ಕಪ್ಪುದ್ರಾಕ್ಷಿ ಎಂದ ಕೂಡಲೇ ನೆನಪಿಗೆ ಬರುವುದು ಈ ದ್ರಾಕ್ಷಿಯನ್ನು ವೈನ್ ತಯಾರು ಮಾಡುವಾಗ ಬಳಸುತ್ತಾರೆ. ಅದರೆ ಇದು ಕೇವಲ ವೈನ್ ಗೆ ಮಾತ್ರ ಸೀಮಿತವಲ್ಲ. ಈ ಕಪ್ಪು ದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ಅರೋಗ್ಯಕ್ಕೂ ಕೂಡ ಅಷ್ಟೇ ಲಾಭವಿದೆ.ಕಪ್ಪು ದ್ರಾಕ್ಷಿ ಸೇವನೆ ಮಾಡುವುದರಿಂದ ಈ ರೀತಿಯ ಉಪಯೋಗಗಳು ಸಿಗುತ್ತದೆ.
1,ಕಪ್ಪು ದ್ರಾಕ್ಷಿಯಲ್ಲಿ ಎನರ್ಜಿ, ಕ್ಯಾಲೋರೀಸ್, ಪ್ರೊಟೀನ್ ಮತ್ತು ಕಾರ್ಬೋಹೈಡ್ರೇಟ್, ಸೋಡಿಯಂ, ಫೈಬರ್, ಪೊಟ್ಯಾಷಿಯಂ, ವಿಟಮಿನ್ ಸಿ ಹಾಗೂ ವಿಟಮಿನ್ ಕೆ ಇದೆ. ಇನ್ನು ಮುಂತಾದ ಪೌಷ್ಟಿಕಾಂಶಗಳು ಈ ಕಪ್ಪು ದ್ರಾಕ್ಷಿಯಲ್ಲಿದೆ.
2, ಕಪ್ಪು ದ್ರಾಕ್ಷಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಿಮ್ಮ ಕಣ್ಣಿನ ದೃಷ್ಟಿ ಉತ್ತಮವಾಗುತ್ತದೆ. ಈ ಕಪ್ಪು ದ್ರಾಕ್ಷಿಯಲ್ಲಿ ಕ್ಯಾರೋಟಿನ್ ಎಂಬ ಪೋಷಕಾಂಶವಿದೆ. ಇದು ನಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಲು ತುಂಬಾನೇ ಅಗತ್ಯವಾಗಿರುತ್ತದೆ. ಇದನ್ನು ನೀವು ನಿಯಮಿತವಾಗಿ ಸೇವನೆ ಮಾಡುವುದರಿಂದ ನಿಮ್ಮ ಕಣ್ಣಿಗೆ ರಕ್ಷಣೆಯನ್ನು ಒದಗಿಸಿ ಕುರುಡುತನದ ಸಮಸ್ಯೆಗಳನ್ನು ತಡೆಗಟ್ಟುತ್ತದೆ.
3, ಕಪ್ಪು ದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡ ಸಮಸ್ಯೆ ಕೂಡ ಕಡಿಮೆಯಾಗುತ್ತದೆ. ಇದರಲ್ಲಿ ಫೋಟೊಸಿಯಂ ಅಂಶ ಹೆಚ್ಚಿರುವ ಕಾರಣ ಇದು ನಿಮ್ಮ ದೇಹದಲ್ಲಿರುವ ಸೋಡಿಯಂ ಪ್ರಮಾಣವನ್ನು ತಗ್ಗಿಸಲು ಕೆಲಸ ಮಾಡುತ್ತದೆ.
4, ಕಪ್ಪು ದ್ರಾಕ್ಷಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಹೃದಯದ ಆರೋಗ್ಯಕ್ಕೂ ಕೂಡ ಒಳ್ಳೆಯದು. ಇದರಲ್ಲಿರುವ ಉತ್ತಮವಾದ ಪೋಷ್ಟಿಕಾಂಶ ಹೃದಯದ ಮೇಲೆ ಉಂಟಾಗುವ ಹಾನಿಯನ್ನು ತಡೆಗಟ್ಟುತ್ತದೆ. ವಿಶೇಷವಾಗಿ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೊರಹಾಕುತ್ತದೆ. ಅಷ್ಟೇ ಅಲ್ಲದೆ ಇದು ದೇಹದಲ್ಲಿ ಕೊಬ್ಬಿನ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
5, ಈ ದ್ರಾಕ್ಷಿಯಲ್ಲಿ ಫೈಟೊ ಕೆಮಿಕಲ್ ಅಂಶ ಇರುವುದರಿಂದ ಬಾಯಿಯ ಆರೋಗ್ಯವನ್ನು ಕಾಪಾಡುತ್ತದೆ. ಒಂದು ವೇಳೆ ಒಸಡಿನ ಆರೋಗ್ಯ ಹಾಳಾಗಿದ್ದರೆ ಅಲ್ಲಿ ಕೆಟ್ಟ ಬ್ಯಾಕ್ಟೀರಿಯಾ ಬೆಳವಣಿಗೆ ಆಗುವ ಸಾಧ್ಯತೆ ಇರುತ್ತದೆ. ಒಂದು ವೇಳೆ ನಿಯಮಿತವಾಗಿ ಕಪ್ಪು ದ್ರಾಕ್ಷಿ ಸೇವನೆ ಮಾಡಿದರೆ ಒಸಡಿನ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ನಿಮ್ಮ ಬಾಯಿಯ ಆರೋಗ್ಯವನ್ನು ಕೂಡ ಉತ್ತಮವಾಗಿ ಇಟ್ಟುಕೊಳ್ಳಬಹುದು.
6, ಕಪ್ಪು ದ್ರಾಕ್ಷಿಯಲ್ಲಿ ಉತ್ತಮವಾದ ಪೌಷ್ಟಿಕಾಂಶ ಇರುವುದರಿಂದ ಇದು ಸ್ತನ ಕ್ಯಾನ್ಸರ್ ಮತ್ತು ಎಲ್ಲಾ ರೀತಿಯ ಕ್ಯಾನ್ಸರ್ ಅನ್ನು ಎದುರಿಸಲು ತುಂಬನೇ ಪರಿಣಾಮಕಾರಿಯಾಗಿರುತ್ತದೆ.
7, ಅಷ್ಟೇ ಅಲ್ಲದೆ ನಿಮ್ಮ ಚರ್ಮದ ಅರೋಗ್ಯವನ್ನು ಕೂಡ ಹೆಚ್ಚಿಸುತ್ತದೆ. ಆದಷ್ಟು ಕಪ್ಪುದ್ರಾಕ್ಷಿ ಸಿಕ್ಕಾಗ ಸೇವನೆ ಮಾಡಿ. ಸಿಗದಿದ್ದರೆ ಒಣ ಕಪ್ಪು ದ್ರಾಕ್ಷಿಯನ್ನು ಸೇವನೆ ಮಾಡಿದರೆ ಅಷ್ಟೇ ಇದರ ಆರೋಗ್ಯದ ಲಾಭವನ್ನು ಪಡೆಯಬಹುದು.