20 ವರ್ಷದಿಂದ ಗ್ಯಾಸ್ ಸಿಲೆಂಡರ್ ಮಾರಾಟ ಮಾಡುವ ಅಂಗಡಿಯವರು ಹೇಳಿದ ಮಾತು!

ಗ್ಯಾಸ್ ಸಿಲೆಂಡರ್ ಅನ್ನು ಖರೀದಿ ಮಾಡುವಾಗ ಈ ಟಿಪ್ಸ್ ಅನ್ನು ಪ್ರತಿಯೊಬ್ಬರು ತಿಳಿದುಕೊಂಡರೆ ಒಳ್ಳೆಯದು.

1, LPG ಸಿಲೆಂಡರ್ ತೆಗೆದುಕೊಳ್ಳುವ ಮೊದಲು ಸಿಲೆಂಡರ್ ಸೇಫ್ಟಿ ಕ್ಯಾಪ್ ಮತ್ತು ಸೀಲ್ ಸರಿಯಾಗಿ ಇದಿಯ ಅಂತ ನೋಡಬೇಕು. ಒಂದು ವೇಳೆ ಓಪನ್ ಆಗಿದ್ದರೇ ಈ ಸಿಲೆಂಡರ್ ಬಿಟ್ಟು ಬೇರೆ ತೆಗೆದುಕೊಳ್ಳಿ. ಏಕೆಂದರೆ ಖರೀದಿ ಮಾಡುವ ಪ್ರತಿಯೊಂದು ವಸ್ತುವಿಗೂ ವ್ಯಾಲಿಡಿಟಿ ಇದೆ. ಅದೇ ರೀತಿ ಸಿಲೆಂಡರ್ ಗೂ ಕೂಡ ವ್ಯಾಲಿಡಿಟಿ ಇದೆ. ಇದನ್ನು ನೋಡಿ ಖರೀದಿ ಮಾಡಬೇಕು ವರ್ಷದಲ್ಲಿ 12 ತಿಂಗಳನ್ನು 4 ಭಾಗ ಮಾಡಿ ABCD ಎಂದು ಗುರುತಿಸಿದ್ದಾರೆ. A ಇದ್ದರೆ ಜನವರಿ, ಫೆಬ್ರವರಿ ಮಾರ್ಚ್.B ಇದ್ದರೆ ಏಪ್ರಿಲ್ ಮೇ ಜೂನ್.C ಇದ್ದರೆ ಜೂಲೈ ಆಗಸ್ಟ್ ಸೆಪ್ಟೆಂಬರ್ ಮತ್ತು D ಇದ್ದರೇ ಅಕ್ಟೋಬರ್, ನವೆಂಬರ್ ಡಿಸೆಂಬರ್. ಉದಾಹರಣೆಗೆ C27 ಇದ್ದರೆ ಸೆಪ್ಟೆಂಬರ್ 2027ವರೆಗೆ ಇದರ ವ್ಯಾಲಿಡಿಟಿ ಇದೆ ಎಂದು ಅರ್ಥ. ನಂತರ ಈ ಸಿಲೆಂಡರ್ ಬಳಸುವ ಆಗಿಲ್ಲ. ಆದಷ್ಟು ಇದನ್ನು ನೋಡಿ ಖರೀದಿ ಮಾಡಬೇಕು.

2, ISI ಮಾರ್ಕ್ ಬಗ್ಗೆ ಗಮನ ಇರಲಿ–ಇತ್ತೀಚಿಗೆ ಬ್ಲಾಕ್ ಮಾರ್ಕೆಟ್ ಎಲ್ಲಾ ಕಡೆ ಹುಟ್ಟುತ್ತಿದೆ. ಗ್ಯಾಸ್ ಸಿಲೆಂಡರ್ ಖರೀದಿಸುವಾಗ ಅಧಿಕೃತವಾದ ಪ್ರೈವೇಟ್ ಗ್ಯಾಸ್ ಏಜೆನ್ಸಿ ಅಥವಾ ಗೌರ್ನಮೆಂಟ್ ಸೌಮ್ಯದ ISI ಮಾರ್ಕ್ ಹೊಂದಿರುವ ಡಿಸ್ಟ್ರೆಬ್ಯೂಟರ್ ಇಂದಲೇ ತೆಗೆದುಕೊಳ್ಳಿ.

3, ಗ್ಯಾಸ್ ಎಳೆಯುವುದು ಮತ್ತು ಎತ್ತಿ ಹಾಕುವುದನ್ನು ಮಾಡಬೇಡಿ.–ಗ್ಯಾಸ್ ಎಳೆದು ತಂದು ಫಿಕ್ಸ್ ಮಾಡಿದರೆ ಸ್ವಲ್ಪ ಸಮಯ ಹಾಗೆ ಬಿಡಿ. ನಂತರ ಆನ್ ಮಾಡಿಕೊಂಡು ಬಳಸಿ. ಇಲ್ಲವಾದರೆ ಗ್ಯಾಸ್ ಬ್ಲಾಸ್ಟ್ ಆಗುವ ಸಾಧ್ಯತೆ ಇರುತ್ತದೆ.

4, ಗ್ಯಾಸ್ ಖರೀದಿ ಮಾಡುವ ಮೊದಲು ಗ್ಯಾಸ್ ಲೀಕೆಜ್ ಇದಿಯಾ ಎಂದು ಪರಿಶೀಲನೆ ಮಾಡಿ. ಗ್ಯಾಸ್ ರೆಗ್ಯುಲೇಟರ್ ಗೆ ಸೋಪ್ ನೀರು ಹಾಕಿ ನೊಡಿ. ಜಾಸ್ತಿ ಗುಳ್ಳೆ ಬಂದರೆ ಗ್ಯಾಸ್ ಲೀಕೇಜ್ ಆಗುತ್ತಿದೆ ಎಂದು ಅರ್ಥ.

5, ಗ್ಯಾಸ್ ಸ್ಮೆಲ್ ಬರುತ್ತಿದ್ದಾರೆ ತಕ್ಷಣ ಗ್ಯಾಸ್ ರೆಗ್ಯುಲೇಟರ್ ಅನ್ನು ಆಫ್ ಮಾಡಿ.

Leave a Comment