ಆಂಜನೇಯ ವಾಯುಪುತ್ರ ಎಂದು ಸಹ ಕರೆಯಲಾಗುತ್ತದೆ, ರಾಮನ ಬಲಗೈ ಬಂಟ ಎಂದು ಕರೆಯಲಾಗುತ್ತದೆ. ಭಕ್ತರನ್ನು ಪೊರೆಯುವ ಆಂಜನೇಯ ಸ್ವಾಮಿ. ತೆತ್ರಯುಗದಲ್ಲಿ ಸೀತಾಮಾತೆಯನ್ನು ಹುಡುಕುವುದಕ್ಕೆ ನಿಂತಿದ್ದ ಆಂಜನೇಯ ಲಂಕೆ ಹಾರಿದ ಲಂಕಾದಿಪತಿಯ ಆಸ್ಥಾನಕ್ಕೆ ಬಂದ ವಾಯುಪುತ್ರ ಆಂಜನೇಯ ಇಬ್ಬರು ರಾಕ್ಷಸರನ್ನ ಸಂಹಾರ ಮಾಡುತ್ತಾನೆ. ಅದಾದ ನಂತರ ಪಾತಾಳದಲ್ಲಿ ಅನೇಕ ರೀತಿಯ ರಾಕ್ಷಸರು ಹುಟ್ಟಿಕೊಳ್ಳುತ್ತಾರೆ.
ಆಂಜನೇಯ ಈ ರೀತಿಯ ರಾಕ್ಷಸರು ನೋಡಿದಾಗ ಅವನ ಅದ್ಭುತ ಶಕ್ತಿಯು ಹೊರಬಂದಿತು. ಲಂಕೆಯಲ್ಲಿ ನೆಡೆದದು ಒಂದು ದೊಡ್ಡವಾದ ಕದನವಾಗಿತ್ತು. ಅದೊಂದು ಧರ್ಮ ಯುದ್ಧವಾಗಿತ್ತು. ಹೆಣ್ಣಿನ ಮೇಲೆ ಕಣ್ಣು ಹಾಕಿದ ಲಂಕಾಸುರನನ್ನು ಸಂಹಾರ ಮಾಡಿರುವುದು. ಆ ರಾಕ್ಷಸರನ್ನ ಎದುರಿಸಲು ಆಂಜನೇಯ ಸ್ವಾಮಿ ಎದುರಾಗಿ ನಿಂತಿದ್ದನು. ಆ ರಾಕ್ಷಸರನ್ನ ಸಂಹಾರ ಮಾಡಿಬಿಟ್ಟನು ಆಂಜನೇಯ ಸ್ವಾಮಿ.
ರಾಕ್ಷಸರನ್ನು ಸಂಹಾರ ಮಾಡುವುದು ಅಷ್ಟು ಸುಲಭವಾದ ಮಾತಾಗಿರಲಿಲ್ಲ. ಇಬ್ಬರು ರಾಕ್ಷಸರನ ಆಂಜನೇಯ ಸ್ವಾಮಿ ಎಂದು ಸಮರ ಮಾಡಲು ಆಗಲಿಲ್ಲ. ನಂತರದಾಗಿಯ ಪಂಚಮುಖಿ ಆಂಜನೇಯ ದೊಡ್ಡದಾಗಿ ಹೊರಬಂದನು ಪಾತಾಳದಲ್ಲಿರುವ ಐದು ದೀಪಗಳ ರಾಕ್ಷಸರನ ಸಂಹಾರ ಮಾಡಿದ ನಂತರ ಇವರಿಬ್ಬರನ್ನು ಸಮಾರ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿದ. ಪಾತಾಳಕ್ಕೆ ಇಳಿದು ಸ್ವಾಮಿ ಐದು ತಲೆಯ ಹನುಮಂತನ ಅವತಾರವನ್ನು ಎತ್ತಿರುವುದನ್ನ ಕಾಣಬಹುದು.
ಮಾರುತಿಯ ಒಂದೊಂದು ಮುಖಗಳು ಕೂಡ ಒಂದೊಂದು ಶಕ್ತಿಯ ಸಂಕೇತವಾಗಿದೆ. ಆಂಜನೇಯನ ಮೊದಲ ಮುಖವೇ ಹನುಮಂತ, ಯಾವುದೇ ಆಂಜನೇಯ ದೇವಸ್ಥಾನಕ್ಕೆ ಹೋದಾಗ ಅದು ಪೂರ್ವ ದಿಕ್ಕಿಗೆ ಮುಖವಾಗಿದ್ದೆ ಇರುತ್ತದೆ. ಮನಸ್ಸಿನಲ್ಲಿ ಸಾರ್ಥಕತೆ ಮತ್ತು ಪವಿತ್ರತೆಯನ್ನು ತೋರಿಸುತ್ತದೆ. ಆಂಜನೇಯ ಸ್ವಾಮಿಯ ಮುಖವು ಯಶಸ್ಸನ್ನು ನೀಡುವ ಪ್ರತೀಕವಾಗಿದೆ. ಎರಡನೇ ಮುಖವೇ ನರಸಿಂಹ, ಈ ಮುಖವು ದಕ್ಷಿಣ ದಿಕ್ಕಿಗೆ ಇರುತ್ತದೆ.
ಇದು ಸಂಕಟವನ್ನು ಎದುರಿಸುವ ಶಕ್ತಿ ಹೊಂದಿದೆ. ಭೂತಾ,ಪೇತ, ಶತ್ರು ಸಂಕಟಗಳನ್ನು ದೂರ ಮಾಡುತ್ತದೆ. ಆಂಜನೇಯನ ಮೂರನೇ ಮುಖವೇ ಗರುಡ ಇದು ಪಶ್ಚಿಮ ದಿಕ್ಕಿಗೆ ಮುಖಮಾಡಿದೆ. ಮಾಟ ಮಂತ್ರ ತಂತ್ರಗಳಿಂದ ರಕ್ಷಣೆ ಮಾಡುತ್ತದೆ. ಸೂರ್ಯನ ಪ್ರಕಾಶದಂತೆ ಈ ಮುಖವು ಕೂಡ ತುಂಬಾ ತೇಜಸ್ಸಿನಿಂದ ಇರುತ್ತದೆ. ಆಂಜನೇಯನ ನಾಲ್ಕನೇ ಮುಖವೇ ವರಹ, ಇದು ಉತ್ತರ ದಿಕ್ಕಿಯ ಮುಖ ಮಾಡಿರುತ್ತದೆ. ಮಾಡುವ ಕೆಲಸದಲ್ಲಿ ಪ್ರಗತಿ ಯಶಸ್ಸು ಲಭ್ಯವಾಗುತ್ತದೆ. ಪುತ್ರಾದಿಗಳ ವೃದ್ಧಿಯಾಗುವುದಕ್ಕೂ ಕೂಡ ಈ ಮುಖ ತುಂಬಾ ಯಶಸ್ಸನ್ನ ನೀಡುತ್ತದೆ. ಯುದ್ಧ ಭೂಮಿಯಲ್ಲಿ ಲಕ್ಷ್ಮಣನಿಗೆ ಶಕ್ತಿ ಬೇಕಾಗಿದ್ದಾಗ ಆಂಜನೇಯನ ಮುಖವೇ ಅವರಿಗೆ ಜೀವದಾನ ನೀಡುವುದನ್ನು ಕಾಣಬಹುದಾಗಿದೆ.
ಆಂಜನೇಯನ ಕೊನೆಯ ಮುಖವೇ ಹಯಗ್ರೀವ, ಈ ಮುಖ ಯಾವಾಗಲೂ ಆಕಾಶದ ಕಡೆ ಇರುತ್ತದೆ, ಹಯಗ್ರೀವವೂ ಜ್ಞಾನ ಮತ್ತು ಸಂತತಿಯನ್ನ ರೂಪಿಸುತ್ತದೆ. ಆಂಜನೇಯ ಒಂದೊಂದು ರೂಪದಲ್ಲಿ ಒಂದೊಂದು ರೀತಿಯಲ್ಲಿ ಪ್ರತಿಬಿಂಬಿಸುತ್ತಾನೆ. ಯಾರು ಪಂಚಮುಖಿ ಆಂಜನೇಯ ಸ್ವಾಮಿಯನ್ನು ಪೂಜೆ ಮಾಡಿ ಧ್ಯಾನ ಮಾಡುತ್ತಾರೆ. ಅಂತವರಿಗೆ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಯಶಸ್ವಿಯಾಗುತ್ತದೆ.