ಹಣ್ಣುಗಳಿಗೆಲ್ಲಾ ಮಾವಿನ ಹಣ್ಣು ಸೇಬು ಹಣ್ಣು ಹೇಗೆ ರಾಜ ರಾಣಿಯೋ, ಅಂತೆಯೇ ತರಕಾರಿಗಳಿಗೆ ಬೀಟ್ರೂಟ್ ಬಾಸ್ ಇದ್ದಂತೆ! ಯಾಕೆಂದ್ರೆ ಮನುಷ್ಯನ ಆರೋಗ್ಯಕ್ಕೆ ಬೇಕಾದ ಎಲ್ಲಾ ಪೌಷ್ಟಿಕ ಸತ್ವಗಳು ಈ ತರಕಾರಿಯಲ್ಲಿ ಕಂಡು ಬರುತ್ತದೆ.
ಪ್ರಮುಖವಾಗಿ ದೇಹಕ್ಕೆ ಹಾನಿ ಉಂಟು ಮಾಡುವ ಫ್ರೀರ್ಯಾಡಿಕಲ್ಸ್ ವಿರುದ್ಧ ಹೋರಾಡುವ ಆಂಟಿ ಆಕ್ಸಿಡೆಂಟ್ ಅಂಶಗಳು, ನೈಟ್ರೇಟ್ ಅಂಶಗಳು, ವಿಟಮಿನ್ ಸಿ, ಬೀಟೈನ್, ಮ್ಯಾಂಗನೀಸ್, ಪೊಟ್ಯಾಶಿಯಮ್, ಕಬ್ಬಿಣಾಂಶ, ಕ್ಯಾಲ್ಸಿಯಂ,ತಾಮ್ರ ಹಾಗೂ ಇತರ ಖನಿಜಾಂಶಗಳು ಈ ತರಕಾರಿಯಲ್ಲಿ ಅಗಾಧ ಪ್ರಮಾಣದಲ್ಲಿ ಕಂಡು ಬರುವುದರಿಂದ ಇದೊಂದು ಆರೋಗ್ಯಕಾರಿ ತರಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂದಿನ ಈ ಲೇಖನದಲ್ಲಿ ಚಳಿಗಾಲದಲ್ಲಿ ಬೀಟ್ರೂಟ್ ಜ್ಯೂಸ್ ಸೇವನೆ ಮಾಡುವುದರಿಂದ, ಏನೆಲ್ಲಾ ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ನೋಡೋಣ…
ಹೃದಯದ ಆರೋಗ್ಯಕ್ಕೆ
ಮೊದಲೇ ಹೇಳಿದ ಹಾಗೆ, ಈ ತರಕಾರಿಯಲ್ಲಿ ಕಂಡುಬರುವ ನೈಟ್ರೇಟ್ ಅಂಶ, ದೇಹದಲ್ಲಿ ರಕ್ತ ಸಂಚಾರ ಉತ್ತಮಗೊಳಿಸಿ ಹೃದಯದ ಮೇಲಿನ ಒತ್ತಡ ಕಡಿಮೆ ಮಾಡುವುದರ ಜೊತೆಗೆ ರಕ್ತನಾಳಗಳಿಗೆ ಸಂಬಂಧಪಟ್ಟ ಕಾಯಿಲೆಗಳನ್ನು ಹೋಗಲಾ ಡಿಸುವಲ್ಲಿ ನೆರವಿಗೆ ಬರುತ್ತದೆ.
ಆದ್ದರಿಂದ ಹೀಗಾಗಲೇ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆ ಇರುವವರು, ಇಲ್ಲಾಂದ್ರೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರು ವವರು ತಮ್ಮ ಆಹಾರ ಪದ್ಧತಿಯಲ್ಲಿ ಬೀಟ್ರೋಟ್ ಸೇರಿಸುವು ದರಿಂದ ಅಥವಾ ಬೀಟ್ರೋಟ್ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿ ಕೊಂಡರೆ, ದೇಹದಲ್ಲಿ ಸರಾಗವಾದ ರಕ್ತಸಂಚಾರ ನಡೆ ಯುತ್ತದೆ, ಜೊತೆಗೆ ಹೃದಯದ ಆರೋ ಗ್ಯವು ಕೂಡ ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ.
ಪ್ರತಿ ಬೀಟ್ರೂಟ್ ಜ್ಯೂಸ್ ಕುಡಿಯಿರಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ರಕ್ತದೊತ್ತಡ ನಿಯಂತ್ರಿಸುವುದು
ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದವರು, ಚಳಿಗಾಲದಲ್ಲಿ ತುಂಬಾನೇ ಹಿಂಸೆ ಅನುಭವಿಸುತ್ತಾರೆ. ಹೀಗಾಗಿ ಈ ಕಾಯಿಲೆ ಇದ್ದವರು, ಬೀಟ್ರೂಟ್ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು.
ಇದಕ್ಕೆ ಪ್ರಮುಖ ಕಾರಣ, ಈ ತರಕಾರಿಯಲ್ಲಿ ಕಂಡು ಬರುವ ನೈಟ್ರೇಟ್ ಅಂಶವು, ಹೃದಯ ಮತ್ತು ಸ್ನಾಯುಗಳಿಗೆ ಆಮ್ಲಜನಕ ಸಾಗಿಸಲು ನೆರವಾಗು ವುದು ಜೊತೆಗೆ ರಕ್ತದೊತ್ತಡವನ್ನು ನಿಯಂ ತ್ರಣದಲ್ಲಿಡಲು ಸಹಾಯ ಮಾಡುವುದು.
ದೇಹದ ತೂಕ ಇಳಿಸಿಕೊಳ್ಳಲು
ಚಳಿಗಾಲದಲ್ಲಿ ದೇಹದ ತೂಕ ನಿಯಂತ್ರಣ ಮಾಡಿಕೊಳ್ಳಲು ಬಯಸು ವವರು, ತಮ್ಮ ಆಹಾರ ಪದ್ಧತಿಯಲ್ಲಿ ಬೀಟ್ರೂಟ್ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು. ಯಾಕೆಂದ್ರೆ ಈ ತರಕಾರಿ ಯಲ್ಲಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿಗಳು ಅಂಶಗಳು ಕಂಡು ಬರುತ್ತದೆ ಅಂದರೆ 100 ಗ್ರಾಂ ಬೀಟ್ರೂಟ್ ನಲ್ಲಿ 43 ಗ್ರಾಂನಷ್ಟು ಮಾತ್ರ ಕ್ಯಾಲೋರಿಗಳು ಸಿಗುತ್ತದೆ.
ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ
ಬೀಟ್ರೂಟ್ ನಲ್ಲಿ ಕಬ್ಬಿಣಾಂಶದ ಪ್ರಮಾಣ ಅಪಾರ ಪ್ರಮಾಣದಲ್ಲಿ ಕಂಡು ಬರುತ್ತದೆ. ಹೀಗಾಗಿ ಈಗಾಗಲೇ ರಕ್ತಹೀನತೆ ಸಮಸ್ಯೆಯಿಂದ ಬಳಲು ತ್ತಿರುವವರು, ಪ್ರತಿದಿನ ಈ ತರಕಾರಿಯ ಜ್ಯೂಸ್ ಮಾಡಿ ಕುಡಿಯುವು ದರಿಂದ,ಸಕ್ಕತ್ ಆರೋಗ್ಯದ ಲಾಭಗಳನ್ನು ಪಡೆದುಕೊಳ್ಳಬಹುದು.
ರಕ್ತ ಸಂಚಾರ ಸುಗಮವಾಗಿ ಕಾರ್ಯನಿರ್ವಹಿಸುತ್ತವೆ…
ನಿಮಗೆ ಗೊತ್ತಿರಲಿ, ಬೀಟ್ರೂಟ್ ನಲ್ಲಿ ನೈಟ್ರೇಟ್ ಅಂಶದ ಪ್ರಮಾಣ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ.ಇಂತಹ ಅಂಶಗಳು ಮನುಷ್ಯನ ದೇಹಕ್ಕೆ ಸೇರಿದ ಮೇಲೆ,ಅದು ನೈಟ್ರಿಕ್ ಆಕ್ಸೈಡ್ ರೂಪ ಪಡೆದು ಕೊಳ್ಳುತ್ತದೆ.
ಇದರಿಂದ ರಕ್ತ ಸಂಚಾರ ಸರಾಗ ಗೊಳ್ಳುತ್ತವೆ ಜೊತೆಗೆ ಹೃದಯದ ಮೇಲಿನ ಒತ್ತಡವು ಕೂಡ ಕಡಿಮೆ ಆಗುತ್ತದೆ.ಇದರಿಂದ ಪ್ರತಿ ಯೊಂದು ಅಂಗಾಂಗಳು ಕೂಡ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿ ಸಲು ನೆರವಾಗುತ್ತದೆ.