ಸಕ್ಕರೆ ಕಾಯಿಲೆ ಇದ್ದವರು ಶುಂಠಿ ಬೇರು ತಿಂತಿರಾ!

ಆಯುರ್ವೇದದಲ್ಲಿ ಶುಂಠಿ ಬೇರನ್ನು ಬಹುತೇಕ ಔಷಧಿಗಳಲ್ಲಿ ಬಳಸಲಾಗಿದೆ. ಶುಂಠಿಯಂಥ ಸಾಮಾನ್ಯ ಬೇರಿನ ಅಸಾಮಾನ್ಯ ಗುಣಗಳ ಬಗ್ಗೆ ತಿಳಿದುಕೊಂಡು ಹೇಗೆಲ್ಲ ಮನೆಮದ್ದಾಗಿ ಬಳಸಿಕೊಳ್ಳಬಹುದು ಎಂಬುದನ್ನು ನೋಡೋಣ.

ಶುಂಠಿ ಎಂಬ ನೆಲದಡಿಯ ಬೇರು ನಮ್ಮ ನಿತ್ಯ ಜೀವನದ ಉಪಯೋಗಗಳಲ್ಲಿ ಸಾಕಷ್ಟು ಬೆರೆತು ಹೋಗಿದೆ. ಕೇವಲ ಅಡುಗೆಗಷ್ಟೇ ಅಲ್ಲ, ಶುಂಠಿಯು ಹಲವು ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆಯುರ್ವೇದದಲ್ಲಿ ಶುಂಠಿ ಬೇರನ್ನು ಬಹುತೇಕ ಔಷಧಿಗಳಲ್ಲಿ ಬಳಸಲಾಗಿದೆ. ಇದರಲ್ಲಿರುವ ಔಷಧೀಯ ಗುಣಗಳು ನಮ್ಮ ನಿತ್ಯಜೀವನದ ಹಲವು ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ ನೀಡುವುದಷ್ಟೇ ಅಲ್ಲ, ಅಡ್ಡ ಪರಿಣಾಮಗಳನ್ನೂ ಬೀರದು. ಇದರ ಘಮ ಅಡುಗೆಯ ಘಮವನ್ನು ಹೆಚ್ಚಿಸುತ್ತಲ್ಲದೆ, ನಾವು ಹಸಿಯಾಗಿಯೂ, ಒಣಗಿಸಿಯೂ ನಾನಾ ರೂಪಗಳಲ್ಲಿ ನಿತ್ಯವೂ ಬಳಕೆ ಮಾಡುತ್ತೇವೆ. ಬನ್ನಿ ಶುಂಠಿಯಂಥ ಸಾಮಾನ್ಯ ಬೇರಿನ ಅಸಾಮಾನ್ಯ ಗುಣಗಳ ಬಗ್ಗೆ ತಿಳಿದುಕೊಂಡು ಹೇಗೆಲ್ಲ ಮನೆಮದ್ದಾಗಿ ಬಳಸಿಕೊಳ್ಳಬಹುದು ಎಂಬುದನ್ನು ನೋಡೋಣ.

ಹೊಟ್ಟೆಯ ಸಮಸ್ಯೆಗೆ ರಾಮಬಾಣ: ಹೊಟ್ಟೆ ಕೆಟ್ಟರೆ ಆಗುವ ತೊಂದರೆಗಳು ಎಲ್ಲರಿಗೂ ಗೊತ್ತು. ಸರಿಯಾಗಿ ಜೀರ್ಣವಾಗದೆಯೋ ಅಥವಾ ಆಹಾರದಲ್ಲಿ ಹೆಚ್ಚು ಕಡಿಮೆಯಾಗಿಯೋ ಏನೋ ಸಮಸ್ಯೆಯಾಗಿ ಹೊಟ್ಟೆ ನೋಯುತ್ತದೆ. ಹಿಂಡಿದಂಥ ನೋವೂ ಆಗಬಹುದು. ಇಂಥ ಸಂದರ್ಭದಲ್ಲಿ ಶುಂಠಿಯ ರಸ ಬಹಳ ನೆರವಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸರಿಯಾಗಿ ಆಗುವಂತೆ ಮಾಡಿ ಹೊಟ್ಟೆನೋವನ್ನು ಕಡಿಮೆ ಮಾಡುತ್ತದೆ. ಹೆಣ್ಣುಮಕ್ಕಳ ಮಾಸಿಕ ಋತುಸ್ರಾವದ ಹೊಟ್ಟೆನೋವನ್ನೂ ಇದು ಆರಾಮಗೊಳಿಸುತ್ತದೆ.

ಜೀರ್ಣಕಾರಕವಾಗಿ ಕೆಲಸ ಮಾಡುತ್ತದೆ: ಮದುವೆಯೋ ಮುಂಜಿಯೋ, ಗೆಳೆಯರ ಜೊತೆಗಿನ ಪಾರ್ಟಿಯೋ ಮಾಡಿ ಹೊಟ್ಟೆ ಬಿರಿಯ ತಿಂದು ಬಂದಿರುತ್ತೀರಿ. ಹೊಟ್ಟೆ ಅಲ್ಲಾಡಿಸಲು ಸಾಧ್ಯವಾಗದಷ್ಟು ಹೊಟ್ಟೆ ತುಂಬಿರುತ್ತದೆ. ಹೊಟ್ಟೆ ಹೊತ್ತು ತಿರುಗುವುದೇ ಕಷ್ಟವಾಗುತ್ತದೆ. ಅಂಥ ಸಂದರ್ಭ ಜೀರ್ಣಕ್ರಿಯೆಯನ್ನು ಚುರುಕಾಗಿಸುವಲ್ಲಿ ಶುಂಠಿರಸ ಸಹಾಯ ಮಾಡುತ್ತದೆ. ಒಂದೆರಡು ಚಮಚ ಶುಂಠಿರಸವನ್ನು ಸೇವಿಸುವ ಮೂಲಕ ಅಥವಾ ಶುಂಠಿ ಚಹಾವನ್ನು ಮಾಡಿ ಕುಡಿಯುವ ಮೂಲಕ ಹೊಟ್ಟೆ ಹಗುರಾಗಿಸಬಹುದು.

ತೂಕ ಇಳಿಸುತ್ತದೆ: ಶುಂಠಿ ದೇಹದಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುವುದಷ್ಟೇ ಅಲ್ಲ, ಆ ಮೂಲಕ ತೂಕ ಇಳಿಸಲೂ ಕೂಡಾ ನೆರವಾಗುತ್ತದೆ. ಪಚನಕ್ರಿಯೆಯನ್ನು ಚುರುಕಾಗಿಸುವ ಮೂಲಕ ತೂಕ ಇಳಿಕೆಗೂ ಕೂಡ ಸಾಥ್‌ ನೀಡುತ್ತದೆ. ಆದರೆ ನಿತ್ಯವೂ ಶುಂಠಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿದರೆ ಮಾತ್ರ ಈ ಪ್ರಯೋಜನ ಪಡೆಯಬಹುದು.

ಪ್ರಯಾಣದಲ್ಲಾಗುವ ತಲೆಸುತ್ತು, ವಾಂತಿಗೂ ಇದು ಮದ್ದು: ಹಲವರಿಗೆ ಪ್ರಯಾಣ ಹಾಗೂ ಪ್ರವಾಸ ಇಷ್ಟವಾದರೂ, ತಮ್ಮ ವಾಂತಿಯ ಸಮಸ್ಯೆಯಿಂದಾಗಿ ಪ್ರಯಾಣ ಮಾಡಲು ಸಾಧ್ಯವಾಗುವುದಿಲ್ಲ. ಪರ್ವತ ಪ್ರದೇಶ, ಸುತ್ತಿ ಬಳಸಿ ಸಾಗುವ ಹಾದಿಗಳಾದರಂತೂ ಇವರ ಕಥೆ ಮುಗಿದಂತೆ ಎಂಬಷ್ಟು, ತಲೆಸುತ್ತು, ಸುಸ್ತು ಹಾಗೂ ವಾಂತಿಯಾಗಿ ಹೈರಾಣಾಗುತ್ತಾರೆ. ಇಂಥ ಮಂದಿಗೆ ಶುಂಠಿ ಅತ್ಯುತ್ತಮ ಮನೆಮದ್ದು . ಶುಂಠಿಯ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಈ ಸಮಸ್ಯೆಗೆ ಸಾಕಷ್ಟು ಪ್ರಯೋಜನ ಕಾಣಬಹುದು. ಅಥವಾ ಶುಂಠಿಯನ್ನು ಪುಟ್ಟ ತುಂಡುಗಳಾಗಿ ಕತ್ತರಿಸಿ ಅದಕ್ಕೆ ಸ್ವಲ್ಪ ಉಪ್ಪು ಹಾಗೂ ಮಜ್ಜಿಗೆ ಬೆರೆಸಿ ಬಿಸಿಲಿನಲ್ಲಿ ಒಣಗಿಸಿಟ್ಟು, ಚೆನ್ನಾಗಿ ಒಣಗಿದ್ದನ್ನು ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿಡಿ. ಇದನ್ನು ಪ್ರಯಾಣಿಸುವಾಗ ಬಾಯಲ್ಲಿ ಹಾಕಿ ಜಗಿಯುತ್ತಾ ಇರುವುದರಿಂದ ವಾಂತಿ, ತಲೆಸುತ್ತು ಬರುವುದಿಲ್ಲ.

ಶೀತ, ಗಂಟಲು ನೋವು, ನೆಗಡಿಗೆ: ಶುಂಠಿಯಲ್ಲಿರುವ ಆಂಟಿ ಇನ್‌ಫ್ಲಮೇಟರಿ ಗುಣಗಳಿಂದಾಗಿ ಇದು ಶೀತ, ನೆಗಡಿ, ಗಂಟಲು ನೋವು ಇತ್ಯಾದಿ ಸಮಸ್ಯೆಗಳಿಗೆ ಪರಿಣಾಮಕಾರಿ ಔಷಧಿ. ಶುಂಠಿಯ ಚಹಾ, ಶುಂಠಿ ಕಷಾಯ ಇತ್ಯಾದಿಗಳು ಕಟ್ಟಿದ ಕಫವನ್ನು ಕರಗಿಸಲೂ ಸಹಾಯ ಮಾಡುತ್ತದೆ.

ಸೌಂದರ್ಯ ಚಿಕಿತ್ಸೆಗೆ: ಮೊಡವೆಯಂತಹ ಸಮಸ್ಯೆಗಳಿಗೆ ಶುಂಠಿ ಅತ್ಯುತ್ತಮ. ಶುಂಠಿ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಮೊಡವೆಗಳು ಕಡಿಮೆಯಾಗುತ್ತವೆ. ಇದು ಮೊಡವೆಗಳನ್ನುಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕಿ ನಯವಾದ ಚರ್ಮ ನೀಡುತ್ತದೆ.

Leave a Comment