ಇದೆ 2024 ಫೆಬ್ರವರಿ 14ನೇ ತಾರೀಕು ಬುಧವಾರ ವಸಂತ ಪಂಚಮಿ. ಈ ದಿನ ಜ್ಞಾನದ ಆದಿ ದೇವತೆಯಾದ ಸರಸ್ವತಿ ದೇವಿಯನ್ನು ಪೂಜೆ ಮಾಡಲಾಗುತ್ತದೆ. ಈ ದಿನ ಶಾಲೆಗಳಲ್ಲಿ ಕೂಡ ಪೂಜೆ ಮಾಡುತ್ತಾರೆ ಮತ್ತು ಸಣ್ಣ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಬೇಕು ಅಂದುಕೊಂಡಿದ್ದಿರೋ ಅವರು ಕೂಡ ಈ ಒಂದು ಶುಭ ಮುಹೂರ್ತದಲ್ಲಿ ನಿಮ್ಮ ಪುಟ್ಟ ಮಕ್ಕಳಿಗೆ ಅಕ್ಷರ ಅಭ್ಯಾಸವನ್ನು ಮಾಡಿಸಿ. ಈ ದಿನ ದೇವಿಯ ಪೂಜೆಯನ್ನು ಮಾಡುವುದರಿಂದ ಅಲಾಸ್ಯ ದೂರವಾಗಿ ಯಶಸ್ಸನ್ನು ಗಳಿಸುತ್ತೀರಾ. ಮಾಘ ಮಾಸದ 5ನೇ ದಿನವನ್ನು ವಸಂತ ಪಂಚಮಿ ಎಂದು ಹೇಳಲಾಗುತ್ತದೆ. ಇದು ವಸಂತ ಕಾಲದ ಆರಂಭದ ಮುನ್ಸೂಚನೆ ಆಗಿರುತ್ತದೆ. ಈ ದಿನ ಶ್ರದ್ದಾ ಭಕ್ತಿಯಿಂದ ಪೂಜೆ ಮಾಡಿದರೆ ತುಂಬಾ ಒಳ್ಳೆಯದು.
ಫೆಬ್ರವರಿ 13ನೇ ತಾರೀಕು ಮಂಗಳವಾರ ಮಧ್ಯಾಹ್ನ 2:40 ನಿಮಿಷಕ್ಕೆ ಪಂಚಮಿ ತಿಥಿ ಪ್ರಾರಂಭವಾಗುತ್ತದೆ ಮತ್ತು ಮಾರನೇ ದಿನ ಫೆಬ್ರವರಿ 14ನೇ ತಾರೀಕು ಬುಧವಾರ ಮಧ್ಯಾಹ್ನ 12:09 ನಿಮಿಷಕ್ಕೆ ಕೊನೆಗೂಳ್ಳುತ್ತದೆ. ಹಾಗಾಗಿ ಪಂಚಮಿ ದಿನ ಪೂಜೆ ಮಾಡುವವರು ಬುಧವಾರ 12 ಗಂಟೆ ಒಳಗಾಗಿ ಪೂಜೆ ಮಾಡಬೇಕು.
ಬುಧವಾರ ಬೆಳಗ್ಗೆ ಸೂರ್ಯದಯಕ್ಕೂ ಮುಂಚೆ ಎದ್ದು ಸ್ನಾನ ಮಾಡಿ ಪೂಜಾ ಸಿದ್ಧತೆ ಮಾಡಿಕೊಂಡು ಪೂಜೆಯನ್ನು ಮಾಡಿ. ಬೆಳಗ್ಗೆ ಎದ್ದು ಸ್ನಾನ ಮಾಡಿ ಬಿಳಿ ಅಥವಾ ಹಳದಿ ಬಟ್ಟೆಯನ್ನು ಧರಿಸಬೇಕು. ಮನೆಯನ್ನು ಸ್ವಚ್ಛ ಗೊಳಿಸಿ ಪೂಜಾ ಸಿದ್ಧತೆ ಮಾಡಿಕೊಳ್ಳಿ. ಪೂಜೆ ಮಾಡುವ ಜಾಗದಲ್ಲಿ ಸ್ವಾತಿಕ್ ಚಿಹ್ನೆ ಹಾಕಿ ಮಣೆ ಇಟ್ಟು ಬಿಳಿ ವಸ್ತ್ರವನ್ನು ಹಾಕಿ ಸರಸ್ವತಿ ಫೋಟೋ ಇಟ್ಟು ಅರಿಶಿನ ಕುಂಕುಮ ಹಾಗು ಬಿಳಿ ಹೂವಿನಿಂದ ಅಲಂಕಾರವನ್ನು ಮಾಡಬೇಕು. ಈ ದಿನ ಮೊದಲು ಗಣಪತಿ ಪೂಜೆಯನ್ನು ಮಾಡಿ ಬಿಳಿ ಹೂವು ಮತ್ತು ಎಕ್ಕದ ಹೂವಿನಿಂದ ಅಲಂಕಾರ ಮಾಡಬೇಕು. ಗರಿಕೆ ಹುಲ್ಲನ್ನು ಕೂಡ ದೇವರಿಗೆ ಅರ್ಪಿಸಬೇಕು.
ನಂತರ ಎರಡು ತುಪ್ಪದ ದೀಪವನ್ನು ಹಚ್ಚಬೇಕು. ಹಾಲಿನಿಂದ ಮಾಡಿದ ಯಾವುದೇ ಸಿಹಿ ಪದಾರ್ಥವನ್ನು ನೈವೇದ್ಯಕ್ಕೆ ಇಡಬೇಕು. ಇದರ ಜೊತೆಗೆ ಸರಸ್ವತಿ ಗೆ ಪ್ರಿಯವಾದ ವಸ್ತುಗಳು ಮತ್ತು ಪುಸ್ತಕ, ನೀವು ಬರೆಯುವ ಬಿಲ್ ಗಳು ಇಡಬೇಕು. ಹೊಸ ಬುಕ್ ಮತ್ತು ಪೆನ್ ಗಳನ್ನು ಇಟ್ಟು ಪೂಜೆ ಮಾಡಿದ ನಂತರ ಮಕ್ಕಳ ಕೈಯಿಂದ ಬೇರೆ ಮಕ್ಕಳಿಗೆ ಧಾನವನ್ನು ಕೊಡಿಸಿ. ಕುಂಕುಮ ಅರ್ಚನೆ ಮಾಡುತ್ತ ಗಣಪತಿ ಅಷ್ಟೊತ್ತರ ಅಥವಾ ಸರಸ್ವತಿ ಅಷ್ಟೊತ್ತರವನ್ನು ಹೇಳಬೇಕು. ನಂತರ ನೈವೇದ್ಯ ಅರ್ಪಿಸಿ ದೀಪ ದೂಪಾ ಬೆಳಗಬೇಕು ಹಾಗು 5 ತುಪ್ಪದ ದೀಪವನ್ನು ಹಚ್ಚಬೇಕು. ನಂತರ ಮನೆಯವರಿಗೆ ಪ್ರಸಾದ ಎಲ್ಲರಿಗೆ ಕೊಡಬೇಕು.