ಮನೆಯಲ್ಲಿ ಇರುವ ಸಮಸ್ಸೆಗಳನ್ನು ತುಂಬಾ ಬೇಗ ನಿವಾರಣೆ ಮಾಡಬೇಕು ಎಂದರೆ ಕೆಲವರು ಸಂಕಲ್ಪ ಮಾಡಿಕೊಳ್ಳುತ್ತಾರೆ. ಹಾಗಾಗಿ ಈ ಅಮಾವಾಸ್ಯೆ ದಿನ ಶುರು ಮಾಡಿದರೆ ತುಂಬಾ ಒಳ್ಳೆಯದು. ಸಂಕಲ್ಪ ಮಾಡಿಕೊಂಡು ವ್ರತದ ರೀತಿ 48 ದಿನ ಒಂದು ಮಂಡಲದ ರೀತಿ ಕನಕಧಾರಸ್ತೋತ್ರ ವನ್ನು ಪಟನೆ ಮಾಡಬೇಕು ಅಥವಾ ಸಂಕಲ್ಪ ಮಾಡದೇ ಪ್ರತಿ ದಿನ ಪೂಜೆ ಮಾಡಿದ ನಂತರ ಕನಕಧಾರಸ್ತೋತ್ರ ವನ್ನು ಪಟನೆ ಮಾಡಬಹುದು. ಬೆಳಗ್ಗೆ 4:30 ಯಿಂದ 6:30 ಒಳಗೆ ಪೂಜೆ ಮಾಡಿ ಕನಕಧಾರಸ್ತೋತ್ರವನ್ನು ಪಟನೆ ಮಾಡಬೇಕು.
ಅಥವಾ ಸೂರ್ಯಸ್ತ ಸಮಯದಲ್ಲಿ 5:30 ರಿಂದ 6:30 ಒಳಗೆ ಕನಕಧಾರಸ್ತೋತ್ರ ವನ್ನು ಪಟನೆ ಮಾಡಬೇಕು. ಮೊದಲು ಓದಲು ಪ್ರಾರಂಭ ಮಾಡುವವರು ಅಮಾವಾಸ್ಯೆ ದಿನ ಶುರು ಮಾಡಿದರೆ ಒಳ್ಳೆಯದು. ಜನವರಿ 11ನೇ ತಾರೀಕು 2024 ಗುರುವಾರ ಅಮಾವಾಸ್ಯೆ ಬಂದಿದೆ. ಅದರೆ ಅಮಾವಾಸ್ಯೆ ತಿಥಿ ಸಂಜೆ 5:20 ನಿಮಿಷಕ್ಕೆ ಮುಕ್ತಯ ಆಗುತ್ತದೆ. ಶುರು ಮಾಡುವವರು ಗುರುವಾರ ಬೆಳಗ್ಗೆ ಯಿಂದ ಶುರು ಮಾಡಿದರೆ ಒಳ್ಳೆಯದು. ಸಂಜೆ ಮಾಡಿದರೆ ಅಮಾವಾಸ್ಯೆ ತಿಥಿ ಸಿಗುವುದಿಲ್ಲ.
ಆದಷ್ಟು ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಮಾತ್ರ ಕನಕಧಾರಸ್ತೋತ್ರವನ್ನು ಪಟನೆ ಮಾಡಬೇಕು. ಮಧ್ಯಾಹ್ನ ಸಮಯದಲ್ಲಿ ಯಾವುದೇ ಕಾರಣಕ್ಕೂ ಕನಕಧಾರಸ್ತೋತ್ರ ಓದುವುದಕ್ಕೆ ಹೋಗಬೇಡಿ. ವ್ರತ ಮಾಡಲು ಶುರು ಮಾಡಿದ ಮೇಲೆ ಮಾಂಸಹಾರ ಸೇವನೆಯನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಇದು ಬೇಗನೇ ಫಲ ಕೊಡುವ ವ್ರತ ಎಂದು ಹೇಳಬಹುದು. ಸರಳವಾಗಿ ಪೂಜೆ ಮಾಡಿ ಪ್ರತಿದಿನ ಕನಕದಾಸ ಸೋತ್ರವನ್ನು ಓದಬೇಕು. ಪಿರೇಡ್ಸ್ ಸಮಯದಲ್ಲಿ ನಿಲ್ಲಿಸಿ ಮತ್ತೆ ಶುರು ಮಾಡಬಹುದು ಹಾಗು ಸೂತಕ ಬಂದರೆ ಅಲ್ಲೇ ನಿಲ್ಲಿಸಿ ಮತ್ತೆ ಮುಂದುವರೆಸುವುದಕ್ಕೆ ಹೋಗಬೇಡಿ. ಹಾಗಾಗಿ ಇಂತಹ ಯಾವುದೇ ತೊಂದರೆ ಬರಬಾರದು ಎಂದು ಗಣಪತಿಯನ್ನು ಬೇಡಿಕೊಂಡು ವ್ರತವನ್ನು ಶುರು ಮಾಡಿ.ಒಳ್ಳೆ ತಿಥಿ ನಕ್ಷತ್ರವನ್ನು ನೋಡಿಕೊಂಡು ಕನಕಧಾರಸ್ತೋತ್ರ ವನ್ನು ಓದಬಹುದು.