WATCHO OTT: ಹಿಂದಿಯಲ್ಲಿ ಡಬ್ ಮಾಡಲಾದ 34 ಕೊರಿಯನ್ ಸಿರೀಸ್ ನೋಡಬೇಕೇ? ಹಾಗಾದ್ರೆ ಈ OTT ಬಳಸಿ

ನವದೆಹಲಿ: ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ WATCHO, ವೀಕ್ಷಕರಿಗೆ ಹೊಸ ಮತ್ತು ಆಸಕ್ತಿದಾಯಕ ವಿಷಯವನ್ನು ಒದಗಿಸಲು ಹೆಸರುವಾಸಿಯಾಗಿದೆ. ಇಂದು ಪ್ಲಾಟ್‌ಫಾರ್ಮ್‌ನಲ್ಲಿ ಹಿಂದಿಯಲ್ಲಿ ಡಬ್ ಮಾಡಲಾದ 34 ಕೊರಿಯನ್ ವೆಬ್-ಸರಣಿಗಳನ್ನು ಪ್ರಸಾರ ಮಾಡುವುದಾಗಿ ಘೋಷಿಸಿದೆ.

ಇದನ್ನೂ ಓದಿ: Red Chilli Benefits: ಈ ಮೂರು ಕಾಯಿಲೆಗೆ ಖಾರದ ಪುಡಿ ರಾಮಬಾಣ

‘#RozanaKDrama” ಎಂಬ ಶೀರ್ಷಿಕೆಯೊಂದಿಗೆ WATCHO ತನ್ನ ಸಮಗ್ರ ಕೊರಿಯನ್ ಸಿರೀಸ್ ಲೈಬ್ರರಿಯಿಂದ ಪ್ರತಿದಿನ 3 ಗಂಟೆಗಳ ಕೊರಿಯನ್ ಸಿರೀಸ್ ಗಳನ್ನು ಬಿಡುಗಡೆ ಮಾಡುತ್ತದೆ. ನಾಟಕ, ಆಕ್ಷನ್ ಮತ್ತು ರೊಮ್ಯಾಂಟಿಕ್ ವಿಷಯಗಳಿಂದ ಹಿಡಿದು ವೈಜ್ಞಾನಿಕ ಕಾಲ್ಪನಿಕವರೆಗೆ ಇದರಲ್ಲಿ ಅನೇಕ ಶೋಗಳು ಪ್ರಸಾರವಾಗುತ್ತದೆ. ಇದರೊಂದಿಗೆ, WATCHO ಹಿಂದಿಯಲ್ಲಿ ಡಬ್ ಮಾಡಲಾದ ಕೊರಿಯನ್ ಶೋಗಳನ್ನು ನೀಡುವ ಮೂಲಕ ಸಾಮೂಹಿಕ ಭಾರತೀಯ ಪ್ರೇಕ್ಷಕರಿಗೆ ಅಂತರರಾಷ್ಟ್ರೀಯ ವಿಷಯವನ್ನು ನೀಡುವಲ್ಲಿ ಒಂದು ಹೆಜ್ಜೆ ಹತ್ತಿರದಲ್ಲಿದೆ.

ಪ್ರತಿದಿನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಸಂಚಿಕೆಗಳನ್ನು ಪ್ರಸಾರ ಮಾಡುವುದರೊಂದಿಗೆ ಒಟ್ಟು 650ಕ್ಕೂ ಹೆಚ್ಚು ಗಂಟೆಗಳ ಕೊರಿಯನ್ ವಿಷಯವನ್ನು ಅನುಕ್ರಮವಾಗಿ ಬಿಡುಗಡೆ ಮಾಡಲಾಗುತ್ತದೆ.

ರೊಮ್ಯಾಂಟಿಕ್, ಸಸ್ಪೆನ್ಸ್, ಕೌಟುಂಬಿಕ ನಾಟಕ, ಫ್ಯಾಂಟಸಿ, ಸಾಹಸ, ಮತ್ತು ವೈಜ್ಞಾನಿಕ ಕಾಲ್ಪನಿಕ ಮುಂತಾದ ವಿವಿಧ ಪ್ರಕಾರಗಳ ರೋಮಾಂಚನಕಾರಿ ಶೋಗಳು ಪ್ರಸಾರವಾಗಲಿವೆ. ಈ ಸಾಲಿನಲ್ಲಿ ಮೊದಲನೆಯದು ‘ವೆಲ್‌ಕಮ್ 2 ಲೈಫ್’ – ಇದು ಕಾನೂನಿನ ಪ್ರಯೋಜನವನ್ನು ಪಡೆಯಲು ಬಯಸುವ ಜನರಿಗೆ ಸಹಾಯ ಮಾಡುವ ಸ್ವಾರ್ಥಿ ವಕೀಲರ ಕಥೆಯನ್ನು ಹೇಳುವ ಫ್ಯಾಂಟಸಿ ನಾಟಕವಾಗಿದೆ.

WATCHO ದಿ ಮಾರ್ನಿಂಗ್ ಶೋ, ಹ್ಯಾಪಿ, ಹ್ಯಾಪಿ, ಗುಪ್ತಾ ನಿವಾಸ್, ಜೌನ್‌ಪುರ್, ಪಾಪಾ ಕಾ ಸ್ಕೂಟರ್, ಅಘಾತ್, ಚೀಟರ್ಸ್ ಹೀಗೆ ಅನೇಕ ವೆಬ್ ಸರಣಿಗಳನ್ನು ಒಳಗೊಂಡಂತೆ ಅನೇಕ ಮೂಲ ಪ್ರದರ್ಶನಗಳನ್ನು ಪ್ರಸಾರ ಮಾಡಲಿದೆ. ಸರ್ಹಾದ್, ಮಿಸ್ಟರಿ ಡ್ಯಾಡ್, ಜಲ್ಸಾಜಿ, ಡಾರ್ಕ್ ಡೆಸ್ಟಿನೇಶನ್ಸ್, ಇಟ್ಸ್ ಮೈ ಪ್ಲೆಷರ್, 4 ಥೀವ್ಸ್, ಲವ್ ಕ್ರೈಸಿಸ್, ಛೋರಿಯನ್ ಮತ್ತು ರಕ್ತ ಚಂದನ ಜೊತೆಗೆ ಲುಕ್ ಐ ಕ್ಯಾನ್ ಕುಕ್ ಮತ್ತು ಬಿಖರೆ ಹೈ ಅಲ್ಫಾಜ್‌ನಂತಹ ಮೂಲ ಪ್ರಭಾವಶಾಲಿ ಶೋಗಳನ್ನು ಹೊಂದಿದೆ. 

ಇದನ್ನೂ ಓದಿ: ಆಗಸ್ಟ್ 10 ರಿಂದ ಈ ರಾಶಿಗಳ ಜನರು ಅಶುಭ ಯೋಗದಿಂದ ಮುಕ್ತಿ ಪಡೆಯಲಿದ್ದಾರೆ

WATCHO ಪ್ರಸ್ತುತ ಹಿಂದಿ, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ 35 ಕ್ಕೂ ಹೆಚ್ಚು ಮೂಲ ಪ್ರದರ್ಶನಗಳು, 300 ಪ್ಲಸ್ ವಿಶೇಷ ನಾಟಕಗಳು ಮತ್ತು 100 ಪ್ಲಸ್ ಲೈವ್ ಚಾನೆಲ್‌ಗಳನ್ನು ಒದಗಿಸಲಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.



Source link

Leave a Comment