ಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾದದ್ದು. ಇದಕ್ಕಾಗಿ ಮನೆಯನ್ನು ಪ್ರತಿದಿನ ಒರೆಸಲಾಗುತ್ತದೆ. ಅದರೆ ಮನೆಯನ್ನು ಒರೆಸುವ ನೀರಿಗೆ ಬೇವಿನ ಎಲೆಯನ್ನು ಹಾಕಿ ಒರೆಸಿದರೆ ಮಹಾಲಕ್ಷ್ಮಿ ದೇವಿ ನಿಮ್ಮ ಮನೆಯನ್ನು ಪ್ರವೇಶಿಸಿ ಶಾಶ್ವತವಾಗಿ ನೆಲೆಸುತ್ತಾಳೆ.ಯಾರ ಮನೆಯಲ್ಲಿ ಮನೆಯನ್ನು ಒರಸುವಾಗ ಕೆಲವೊಂದು ನಿಯಮವನ್ನು ಯಾರು ಪಾಲಿಸುತ್ತಾರೋ ಅಲ್ಲಿ ಮಹಾಲಕ್ಷ್ಮಿ ನೆಲೆಸುತ್ತಾಳೆ. ಹಾಗಾದರೆ ನಿಯಮಗಳು ಏನು ಎಂದು ತಿಳಿದುಕೊಳ್ಳೋಣ ಬನ್ನಿ.
ಬಹಳಷ್ಟು ಜನರು ಅಜಾಗರೂಕತೆಯಿಂದ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಬಡತನವು ಮನೆಯಲ್ಲಿ ತಾಂಡವವಾಡುತ್ತದೆ. ಹಣ ಬರುವ ಮನೆಗೆ ಹಣವು ಹಿಂದುರಿಗಿ ಹೊರಗೆ ಹೋಗುತ್ತದೆ. ಆದ್ದರಿಂದ ಮನೆಯಿಂದ ಒರಸುವಾಗ ನೀರಿನಲ್ಲಿ ನಾವು ಹೇಳುವ ವಸ್ತುವನ್ನು ಹಾಕಿದರೆ ಮಹಾಲಕ್ಷ್ಮಿ ಓಡೋಡಿ ನಿಮ್ಮ ಮನೆಗೆ ಬರುತ್ತಾಳೆ.
ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯನ್ನು ಒರಸುವುದಾದರೆ 12 ಘಂಟೆಯ ನಂತರ ಯಾವುದೇ ಕಾರಣಕ್ಕೂ ಒರಸಬೇಡಿ ಏಕೆಂದರೆ ಈ ಸಮಯವು ಸ್ವಚ್ಛತೆಗೆ ಉತ್ತಮ ಸಮಯವೆಂದು ಪರಿಗಣಿಸಲಾಗಿಲ್ಲ. ನಿಮಗೆ ಧನಪ್ರಾಪ್ತಿ ಆಗಬೇಕೆಂದರೆ ಹಾಗೂ ಮಹಾಲಕ್ಷ್ಮಿಯು ನಿಮ್ಮ ಮನೆಯಲ್ಲಿ ನೆಲೆಸಬೇಕು ಎಂಬುದಾದರೆ ಬೆಳಗಿನ ಸಮಯದಲ್ಲಿ ನೆಲವನ್ನು ಒರಸಿ.
ಬೆಳಗಿನ ಸಮಯದಲ್ಲಿ ಮನೆಯನ್ನು ಒರಸುವುದರಿಂದ ಸಕಾರಾತ್ಮಕ ಶಕ್ತಿಗಳ ಸಂಚನ ಆಗುತ್ತದೆ. ಬೆಳಗಿನ ಸಮಯವು ಲಕ್ಷ್ಮಿಯ ಆಗಮನದ ಸಮಯವಾಗಿದೆ ಕೆಲವು ಬೇವಿನ ಎಲೆಗಳನ್ನು ತೆಗೆದು ಕೊಂಡು ನೀರಿನ ಪಾತ್ರೆಯಲ್ಲಿ ಹಾಕಿದ ನಂತರ ಚೆನ್ನಾಗಿ ಕುದಿಸಿ, ನಂತರ ಎಲೆಗಳನ್ನು ಹೊರ ತೆಗೆದು ನಂತರ ಒಂದು ಲೋಟ ಕುದಿಸಿದ ನೀರನ್ನು ನೆಲ ಒರೆಸುವ ಬಕೆಟ್ಟಿಗೆ ಹಾಕಿ ನಂತರ ಮನೆಯನ್ನು ಒರೆಸಿ.
ಇದೇ ರೀತಿ ವಾರಕ್ಕೊಮ್ಮೆ ಮಾಡಿ ನೋಡಿ ನಿಮಗೆ ತಿಳಿಯುತ್ತದೆ ಕೆಟ್ಟ ಕಾಯಿಲೆಗಳು ನಿಮ್ಮ ಮನೆಯಿಂದ ದೂರ ಸರಿಯುತ್ತದೆ. ಯಾಕೆಂದರೆ ಬೇವಿನ ಎಲೆಯಲ್ಲಿ ಸಾವಿರಾರು ಔಷಧಿಗಳ ಗುಣಗಳಿವೆ. ಇದರಿಂದ ಅನೇಕ ರೋಗಾಣುಗಳನ್ನು ನಾಶವಾಗುತ್ತದೆ ವಾಸ್ತು ಶಾಸ್ತ್ರದ ಪ್ರಕಾರ ವಾರದಲ್ಲಿ ಒಂದು ದಿನ ಗುರುವಾರ ನೆಲ ಒರಿಸುವುದನ್ನು ನಿಲ್ಲಿಸಬೇಕು ಎಂದು ಹೇಳಲಾಗಿದೆ. ವಾಸ್ತು ಶಾಸ್ತ್ರ ಪ್ರಕಾರ ಮನೆಯ ಈಶಾನ್ಯ ದಿಕ್ಕಿನ ಅಧಿಪತಿಯು ಗುರು ಗ್ರಹ ನಾಗಿದ್ದಾನೆ. ಗುರುವಾರ ಮನೆಯನ್ನು ಒರೆಸುವುದರಿಂದ ಗುರುಗ್ರಹವು ಅಶುಭ ನಾಗುತ್ತಾನೆ ಇದರಿಂದ ವ್ಯಕ್ತಿಗೆ ಭಕ್ತಿಯ ಸಾಧನೆ ದೊರೆಯುವುದಿಲ್ಲ.