7 ಜನವರಿ ಸಫಲ ಏಕಾದಶಿ ಈ ಸ್ಥಳದಲ್ಲಿ 1 ಮುಟ್ಟಿಗೆ ಕೊತ್ತಂಬರಿ ಕಾಳು ಎಸೆದುಬಿಡಿ ಧನ ಸಂಪತ್ತು ನೀರಿನಂತೆ ಬರುವುದು!

ಪ್ರತೀ ತಿಂಗಳು 2 ಏಕಾದಶಿ ವ್ರತಗಳಿರುತ್ತವೆ. ಒಂದು ಏಕಾದಶಿಯನ್ನು ತಿಂಗಳ ಕೃಷ್ಣ ಪಕ್ಷದಲ್ಲಿ ಮತ್ತು ಇನ್ನೊಂದು ಏಕಾದಶಿ ವ್ರತವನ್ನು ತಿಂಗಳ ಶುಕ್ಲ ಪಕ್ಷದಲ್ಲಿ ಆಚರಿಸಲಾಗುತ್ತದೆ. ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಏಕಾದಶಿ ವ್ರತವನ್ನು ಸಫಲಾ ಏಕಾದಶಿ ಎಂದು ಕರೆಯಲಾಗುತ್ತದೆ. 2024 ರ ಸಫಲಾ ಏಕಾದಶಿ ವ್ರತವು ವರ್ಷದ ಮೊದಲ ಏಕಾದಶಿ ವ್ರತವಾಗಿದ್ದು, ಈ ಬಾರಿ ಸಫಲಾ ಏಕಾದಶಿಯನ್ನು ಜನವರಿ 7 ರಂದು ಭಾನುವಾರ ಆಚರಿಸಲಾಗುತ್ತದೆ. ಏಕಾದಶಿಯ ದಿನದಂದು ಲೋಕ ರಕ್ಷಕನಾದ ವಿಷ್ಣುವನ್ನು ಪೂಜಿಸುವುದರಿಂದ ಶುಭ ಫಲಗಳು ದೊರೆಯುತ್ತವೆ ಎಂಬ ನಂಬಿಕೆಯಿದೆ. ನಿಂತು ಹೋದ ಕೆಲಸಗಳು ಕೂಡ ಪೂರ್ಣಗೊಳ್ಳುತ್ತದೆ. ಮತ್ತು ಎಲ್ಲಾ ರೀತಿಯ ಸಮಸ್ಯೆಗಳಿಂದ ನಿಮಗೆ ಪರಿಹಾರ ದೊರೆಯುತ್ತದೆ.

​ಸಫಲಾ ಏಕಾದಶಿ ಪೂಜೆ ಸಾಮಾಗ್ರಿ​

  • ವಿಷ್ಣು ಮತ್ತು ತಾಯಿ ಲಕ್ಷ್ಮಿಯ ವಿಗ್ರಹ ಅಥವಾ ಫೋಟೋ
  • ಪೂಜೆ ಪೀಠ
  • ಹಳದಿ ಬಟ್ಟೆ
  • ಹಣ್ಣು
  • ಹಳದಿ ಬಣ್ಣದ ಹೂವು
  • ಸಿಹಿತಿಂಡಿ
  • ಮಾವಿನ ಎಲೆಗಳು
  • ಕುಂಕುಮ
  • ಧೂಪ
  • ದೀಪ
  • ಅಕ್ಷತೆ
  • ಪಂಚಮೇವ
  • ಪಂಚಾಮೃತ

​ಸಫಲಾ ಏಕಾದಶಿ 2024 ಶುಭ ಮುಹೂರ್ತ​

  • ಏಕಾದಶಿ ತಿಥಿ ಆರಂಭ – 2024 ಜನವರಿ 7 ರಂದು ಮಧ್ಯರಾತ್ರಿ 12:41 ರಿಂದ
  • ಏಕಾದಶಿ ತಿಥಿ ಮುಕ್ತಾಯ – 2024 ರ ಜನವರಿ 8 ರಂದು ಮಧ್ಯರಾತ್ರಿ 12:46 ರವರೆಗೆ
  • ಪಾರಣ ಸಮಯ – 2024 ರ ಜನವರಿ 8 ರಂದು ಮುಂಜಾನೆ 6:34 ರಿಂದ ಬೆಳಗ್ಗೆ 8:35 ರವರೆಗೆ
  • ಹರಿ ವಾಸರ ಅಂತ್ಯದ ಕ್ಷಣ – 2024 ರ ಜನವರಿ 8 ರಂದು ಮುಂಜಾನೆ 6:34 ಕ್ಕೆ

ಈ ಒಂದು ಸಫಲ ಏಕಾದಶಿ ದಿನ ಒಂದು ಮುಷ್ಠಿ ಕೊತ್ತಂಬರಿ ಕಾಳಿನಿಂದ ಈ ಒಂದು ಉಪಾಯ ಮಾಡಿ. ಸಫಲ ಏಕಾದಶಿ ದಿನ ಸೂರ್ಯಸ್ತಾ ಅದಬಳಿಕ ಸ್ನಾನ ಮಾಡಿ ಒಂದು ಕೆಂಪು ಬಟ್ಟೆಯನ್ನು ತೆಗೆದುಕೊಂಡು ಒಂದು ಮುಷ್ಠಿ ಕೊತ್ತಂಬರಿ ಕಾಳನ್ನು ಹಾಕಿ ಹಾಗು ಒಂದು ಬೆಳ್ಳಿಯ ನಾಣ್ಯವನ್ನು ಇಡಬೇಕು. ಬೆಳ್ಳಿ ನಾಣ್ಯದಲ್ಲಿ ಲಕ್ಷ್ಮಿ ದೇವಿಯ ಕಾಲ ಚಿತ್ರ ಇರಬೇಕು.

ನಂತರ ಇವುಗಳನ್ನು ಕೈಯಲ್ಲಿ ಇಟ್ಟುಕೊಂಡು ತಾಯಿ ಲಕ್ಷ್ಮಿ ದೇವಿಯ ಬೀಜ ಮಂತ್ರವನ್ನು ” ಓಂ ಮಹಾಲಕ್ಷ್ಮಿ ನಮಃ ” 11ಬಾರಿ ಜಪ ಮಾಡಬೇಕು. ನಂತರ ಕೆಂಪು ಬಟ್ಟೆಯನ್ನು ಕಟ್ಟಬೇಕು.ಈ ಉಪಾಯ ಮಾಡಿದ ನಂತರ ಧನ ಸಂಪತ್ತಿನಲ್ಲಿ ವೃದ್ದಿ ಆಗುವುದನ್ನು ನೀವೇ ಸ್ವತಃ ನೋಡುತ್ತೀರಾ.

ಇನ್ನು ಏಕಾದಶಿ ದಿನ ಬೆಳಗ್ಗೆ ಸ್ನಾನ ಮಾಡಿ ಹಳದಿ ಬಣ್ಣದ ಬಟ್ಟೆಯನ್ನು ತೆಗೆದುಕೊಳ್ಳಬೇಕು.ಹಳದಿ ಬಟ್ಟೆಯಲ್ಲಿ ಒಂದು ಮುಷ್ಠಿ ಕೊತ್ತಂಬರಿ ಕಾಳನ್ನು ಇಡಬೇಕು. ನಂತರ ಮನೆಯ ದೇವರ ಕೊಣೆಯಲ್ಲಿ ಹೋಗಬೇಕು. ಭಗವಂತನಾದ ಮಹವಿಷ್ಣುವಿನ ಮಂತ್ರವನ್ನು ಜಪ ಮಾಡಬೇಕು.

ಓಂ ನಮೋ ಭಾಗವತೆ ವಾಸುದೇವಯ ನಮಃ

ಈ ಒಂದು ಮಂತ್ರವನ್ನು 11 ಬಾರಿ ಜಪ ಮಾಡಬೇಕು. ಈ ರಿತು ಮಾಡಿ ಗಂಟನ್ನು ಕಟ್ಟಬೇಕು.ಇದನ್ನು ಹೆಚ್ಚು ಸಮಯ ಕಾಣುವ ಪೂರ್ವ ದಿಕ್ಕಿನ ಕಡೆಗೆ ಇಡಬೇಕು.ಕೇವಲ ಇಷ್ಟು ಚಿಕ್ಕ ಉಪಾಯ ಈ ಏಕಾದಶಿ ದಿನ ಮಾಡಿದರು ಇಡೀ ವರ್ಷ ನಿಮಗೆ ಭಾಗ್ಯ ಸತ್ ಕೊಡುತ್ತದೆ.ವಿಷ್ಣುವಿನ ಆಶೀರ್ವಾದದಿಂದ ನಿಮ್ಮ ನವಗ್ರಹಗಳು ನಿಮಗೆ ಸತ್ ಕೊಡಲು ಶುರು ಮಾಡುತ್ತವೆ. ನಂತರ ನೀವು ಯಾವುದೇ ನಿರ್ಣಯ ತೆಗೆದುಕೊಂಡರು ಅದರಿಂದ ನಿಮಗೆ ಕೇವಲ ಲಾಭ ನಿಮಗೆ ಸಿಗುತ್ತದೆ.

​ಸಫಲಾ ಏಕಾದಶಿ ಮಹತ್ವ​

ಸನಾತನ ಧರ್ಮದಲ್ಲಿ ಏಕಾದಶಿ ವ್ರತಕ್ಕೆ ಹೆಚ್ಚಿನ ಮಹತ್ವವಿದೆ. ಸಫಲ ಏಕಾದಶಿ ವ್ರತವನ್ನು ಆಚರಿಸುವುದರಿಂದ ವ್ಯಕ್ತಿಯ ನಿಂತುಹೋದ ಅಥವಾ ಎಲ್ಲಾ ಅಪೂರ್ಣ ಕೆಲಸಗಳು ಕೂಡ ಪೂರ್ಣಗೊಳ್ಳುತ್ತದೆ. ಆದುದರಿಂದ ಈ ವ್ರತವನ್ನು ಸಫಲಾ ಏಕಾದಶಿ ಎಂದು ಕರೆಯಲಾಗುತ್ತದೆ. ಇದು ನಿಮ್ಮ ಜೀವನದ ಪ್ರತಿಯೊಂದು ತೊಂದರೆಗಳಿಗೂ ಪರಿಹಾರವನ್ನು ನೀಡುತ್ತದೆ. ಒಟ್ಟಾರೆಯಾಗಿ ಜೀವನದಲ್ಲಿ ಸಂತೋಷ ಮತ್ತು ಸಂಪತ್ತನ್ನು ಸಾಧಿಸಲು ಇದು ಸಹಾಯ ಮಾಡುತ್ತದೆ. ಏಕಾದಶಿಯ ದಿನದಂದು ಲಕ್ಷ್ಮಿ ದೇವಿಯನ್ನು ವಿಷ್ಣುವಿನ ಜೊತೆಗೆ ಪೂಜಿಸಲಾಗುತ್ತದೆ.

Leave a Comment