ಪ್ರತಿಯೊಬ್ಬರ ಗುಣ ಸ್ವಭಾವ ಸಹ ಒಂದೇ ತರನಾಗಿ ಇರುವುದು ಇಲ್ಲ ಪ್ರತಿಯೊಬ್ಬರು ಭಿನ್ನ ಭಿನ್ನವಾಗಿ ಇರುತ್ತಾರೆ ಹಾಗೆಯೇ ಒಂದು ರಾಶಿಯವರ ಹಾಗೆಯೇ ಎಲ್ಲ ರಾಶಿಯವರು ಇರುವುದಿಲ್ಲ ಅದರಲ್ಲಿ ಸಿಂಹ ರಾಶಿಯವರು (Leo) ಮಹತ್ವಾಕಾಂಕ್ಷಿಗಳು ಆಗಿರುತ್ತಾರೆ ಹಾಗೆಯೇ ಸಿಂಹ ರಾಶಿಯವರು (Leo Sings) ಬೇರೆಯವರ ಮುಂದೆ ಗಟ್ಟಿ ಮುಟ್ಟಾದ ಕಂಡರು ಸಹ ವಾಸ್ತವವಾಗಿ ತುಂಬಾ ಸೂಕ್ಷ್ಮ ವ್ಯಕ್ತಿಗಳಾಗಿ ಇರುತ್ತಾರೆ ಭಾವನಾತ್ಮಕವಾಗಿ ಇರುತ್ತಾರೆ.
ಹಾಗೆಯೇ ಸಿಂಹ ರಾಶಿಯವರು ಜೀವನದಲ್ಲಿ ತುಂಬಾ ಶ್ರಮ ಜೀವಿಗಳಾಗಿ ಇರುತ್ತಾರೆ ಜೀವನದಲ್ಲಿ ಮುಂದೆ ಬರಲು ಸದಾ ಪ್ರಯತ್ನ ಪಡುತ್ತಾರೆ ಹಾಗೆಯೇ ಸಿಂಹ ರಾಶಿಯವರು ನಂಬಿದ ಜನರಿಂದಲೇ ಹೆಚ್ಚು ಮೋಸ ಹೋಗುವ ಸಾಧ್ಯತೆ ಇರುತ್ತದೆ. ಸಿಂಹ ರಾಶಿಯವರು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಹಾಗೂ ಸುಖ ಶಾಂತಿ ಸಂವೃದ್ದಿಯಿಂದ ಬದುಕಲು ದೇವರ ಆರಾಧನೆ ಮಾಡಬೇಕು ದೈವ ಬಲ ಇದ್ದಾಗ ಮಾತ್ರ ಜೀವನದ ಪ್ರತಿಯೊಂದು ಹಂತದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಆಗುತ್ತದೆ ನಾವು ಈ ಲೇಖನದ ಮೂಲಕ ಸಿಂಹ ರಾಶಿಯವರು ಆರಾಧನೆ ಮಾಡಬೇಕಿರುವ ದೇವರುಗಳ ಬಗ್ಗೆ ತಿಳಿದುಕೊಳ್ಳೋಣ.
ಸಿಂಹ ರಾಶಿಯವರು ಶಕ್ತಿಯುತವಾಗಿ ಹಾಗೂ ಕಠಿಣವಾಗಿ ಕಾಣಿಸಿಕೊಂಡರು ಸಹ ಸಿಂಹ ರಾಶಿಯವರು ಒಳಗಿನಿಂದ ಭಾವನಾತ್ಮಕವಾಗಿ ಇರುತ್ತಾರೆ ಸಿಂಹ ರಾಶಿಯವರು ಪ್ರೀತಿಸುವ ವ್ಯಕ್ತಿಗಳು ವಾದ ವಿವಾದ ಮಾಡಿದರೆ ಅವರ ಹೃದಯ ಬಡಿತ ಸಹ ಹೆಚ್ಚಾಗುತ್ತದೆ ಸಿಂಹ ರಾಶಿಯವರು ಬೇರೆಯವರ ಮುಂದೆ ಗಟ್ಟಿ ಮುಟ್ಟಾದ ಕಂಡರು ಸಹ ವಾಸ್ತವವಾಗಿ ತುಂಬಾ ಸೂಕ್ಷ್ಮ ವ್ಯಕ್ತಿಗಳಾಗಿ ಇರುತ್ತಾರೆ ಸಿಂಹ ರಾಶಿಯವರು ಸ್ಪರ್ಧಿಸುವ ಪ್ರತಿಯೊಂದು ಕೆಲಸದಲ್ಲಿ ಸಹ ಮುಂದೆ ಇರುತ್ತಾರೆ
ಮೊದಲ ಸ್ಥಾನ ಪಡೆಯಲು ಸದಾ ಪ್ರಯತ್ನ ಪಡುತ್ತಾರೆ ಹೆಚ್ಚಿನ ಜನರು ಸಿಂಹ ರಾಶಿಯವರ ಜೊತೆಗೆ ಚರ್ಚೆ ಮಾಡುವುದು ಅಸಾಧ್ಯ ಎಂದು ಭಾವಿಸುತ್ತಾರೆ ಕೆಲವೊಮ್ಮೆ ನಿಜ ಆಗುತ್ತದೆ ಸಿಂಹ ರಾಶಿಯವರು ಜನರಲ್ಲಿ ಹೆಚ್ಚಿನ ನಂಬಿಕೆ ಇಡುವ ಗುಣವನ್ನು ಹೊಂದಿರುತ್ತಾರೆ ಹಾಗೆಯೇ ಸಂಗಾತಿಯ ಸಂತೋಷವನ್ನು ಕಾಪಾಡಿಕೊಳ್ಳಲು ಸದಾ ಬಯಸುತ್ತಾರೆ.
ಸಿಂಹ ರಾಶಿಯವರು ಸಂಗಾತಿಯ ಜೊತೆಗೆ ನಿರಂತರ ಮತ್ತು ಪ್ರಾಮಾಣಿಕ ಪ್ರೀತಿಯನ್ನು ಬಯಸುತ್ತಾರೆ ಸಿಂಹ ರಾಶಿಯವರನ್ನು ಪದೆ ಪದೆ ವಂಚಿಸಿದ ನಂತರ ಅವರು ನಂಬಿಕೆಯನ್ನು ಹೊಂದಿದ್ದರೆ ನಿಮಗೆ ನೀಡುವ ಮತ್ತೊಂದು ಅವಕಾಶ ಎಂದು ತಿಳಿದುಕೊಳ್ಳಬೇಕು ಒಮ್ಮೆ ಸಿಂಹ ರಾಶಿಯವರ ನಂಬಿಕೆಯನ್ನು ಕಳೆದುಕೊಂಡರೆ ಮರಳಿ ಪಡೆಯಲು ಸಾಧ್ಯವಿಲ್ಲ .
ಸಿಂಹ ರಾಶಿಯವರು ಒಂದೇ ಜನರ ಮೇಲೆ ನಂಬಿಕೆಯನ್ನು ಇಡುವುದು ಇಲ್ಲ ಸಿಂಹ ರಾಶಿಯವರನ್ನು ಹಗುರವಾಗಿ ತಿಳಿಯಬಾರದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಿಂಹ ರಾಶಿಯವರು ಹೆಚ್ಚು ಶ್ರಮ ಜೀವಿಗಳು ಆಗಿರುತ್ತಾರೆ ಗೋಪಾಲನ ಕೃಪೆಯಿಂದ ಸಿಂಹ ರಾಶಿಯವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಿಂಹ ರಾಶಿಯವರು ಕೃಷ್ಣನೊಂದಿಗೆ ರಾಧೆಯನ್ನು ಪೂಜಿಸಬೇಕು.
ಶಿವನು ಸಿಂಹ ರಾಶಿಯವರ ಅಧಿದೇವತೆ ಹಾಗೆಯೇ ಶಿವನು ಸಿಂಹ ರಾಶಿಯವರಿಗೆ ನೆಮ್ಮದಿ ಸುಖ ಶಾಂತಿಯನ್ನು ನೀಡುತ್ತಾನೆ ಶಿವನ ಆರಾಧನೆಯಿಂದ ಸಿಂಹ ರಾಶಿಯವರಿಗೆ ಉತ್ತಮ ಆರೋಗ್ಯ ಸುಖ ನೆಮ್ಮದಿ ಸಿಗುತ್ತದೆ. ಸಿಂಹ ರಾಶಿಯವರು ಪ್ರತಿ ದಿನ ಓಂ ನಮಃ ಶಿವಾಯ ಮಂತ್ರವನ್ನು ಜಪಿಸಬೇಕು ಪ್ರತಿದಿನ ಶಿವ ಲಿಂಗಕ್ಕೆ ಹಾಲು ನೀರಿನ ಅಭಿಷೇಕ ಮಾಡಬೇಕು ಹಾಗೆಯೇ ಸೋಮವಾರ ದಿನ ಬಡವರಿಗೆ ಹಾಗೂ ಶ್ವಾನಗಳಿಗೆ ಹಾಲು ನೀಡಬೇಕು ಹಾಗೆಯೇ ಆರ್ಥಿಕ ಸಂಕಷ್ಟ ಪರಿಹಾರಕ್ಕೆ ಬುಧನ ಆರಾಧನೆ ಮಾಡಬೇಕು ಬುಧವಾರದ ದಿನದಂದು ಹಸಿರು ವಸ್ತ್ರದಲ್ಲಿ ಹೆಸರುಕಾಳನ್ನು ದಾನ ಮಾಡಬೇಕು ಬುಧನ ಅಭಿಮಾನಿ ದೇವರು ವಿಷ್ಣು ಹಾಗಾಗಿ ಪ್ರತಿದಿನ ವಿಷ್ಣು ಸಹಸ್ರವನ್ನು ಹೇಳಬೇಕು .
ಸಿಂಹ ರಾಶಿಯವರು ತಾಮ್ರದ ನಾಣ್ಯವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಇಡುವುದರಿಂದ ಧನ ಲಾಭ ಕಂಡು ಬರುತ್ತದೆ ಸಿಂಹ ರಾಶಿಯವರು ಉನ್ನತ ಸ್ಥಾನವನ್ನು ತಲುಪಲು ಮಹತ್ವಾಕಾಂಶಿಗಳಾಗಿ ಇರುತ್ತಾರೆ ಇದು ಅವರ ವರ್ತನೆಯನ್ನು ಬದಲಾಯಿಸಲು ಸಹ ಕಾರಣ ಆಗುತ್ತದೆ ಅನೇಕ ಸಮಸ್ಯೆಯನ್ನು ತಪ್ಪಿಸಲು ಮಾತುಗಳಲ್ಲಿ ಹಾಗೂ ನಡವಳಿಕೆಯಲ್ಲಿ ತಾಳ್ಮೆ ಇರಬೇಕು ಹಾಗೆಯೇ ಸಿಂಹ ರಾಶಿಯವರು ಯಾವಾಗಲೂ ಸಹ ಸೂರ್ಯ ದೇವರನ್ನು ಆರಾಧನೆ ಮಾಡಬೇಕು ಇದರಿಂದ ಏಳಿಗೆ ಸಾಧಿಸಲು ಸಾಧ್ಯ ಆಗುತ್ತದೆ.
ಸೂರ್ಯ ನಾರಾಯಣನ ಆರಾಧನೆ ಮಾಡಿದರೆ ಮಾನಸಿಕ ನೆಮ್ಮದಿ ಲಭಿಸುತ್ತದೆ ಆರೋಗ್ಯ ಸಹ ವೃದ್ಧಿ ಆಗುತ್ತದೆ ಹಣಕಾಸಿನ ಸಮಸ್ಯೆ ವ್ಯಾಪಾರ ನಷ್ಟ ಇಂತಹ ಸಮಸ್ಯೆಗಳು ಕಡಿಮೆ ಆಗುತ್ತದೆ ದೈವ ಬಲ ಸದಾ ಕಾಲ ಇರಲು ಪ್ರತಿ ಭಾನುವಾರ ಸೂರ್ಯ ನಮಸ್ಕಾರ ಮಾಡಬೇಕು ಸಿಂಹ ರಾಶಿಯವರು ಸೂರ್ಯನಿಗೆ ಸಂಬಂಧಪಟ್ಟ ಉಂಗುರವನ್ನು ಧರಿಸುವುದು ಒಳ್ಳೆಯದು ಹಾಗೆಯೇ ಸಿಂಹ ರಾಶಿಯವರು ನಂಬಿದ ಜನರಿಂದ ಮೋಸ ಹೋಗುವುದು ಬಹಳ ಇರುತ್ತದೆ ಸಿಂಹ ರಾಶಿಯವರು ಗಣೇಶನ ಆರಾಧನೆ ಮಾಡಬೇಕು ಅದರಲ್ಲಿ ಸಹ ಪೀತಾಂಬರ ಗಣೇಶನ ಆರಾಧನೆ ಮಾಡಬೇಕು
ಸಿಂಹ ರಾಶಿಯವರು ದಾಂಪತ್ಯದಲ್ಲಿ ಕೆಲವು ಸಮಸ್ಯೆಯನ್ನು ಎದುರಿಸಿದರು ಸಹ ಮದುವೆ ನಂತರವೇ ಅದೃಷ್ಟ ಒದಗಿ ಬರುತ್ತದೆ ಹಾಗೆಯೇ ಸಿಂಹ ರಾಶಿಯವರು ತಮ್ಮ ತಾಯಿಯೊಂದಿಗೆ ವಿಶೇಷವಾದ ಬಾಂಧವ್ಯವನ್ನು ಹೊಂದಿರುತ್ತಾರೆ ಸಿಂಹ ರಾಶಿಯವರ ಅದೃಷ್ಟದ ವರ್ಷ ಹದಿನಾಲ್ಕನೇ ವರ್ಷ ಹಾಗೂ ಇಪ್ಪತ್ತೆರಡನೆ ವರ್ಷ ಹಾಗೂ ಇಪ್ಪತ್ನಾಲ್ಕನೆ ವರ್ಷ ಮತ್ತು ಇಪ್ಪತ್ತಾರನೆ ವರ್ಷ ಹಾಗೂ ಇಪ್ಪತ್ತೆಂಟು ಹಾಗೂ ಮೂವತ್ತೆಂಟನೆ ವರ್ಷ ಮತ್ತು ಮುವತ್ತೆರಡನೆ ವರ್ಷದಲ್ಲಿ ಉನ್ನತ ಮಟ್ಟದಲ್ಲಿ ಇರುತ್ತದೆ. ಹಾಗೆಯೇ ಸಿಂಹ ರಾಶಿಯವರ ಅದೃಷ್ಟದ ಸಂಖ್ಯೆ ಒಂದರಿಂದ ನಾಲ್ಕು ಹಾಗೂ ಆರು ಇಪ್ಪತ್ನಾಲ್ಕು ಇಪ್ಪತ್ತೊಂಬತ್ತು ಹಾಗೂ ಮೂವತ್ಮೂರು ಸಂಖ್ಯೆಗಳು ಹೆಚ್ಚು ಅದೃಷ್ಟವನ್ನು ತರುತ್ತದೆ.
ಹಾಗೆಯೇ ಕೆಂಪು ಹಾಗೂ ಕಿತ್ತಳೆ ಹಾಗೂ ಕೆನೆ ಬಣ್ಣ ಅದೃಷ್ಟ ಬಣ್ಣಗಳಾಗಿದೆ ಹಾಗೆಯೇ ಭಾನುವಾರ ಹಾಗೂ ಮಂಗಳವಾರ ಅದೃಷ್ಟದ ವಾರಗಳಾಗಿದೆ ಹೀಗೆ ಸಿಂಹರಾಶಿಯವರು ಜೀವನಪೂರ್ತಿ ಈ ಮೇಲೆ ತಿಳಿಸಿದ ಹಾಗೆಯೇ ದೇವರನ್ನು ಆರಾಧನೆ ಮಾಡುವುದರಿಂದ ಸುಖ ಶಾಂತಿ ಹಾಗೂ ನೆಮ್ಮದಿ ಸಂವೃದ್ದಿಯಿಂದ ಇರಬಹುದು ದೇವರ ಆರಾಧನೆ ಮಾಡುವ ಮೂಲಕ ಅನೇಕ ಸಂಕಷ್ಟಗಳಿಂದ ದೂರ ಇರಬಹುದಾಗಿದೆ.