ಪಾರಿಜಾತ ಎಲೆ ಸಿಕ್ಕರೆ ದಯವಿಟ್ಟು ಬಿಡಬೇಡಿ ಯಾಕಂದ್ರೆ?

ನಮಸ್ಕಾರ ಟೀ ಮತ್ತು ಕಾಫಿ ನಮ್ಮ ಭಾರತೀಯರ ನೆಚ್ಚಿನ ಪಾನೀಯಗಳಲ್ಲಿ ಒಂದಾಗಿದೆ. ಹೆಚ್ಚಿನ ಜನರಿಗೆ ಟೀ ಅಥವಾ ಕಾಫಿಗಳಿಲ್ಲದೆ ತಮ್ಮ ದಿನವೇ ಶುರುವಾಗುವುದಿಲ್ಲ. ಅತಿಯಾದ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇತ್ತೀಚಿನ ದಿನಗಳಲ್ಲಿ ಬಹುತೇಕರು ಆರೋಗ್ಯದ ದೃಷ್ಟಿಯಿಂದ ತೂಕ ಇಳಿಸಿಕೊಳ್ಳುವ ಸಲುವಾಗಿ ಗ್ರೀನ್ ಟೀ ಕುಡಿಯುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಗ್ರೀನ್ ಟೀಗಳಲ್ಲದೆ ಅನೇಕ ಗಿಡಮೂಲಿಕೆ, ಚಹಾಗಳು ಆರೋಗ್ಯಕ್ಕೆ ಉತ್ತಮವಾಗಿದೆ. ಹಾಗಾದ್ರೆ ಕೀಲು ನೋವಿನ ಸಮಸ್ಯೆ ಇರುವವರು ಪಾರಿಜಾತ ಎಲೆಯ ಚಹಾ ಕುಡಿಯುವುದರಿಂದ ಯಾವೆಲ್ಲಾ ಲಾಭಗಳು ಸಿಗುತ್ತವೆ ಎಂಬುದನ್ನ ತಿಳಿದು ಕೊಳ್ಳೋಣ.

ಗಿಡಮೂಲಿಕೆ ಚಹಾಗಳು ಇದು ಆರೋಗ್ಯಕ್ಕೆ ಸುರಕ್ಷಿತವಾಗಿದ್ದು, ದೇಹದ ನೋವನ್ನು ನಿವಾರಿಸಲು ಸಹಾಯಕವಾಗಿವೆ. ಅಂತಹ ಒಂದು ಗಿಡಮೂಲಿಕೆ ಚಹಾವನ್ನು.ಪಾರಿಜಾತ ಎಲೆಗಳಿಂದ ತಯಾರಿಸಬೇಕು. ಪಾರಿಜಾತ ಎಲೆಗಳು ಹಲವಾರು ಔಷಧೀಯ ಗುಣಗಳನ್ನು ಹೊಂದಿವೆ. ಇದು ಉರಿಯೂತ ಸಂಧಿವಾತ ವಿರೋಧಿ ಯಕೃತ್‌ನ ನಿರ್ವಿಷಗೊಳಿಸುವ ಗುಣಲಕ್ಷಣಗಳನ್ನು ಹೊಂದಿವೆ. ಇನ್ನು ಸಂಧಿವಾತನು ಸಿಯಾಟಿಕ್ ದೀರ್ಘಕಾಲದ ಬೆನ್ನು ಮತ್ತು ಇತರ ಕೀಲುಗಳಿಗೆ ಪಾರಿಜಾತವು ಅತ್ಯುತ್ತಮ ಆಯುರ್ವೇದ ಗಿಡಮೂಲಿಕೆಗಳಲ್ಲಿ ಒಂದಾಗಿದೆ.

ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡುವವರು ತಮ್ಮ ಕುಳಿತುಕೊಳ್ಳುವ ಸ್ಥಾನದಿಂದಾಗಿ ಆಗಾಗ್ಗೆ ಬೆನ್ನು ನೋವಿನ ಸಮಸ್ಯೆ ಎದುರಿಸಿದರು.ಅಂತಹ ಪರಿಸ್ಥಿತಿಯಲ್ಲಿ ಪಾರಿಜಾತ ಎಲೆಗಳ ಚಹಾವನ್ನು ಕುಡಿಯುವುದರಿಂದ ನೋವಿನಿಂದ ತ್ವರಿತ ಪರಿಹಾರವನ್ನು ಪಡೆಯಬಹುದು. ಇನ್ನು ಪಾರಿಜಾತ ಟೀ ಮಾಡುವುದು ಹೇಗೆ ಎಂದರೆ ಮೂರರಿಂದ ನಾಲ್ಕು ಪಾರಿಜಾತ ಎಲೆಗಳನ್ನು ತೆಗೆದುಕೊಳ್ಳಿ. ಇವುಗಳನ್ನು ಚೆನ್ನಾಗಿ ತೊಳೆಯಿರಿ. ಒಂದು ಗ್ಲಾಸ್ ನೀರಿಗೆ ಹಾಕಿ ಅರ್ಧಕ್ಕೆ ಬರುವವರೆಗೆ ಕುದಿಸಿ. ನಂತರ ಇದನ್ನು ಫಿಲ್ಟರ್ ಮಾಡಿ ಸೇವಿಸಿ. ಇದು ಕುಡಿಯಲು ತುಂಬಾ ರುಚಿಯಾಗಿರುತ್ತದೆ ಮತ್ತು ಇದನ್ನು ನಿಯಮಿತವಾಗಿ ಸೇವಿಸಬಹುದು.

ಇನ್ನು ನಿಮ್ಮ ನೋವಿಗೆ ಅನುಗುಣವಾಗಿ ನೀವು ದಿನಕ್ಕೆ ಒಂದರಿಂದ ಎರಡು ಗ್ಲಾಸ್ ಚಹಾವನ್ನು ಸೇವಿಸಬಹುದು. ಇದು ನೋವು ನಿವಾರಕವಲ್ಲವಾದರೂ ಇದು ನಿಧಾನವಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಚಹಾವು ನಿಮ್ಮ ಆಯುರ್ವೇದ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ ವಾತರೋಗಕ್ಕೆ ಸಂಧಿವಾತ, ಸಿಯಾಟಿಕ್ ಬೆನ್ನು ಮತ್ತು ಇತರ ಕೀಲುದಂತಹ ವಾತ ಅಸ್ವಸ್ಥತೆಗಳಿಗೆ ಆಯುರ್ವೇದವು ಅತ್ಯುತ್ತಮ ಚಿಕಿತ್ಸೆಯಾಗಿದೆ. ಹಾಗಾಗಿ ಕೀಲು ಬೆನ್ನು ನೋವಿನ ಸಮಸ್ಯೆ ಇರುವವರು ಪಾರಿಜಾತ ಎಲೆಯ ಚಹಾ ಕುಡಿಯುವುದರಿಂದ ಈ ಸಮಸ್ಯೆಗಳಿಗೆ ಮುಕ್ತಿ ಹಾಡಬಹುದು.

Leave a Comment