ಈ ಕಾಯಿ ಎಲ್ಲಿ ಸಿಕ್ಕರೂ ಬಿಡಬೇಡಿ ಯಾಕಂದರೆ ಈ ಒಂದು ಕಾಯಿಯಿಂದ ಹತ್ತಾರು ಅರೋಗ್ಯದ ಪ್ರಯೋಜನಗಳನ್ನು ಪಡೆಯಬಹುದು!

ಅಳಲೆ ಕಾಯಿಯನ್ನು ಅಡುಗೆ ಮನೆಯ ವೈದ್ಯ ಎಂದು ಕರೆಯುತ್ತಾರೆ. ಈ ಕಾಯಿ ಸಕಲ ರೋಗಗಳಿಗೆ ತುಂಬಾ ಫಲಕಾರಿ ಆಗಿದೆ. ನಮ್ಮೆಲ್ಲರ ಅಡುಗೆ ಮನೆಯ ವೈದ್ಯನಾಗಿ ಹಲವಾರು ಶತಮಾನಗಳಿಂದ ಬಳಕೆಯಲ್ಲಿದೆ. ತೊಟ್ಟಿನಲ್ಲಿರುವ ಮಗುವಿನಿಂದ ಆದಿಯಾಗಿ ವಯೋಮಾನದ ಮನೆಯ ಸದಸ್ಯರಿಗೂ ಮತ್ತು ಎಲ್ಲ ವಿಧದ ರೋಗಗಳಿಗೂ ಅಳಲೆಕಾಯಿ ಮನೆಮದ್ದು. ಇದರ ಬಗ್ಗೆ ಪೂರ್ತಿಯಾಗಿ ಈ ಲೇಖನದಲ್ಲಿ ಅರ್ಥೈಸಿಕೊಳ್ಳೋಣ. ಈ ಅಳಲೆ ಕಾಯಿ ಮರವು ಬಯಲು ಸೀಮೆಯಲ್ಲಿ ಛತ್ರಿಯಾಕಾರದಲ್ಲಿ ಮರವಾಗಿ ಬೆಳೆಯುತ್ತದೆ.

ಇದರ ಕವಲುಗಳಲ್ಲಿ ಮೃದುವಾದ, ಹೊಳೆಯುವ ಮತ್ತು ಮಾಸು ಬಣ್ಣದ ರೋಮಗಳಿರುತ್ತವೆ. ಇದರ ಹೂವುಗಳಲ್ಲಿ ಸಹಿಸಲಾಗದ ಒಂದು ವಾಸನೆ ಇರುತ್ತದೆ. ಮತ್ತು ಈ ಅಳಲೆ ಕಾಯಿ ಎಳೆ ಇದ್ದಾಗ ಹಸಿರು ಬಣ್ಣ ನಂತರ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದರಲ್ಲಿ ಗಟ್ಟಿಯಾದ ಹಾಗೂ ಉದ್ದವಾದ ಬೀಜವಿರುತ್ತದೇ. ಇದು ಚಿಕಿತ್ಸೆಗೂ ಕೂಡ ಬಳಕೆ ಮಾಡುತ್ತಾರೆ. ಎಲ್ಲರ ಅಡುಗೆ ಮನೆಯ ವೈಧ್ಯರಾಗಿ ಹಲವಾರು ಶತಮಾನಗಳಿಂದ ಅಳಲೆ ಕಾಯಿ ಬಳಕೆಯಲ್ಲಿದೆ. ಎಲ್ಲ ವಿವಿಧ ಕಾಯಿಲೆಗಳಿಗೆ ಅಳಲೆ ಕಾಯಿ ಮದ್ದು. ಆಯುರ್ವೇದಿಕ ಶಾಸ್ತ್ರದಲ್ಲಿ ಔಷಧಿಗಳ ರಾಜನೆಂದು ಹೆಸರುವಾಸಿಯಾದ ಸಸ್ಯ ಆಗಿದೆ.

ಕರ್ನಾಟಕದ ಮನೆಗಳಲ್ಲಿ ಜನಪ್ರಿಯವಾದ ಅಳಲೆ ಕಾಯಿ ಭಾರತಾದ್ಯಂತ ಕಂಡು ಬರುತ್ತದೆ. ಎಲ್ಲ ಕಡೆಯಲ್ಲೂ ಸಾಮಾನ್ಯವಾಗಿ ಬೆಳೆಯುವ ಮಧ್ಯಮ ಗಾತ್ರದ ಸಸ್ಯ ಈ ಅಳಲೆ ಕಾಯಿ. ಮುಪ್ಪನ್ನು ಗೆಲ್ಲುವ ಮತ್ತು ಯೌವ್ವನವನ್ನು ಕಾಪಾಡುವ ಮತ್ತು ಅನೇಕ ವ್ಯಾಧಿಗಳನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲದೇ ಆಯುರ್ವೇದಿಕ್ ಶಾಸ್ತ್ರದಲ್ಲಿ ದೀರ್ಘಕಾಲ ಚರ್ಚಿಸಲ್ಪಡುವ ವಾತ, ಪಿತ್ತ, ಕಫ ಗಳ ಸಮಸ್ಯೆಗಳನ್ನು ನಿವಾರಿಸಬಹುದಾದ ಪರಮ ಮದ್ದು ಆಗಿ ಬಳಕೆಯಲ್ಲಿ ಇದೆ. ನೆಗಡಿ ಕೆಮ್ಮು ಜ್ವರ ಮುಂತಾದ ಸಾಮಾನ್ಯ ಕಾಯಿಲೆಗಳಿಂದ ಹಿಡಿದು ದೊಡ್ಡ ದೊಡ್ಡ ಸಮಸ್ಯೆಗಳಾದ ಕಾಮಾಲೆ, ಅಸ್ತಮಾ, ಮೂಲವ್ಯಾಧಿ, ಉದ್ರೋಗ್ ದಂತಹದ ಗಂಭೀರ ಕಾಯಿಲೆಗಳಿಗೆ ಅಳಲೆ ಕಾಯಿ ಪರಿಣಾಮಕಾರಿ ಔಷಧಿ ಎಂದು ಬಳಕೆ ಮಾಡುತ್ತಿದ್ದರು. ದೇಹದ ಯಾವುದೇ ಭಾಗದಲ್ಲಿ ಗಾಯವಾದರು ಕೂಡ ಅಳಲೆಕಾಯಿ ರಸದಿಂದ ಉಪಶಮನ ಆಗುತ್ತಿತ್ತು. ಬಹುತೇಕ ಚರ್ಮದ ರೋಗಗಳಾದ ಬ್ಯಾಕ್ಟೀರಿಯಾಗಳು ಮತ್ತು ಫಂಗಲ್ ಗಳಂತಹ ರೋಗಾಣುಗಳನ್ನು ನಿಯಂತ್ರಿಸಲು ಅಳಲೆ ಕಾಯಿ ಹೇಳಿ ಮಾಡಿಸಿರುವ ವೈದ್ಯ ಪದ್ಧತಿ ಯಾಗಿದೆ. ಇನ್ನು ಅಳಲೆ ಕಾಯಿ ಆರೋಗ್ಯಕರ ಲಾಭಗಳನ್ನು ನೋಡುವುದಾದರೆ ಅಳಲೆ ಕಾಯಿಯ ಪುಡಿಯನ್ನು

ನೀರಿನೊಂದಿಗೆ ಬೆರೆಸಿ ಬಾಯಿ ಮುಕ್ಕಳಿಸಿ ಉಗುಳುವುದರಿಂದ ಬಾಯಿಯ ಹುಣ್ಣು ಮತ್ತು ಇನ್ನಿತರ ದೋಷಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಇನ್ನು ಜೀರ್ಣ ಶಕ್ತಿ ಯನ್ನು ವೃದ್ಧಿಸಲು ಮತ್ತು ಮಲಬದ್ಧತೆಯನ್ನು ನೀಗಿಸುವಲ್ಲಿ ಪರಿಣಾಮಕಾರಿಯಾದ ಔಷಧಿಯಾಗಿದೆ. ಎಲ್ಲ ಪ್ರಕಾರದ ಕಣ್ಣುಗಳ ಬೇನೆಗು ಅಳಲೆ ಕಾಯಿ ಉಪಯುಕ್ತವಾಗಿದೆ.

ಪ್ರತಿನಿತ್ಯವೂ ಮುಂಜಾನೆ ಅಳಲೆ ಕಾಯಿ ಕಷಾಯವನ್ನು ಕುಡಿಯುವುದರಿಂದ ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿ ಇಡುವುದರ ಜೊತೆಗೆ ದೇಹದಲ್ಲಿ ಶೇಖರಿಸಲ್ಪಟ್ಟ ಅನಗತ್ಯ ಕೊಬ್ಬು ಕರಗಿಸುತ್ತದೆ. ಲೈಂ ಗಿಕ ತೊಂದರೆ ಮತ್ತು ನರ ದೌರಬಲ್ಯಕ್ಕೆ ಇದು ಉತ್ತಮವಾದ ಮದ್ದು ಆಗಿದೆ. ಮತ್ತು ಎಲ್ಲ ರೀತಿಯ ಕಣ್ಣು ಬೇನೆಗಳಿಗೆ ಈ ಕಾಯಿ ಸುಲಭವಾದ ಮನೆಮದ್ದು. ಇನ್ನು ಈ ಕಾಯಿಯನ್ನು ಯಾರು ಸೇವಿಸಬಾರದು ಎಂದರೆ ಗರ್ಭಿಣಿಯರು ಅಳಲೆ ಕಾಯಿ ಸೇವನೆ ಮಾಡವಂತೆ ಇಲ್ಲ. ಏಕೆಂದರೆ ಗರ್ಭಪಾತ ಆಗುವ ಸಾಧ್ಯತೆಗಳು ಹೆಚ್ಚಾಗಿ ಇರುವುದರಿಂದ ಹಿರಿಯರು ಈ ಕಾಯಿಯನ್ನು ಸೇವಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

Leave a Comment