ಈ ತಪ್ಪುಗಳನ್ನು ಮಾಡಿದರೆ ಮನೆಯಲ್ಲಿ ದರಿದ್ರತನ ಹೆಚ್ಚಾಗುತ್ತದೆ!

ಮನೆಯ ಗೃಹಿಣಿಯರು ಅದರಲ್ಲೂ ಮದುವೆಯಾದವರು ತಲೆಗೆ ಸಿಂಧೂರವನ್ನು ಇಟ್ಟುಕೊಳ್ಳಬೇಕು.ಹೀಗೆ ಧರಿಸುವುದು ಸಂಪ್ರದಾಯದ ಪ್ರಕಾರ ಪತಿ-ಪತ್ನಿಯರ ಬಂಧನವನ್ನು ಇನ್ನಷ್ಟು ಪವಿತ್ರ ಮಾಡುತ್ತದೆ.ಇನ್ನು ಹೀಗೆ ಪತ್ನಿ ಆದವರು ಪ್ರತಿದಿನ ತನ್ನ ಬೈತಲಿನಲ್ಲಿ ಸಿಂಧೂರವನ್ನು ಹಚ್ಚಿಕೊಳ್ಳುವುದರಿಂದ ಪತಿಯ ಆಯಸ್ಸು ದೀರ್ಘವಾಗುತ್ತದೆ.ಇನ್ನು ವೇದಮಂತ್ರಗಳ ಸಾಕ್ಷಿಯಾಗಿ ಹಿರಿಯರ ಸಮ್ಮುಖದಲ್ಲಿ ಮದುವೆಗಳು ಜರುಗುತ್ತವೆ. ಹೀಗೆ ಮದುವೆಗಳು ಜರುಗಿದಾಗ ಪತಿಯ ದೀರ್ಘಾಯುಷ್ಯ ಸಲುವಾಗಿ ಪತ್ನಿ ಎಲ್ಲಾ ತನು ಮನದಿಂದ ಆತನ ಕ್ಷೇಮಕ್ಕಾಗಿ ಕೆಲವು ನಿಯಮಗಳನ್ನು ಪಾಲಿಸಲೇಬೇಕು. ಇನ್ನು ಮುಖ್ಯವಾಗಿ ಪತ್ನಿಯರು ಮತ್ತು ಗೃಹಿಣಿಯರು ಮಾಡುವ ಕೆಲವು ಕೆಲಸಗಳಿಂದಲೇ ಅಥವಾ ಕೆಲವು ತಪ್ಪು ಕೆಲಸಗಳಿಂದ ದರಿದ್ರ ಅಥವಾ ಸಮಸ್ಯೆಗಳು ಉಂಟಾಗುತ್ತದೆ.

ಇದರಿಂದಲೇ ಮನೆಯಲ್ಲಿ ಶ್ರೀ ಮಹಾಲಕ್ಷ್ಮಿಯು ಮನೆಯಲ್ಲಿ ಇರದೆ ಮನೆಯಿಂದ ಹೊರಗೆ ಹೋಗುತ್ತಾಳೆ. ಮುಖ್ಯವಾಗಿ ಸಂಧ್ಯಾ ಸಮಯದಲ್ಲಿ ಹಾಲು ಮೊಸರು ಕೇಳಿದರೆ ಕೊಡಬಾರದು. ಯಾಕೆಂದರೆ ಹಾಲು-ಮೊಸರು ಸಾಕ್ಷಾತ್ ಶ್ರೀ ಮಹಾಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗುತ್ತದೆ.ಆದ್ದರಿಂದ ಯಾರೇ ಕೇಳಿದರು ಕೊಡಬಾರದು. ಇನ್ನು ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಅನ್ನಪೂರ್ಣೇಶ್ವರಿ ನೆಲೆಸಿರುತ್ತಾಳೆ.ಅಡುಗೆ ಮನೆಯನ್ನು ರಾತ್ರಿ ಶುಭ್ರಗೊಳಿಸದೆ ಮಲಗಬಾರದು. ಇಲ್ಲದಿದ್ದರೆ ಇದರಿಂದ ಆರ್ಥಿಕ ನಷ್ಟ ಎದುರಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೂದಲು ಬಿಚ್ಚಿಕೊಂಡು ತಿರುಗುವುದು ಫ್ಯಾಷನ್. ಆದರೆ ಸ್ತ್ರೀ ಅಥವಾ ಗೃಹಿಣಿಯಾರು ಕೂದಲು ಬಿಚ್ಚಿಕೊಂಡು ತಿರುಗಬಾರದು.ಅದು ರಾಕ್ಷಸರ ಜಾತಿ ಲಕ್ಷಣ ಎಂದು ಹೇಳುತ್ತವೆ ಪುರಾಣಗಳು.ಹೀಗೆ ಕೂದಲು ಬಿಚ್ಚಿಕೊಂಡು ಇರುವುದು ಅರೋಗ್ಯಕ್ಕೂ ಒಳ್ಳೆಯದಲ್ಲ.

ಸಿರಿವಂತಿಕೆ ಅಧಿದೇವತೆಯಾದ ಶ್ರೀ ಮಹಾಲಕ್ಷ್ಮಿಗೆ ಇಂತಹ ಅವಲಕ್ಷಣ ಇರುವ ಮನೆ ಇಷ್ಟ ಆಗುವುದಿಲ್ಲ.ಇನ್ನು ಉಪ್ಪು ಶ್ರೀ ಸಾಕ್ಷಾತ್ ಮಹಾಲಕ್ಷ್ಮಿ ಸ್ವರೂಪ ಎಂದು ಭಾವಿಸಲಾಗಿದೆ. ಆದ್ದರಿಂದ ಮನೆಯ ಮೂಲೆಗಳಿಗೆ ರಾತ್ರಿ ಹೊತ್ತು ಉಪ್ಪನ್ನು ಪೇಪರ್ ನಲ್ಲಿ ಹಾಕಿ.ಮರುದಿನ ಬೆಳಗ್ಗೆ ಮನೆಯ ಯಜಮಾನತಿ ಯಾರು ನೋಡದ ಹಾಗೆ, ಯಾರು ಮಾತನಾಡದ ಹಾಗೆ ಉಪ್ಪನ್ನು ಹೊರಗೆ ಹಾಕಬೇಕು.ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

ಒಬ್ಬರು ರಾತ್ರಿ ಮಲಗುವಾಗ ಪಕ್ಕದಲ್ಲಿ ನೀರು ಕುಡಿಯಬೇಕು ಎಂದು ನೀರಿನ ಬಾಟಲ್ ಇಟ್ಟುಕೊಳ್ಳುತ್ತಾರೆ.ಹೀಗೆ ಇಟ್ಟುಕೊಳ್ಳುವುದು ತಪ್ಪು. ಮಹಿಳೆಯರು ಮನೆಯವರು ಭೋಜನ ಮುಗಿಸಿದ ಮೇಲೆ ತಿನ್ನಬೇಕು.ಅವರನ್ನು ಬಿಟ್ಟು ಯಾವತ್ತಿಗೂ ಊಟ ಮಾಡಬಾರದು.ಇನ್ನು ಭೋಜನ ಮಾಡುವಾಗ ಕಾಲುಚಾಚಿ ಊಟ ಮಾಡಬಾರದು. ಎಲ್ಲಾ ನಿಯಮಗಳನ್ನು ತಪ್ಪದೇ ಪಾಲಿಸಿದರೆ ಶ್ರೀ ಮಹಾಲಕ್ಷ್ಮಿಯ ಕೃಪೆ ತಪ್ಪದೇ ಸಿಗುತ್ತದೆ.

https://www.youtube.com/watch?v=V1eHpVyLUSQ&pp=wgIGCgQQAhgB

Leave a Comment