ಜೀವನದಲ್ಲಿ ಯಾರದರು ಏಳಿಗೆ ಅದರೆ ಅದನ್ನು ಸಹಿಸದೆ ಇರುವವರು ಅವರ ಬಗ್ಗೆ ಟೀಕೆ ಮಾಡುತ್ತಾರೆ ಮತ್ತು ನೆಗೆಟಿವ್ ಆಗಿ ಮಾತನಾಡುತ್ತಾರೆ. ಇದರಿಂದ ಆರೋಗ್ಯದ ಮೇಲು ಕೂಡ ದುಷ್ಟಪರಿಣಾಮ ಬೀರಬಹುದು. ಯಾರೇ ನಿಮ್ಮನ್ನು ಹೀಯಾಳಿಸಿದರು ಎದುರು ಗಡೆ ಇರುವ ವ್ಯಕ್ತಿ ನಿಮ್ಮ ಬಗ್ಗೆ ಮಾತನಾಡುವ ಬಗ್ಗೆ ಎಷ್ಟು ಸಾಮರ್ಥ್ಯ ಹೊಂದಿದ್ದಾರೆ ಎನ್ನುವುದನ್ನು ಮೊದಲು ನೀವು ತಿಳಿದುಕೊಳ್ಳಬೇಕು. ಒಂದು ವೇಳೆ ಯಾರಾದರೂ ನಿಮ್ಮ ಕ್ಯಾರೆಕ್ಟರ್ ಬಗ್ಗೆ ಮಾತನಾಡಿದಾಗ ನೀವು ಅತ್ತು ಕರೆದು ದೊಡ್ಡ ರಂಪ ಮಾಡಿದರೆ ನಿಮ್ಮ ಬಗ್ಗೆ ನಿಮಗೆ ಸರಿಯಾಗಿ ಗೊತ್ತಿಲ್ಲ ಎಂದು ಅರ್ಥ. ನಿಮಗೆ ನಿಮ್ಮ ಬಗ್ಗೆ ಸರಿಯಾಗಿ ಗೊತ್ತಿಲ್ಲದೇ ಇದ್ದಾಗ ಎದುರುಗಡೆ ಇರುವವರು ಏನೇ ಹೇಳಿದರು ಅದನ್ನು ಯೋಚನೆ ಮಾಡಿ ಅತ್ತು ಗೋಳಡುತ್ತೀರಿ.
ಅದರೆ ನಿಮ್ಮ ಮುಂದೆ ಮಾತನಾಡುವರು ನೆಗೆಟಿವ್ ಹಾಗು ಕಲ್ಮಶವನ್ನು ಹೊಂದಿರುತ್ತಾರೆ ಎನ್ನುವುದು ನಿಮಗೆ ಯಾವಾಗ ತಿಳಿಯುತ್ತದೆಯೋ ಅವಾಗ ನಿಮಗೆ ಯಾರೇ ಏನೇ ಹೇಳಿದರು ಅದರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳುವುದಿಲ್ಲ. ನಿಮ್ಮನ್ನು ಹೀಯಾಳಿಸುವವರಿಗೆ ನೀವು ಖುಷಿಯಿಂದ ಯಾವುದೇ ಕೆಲಸ ಮಾಡಿದರು ಅದನ್ನು ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ. ಸಮಾಜದಲ್ಲಿ 80% ಜನರಿಗೆ ಎದುರುಗಡೆ ಇರುವವರು ಖುಷಿಯಾಗಿ ಇದ್ದರೆ ತಡೆದುಕೊಳ್ಳುವುದಕ್ಕೆ ಆಗುವುದಿಲ್ಲವಂತೆ. ಹಾಗಾಗಿ ಕೆಲವರು ಇನ್ನೊಬ್ಬರು ಮಾತಿನಿಂದ ಹೀಯಾಳಿಸುವುದಕ್ಕೆ ಶುರು ಮಾಡುತ್ತಾರೆ. ಆದಷ್ಟು ಯಾರಾದರೂ ಉನ್ನತ ಸ್ಥಾನಕ್ಕೆ ಹೋದರೆ ಅವರನ್ನು ಆದಷ್ಟು ಗೌರವಿಸಿ ಮತ್ತು ಖುಷಿ ಪಡಬೇಕು. ಯಾವುದೇ ಕಾರಣಕ್ಕೂ ಇನ್ನೊಬ್ಬರ ಮನಸ್ಸನ್ನು ನೋಯಿಸಬಾರದು.