ಮುಖ್ಯದ್ವಾರದ ಎದುರು ಈ ವಸ್ತುಗಳಿದ್ದರೆ ಸಾಲ ತಿರೋಲ್ಲ!

ಕಷ್ಟಗಳೇ ಇಲ್ಲದ ಮನುಷ್ಯ ಭೂಮಿ ಮೇಲೆ ಹುಡುಕಿದರೂ ಸಿಗುವುದಿಲ್ಲ. ಕಷ್ಟಪಟ್ಟು ದುಡೀತೀವಿ ಅದರೆ ನಂತರವು ಅನೇಕ ಬಾರಿ ಯಶಸ್ಸು ಸಿಗುವುದಿಲ್ಲ. ಇದರ ಮೇಲೆ ಸಾಲವು ಮೇಲಿಂದ ಮೇಲೆ ಹೆಚ್ಚಾಗುತ್ತಾ ಹೋಗುತ್ತದೆ. ಮನೆಯಲ್ಲಿ ಹಣದ ಕೊರತೆ ಪೂರ್ಣವಾಗದ ಕೆಲಸ, ಮದುವೆ ವಿಳಂಬ ಕುಟುಂಬದಲ್ಲಿ ಹೆಚ್ಚಾಗುತ್ತಿರುವ ಹಣದ ಖರ್ಚು ಈ ಎಲ್ಲಾ ಸಮಸ್ಸೆಗಳಿಗೆ ಕಾರಣ ಎಂದು ಯಾರಿಗೂ ತಿಳಿದಿರುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಮನೆ ಮತ್ತು ಮನೆ ಹೊರಗಿನ ವಸ್ತುಗಳು ನಿಮ್ಮ ಸಾಮಜಿಕ ಆರ್ಥಿಕ ಹಾಗು ಕೌಟುಂಬಿಕ ಜೀವನದ ಮೇಲೆ ಬಹಳ ಅಳವಾದ ಪ್ರಭಾವವನ್ನು ಬಿರುತ್ತದೆ ಮತ್ತು ಅದು ಮುಂದಿನ ಜೀವನಕ್ಕೆ ಹೇಗಿರುತ್ತದೆ ಅನ್ನೋದನ್ನ ನಿರ್ಧರಿಸುತ್ತದೆ. ಮುಖ್ಯ ದ್ವಾರದ ಎದುರು ಕೆಲವು ವಸ್ತು ಇಡುವುದು ಕೆಟ್ಟದ್ದು ಅಂತಾ ಪರಿಗಣಿಸಲಾಗಿದೆ. ಇದು ವಾಸ್ತು ದೋಷವನ್ನು ಹೆಚ್ಚಿಸುತ್ತದೆ.

ಮನೆಯ ಉತ್ತರ ದಿಕ್ಕಿನಲ್ಲಿ ಏನಾದರು ವಾಸ್ತು ದೋಷ ಇದ್ದರೆ ಸಾಲದ ಪ್ರಮಾಣ ಹೆಚ್ಚಾಗುತ್ತಾ ಇರುತ್ತದೆ. ಉತ್ತರ ದಿಕ್ಕನ್ನು ದೇವರ ದಿಕ್ಕಿ ದೇವರ ಮೂಲೆ ಅಂತಾ ಪರಿಗಣಿಸಲಾಗಿದೆ. ಈ ದಿಕ್ಕನ್ನು ಯಾವಾಗಲು ಖಾಲಿಯಾಗಿ ಇಡಬೇಕು. ಭಾರವಾದ ಪಿಟೋಪಕಾರಣಗಳನ್ನು ಉತ್ತರ ದಿಕ್ಕಿನಲ್ಲಿ ಇಡುವುದರಿಂದ ದೋಷಗಳು ಉಂಟಾಗುತ್ತದೆ.

ಮನೆಯ ಉತ್ತರ ದಿಕ್ಕು ಎದುರಿಗಿಂತ ದೊಡ್ಡದಾಗಿ ಇದ್ದರು ಸಹ ಅದು ವಾಸ್ತು ದೋಷ ಅಂತಾ ಪರಿಗಣಿಸಲಾಗಿದೆ. ಮನೆ ನಿರ್ಮಿಸುವಾಗ ನೀವು ಉತ್ತರ ದಿಕ್ಕನ್ನು ದೊಡ್ಡದು ಮಾಡಿ ದಕ್ಷಿಣ ದಿಕ್ಕನ್ನು ಖಾಲಿಯಾಗಿರಿಸಿದರೆ ಅದು ಕೂಡ ಕೊರತೆಯೇ.

ನೈರುತ್ಯ ದಿಕ್ಕಿನಲ್ಲಿ ವಾಟರ್ ಟ್ಯಾಂಕ್ ಇದ್ದರೆ ನೀವು ಹೆಚ್ಚು ಸಾಲ ಮಾಡುವ ಸಾಧ್ಯತೆ ಇರುತ್ತದೆ.

ವ್ಯಾಪರ ಮಾಡುವವರಿಗೆ ಬಿನ್ನಾಭಿಪ್ರಾಯ ಇದ್ದರೆ ನಿಮ್ಮ ಮನೆಯ ಈಶನ್ಯ ದಿಕ್ಕನ್ನು ಪರಿಶೀಲಿಸಬೇಕು. ಈ ದಿಕ್ಕಾಲ್ಲಿ ನೀವು ಯಾವುದಾದರು ಯಂತ್ರವನ್ನು ಇಟ್ಟಿದ್ದು ಅದು ಹೆಚ್ಚಿನ ಶಾಖವನ್ನು ನೀಡುತ್ತಿದ್ದಾರೆ ದೊಡ್ಡ ನ್ಯೂನತೆ ಎಂದು ಹೇಳಲಾಗಿದೆ. ಈ ಕಾರಣದಿಂದ ತೊಂದರೆ ಹಾಗು ಅಡಚಣೆಗಳು ಉಂಟಾಗುವುದು.

ಈಶನ್ಯ ದಿಕ್ಕಿನಲ್ಲಿ ಕಸದ ತೊಟ್ಟಿ, ಶೌಚಾಲಯ, ಪೊರಕೆಯಂತಹ ವಸ್ತುಗಳು ಇದ್ದರೆ ಅವು ನಿಮ್ಮ ಆರ್ಥಿಕ ಅಭಿವೃದ್ಧಿ ಮೇಲೆ ಪರಿಣಾಮ ಬಿರುತ್ತವೆ. ಹಾಗಾಗಿ ಈಶನ್ಯ ದಿಕ್ಕಿನಲ್ಲಿ ಇರುವ ಈ ವಸ್ತುಗಳನ್ನು ತೆರವುಗೊಳಿಸಿ. ಈಶನ್ಯ ದಿಕ್ಕಿನಲ್ಲಿ ಪೂಜಾ ಕೊಠಡಿ ಮತ್ತು ಧ್ಯಾನ ಕೊಠಡಿ ಇದ್ದರೆ ನಿಮಗೆ ಒಳ್ಳೆಯದು.

ನಿಮ್ಮ ಕೆಲಸದಲ್ಲಿ ಕ್ಲಿಟ್ ಜೊತೆ ಸಮಸ್ಸೆ ಇದ್ದರೆ ಅದು ನೀರಿನ ತೊಟ್ಟಿ ವಾಟರ್ ಟ್ಯಾಂಕ್ ನ ಇಟ್ಟಿರುವ ಸಮಸ್ಸೆ ಇರಬಹುದು. ನೀವು ಅಗ್ನಿಯ ದಿಕ್ಕಿನಲ್ಲಿ ನೀರಿನ ಟ್ಯಾಂಕ್ ಇಟ್ಟಿದ್ದರೆ ಅದು ವಾಸ್ತುವಿನ ಸಮಸ್ಸೆಗೆ ಕಾರಣವಾಗುತ್ತದೆ.ಅಗ್ನೇಯ ದಿಕ್ಕನ್ನು ಅಗ್ನಿ ಮೂಲೆ ಎಂದು ಕರೆಯಲಾಗುತ್ತದೆ. ಈ ದಿಕ್ಕಿನಲ್ಲಿ ನೀರನ್ನು ಇಡಬಾರದು.

ಮುಖ್ಯದ್ವಾರದ ಬಳಿ ಕಸದ ಡಬ್ಬಿ ಅಥವಾ ಪೊರಕೆ ಇಡುವುದು ಬೇಡ

ಸಾಮಾನ್ಯವಾಗಿ ಕೆಲವರು ಮನೆಯ ಕಸ ಗುಡಿಸಿ ಮುಖ್ಯ ದ್ವಾರದ ಬಳಿ ಅಥವಾ ಬಾಗಿಲ ಹಿಂದೆ ಕಸದ ಡಬ್ಬಿ ಇಟ್ಟು ಅದಕ್ಕೆ ಕಸ ತುಂಬುತ್ತಾರೆ. ಕೆಲವರು ಕವರ್‌ನಲ್ಲಿ ತುಂಬಿ ಇಡುತ್ತಾರೆ. ಹಾಗೇ ಮುಖ್ಯ ದ್ವಾರದ ಹಿಂಭಾಕ ಪೊರಕೆ ಇಡುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಯಾವ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬಾರದು. ಏಕೆಂದರೆ ಮುಖ್ಯ ದ್ವಾರದ ಬಳಿ ಇರುವ ಕಸವು ನಿಮ್ಮ ಆರ್ಥಿಕ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಕಸ ಅಥವಾ ಕಸದ ತೊಟ್ಟಿಗಳನ್ನು ವಾಸ್ತು ಪ್ರಕಾರ, ಶೋಕದ ವಸ್ತುಗಳು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮುಖ್ಯ ದ್ವಾರದ ಬಳಿ ಕಸವನ್ನು ಸಂಗ್ರಹಿಸಿ ಇಡಬೇಡಿ.

ಮರಗಳು ಮತ್ತು ಗಿಡಗಳು ಇರಬಾರದು

ವಾಸ್ತು ಪ್ರಕಾರ, ನಿಮ್ಮ ಮನೆಯ ಮುಖ್ಯ ದ್ವಾರದ ಬಳಿ ಯಾವುದೇ ಮರಗಳು ಅಥವಾ ಗಿಡಗಳು ಇರಬಾರದು. ಏಕೆಂದರೆ ಅದು ನಿಮ್ಮ ಪ್ರಗತಿಗೆ ಅಡ್ಡಿಯಾಗುತ್ತದೆ. ಇದು ನಿಮ್ಮ ಮನೆಯಲ್ಲಿರುವ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಹಾಗಾಗಿ ಮನೆ ಕಟ್ಟುವಾಗ ಅಥವಾ ಮನೆ ಖರೀದಿಸುವಾಗ ಮನೆಯ ಮುಖ್ಯ ದ್ವಾರದ ಬಳಿ ಮರಗಳು ಇರದಂತೆ ನೋಡಿಕೊಳ್ಳಿ. ಏಕೆಂದರೆ ವಾಸ್ತು ಪ್ರಕಾರ ಮನೆಯ ಮುಖ್ಯ ದ್ವಾರದ ಬಳಿ ಮರವಿದ್ದರೆ ಬಲದೋಷ ಉಂಟಾಗುತ್ತದೆ.

ಮುಖ್ಯ ದ್ವಾರದ ನೇರವಾಗಿ ರಸ್ತೆ ಇರಬಾರದು

ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯ ಮುಖ್ಯ ದ್ವಾರದ ಮುಂದೆ ನೇರ ರಸ್ತೆ ಇರಬಾರದು ಎಂಬುದನ್ನು ಗಮನದಲ್ಲಿಡಿ. ಮುಖ್ಯ ರಸ್ತೆಗೆ ಎದುರಾಗಿ ನೇರವಾಗಿ ರಸ್ತೆ ಇದ್ದರೆ ಮನೆಯಲ್ಲಿ ಕುಟುಂಬ ಸದಸ್ಯರ ನಡುವೆ ಸಾಮರಸ್ಯ ಕಡಿಮೆಯಾಗಿ ಸಂಬಂಧ ಹದಗೆಡುವ ಸಾಧ್ಯತೆ ಹೆಚ್ಚು.

ನೀರು ಅಥವಾ ಕೆಸರು ಇರುವುದು ಅಶುಭ

ನಿಮ್ಮ ಮನೆಯ ಮುಖ್ಯ ದ್ವಾರದ ಬಳಿ ಎಂದಿಗೂ ನೀರು ಅಥವಾ ಕೆಸರು ಇರಬಾರದು. ಹಾಗೇನಾದರೂ ಇದ್ದರೆ ಮೊದಲು ಅದನ್ನು ತೆರವುಗೊಳಿಸಿ. ಇಲ್ಲವಾದರೆ ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮನೆಯ ಕುಟುಂಬದ ಸದಸ್ಯರ ಆರೋಗ್ಯದ ಮೇಲೆ ಕೂಡಾ ಪ್ರತಿಕೂಲ ಪರಿಣಾಮ ಬೀರುತ್ತದೆ. ಜೊತೆಗೆ ಆರ್ಥಿಕ ಸಮಸ್ಯೆ ಕೂಡಾ ಹೆಚ್ಚು. ಆದ್ದರಿಂದ ನಿಮ್ಮ ಮನೆಯ ಪ್ರವೇಶ ದ್ವಾರದ ಮುಂಭಾಗ ನೀರು ಸಂಗ್ರಹಿಸಿ ಇಡಬೇಡಿ. ಮನೆಯ ಒಳಗೆ ಇರುವಂತೆ ಹೊರಭಾಗ ಕೂಡಾ ಸ್ವಚ್ಛವಾಗಿರಬೇಕು.

ಈ ಸಲಹೆಗಳನ್ನು ಹೊರತುಪಡಿಸಿ ಮನೆಯ ಮುಖ್ಯ ದ್ವಾರವು ಉತ್ತರ, ಪೂರ್ವ, ಪಶ್ಚಿಮ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಬೇಕು. ಈ ದಿಕ್ಕುಗಳು ಮಂಗಳಕರ ಎಂದು ಪರಿಗಣಿಸಲಾಗಿದೆ. ಆದರೆ ಯಾವುದೇ ಕಾರಣಕ್ಕೂ ಮುಖ್ಯ ದ್ವಾರವು ದಕ್ಷಿಣ, ನೈಋತ್ಯ, ವಾಯವ್ಯ ಅಥವಾ ಆಗ್ನೇಯ ದಿಕ್ಕುಗಳಲ್ಲಿ ಇರಬಾರದು. ಮನೆಯ ಒಳಗಿನ ಇತರ ಕೋಣೆಗಳ ಬಾಗಿಲಿಗಿಂತ ಮುಖ್ಯ ದ್ವಾರವು ದೊಡ್ಡದಾಗಿರಬೇಕು.

Leave a Comment