ಹಾಲು ಸೇವಿಸುವ ಸರಿಯಾದ ವಿಧಾನ!

ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ಬೇರೆ ಬೇರೆ ರೀತಿಯ ಆಹಾರಗಳನ್ನು ಇಷ್ಟಪಟ್ಟು ಸೇವಿಸಬಹುದು.ಒಂದೊಂದು ಆಹಾರವು ನಿಮ್ಮ ಆರೋಗ್ಯದ ಮೇಲೆ ತನ್ನದೇ ಆದ ಪರಿಣಾಮಗಳನ್ನು ಹೊಂದಿರುತ್ತದೆ. ಅದರಲ್ಲಿ ಸಿಗುವಂತಹ ಪೌಷ್ಟಿಕ ಸತ್ವಗಳು ಇದಕ್ಕೆ ಕಾರಣವಾಗಿರುತ್ತದೆ.

ಡೈರಿ ಪದಾರ್ಥವಾದ ಹಾಲು ಕೂಡ ನಿಮ್ಮ ಇಷ್ಟದ ಆಹಾರಗಳಲ್ಲಿ ಒಂದು. ಚಿಕ್ಕ ವಯಸ್ಸಿನಿಂದಲೂ ಅಭ್ಯಾಸವಾಗಿರುವ ಈ ಪದ್ಧತಿಯನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋಗುವುದೇ ಒಂದು ಸವಾಲು. ಹೌದು ಆಯುರ್ವೇದ ಶಾಸ್ತ್ರ ಹೇಳುವ ಪ್ರಕಾರ ವಯಸ್ಸಿನ ಆಧಾರದ ಮೇಲೆ ಹಾಲು ಕುಡಿಯಲು ಎಂತಹದೇ ಎಂಬ ಸಮಯವಿದೆ. ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಬೆಳಗ್ಗೆ ಅಥವಾ ಸಂಜೆ,ಯಾವ ಟೈಮ್?

ಹಾಲು ಸೇವಿಸುವ ವಿಚಾರದಲ್ಲಿ ಆಯುರ್ವೇದ ಶಾಸ್ತ್ರ ಎರಡು ರೀತಿ ಹೇಳುತ್ತದೆ. ದೊಡ್ಡವರಿಗೆ ಒಂದು ಸಮಯ ಮತ್ತು ಮಕ್ಕಳಿಗೆ ಇನ್ನೊಂದು ಸಮಯ.

ಒಂದು ವೇಳೆ ನೀವು ದೊಡ್ಡವರಾಗಿದ್ದರೆ, ರಾತ್ರಿ ಮಲ ಗುವ ಮುಂಚೆ ಹಾಲು ಕುಡಿದು ಮಲಗಿ. ಅದೇ ಒಂದು ವೇಳೆ ಚಿಕ್ಕ ಮಕ್ಕಳಿಗೆ ಹಾಲು ಕೊಡುವುದಾದರೆ ಆಯು ರ್ವೇದ ಶಾಸ್ತ್ರ ಹೇಳುವ ಪ್ರಕಾರ ಬೆಳಗಿನ ಸಮಯದಲ್ಲಿ ಉತ್ತಮ.

ರಾತ್ರಿ ಸಮಯದಲ್ಲಿ ದೊಡ್ಡವರು ಹಾಲು ಕುಡಿದು ಮಲಗುವು ದರಿಂದ ಅವರ ಜೀರ್ಣ ಶಕ್ತಿ ಹೆಚ್ಚಾಗುತ್ತದೆ. ಸೇವಿಸಿದ ಆಹಾರ ಉತ್ತಮವಾಗಿ ಜೀರ್ಣವಾಗುತ್ತದೆ.

ಯಾರು ರಾತ್ರಿ ಹೊತ್ತು ಹಾಲು ಕುಡಿಯುವ ಅಭ್ಯಾಸ ಇಟ್ಟು ಕೊಂಡಿರುತ್ತಾರೆ ಅಂತಹವರಿಗೆ ಒಳ್ಳೆಯ ನಿದ್ರೆ ಬರುತ್ತದೆ ಮತ್ತು ಹಾಲಿನಲ್ಲಿರುವ ಕ್ಯಾಲ್ಸಿಯಂ ಪ್ರಮಾ ಣವನ್ನು ದೇಹ ಸಂಪೂರ್ಣವಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ.​

ಹಾಲು ಕುಡಿಯುವುದರ ಪ್ರಯೋಜನಗಳು–ನೀವು ಕುಡಿಯುವ ಹಾಲಿನಲ್ಲಿ ಅಪಾರವಾದ ಪೌಷ್ಟಿಕ ಸತ್ವಗಳು ಇರುತ್ತವೆ. ಇವುಗಳು ನಿಮ್ಮ ಮೂಳೆಗಳ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

ಜೊತೆಗೆ ಹಾಲಿನಲ್ಲಿ ಇರುವಂತಹ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ 12, ಪಾಸ್ಫರಸ್ ಎಲ್ಲವೂ ಸಹ ದೇಹಕ್ಕೆ ಸಿಕ್ಕಿ ದಂತಾಗಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ. ಇದ ರಿಂದ ಎದೆಯುರಿ, ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಇನ್ನಿತರ ಸಮಸ್ಯೆಗಳು ದೂರವಾಗುತ್ತವೆ.​

ಎಷ್ಟು ಪ್ರಮಾಣದಲ್ಲಿ ಹಾಲು ಸೇವಿಸುವುದು ಒಳ್ಳೆಯದು–2 ರಿಂದ 3 ಕಪ್ ಹಾಲಿನ ಸೇವನೆ ಉತ್ತಮ. ಒಂದು ದಿನಕ್ಕೆ ಇಷ್ಟು ಪ್ರಮಾಣ ಸಾಕಾಗುತ್ತದೆ. ಇದಕ್ಕೂ ಮೀರಿದಂತೆ ಕುಡಿಯಲು ಹೋದರೆ ಅದರಿಂದ ಆರೋಗ್ಯಕ್ಕೆ ತೊಂದರೆ ಉಂಟಾಗಬಹುದು.

ಒಂದು ವೇಳೆ ನೀವು ಕೆನೆಭರಿತ ಹಾಲನ್ನು ಕುಡಿಯುತ್ತೀರಿ ಎಂದಾದರೆ ದಿನಕ್ಕೆ ಒಂದರಿಂದ ಎರಡು ಕಪ್ ಮಾತ್ರ ಕುಡಿಯಿರಿ.ಇದರಿಂದ ನಿಮ್ಮ ದೇಹದ ತೂಕ ಕೂಡ ಉತ್ತಮವಾಗಿ ನಿರ್ವಹಣೆ ಆಗುತ್ತದೆ. ಹಾಗೆಂದು ಪೂರ್ಣ ಪ್ರಮಾಣದಲ್ಲಿ ಕೊಬ್ಬಿನ ಅಂಶ ಇರುವ ಹಾಲನ್ನು ಕುಡಿಯಲು ಹೋಗಬೇಡಿ.ಕೆಲವರಿಗೆ ಹಾಲು ಎಂದರೆ ಅಲರ್ಜಿ ಇರುತ್ತದೆ. ಅಂತ ಹವರು ಮಿತ ಪ್ರಮಾಣದ ಸೇವನೆಯನ್ನು ಕಾಪಾಡಿಕೊಳ್ಳುವುದು ಉತ್ತಮ.

ಅರಿಶಿನ ಹಾಲು–ಹಾಲಿನ ಜೊತೆ ಅರಿಶಿನ ಹಾಕಿ ಸೇವಿಸುವ ಅಭ್ಯಾಸ ಇಟ್ಟು ಕೊಂಡರೆ ಇನ್ನೂ ಒಳ್ಳೆಯದು. ಮಕ್ಕಳಿಗೆ ರುಚಿಗಾಗಿ ಚಾಕ್ಲೇಟ್ ಪೌಡರ್ ಹಾಕಿ ಕೊಡಬಹುದು.

ಹಾಲಿನ ರುಚಿ ಹೆಚ್ಚಿಸುವ ಟಿಪ್ಸ್

ಆಯುರ್ವೇದ ಶಾಸ್ತ್ರ ಹೇಳುವ ಪ್ರಕಾರ ಬಾಳೆಹಣ್ಣು, ಮಾವಿನ ಹಣ್ಣು, ಇತ್ಯಾದಿಗಳನ್ನು ಹಾಲು ಅಥವಾ ಮೊಸರಿನ ಜೊತೆ ಬ್ಲೆಂಡ್ ಮಾಡಿ ಸೇವಿಸಬಾರದು.

ಏಕೆಂದರೆ ಹಣ್ಣುಗಳು ಹಾಲಿನ ಜೊತೆ ಮಿಶ್ರಣವಾದಾಗ ಜೀರ್ಣಕ್ರಿಯೆಗೆ ಅನುಕೂಲವಾಗುವ ಹಾಗೆ ಇರುವ ಜಠ ರಾಗ್ನಿಯನ್ನು ಉಪಶಮನಗೊಳಿಸುತ್ತದೆ. ತದನಂತರದಲ್ಲಿ ವಿಷಕಾರಿ ಆಮ್ಲವಾಗಿ ಬದಲಾಗಿ ಕೆಮ್ಮು, ಕಫ, ನೆಗಡಿ ಇತ್ಯಾದಿ ಸಮಸ್ಯೆಗಳು ಕಂಡುಬರುವಂತೆ ಮಾಡುತ್ತದೆ. ಅಲರ್ಜಿ ಕೂಡ ಉಂಟಾಗಬಹುದು.​

ಹಾಲು ಕುಡಿಯುವ ಸರಿಯಾದ ವಿಧಾನ

ಆಯುರ್ವೇದ ಶಾಸ್ತ್ರ ಹೇಳುವ ಪ್ರಕಾರ ಹಾಲಿನ ಜೊತೆ ಹಣ್ಣುಗಳನ್ನು ಯಾವುದೇ ಕಾರಣಕ್ಕೂ ಮಿಕ್ಸ್ ಮಾಡಿ ಕುಡಿಯಬಾರದು. ನೀವು ತಂಪಾದ ಅಥವಾ ಬಿಸಿಯಾದ ಹಾಲನ್ನು ಕುಡಿಯಬಹುದು.

ಇದರಲ್ಲಿ ಯಾವುದೇ ಪೌಷ್ಟಿಕಾಂಶಗಳ ಕೊರತೆ ಇರುವು ದಿಲ್ಲ.ಆದರೆ ನೀವು ಯಾವ ಸಮಯದಲ್ಲಿ ಕುಡಿಯುತ್ತೀರಿ ಎನ್ನುವುದು ಬಹಳ ಮುಖ್ಯವಾಗುತ್ತದೆ.

ಸಾಧ್ಯವಾದಷ್ಟು ರಾತ್ರಿ ಮಲಗುವ ಮುಂಚೆ ಒಂದು ಲೋಟ ಉಗುರು ಬೆಚ್ಚಗಿನ ಹಾಲನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

ರಾತ್ರಿ ಹೊತ್ತು ಮಲಗುವ ಮುಂಚೆ ಯಾವುದೇ ಕಾರ ಣಕ್ಕೂ ತಂಪಾದ ಹಾಲನ್ನು ಕುಡಿಯಬೇಡಿ. ಇದು ನಿಮಗೆ ಹೊಟ್ಟೆಗೆ ಸಂಬಂಧಪಟ್ಟಂತೆ ಸಮಸ್ಯೆಗಳನ್ನು ತಂದುಕೊಡ ಬಹುದು ಮತ್ತು ನಿದ್ರಾಹೀನತೆ ಸಮಸ್ಯೆ ಯನ್ನು ಎದುರಾಗುವಂತೆ ಮಾಡಬಹುದು.

Leave a Comment