚಾಗಿ ಸಿಗುತ್ತದೆ ಎನ್ನುವ ನಂಬಿಕೆ.ಹಾಗಾಗಿ ಪ್ರತಿಯೊಬ್ಬರೂ ಕೂಡ ದೀಪಾವಳಿ ಹಬ್ಬವನ್ನು ಆಚರಣೆ ಮಾಡುತ್ತಾರೆ.
ದೀಪಾವಳಿ ಹಬ್ಬವು ನಮಗೆ ಅಶ್ವಿಜ ಮಾಸ ಕೃಷ್ಣ ಪಕ್ಷ ತ್ರೇಯೋದೇಶಿ ತಿಥಿಯು ನವೆಂಬರ್ 10ನೇ ತಾರೀಕು ಶುಕ್ರವಾರ ಮಧ್ಯಾಹ್ನ 12:36 ನಿಮಿಷಕ್ಕೆ ಪ್ರಾರಂಭವಾದರೆ 11ನೇ ತಾರೀಕು ಶನಿವಾರ ಮಧ್ಯಾಹ್ನ 1:58 ನಿಮಿಷಕ್ಕೆ ಮುಕ್ತಯ ಆಗುತ್ತದೆ. ಈ ಒಂದು ಸಮಯದಲ್ಲಿ ಯಾವೆಲ್ಲಾ ಪೂಜೆ ಆಚರಣೆ ಮಾಡಬೇಕು ಎಂದರೆ ನವೆಂಬರ್ 10ನೇ ತಾರೀಕು ಬೆಳಗ್ಗೆನೇ ಪೂಜೆಯನ್ನು ಪ್ರಾರಂಭ ಮಾಡಬೇಕಾಗುತ್ತದೆ. ಇನ್ನು ಅರೋಗ್ಯ ಸಮಸ್ಸೆ ಇರುವವರು ದನ್ವತರಿ ಪೂಜೆಯನ್ನೂ ಮಾಡುತ್ತಾರೆ.
ಇನ್ನು ನವೆಂಬರ್ 10ನೇ ತಾರೀಕು ಯಾಮ ದೀಪರಾಧನೆಯನ್ನು ಸಂಜೆ ಸಮಯದಲ್ಲಿ ಮಾಡಬೇಕು ಹಾಗು ಕುಬೇರ ಪೂಜೆಯನ್ನು ಮಾಡಬಹುದು. ಇನ್ನು ನವೆಂಬರ್ 11 ನೇ ತಾರೀಕು ನೀರು ತುಂಬುವ ಹಬ್ಬ ಹಾಗು ಕುಬೇರ ಪೂಜೆಯನ್ನು ಸಹ ಮಾಡಬಹುದು.
ನಂತರ ಅಶ್ವಿಜ ಮಾಸ ಕೃಷ್ಣ ಪಕ್ಷ ಚತುರ್ದಶಿ ತಿಥಿ ಪ್ರಾರಂಭವಾಗುವುದು ಮತ್ತು ನವೆಂಬರ್ 11ನೇ ತಾರೀಕು ಶನಿವಾರ ಮಧ್ಯಾಹ್ನ 1:58 ನಿಮಿಷಕ್ಕೆ ಪ್ರಾರಂಭವಾದರೆ ಅದು 12ನೇ ತಾರೀಕು ಭಾನುವಾರ ಮಧ್ಯಾಹ್ನ 2:45 ನಿಮಿಷದವರೆಗೂ ಇರುತ್ತದೆ.
ಹಿಂದೂ ಪಂಚಾಂಗದ ಪ್ರಕಾರ ಕಾರ್ತಿಕ ಅಮಾವಾಸ್ಯೆ ತಿಥಿಯು ನವೆಂಬರ್ 12ರಂದು ಮಧ್ಯಾಹ್ನ 02:45 ಕ್ಕೆ ಪ್ರಾರಂಭವಾಗುತ್ತದೆ. ಮರುದಿನ ಅಂದರೆ ನವೆಂಬರ್ 13 ಮಧ್ಯಾಹ್ನ 02:57 ಕ್ಕೆ ಕೊನೆಗೊಳ್ಳುತ್ತದೆ. ದೀಪಾವಳಿಯ ದಿನದಂದು, ಪ್ರದೋಷಕಾಲದಲ್ಲಿ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಆದ್ದರಿಂದ ಮಹಾಲಕ್ಷ್ಮಿಯನ್ನು ಪೂಜಿಸುವ ಸಮಯ ನವೆಂಬರ್ 12 ರಂದು ಲಭ್ಯವಿದೆ.ಇನ್ನು ನವೆಂಬರ್ 13ನೇ ತಾರೀಕು ಸೋಮವಾರ ಅಮಾವಾಸ್ಯೆ ಪೂಜೆ ಒಂದೇ ಇರುತ್ತದೆ. ಇನ್ನು ನವೆಂಬರ್ 15ನೇ ತಾರೀಕು ಸಂಜೆ ಯಮದೀಪರಾಧನೆ ಮಾಡಬಹುದು.