ಅಮಾವಾಸ್ಯೆ ದಿನ ಇಂತಹ ವಸ್ತುಗಳನ್ನು ಮನೆಗೆ ತರಬಾರದು!

ಹಿಂದೂ ಕ್ಯಾಲೆಂಡರ್‌ ಪ್ರಕಾರ, ಧಾರ್ಮಿಕ ಪ್ರಾಮುಖ್ಯತೆಯುಳ್ಳ ಎಲ್ಲಾ ದಿನಗಳಿಗೂ ವಿಶೇಷ ನಿಯಮಗಳಿವೆ. ಧರ್ಮವನ್ನು ನಂಬುವ ಪ್ರತಿಯೊಬ್ಬ ವ್ಯಕ್ತಿಯೂ ಈ ಎಲ್ಲಾ ನಿಯಮಗಳನ್ನು ಅನುಸರಿಸಲೇಬೇಕು. ಹಿಂದೂ ಧರ್ಮದಲ್ಲಿ ಅಮಾವಸ್ಯೆ, ಪೂರ್ಣಿಮಾ, ದ್ವಾದಶಿ, ತ್ರಯೋದಶಿ ಮತ್ತು ಏಕಾದಶಿ ಈ ದಿನಗಳನ್ನು ಪ್ರಮುಖವೆಂದು ಪರಿಗಣಿಸಲಾಗುವುದು. ಇಂದು ನಾವು ಅಮಾವಾಸ್ಯೆಯ ನಿಯಮಗಳನ್ನು ತಿಳಿಸಲಿದ್ದೇವೆ. ಅಮಾವಾಸ್ಯೆಯನ್ನು ಮುಖ್ಯವಾಗಿ ಪಿತೃಗಳಿಗೆ ಮೀಸಲಿರಿಸಲಾಗಿದೆ. ಅಮಾವಾಸ್ಯೆಯಂದು ನಾವು ಕೆಲವೊಂದು ವಸ್ತುಗಳನ್ನು ಮನೆಗೆ ತರಬಾರದು. ಅಂತಹ ವಸ್ತುಗಳು ಯಾವುವು..? ಅಮಾವಾಸ್ಯೆಯಂದು ಈ ವಸ್ತುಗಳನ್ನು ಮನೆಗೆ ತರದಿರಿ.

​ಪೊರಕೆ

ಅಮಾವಾಸ್ಯೆಯ ದಿನವನ್ನು ಪಿತೃಗಳ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನವು ಭಗವಾನ್‌ ಶನಿಯೊಂದಿಗೆ ಸಂಬಂಧವನ್ನು ಹೊಂದಿದೆಯೆಂದು ಕೂಡ ಹೇಳಲಾಗುತ್ತದೆ. ಆದರೆ ಧರ್ಮಗ್ರಂಥಗಳಲ್ಲಿ ಲಕ್ಷ್ಮಿ ದೇವಿ ಮತ್ತು ಪೊರಕೆಯ ಸಂಬಂಧವನ್ನು ಉಲ್ಲೇಖಿಸಲಾಗಿದೆ. ಅಮಾವಾಸ್ಯೆ ತಿಥಿಯಲ್ಲಿ ಮನೆಗೆ ಪೊರಕೆಯನ್ನು ತರುವುದರಿಂದ ಲಕ್ಷ್ಮಿ ದೇವಿಯು ಕಿರಿಕಿರಿಯನ್ನನುಭವಿಸುವಳು. ಅಮಾವಾಸ್ಯೆಯಂದು ಪೊರಕೆಯನ್ನು ತರುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ. ವಿನಃ ಕಾರಣ ಹಣವನ್ನು ಖರ್ಚು ಮಾಡುವ ಪರಿಸ್ಥಿತಿ ಎದುರಾಗುತ್ತದೆ. ಅನಗತ್ಯ ವಸ್ತುಗಳ ಖರೀದಿಯಲ್ಲಿ ಹಣವನ್ನು ವ್ಯಯ ಮಾಡಬೇಕಾಗುತ್ತದೆ ಹಾಗೂ ಆರೋಗ್ಯದ ಸಮಸ್ಯೆಗಳಿಗೆ ಹೆಚ್ಚು ಹಣವನ್ನು ಭರಿಸಬೇಕಾಗುತ್ತದೆ. ಆದ್ದರಿಂದ ಅಮಾವಾಸ್ಯೆಯಲ್ಲಿ ಮನೆಗೆ ಪೊರಕೆಯನ್ನು ತರಬಾರದು.

ಗೋಧಿ ಹಿಟ್ಟು

ಅಮಾವಾಸ್ಯೆ ತಿಥಿಗಳಲ್ಲಿ ಮನೆಗೆ ಗೋಧಿಯನ್ನು ಮತ್ತು ಗೋಧಿ ಹಿಟ್ಟನ್ನು ತರಬಾರದು. ವಿಶೇಷವಾಗಿ ಈ ನಿಯಮವನ್ನು ಭಾದ್ರ ಮಾಸದ ಅಮಾವಾಸ್ಯೆಯಲ್ಲಿ ಅನುಸರಿಸಲೇಬೇಕು. ಅಮಾವಾಸ್ಯೆಯಲ್ಲಿ ಮನೆಗೆ ಗೋಧಿ ಅಥವಾ ಅದರ ಹಿಟ್ಟನ್ನು ತರುವುದರಿಂದ ಪಿತೃಗಳು ನಿಮ್ಮ ಮೇಲೆ ಕೋಪಿಸಿಕೊಳ್ಳುವರು.

​ಎಣ್ಣೆಯನ್ನು ಹಚ್ಚದಿರಿ

ಅಮಾವಾಸ್ಯೆಯಂದು ಎಣ್ಣೆಯನ್ನು ಹಚ್ಚಿಕೊಳ್ಳಬಾರದೆಂಬ ನಿಯಮಗಳಿವೆ. ನೀವು ಸಂಕ್ರಾಂತಿಯಂದು ತೈಲವನ್ನು ಹಚ್ಚಿಕೊಳ್ಳುವುದು ಕೂಡ ಅಶುಭವೆಂದು ಪರಿಗಣಿಸಲಾಗುವುದು. ಅಮಾವಾಸ್ಯೆಯಂದು ತೈಲವನ್ನು ಅಥವಾ ಎಣ್ಣೆಯನ್ನು ನೀವು ಹಚ್ಚಿಕೊಳ್ಳುವ ಬದಲು ಈ ದಿನ ಎಣ್ಣೆಯನ್ನು ದಾನ ಮಾಡಬೇಕು. ಇದರಿಂದ ಶನಿಯು ನಿಮ್ಮನ್ನು ಆಶೀರ್ವದಿಸುವನು. ಹಾಗೂ ಶನಿ ದೋಷವಿದ್ದರೆ ಅದು ದೂರಾಗುವುದು. ಅಮಾವಾಸ್ಯೆಯು ಪಿತೃಗಳಿಗೆ ಗೌರವ ಸಲ್ಲಿಸುವ ದಿನವಾಗಿದ್ದು, ಸಾತ್ವಿಕ ಭಾವವನ್ನು ಕಾಪಾಡಿಕೊಳ್ಳಲು, ಸಕಾರಾತ್ಮಕ ಭಾವವನ್ನು ಹೆಚ್ಚಿಸಿಕೊಳ್ಳಲು ತೈಲ ಅಥವಾ ಎಣ್ಣೆಯನ್ನು ಹಚ್ಚಬಾರದು.

ಪೂಜಾ ಸಾಮಾಗ್ರಿಯನ್ನು ಮನೆಗೆ ತರದಿರಿ

ಅಮಾವಾಸ್ಯೆ ತಿಥಿಯನ್ನು ಪಿತೃ ಕರ್ಮಕ್ಕೆ ಸಂಬಂಧಿಸಿದ ತಿಥಿಯೆಂದು ಪರಿಗಣಿಸಲಾಗುತ್ತದೆ. ಅದ್ದರಿಂದ ಅಮಾವಾಸ್ಯೆ ದಿನ ಪಿತೃ ಪೂಜೆಗೆ ಸಾಮಾಗ್ರಿಗಳನ್ನು ತರಬಹುದೇ ಹೊರತು, ದೇವರನ್ನು ಪೂಜಿಸಲು ಸಾಮಾಗ್ರಿಗಳನ್ನು ತರಬಾರದು. ಅಮಾವಾಸ್ಯೆ ದಿನದಂದು ಪಿತೃ ಕಾರ್ಯಗಳಿಗೆ ವಸ್ತುಗಳನ್ನು ತಂದು ದಾನ ಮಾಡುವುದು ಅತ್ಯಂತ ಶುಭದಾಯಕವೆಂದು ಹೇಳಲಾಗಿದೆ.

​ಮಾಂಸ ಹಾಗೂ ಮದ್ಯ

ಅಮಾವಾಸ್ಯೆ ಮತ್ತು ಪೂರ್ಣಿಮಾವು ಪಿತೃ ಮತ್ತು ದೇವರ ಕಾರ್ಯಗಳೊಂದಿಗೆ ಮಾನ್ಯತೆಯನ್ನು ಹೊಂದಿದೆ. ಆದ್ದರಿಂದ ಈ ದಿನಗಳಲ್ಲಿ ನೀವು ಮಾಂಸಾಹಾರ ಸೇವನೆಯಿಂದ ದೂರಿರಬೇಕೆಂದು ಧರ್ಮಗ್ರಂಥಗಳಲ್ಲಿ ಉಲ್ಲೇಖ ಮಾಡಲಾಗಿದೆ. ಅಮಾವಾಸ್ಯೆಯು ಭಗವಾನ್‌ ಶನಿಯೊಂದಿಗೆ ಸಂಬಂಧವನ್ನು ಹೊಂದಿರುವುದರಿಂದ ಈ ದಿನ ನೀವು ಮಾಂಸಾಹಾರ, ಮದ್ಯವನ್ನು ಸೇವಿಸುವುದರಿಂದ ಶನಿಯ ದುಷ್ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಇದರಿಂದ ಶನಿಯಿಂದಾಗುವ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗುತ್ತದೆ ಎಂದು ಲಾಲ್‌ ಕಿತಾಬ್‌ನಲ್ಲಿ ಉಲ್ಲೇಖಿಸಲಾಗಿದೆ.

ಹೊಸ ವಾಹನಗಳನ್ನು, ಬಟ್ಟೆಯನ್ನು ಖರೀದಿಸದಿರಿ

ಅಮಾವಾಸ್ಯೆ ದಿನದಂದು ಹೊಸ ವಸ್ತುಗಳನ್ನು ಮನೆಗೆ ತರುವುದು ಅತ್ಯಂತ ಅಶುಭವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮನೆಗೆ ಅಮಾವಾಸ್ಯೆಂದು ಹೊಸ ವಾಹನಗಳನ್ನು, ಬಟ್ಟೆಯನ್ನು ತರಬಾರದು. ಅಮಾವಾಸ್ಯೆಯನ್ನು ಕತ್ತಲು ಎಂದು ಪರಿಗಣಿಸುವುದರಿಂದ ಈ ದಿನ ಹೊಸ ವಸ್ತುಗಳನ್ನು ಖರೀದಿಸದಿರುವುದೇ ಉತ್ತಮ.

Leave a Comment