ನಾವು ಪ್ರತಿನಿತ್ಯ ಅನ್ನ ಚಪಾತಿ, ರೋಟಿ ದೋಸೆ, ಇಡ್ಲಿ, ಉಪ್ಪಿಟ್ಟು ಎಂದೆಲ್ಲ ಉಪಹಾರಗಳನ್ನು ಪ್ರತಿನಿತ್ಯ ಸೇವನೆ ಮಾಡುತ್ತೇವೆ. ಮೈದಾ ಮಿಶ್ರಣ ಮಾಡಿದ ಚಪಾತಿ ಅಂದ್ರೆ ಗೋಧಿ ಹಿಟ್ಟಿನ ಚಪಾತಿ ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯದು. ಸಾಮಾನ್ಯವಾಗಿ ಚಪಾತಿಯಲ್ಲಿ ನಾರಿನ ಅತ್ಯುತ್ತಮವಾದ ಮೂಲವನ್ನು ಹೊಂದಿದೆ. ಇದು ರಕ್ತದ ಕೊಲೆಸ್ಟ್ರಾಲ್ ಮಲಬದ್ದತೆಯನ್ನು ತಡೆಯುತ್ತದೆ. ಅಲ್ಲದೆ ಜೀರ್ಣಾಂಗ ವ್ಯವಸ್ಥೆಯನ್ನ ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಅಷ್ಟಕ್ಕು ಚಪಾತಿಯನ್ನು ಪ್ರತಿನಿತ್ಯ ಸೇವನೆ ಮಾಡಬಹುದೇ?ಚಪಾತಿ ತೂಕವನ್ನು ಹೇಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದನ್ನ ತಿಳಿದುಕೊಳ್ಳೋಣ.
ಚಪಾತಿಗಳು ಕಾರ್ಬೋಹೈಡ್ರೇಟ್ಗಳಿಂದ ಸಮೃದ್ಧವಾಗಿದ್ದು ನಿರಂತರ ಶಕ್ತಿಯನ್ನು ನೀಡುತ್ತದೆ. ಅಲ್ಲದೆ ಪದೇ ಪದೇ ಹಸಿವಿನ ಕಡುಬಯಕೆಯನ್ನು ತಗ್ಗಿಸುತ್ತದೆ. ಚಪಾತಿಯಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಮ್ಯಾಗ್ನಿಷಿಯಂ ರಂಜಕ ಮತ್ತು ಸೋಡಿಯಮ್ನ್ನ ಹೊಂದಿದೆ. ಅಲ್ಲದೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದು ಹಂತ ಹಂತವಾಗಿ ತಗ್ಗಿಸುತ್ತದೆ. ನಮ್ಮ ಭಾರತದ ಕೆಲವು ಭಾಗಗಳಲ್ಲಿ ರೋಟಿ ಅಥವಾ ಚಪಾತಿ ಎಂದೂ ಕರೆಯುತ್ತಾರೆ.
ಇದನ್ನು ಸಂಪೂರ್ಣವಾಗಿ ಗೋಧಿಯಿಂದ ತಯಾರಿಸಲಾಗುತ್ತದೆ. ಚಪಾತಿಯಲ್ಲಿ ವಿಟಮಿನ್ ಬಿ ಇ ಬಿ ಟೆಕ್ ಮತ್ತುವೇನಿದೆ. ಇನ್ನು ಕಬ್ಬಿಣ, ಕ್ಯಾಲ್ಸಿಯಮ್, ರಂಜಕ ಮ್ಯಾಗ್ನಿಷಿಯಂ ಮತ್ತು ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳಿಂದ ಶ್ರೀಮಂತವಾಗಿದೆ. ಚಪಾತಿಗಳು ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ, ಅಂದರೆ ಮಧುಮೇಹ ಹೊಂದಿರುವವರು ಚಪಾತಿಗಳನ್ನ ರಾತ್ರಿ ವೇಳೆ ಸೇವನೆ ಮಾಡುವುದು ಬಹಳ ಒಳ್ಳೆಯದು. ಅಷ್ಟೇ ಅಲ್ಲ, ಇದು ಮಲಬದ್ಧತೆಯನ್ನು ನಿವಾರಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇನ್ನು ಚಪಾತಿಗಳಲ್ಲಿರುವ ಈ ಎಲ್ಲಾ ಪೋಷಕಾಂಶಗಳು ಕೂದಲು ಮತ್ತು ಚರ್ಮವನ್ನು ಆರೋಗ್ಯಕರವಾಗಿಡಲು ಸಾಕಷ್ಟು ಸಹಾಯ ಮಾಡುತ್ತದೆ.
ಅನೇಕ ಅಧ್ಯಯನಗಳ ಪ್ರಕಾರ ಗೋಧಿ, ಹಿಟ್ಟು, ತ್ವಚೆ ಮೇಲಿನ ಮೊಡವೆಗಳಿಗೆ ಒಳಗಿನಿಂದ ಚಿಕಿತ್ಸೆ ನೀಡುತ್ತದೆ. ಅಷ್ಟೇ ಅಲ್ಲ, ಚಪಾತಿ ಸೇವನೆ ಮಾಡುವುದರಿಂದ ಅದರಲ್ಲಿರುವ ಪೌಷ್ಟಿಕ ಸತ್ವಗಳು ನೇರವಾಗಿ ಕೇಶ ಸೌಂದರ್ಯವನ್ನು ಹೆಚ್ಚಿಸಲು ಉತ್ತೇಜಿಸುತ್ತವೆ. ಅಷ್ಟೇ ಅಲ್ಲದೆ ಮೂಳೆಗಳನ್ನು ಬಲಿಷ್ಠಗೊಳಿಸಲು ಸಹಾಯ ಮಾಡುತ್ತದೆ. ಇನ್ನು ಇದರಲ್ಲಿ ವಿಟಮಿನ್ ಬಿ ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಮಧುಮೇಹ ಹೊಂದಿರುವವರಿಗೆ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಮೆದುಳು ಮತ್ತು ಸ್ಮರಣ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರವಾದ ಕಣ್ಣು ಪಡೆಯಲು ಗೋಧಿ ಬಹಳ ಉತ್ತಮ.
ಅಷ್ಟೇ ಅಲ್ಲದೆ ಚಪಾತಿಗಳು ನಿಮ್ಮ ತೂಕ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಅನೇಕ ಪೌಷ್ಟಿಕ ತಜ್ಞರು ಕೂಡ ತೂಕ ಕಳೆದುಕೊಳ್ಳಲು ಚಪಾತಿ ಅನ್ನ ಸೇವನೆ ಮಾಡಲು ಸಲಹೆ ನೀಡುತ್ತಾರೆ. ಹಾಗಾಗಿ ನಿಮ್ಮ ಡಯೆಟ್ ನಲ್ಲಿ ತಪ್ಪದೆ ಚಪಾತಿಗಳನ್ನು ಸೇರಿಸಿ ಇದು ದೀರ್ಘಕಾಲದವರೆಗೆ ನಿಮ್ಮ ಹೊಟ್ಟೆಯನ್ನು ತುಂಬಿಸುತ್ತದೆ. ಪದೇ ಪದೇ ಹಸಿವಿನ ಕಡುಬಯಕೆ ನಿಗ್ರಹಿಸುತ್ತದೆ.