ಮನೆ ದೇವರ ಪೂಜೆ ಮಾಡಿಸುವುದಕ್ಕೆ ಹೋಗುವಾಗ ಈ ಚಿಕ್ಕ ಉಪಾಯ ಮಾಡಿ. ಕುಲದೇವರು ಸ್ವತಃ ನಿಮ್ಮ ಜೊತೆ ಬಂದು ನಿಮ್ಮ ಮನೆಯಲ್ಲಿ ವಾಸವಿದ್ದು ಅರೋಗ್ಯ ಸಂಪತ್ತು ಕರುಣಿಸುತ್ತಾರೆ. ಹಿಂದೂ ಧರ್ಮ ಸಂಸ್ಕೃತಿ ಪ್ರಕಾರ ಪ್ರತಿಯೊಬ್ಬರ ಮನೆಯಲ್ಲೂ ಮನೆ ದೇವರು ಕುಲ ದೇವರು ಇದ್ದೆ ಇರುತ್ತಾರೆ. ವರ್ಷಕ್ಕೆ ಒಮ್ಮೆ ಯಾದರು ಕುಲ ದೇವರ ಸ್ಥಾನಕ್ಕೆ ಹೋಗೀ ಪೂಜೆ ಮಾಡಿಸಿಕೊಂಡು ಬರುತ್ತಾರೆ. ಇದ್ರಿಂದ ಮನೆಯಲ್ಲಿ ಒಳ್ಳೆಯದೇ ಆಗುತ್ತದೆ.
ದೇವಸ್ಥಾನ ಮುಂದೆ ಇರುವ ತೆಂಗಿನಕಾಯಿ ಅಂಗಡಿ ಅಥವಾ ಲಡ್ಡು ಅಂಗಡಿಯಲ್ಲಿ ಅವುಗಳನ್ನು ಬುಟ್ಟಿಯಲ್ಲಿ ಖರೀದಿಸಿ ದೇವರಿಗೆ ಸಮರ್ಪಣೆ ಮಾಡಬೇಕು. ಇದರಿಂದ ಮನೆ ದೇವರು ಕೋಪಗೊಳ್ಳುವುದು ಖಚಿತ. ಏಕೆಂದರೆ ಆ ದೈವ ನಿಮ್ಮ ಕುಲ ದೇವರು ಮನೆ ದೇವರು ಹಾಗಾಗಿ ಕುಲ ದೇವರಿಗೆ ಪ್ರಸಾದ ಅರ್ಪಿಸುವಾಗ ಮನೆಯಿಂದ ನೀವು ಶುದ್ಧವಾಗಿ ಮಡಿಯಿಂದ ನೈವೇದ್ಯ ತಯಾರಿಸಿಕೊಂಡು ಹೋಗೀ ಅರ್ಪಣೆ ಮಾಡಬೇಕು. ಇನ್ನು ಬಾಳೆ ಹಣ್ಣು ಹೂವಿನ ಮಾಲೆ ದೇವಸ್ಥಾನದಲ್ಲಿ ಖರೀದಿ ಮಾಡಬಹುದು.
ಮನೆದೇವರಿಗೆ ಹೋಗುವ ಮೊದಲು ಮನೆಯಲ್ಲಿ ಇರುವ ದೇವರಿಗೆ ಪೂಜೆ ಮಾಡಿ ದೇವರ ಬಳಿ ಕೇಳಿಕೊಳ್ಳಬೇಕು. ಕುಲ ದೇವರು ನಿಮ್ಮನ್ನು ರಕ್ಷಿಸುವುದರಿಂದ ದಾರಿಯಲ್ಲಿ ಯಾವುದೇ ಅಪಘಾತ ಸಂಭವಿಸುವುದಿಲ್ಲ. ಏಕೆಂದರೆ ನೀವು ಮನೆ ದೇವರ ದರ್ಶನಕ್ಕೆ ಬರುತ್ತಿದ್ದಿರಿ ಎಂದು ಅವರಿಗೆ ಗೊತ್ತಿರುತ್ತದೆ. ದೇವಸ್ಥಾನಕ್ಕೆ ಹೋದಾಗ ಅಲ್ಲಿ ಸ್ನಾನ ಮಾಡಿ ಅರ್ಚಕರಿಗೆ ಈ ಪ್ರಸಾದವನ್ನು ಅರ್ಪಿಸಿ ಅದರಲ್ಲಿ ಸ್ವಲ್ಪ ವಾಪಾಸ್ ನಿಮಗೆ ಕೊಡುವುದಕ್ಕೆ ಹೇಳಿ. ನಂತರ ದೇವರ ಹತ್ತಿರ ಮೂರು ಬಾರಿ ಪ್ರಾರ್ಥನೆ ಮಾಡಿ. ನೀವು ನಮ್ಮ ಕುಲ ದೇವರು ಈ ಪ್ರಸಾದವನ್ನು ಮನೆ ಯಿಂದಲೇ ತಯಾರಿಸಿ ತಂದಿದ್ದೇನೆ ದಯವಿಟ್ಟು ನಮ್ಮನ್ನು ಆಶೀರ್ವಾದಿಸಿ ಮತ್ತು ಪ್ರತಿದಿನ ಈ ನೈವೇದ್ಯವನ್ನು ಸ್ವೀಕರಿಸುವುದಕ್ಕೆ ನಮ್ಮ ಮನೆಗೆ ಬಂದು ಆಶೀರ್ವದಿಸಿ ಎಂದು ಪ್ರಾರ್ಥನೆ ಮಾಡಿ. ನಂತರ ನೀವು ಮನೆಗೆ ಹೊರಡುವಾಗ ದೇವರು ನಿಮ್ಮ ಹಿಂದೆಯೇ ನಿಮ್ಮ ಮನೆಗೆ ಬರುತ್ತರೆ ಎಂದು ಹೇಳಲಾಗುತ್ತದೆ.