ನಿಮ್ಮ ಹೆಸರು R ಅಕ್ಷರದಿಂದ ಆರಂಭ ಆಗುತ್ತ! ಹೀಗಿರುತ್ತೆ ಗುಣ ಲಕ್ಷಣಗಳು!

ಹೆಸರು ಕೇವಲ ಕರೆಯಲು ಇರುವ ನಾಮವಾಗಿರದೇ ಅನೇಕ ವೇಳೆ ಅವರ ವ್ಯಕ್ತಿತ್ವದ ಸುಳಿವನ್ನು ಕೂಡ ನೀಡುತ್ತದೆ. ಇದೇ ಕಾರಣಕ್ಕೆ ಹೆಸರನ್ನು ಶಾಸ್ತ್ರೋಕ್ತವಾಗಿ, ಹುಟ್ಟಿದ ರಾಶಿಗೆ ಅನುಗುಣವಾಗಿ ಬಂದ ಅಕ್ಷರದ ಮೂಲಕ ಇಡಲಾಗುವುದು. ಅದರ ಅನುಸಾರವಾಗಿ ಇಂಗ್ಲಿಷ್​ ವರ್ಣಮಾಲೆಯ ಆರ್​ ಅಕ್ಷರದ ಹೆಸರಿನ ಗುಣ ಸ್ವಭಾವ ಹೇಗಿರತ್ತೆ ಎಂಬ ಮಾಹಿತಿ ಇಲ್ಲಿದೆ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವ್ಯಕ್ತಿಯ ಹೆಸರು ಅವರ ಸ್ವಭಾವ ಮತ್ತು ಜೀವನದ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿಯ ಹೆಸರಿನ ಮೊದಲ ಅಕ್ಷರವು ಅವನ ಸ್ವಭಾವ ಮತ್ತು ಭವಿಷ್ಯದ ಬಗ್ಗೆ ಅರಿಯಬಹುದು

ಹೆಸರು ಕೇವಲ ಕರೆಯಲು ಇರುವ ನಾಮವಾಗಿರದೇ ಅನೇಕ ವೇಳೆ ಅವರ ವ್ಯಕ್ತಿತ್ವದ ಸುಳಿವನ್ನು ಕೂಡ ನೀಡುತ್ತದೆ. ಇದೇ ಕಾರಣಕ್ಕೆ ಹೆಸರನ್ನು ಶಾಸ್ತ್ರೋಕ್ತವಾಗಿ, ಹುಟ್ಟಿದ ರಾಶಿಗೆ ಅನುಗುಣವಾಗಿ ಬಂದ ಅಕ್ಷರದ ಮೂಲಕ ಇಡಲಾಗುವುದು. ಅದರ ಅನುಸಾರವಾಗಿ ಇಂಗ್ಲಿಷ್​ ವರ್ಣಮಾಲೆಯ ಆರ್​ ಅಕ್ಷರದ ಹೆಸರಿನ ಗುಣ ಸ್ವಭಾವ ಹೇಗಿರತ್ತೆ ಎಂಬ ಮಾಹಿತಿ ಇಲ್ಲಿದೆ

ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಜನರು ನೋಡಲು ತುಂಬಾ ಆಕರ್ಷಕ ಮತ್ತು ಸ್ಮಾರ್ಟ್ ಆಗಿರುತ್ತಾರೆ. ಇದರಿಂದಾಗಿ ಅವರು ಸುಲಭವಾಗಿ ಇತರರನ್ನು ತಮ್ಮ ಕಡೆಗೆ ಆಕರ್ಷಿಸುತ್ತಾರೆ. ಇದರ ಹೊರತಾಗಿ, ಅವರು ಜನರ ಜೊತೆ ಹೆಚ್ಚಿನ ಬಾಂಧವ್ಯವನ್ನು ಹೊಂದಿದ್ದಾರೆ.

ಈ ಹೆಸರಿನ ಜನರು ತುಂಬಾ ಬುದ್ಧಿವಂತರು. ಕಠಿಣ ಪರಿಶ್ರಮದ ಸ್ವಭಾವದಿಂದಾಗಿ ಈ ಜನರು ತಮ್ಮ ಕೆಲಸದ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ.

ಈ ಜನರು ತಮ್ಮ ಸ್ನೇಹಿತರಿಗಾಗಿ ತಮ್ಮ ಮನಸ್ಸಿನಲ್ಲಿ ಬಹಳ ವಿಶೇಷವಾದ ಸ್ಥಾನವನ್ನು ಹೊಂದಿದ್ದಾರೆ. ಆದಾಗ್ಯೂ, ಅವರ ಸ್ನೇಹವು ಕೆಲವೇ ಜನರೊಂದಿಗೆ ಮಾತ್ರ ಹೊಂದಿರುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, R ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವವರು ತಮ್ಮ ವೈವಾಹಿಕ ಜೀವನದಲ್ಲಿ ಕೆಲವು ಏರಿಳಿತಗಳನ್ನು ಹೊಂದಿರುತ್ತಾರೆ. ರು ,ಯಾವುದೇ ವಿಷಯಗಳನ್ನು ಬೇಗ ನಂಬುತ್ತಾರೆ, ಇದರಿಂದಾಗಿ ಅವರ ಸಂಗಾತಿ ವಿಚಾರದಲ್ಲಿ ಅವರ ಸಂಬಂಧವು ಹೆಚ್ಚು ಉತ್ತಮವಾಗುವುದಿಲ್ಲ.

ಅವರು ತಮ್ಮದೇ ಆದ ರೀತಿಯಲ್ಲಿ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ಈ ಜನರು ಕಡಿಮೆ ಪ್ರಯತ್ನದಿಂದ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ. ಅವರ ಕೆಲಸದ ಬಗ್ಗೆ ತುಂಬಾ ಪ್ರಾಮಾಣಿಕರು

ಯಾವುದೇ ಕೆಲಸವನ್ನು ಬುದ್ಧಿವಂತಿಕೆಯಿಂದ ಮಾಡುತ್ತಾರೆ. ಅವರು ಎಲ್ಲಾ ವಿಷಯಗಳಲ್ಲಿ ಯಶಸ್ವಿಯಾಗಲು ಬಯಸುತ್ತಾರೆ. ಗೆಲ್ಲಬೇಕೆಂಬ ಛಲವೇ ಅವರನ್ನು ಜೀವನದಲ್ಲಿ ಯಶಸ್ವಿಯಾಗುವಂತೆ ಮಾಡುತ್ತದೆ.

ಸಂಖ್ಯಾಶಾಸ್ತ್ರದ ಪ್ರಕಾರ ಈ ವ್ಯಕ್ತಿಗಳು ಸದ್ಗುಣಶೀಲ, ಪ್ರಬಲ ಹಾಗೂ ಸುಲಭವಾಗಿ ಒಗ್ಗಿಕೊಳ್ಳುವ ವ್ಯಕ್ತಿಗಳಾಗಿರುತ್ತಾರೆ. ಇವರು ಸುಲಭವಾಗಿ ಸ್ನೇಹಿತರನ್ನು ಸಂಪಾದಿಸುತ್ತಾರೆ. ಇವರು ಪ್ರೀತಿಯನ್ನು ಶ್ಲಾಘಿಸುವವರಾಗಿದ್ದು ಇವರನ್ನು ಈ ಗುಣಕ್ಕಾಗಿಯೇ ಇತರರು ಇಷ್ಟಪಡುತ್ತಾರೆ.

ಈ ವ್ಯಕ್ತಿಗಳು ಸಾಕಷ್ಟು ಹಣವನ್ನೇನೋ ಸಂಪಾದಿಸುತ್ತಾರೆ. ಆದರೆ ಇನ್ನೊಂದು ಕಡೆಯಿಂದ ಹಣಕಾಸಿನ ನಿರ್ವಹಣೆಯಲ್ಲಿ ಇವರು ಸೋಲುವ ಕಾರಣ ಸದಾ ಹಣದ ಮುಗ್ಗಟ್ಟನ್ನು ಎದುರಿಸುತ್ತಾರೆ. ಇದೇ ಕಾರಣದಿಂದ ಈ ವ್ಯಕ್ತಿಗಳು ಕೆಲವೊಮ್ಮೆ ಥಟ್ಟನೇ ಹಣದ ನಷ್ಟವನ್ನೂ ಅನುಭವಿಸುತ್ತಾರೆ. ಹಾಗಾಗಿ ಈ ವ್ಯಕ್ತಿಗಳು ಯಾವುದೇ ಹಣಕಾಸಿನ ಹೂಡಿಕೆಯಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

ಇವರು ನೈಸರ್ಗಿಕ ಅಧಿಕಾರಯುತ ಧ್ವನಿಯನ್ನು ಹೊಂದಿದ್ದು ತಮ್ಮ ಮಾತುಗಳಿಂದ ಇತರರನ್ನು ತಮ್ಮ ಚರ್ಚೆಯ ವಲಯದಲ್ಲಿ ಸುಲಭವಾಗಿ ಒಳಗೊಳ್ಳುವಂತೆ ಮಾಡುತ್ತಾರೆ. ಈ ಗುಣದಿಂದಾಗಿ ಇವರು ಸುಲಭವಾಗಿ ಸ್ನೇಹಿತರನ್ನು ಗಳಿಸುತ್ತಾರೆ. ಆದರೆ ಕೆಲವೊಮ್ಮೆ ಇವರನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವುದು ಇತರರಿಗೆ ಅಷ್ಟು ಸುಲಭವಾಗದ ಕಾರಣ ಗಳಿಸಿದ ನಂಬಿಕೆಯನ್ನು ಉಳಿಸಿಕೊಳ್ಳಲು ವಿಫಲರಾಗುತ್ತಾರೆ.

ಹೆಚ್ಚಿನ ಸಂದರ್ಭಗಳಲ್ಲಿ ಇವರು ನಿಗೂಢರಾಗಿ, ಇತರರ ಕುತೂಹಲಕ್ಕೆ ಕಾರಣರಾಗುತ್ತಾರೆ. ಪರಿಣಾಮವಾಗಿ ಇತರರು ಇವರ ಬಗ್ಗೆ ಇಲ್ಲದ್ದನ್ನು ಕಲ್ಪಿಸಿಕೊಂಡು ಸುಳ್ಳುಸುದ್ದಿ ಹರಡಬಹುದು. ಇನ್ನೊಂದು ಕಡೆಯಿಂದ ನೋಡಿದರೆ ಇವರು ನೇರವಾಗಿ, ಸ್ಪಷ್ಟ ಮಾತುಗಳಿಂದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವವರೂ ಆಗಿರುತ್ತಾರೆ. ಅಲ್ಲದೇ ಇವರು ಉತ್ತಮ ವಾಗ್ಮಿಗಳೂ ಆಗಿರುತ್ತಾರೆ.

ಈ ವ್ಯಕ್ತಿಗಳು ಕಲ್ಪನೆಗಿಂತ ವಾಸ್ತವಕ್ಕೇ ಹೆಚ್ಚಿನ ಪ್ರಾಶಸ್ತ್ಯ ನೀಡುವವರಾಗಿರುತ್ತಾರೆ. ಇವರು ತಾರ್ಕಿಕವಾಗಿ ಯೋಚಿಸುವ, ಎದುರಿನವರು ಹೇಳುವುದನ್ನು ಗಮನವಿಟ್ಟು ಕೇಳುವ, ಹೆಚ್ಚಿನ ಮಾಹಿತಿಗಳನ್ನು ಹೊಂದಿರುವ, ಇತರರ ಗೌರವ ಪಡೆಯುವ, ಜವಾಬ್ದಾರಿಯುತ ಹಾಗೂ ಉತ್ತಮ ಪ್ರೇಮಿಗಳೂ ಆಗಿರುತ್ತಾರೆ.

ಇವರು ವಿಶ್ವಾಸವನ್ನು ಉಳಿಸಿಕೊಳ್ಳುವ, ಸಹಾನುಭೂತಿಯುಳ್ಳ ಹಾಗೂ ಮಮತಾಮಯಿಗಳೂ ಆಗಿರುತ್ತಾರೆ. ಆದರೆ ಮೊದಲು ಬಂದವನಿಗೇ ಸೀರುಂಡೆ ಎಂಬ ಪರಿಸ್ಥಿತಿ ಎದುರಾದಾಗ ಅಥವಾ ಸಾಮಾಜಿಕ ವಲಯದಲ್ಲಿ ಹೆಚ್ಚಿನ ಗಮನ ಸೆಳೆಯುವ ಅವಕಾಶ ಎದುರಾದರೆ ಎಲ್ಲರನ್ನೂ ಬಿಟ್ಟು ಮೊದಲು ತಲುಪಲು ದೌಡಾಯಿಸುತ್ತಾರೆ.

ತಮ್ಮನ್ನು ತಾವೇ ಇನ್ನಷ್ಟು ಉತ್ತಮಪಡಿಸಲು ಇವರು ತಮ್ಮ ಸ್ವಭಾವಗಳನ್ನು ಬದಲಿಸಿಕೊಳ್ಳಲು ಸದಾ ಸಿದ್ಧರಿರುತ್ತಾರೆ. ಇವರು ತಮ್ಮ ಗುಣಲಕ್ಷಣಗಳಿಗೆ ಹೊಂದುವಂತಹ ಜೀವನಸಂಗಾತಿಯನ್ನೇ ಪಡೆಯಬಯಸುತ್ತಾರೆ. ಇನ್ನೊಂದು ಮಗ್ಗುಲಲ್ಲಿ, ಇವರು ತೆರೆದ ಮನಸ್ಸಿನ ವ್ಯಕ್ತಿಗಳಾಗಿದ್ದು ಸಂಗಾತಿಯ ಮನಗೆಲ್ಲುವ ಪ್ರಣಯಿಗಳೂ ಆಗಿರುತ್ತಾರೆ.

Leave a Comment