5 ಪೈಸೆ ಖರ್ಚು ಇಲ್ಲದೆ ಮನೆಯಲ್ಲೇ ತಯಾರಿಸಿ ಪಾತ್ರೆ ತೊಳೆಯುವ ಲಿಕ್ವಿಡ್!

ಈ ಒಂದು ಸೀಕ್ರೆಟ್ ತಿಳಿದರೆ ನಿಮಗೆ ಬಹಳ ಉಳಿತಾಯ ಆಗುತ್ತದೆ. ಪಾತ್ರೆ ತೊಳೆಯುವುದು ಎಲ್ಲರಿಗೂ ದೊಡ್ಡ ಕೆಲಸ. ಅದರಲ್ಲೂ ಪಾತ್ರೆ ತೊಳೆಯುವ ಸೋಪ್ ಒಂದು ವಾರ ಕೂಡ ಬರುವುದಿಲ್ಲ. ಇನ್ನು ಲಿಕ್ವಿಡ್ ಸೋಪ್ ತುಂಬಾನೇ ದುಬಾರಿ. ಇದನ್ನು ಬಳಸಿದರೆ ಕೂಡ ಬೇಗನೇ ಖಾಲಿ ಆಗುತ್ತದೆ. ಮನೆಯಲ್ಲಿ ಮಾಡುವ ಸಣ್ಣ ಪುಟ್ಟ ಬದಲಾವಣೆಯಿಂದ ಕೊಂಚವಾದ್ರೂ ಹಣದ ಉಳಿತಾಯ ಮಾಡಬಹುದು. ಸೋಪ್ ಬಳಸುತ್ತಾ ಕರಗುತ್ತದೆ. ಅದಕ್ಕಾಗಿ ಮೊದಲು ಸೋಪ್ ಅನ್ನು ತುರಿದುಕೊಂಡು ಡಬ್ಬದಲ್ಲಿ ಹಾಕಿಕೊಳ್ಳಿ.

ಇನ್ನು ಪಾತ್ರೆ ತೊಳೆಯುವಾಗ ಎಷ್ಟು ಬೇಕೋ ಅಷ್ಟು ಪುಡಿಯನ್ನು ಹಾಕಿಕೊಂಡು ನೀರನ್ನು ಹಾಕಿಕೊಳ್ಳಿ.ಲಿಕ್ವಿಡ್ ತರ ಈ ಲಿಕ್ವಿಡ್ ಸೋಪ್ ಅನ್ನು ತಯಾರಿಸಿಕೊಳ್ಳಿ. ಇದರಿಂದ ಪಾತ್ರೆ ತೊಳೆಯಿರಿ. ಪಾತ್ರೆ ಕೂಡ ಚೆನ್ನಾಗಿ ಕ್ಲೀನ್ ಆಗುತ್ತದೆ ಹಾಗು ಸೋಪ್ ನ ಕಲೆ ಕೂಡ ಪಾತ್ರೆಯಲ್ಲಿ ಉಳಿಯುವುದಿಲ್ಲ. ಇದರಿಂದ ಸೋಪ್ ಕರಗುವುದಿಲ್ಲ ಹಾಗು ಉಳಿತಾಯ ಕೂಡ ಆಗುತ್ತದೆ. ತಪ್ಪದೆ ಈ ಟಿಪ್ಸ್ ಫಾಲೋ ಮಾಡಿ ಹಣ ವೇಸ್ಟ್ ಆಗುವುದು ನಿಲ್ಲುತ್ತದೆ.

ದೇವರ ಪೂಜಾ ಸಾಮಗ್ರಿಗಳನ್ನು ಸಹ ತೊಳೆಯಬಹುದು. ಇನ್ನೂ ಹಿತ್ತಾಳೆ ಪೂಜಾ ಸಾಮಗ್ರಿಗಳು ತೊಳೆಯುವುದಕ್ಕೆ ಒಂದು ಬೌಲ್ ಉಪ್ಪು ಲೆಮನ್ ಸಾಲ್ಟ್ ಮತ್ತು ನಿಂಬೆ ರಸ ಹಾಕಿ ಮಿಕ್ಸ್ ಮಾಡಿ ಪೂಜ ಸಾಮಾನು ತೊಳೆದರೆ ತುಂಬಾನೇ ಸ್ವಚ್ಛವಾಗುತ್ತದೆ.

ಇನ್ನು ತಳ ಹಿಡಿದ ಪಾತ್ರೆ ತೊಳೆಯದು ತುಂಬಾ ಕಷ್ಟ . ಇದಕ್ಕೆ ತಳ ಹಿಡಿದಿರುವ ಪಾತ್ರೆಗೆ ನೀರು ಮತ್ತು ಸೋಪ್ ಪುಡಿ ಹಾಕಿ ಎರಡು ನಿಮಿಷ ಹಾಗೆ ಬಿಸಿ ಆಗುವುದಕ್ಕೆ ಬಿಡಿ. ನಂತರ ಉಜ್ಜಿದರೆ ಪಾತ್ರೆ ಚೆನ್ನಾಗಿ ಕ್ಲೀನ್ ಆಗಿರುತ್ತದೆ. ಈ ಟಿಪ್ಸ್ ಫಾಲೋ ಮಾಡಿದರೆ ಕೆಲಸಗಳು ಕೂಡ ಸುಲಭವಾಗುತ್ತದೆ.

Leave a Comment