ಹಿಂದಿನ ಕಾಲದಿಂದಲೂ ರಾಜ ಮಹಾರಾಜರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ತರಕಾರಿಗಳನ್ನು ಬಳಸುತ್ತಾ ಬಂದಿದ್ದಾರೆ. ಅಷ್ಟಕ್ಕೂ ಆ ತರಕಾರಿ ಯಾವುದು ಎಂದರೆ ಸಿಹಿ ಗೆಣಸು. ಗೆಡ್ಡೆ ಜಾತಿಯ ತರಕಾರಿಗಳಲ್ಲಿನ ಪ್ರಮುಖವಾದದ್ದು. ದಕ್ಷಿಣ ಅಮೇರಿಕ ಮೂಲದಿಂದ ಬಂದು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದ್ದು, ಪ್ರಾಚೀನ ಕಾಲದಿಂದಲೂ ಬೇಸಾಯದಲ್ಲಿರುವ ಸುಪ್ರಿದ್ಧವಾದ ಆಹಾರ ಸಸ್ಯದ ಕುಟುಂಬಕ್ಕೆ ಸೇರಿದೆ. ಈ ಸಿಹಿ ಗೆಣಸು ರುಚಿಕರ ಮತ್ತು ಪೌಷ್ಟಿಕಾಂಶದಾಯಕ ಆಹಾರವಾಗಿದೆ.
ಇದು ದೇಹಕ್ಕೆ ಬೇಕಾಗುವ ವಿಟಮಿನ್ ಬಿ6 ಕ್ಯಾಲ್ಸಿಯಂ ಸೋಡಿಯಂ ಮ್ಯಾಗ್ನಿಷಿಯಂ ಮುಂತಾದ ಅಂಶಗಳನ್ನು ಹೊಂದಿದೆ. ಅಲ್ಲದೆ ಇದರಲ್ಲಿರುವ ಉತ್ತಮ ಪ್ರಮಾಣದ ನಾರಿನ ಅಂಶ ವಿಟಮಿನ್ ಸಿ ಮತ್ತು ವಿಟಮಿನ್ ಎ ಸಹ ಇದ್ದು ಹಲವು ತೊಂದರೆಗಳಿಗೆ ರಕ್ಷಣೆ ನೀಡುತ್ತದೆ. ಇಂದಿನ ಲೇಖನದಲ್ಲಿ ಸಿಹಿ ಗೆಣಸಿನ ಬಗ್ಗೆ ಮತ್ತು ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳು ಇವೆ ಎಂದು ತಿಳಿದುಕೊಳ್ಳೋಣ. ಮೊದನೆಯದಾಗಿ ಈ ಗೆಣಸಿನಲ್ಲಿ ರಾಸಾಯನಿಕ ಸಂಯೋಜನೆ ಯಾವ ರೀತಿ ಇದೆ ಎಂದು ತಿಳಿದುಕೊಳ್ಳೋಣ. ತೇವಾಂಶ 68.5ರಷ್ಟು ಇದೆ. ಕಾರ್ಬೋಹೈಡ್ರೇಟ್ 28.2ರಷ್ಟು ಕೊಬ್ಬು 0.3ರಷ್ಟು ಪ್ರೊಟೀನ್ 1.2ರಷ್ಟು ಲೋಹಾಂಶ 1.0ರಷ್ಟು ನಾರಿನ ಅಂಶ 0.8ರಷ್ಟು ಇದೆ. ಅಲ್ಲದೆ ನೂರು ಗ್ರಾಂ ಗೆಣಸಿನಲ್ಲಿ ಐವತ್ತು
ಮಿಲಿಗ್ರಾಂ ರಂಜಕ ಒಂಬತ್ತು ಗ್ರಾಂ ಸೋಡಿಯಂ ಮತ್ತು ಇಪ್ಪತ್ತು ಮಿಲಿ ಗ್ರಾಂ ಕ್ಯಾಲ್ಸಿಯಂ ಇದೆ. ಮತ್ತು ವಿಟಮಿನ್ ಎ, ಮತ್ತು ವಿಟಮಿನ್ ಬಿ ಕೂಡ ಅಡಗಿದೆ. ಇಷ್ಟೆಲ್ಲಾ ರಾಸಾಯನಿಕ ಸಂಯೋಜನೆ ಇರುವ ಈ ಸಿಹಿ ಗೆಣಸು ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯವನ್ನೂ ಹೇಗೆ ವೃದ್ಧಿ ಮಾಡಿಕೊಳ್ಳಬೇಕು, ಮತ್ತು ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂದು ತಿಳಿದುಕೊಳ್ಳೋಣ ಬನ್ನಿ. ಸಿಹಿ ಗೆಣಸು ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ಇದರ ಬಳಕೆಯಿಂದ ಮಲಬದ್ಧತೆ ಕೂಡ ನಿವಾರಣೆಯಾಗುತ್ತದೆ. ಹಾಗೂ ಶೀತ ಮತ್ತು ಜ್ವರ ಇದ್ದಾಗ ಸೋಂಕು ಹರಡದಂತೆ ತಡೆಯುತ್ತದೆ.
ಇದರಲ್ಲಿರುವ ವಿಟಮಿನ್ ಸಿ ಜೀವಸತ್ವ ಮೂಳೆ ಮತ್ತು ಹಲ್ಲಿನ ರಚನೆ, ಜೀರ್ಣಕ್ರಿಯೆ ಮತ್ತು ರಕ್ತಕಣ ಪ್ರಮುಖ ಪಾತ್ರ ವಹಿಸುತ್ತದೆ. ಸಿಹಿ ಗೆಣಸಿನಲ್ಲಿ ಅಗತ್ಯವಾದ ಪೋಷಕಾಂಶಗಳು ಇವೆ. ನಮ್ಮ ದೇಹದ ವಿವಿಧ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸಲು ಜೀವಕೋಶದ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗೂ ಸಿಹಿ ಗೆಣಸಿನಲ್ಲಿ ಪೊಟ್ಯಾಷಿಯಂ ಉನ್ನತ ಮಟ್ಟದಲ್ಲಿ ಇರುತ್ತದೆ. ದೇಹದ ಬಡಿತವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಹಾಗೂ ದೇಹದ ಸ್ನಾಯುಗಳು ಮತ್ತು ನರ ಕಾರ್ಯವನ್ನು ಸುಲಭಗೊಳಿಸುತ್ತದೆ.
ಇದನ್ನು ಸೇವನೆ ಮಾಡುವುದರಿಂದ ಚರ್ಮದ ಯೌವ್ವನ ಸ್ಥಿತಿ ಸ್ಥಾಪಕವನ್ನೂ ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಇನ್ನು ಸಕ್ಕರೆ ಕಾಯಿಲೆ ಇರುವವರು ವೈದ್ಯರು ಹೇಳಿರುವ ಔಷಧಿಯ ಸೇವನೆ ಮುಖ್ಯವಾದರೆ ನೈಸರ್ಗಿಕವಾಗಿ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ತರುವುದು ಅಷ್ಟೇ ಮುಖ್ಯ. ಬೀಟಾ ಕೆರೋಟಿನ್ ಅಂಶ ಹೆಚ್ಚಾಗಿ ಸಿಹಿ ಗೆಣಸಿನಲ್ಲಿ ಇರುವುದರಿಂದ ಆರೋಗ್ಯದ ದೃಷ್ಟಿಯಿಂದ ಸಕ್ಕರೆ ಕಾಯಿಲೆ ಇರುವವರಿಗೆ ಇದು ಉತ್ತಮ ಆಹಾರವೆಂದು ಪರಿಗಣಿಸಲಾಗಿದೆ.
ಸಿಹಿ ಗೆಣಸಿನಲ್ಲಿ ಸಕ್ಕರೆ ಅಂಶ ಇರುವುದರಿಂದ ಮಧುಮೇಹ ಕಾಯಿಲೆಯನ್ನು ಕಡಿಮೆ ಮಾಡುತ್ತದೆ. ಮತ್ತು ರಕ್ತದಲ್ಲಿ ಇರುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಸಕ್ಕರೆ ಕಾಯಿಲೆ ಇರುವವರು ಸಿಹಿ ಗೆಣಸು ತಿನ್ನುವ ಮೊದಲು ವೈದ್ಯರ ಸಲಹೆಯನ್ನು ಪಡೆಯಬೇಕು. ಸಿಹಿ ಗೆಣಸು ನಿಯಮಿತವಾಗಿ ಸೇವನೆ ಮಾಡುವುದರಿಂದ ಸ್ತನ ಮತ್ತು ಶ್ವಾಸಕೋಶದ ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ. ಸಂಧಿವಾತ ಮತ್ತು ಅಸ್ತಮಾ ಸಮಸ್ಯೆಗೆ ಉಪಶಮನ ನೀಡುತ್ತದೆ. ಜೊತೆಗೆ ವಯಸ್ಸು ಆಗದಂತೆ ಎಚ್ಚರಿಕೆ ವಹಿಸುತ್ತದೆ.