ಪೊರಕೆ :ನೆಲ ಗುಡಿಸುವುದು ಪ್ರತಿದಿನ ಕೆಲಸ ಅಲ್ವಾ. ಇನ್ನು ಮಾರುಕಟ್ಟೆಯಲ್ಲಿ ನೆಲ ಗುಡಿಸುವುದಕ್ಕೆ ನಾನಾ ರೀತಿಯ ಪೊರಕೆ ದೊರೆಯುತ್ತದೆ. ಇನ್ನು ಕಸ ಗುಡಿಸುವಾಗ ಕೈ ನೋವು ಬರುತ್ತದೆ ಮತ್ತು ಬೇವರು ಬರುತ್ತದೆ. ಅಷ್ಟೇ ಅಲ್ಲದೆ 2 ತಿಂಗಳಿಗೆ ಪೊರಕೆ ಹಾಳಾಗಿ ಹೋಗುತ್ತದೆ. ಇನ್ನು ಪೊರಕೆಯನ್ನು ಬಳಸುತ್ತಾ ಲೂಸ್ ಆಗುತ್ತದೆ. ನಂತರ ಪೊರಕೆ ಕಡ್ಡಿ ಹೊರಗೆ ಬರುತ್ತದೆ. ಹೊರಗೆ ಬಂದ ಕಡ್ಡಿಯನ್ನು ಹಾಗೆ ಅದರಲ್ಲಿ ಸೇರಿಸಿ. ಏಕೆಂದರೆ ಈ ರೀತಿ ಮಾಡಿದರೇ ಪೊರಕೆ ಬಳಕೆ ಮತ್ತು ಸ್ಟಿಫ್ ಆಗಿ ಇರುತ್ತದೆ. ಪದೇ ಪದೇ ಪೊರಕೆ ಕಡ್ಡಿ ಉದುರಿ ಹೋಗುವುದಿಲ್ಲ.
ಇನ್ನು ಪೊರಕೆ ಲೂಸ್ ಆಗಬಾರದು ಎಂದರೆ ಒಂದು ಕಡ್ಡಿಯನ್ನು ಪೊರಕೆ ಮಧ್ಯ ಭಾಗದಲ್ಲಿ ಚುಚ್ಚಿಬೇಕು. ಇದರಿಂದ ಪೊರಕೆ ಕಡ್ಡಿಗಳು ಸ್ಟಿಫ್ ಆಗಿರುತ್ತದೆ. ಪದೇ ಪದೇ ಪೊರಕೆ ಕಡ್ಡಿಗಳು ಮುರಿಯುವುದಿಲ್ಲ ಹಾಗು ಬಹಳ ದಿನಗಳ ವರೆಗೆ ಪೊರಕೆ ಬಳಕೆ ಬರುತ್ತದೆ. ಪೊರಕೆ ಕಡ್ಡಿ ಉದುರಿ ಕೂಡ ಹೋಗುವುದಿಲ್ಲ.
ಇನ್ನು ಮಧ್ಯದಲ್ಲಿ ಒಂದು ದಾರದಿಂದ ಪೊರಕೆಯನ್ನು ಕಟ್ಟಿದರೆ ಪೊರಕೆ ಬೆಂಡು ಆಗುವುದಿಲ್ಲ. ಈ ರೀತಿ ಮಾಡಿದರೆ ಬಹಳ ದಿನಗಳ ವರೆಗೆ ಪೊರಕೆ ಬಳಕೆ ಬರುತ್ತದೆ.
ಇನ್ನು ಕಸ ಗುಡಿಸುವಾಗ ಕೆಲವರಿಗೆ ಬೆವರು ಬರುತ್ತದೆ. ಇದಕ್ಕೆ ಹ್ಯಾಂಡಲ್ ಗೆ ಹಳೆಯ ಸಾಕ್ಸ್ ಹಾಕಿ ರಬ್ಬರ್ ಹಾಕಿಕೊಳ್ಳಿ. ಈ ರೀತಿ ಮಾಡಿದರೆ ಕೈ ನೋವು ಆಗುವುದಿಲ್ಲ ಮತ್ತು ಬೆವರು ಕೂಡ ಆಗುವುದಿಲ್ಲ.
ಇನ್ನು ಕೆಲವರಿಗೆ ಕಸ ಗುಡಿಸುವ ಪೊರಕೆಯನ್ನು ಬಡಿಯುವ ಅಭ್ಯಾಸ ಇರುತ್ತದೆ. ಈ ರೀತಿ ಮಾಡಿದರೆ ಪೊರಕೆ ಬೇಗನೆ ಹಾಳು ಆಗುವ ಸಾಧ್ಯತೆ ಇರುತ್ತದೆ. ಬಾಳಿಕೆ ಕೂಡ ಬರುವುದಿಲ್ಲ ಮತ್ತು ಕಡ್ಡಿಗಳು ಉದುರಿ ಹೋಗುವ ಸಾಧ್ಯತೆ ಇರುತ್ತದೆ.
ಇನ್ನು ಪೊರಕೆಯನ್ನು ಗುಡಿಸಿದ ನಂತರ ಸ್ಟ್ರೈಟ್ ಆಗಿ ಇಡಬಾರದು. ಈ ರೀತಿ ಇಟ್ಟರೆ ಪೊರಕೆ ಕಡ್ಡಿ ಬೆಂಡು ಆಗುತ್ತದೆ ಹಾಗು ಮುರಿಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಪೊರಕೆಯನ್ನು ಯಾವಾಗಲು ಅಡ್ಡವಾಗಿ ಮಲಗಿಸಿ.
ಇನ್ನು ಹೊಸ ಪೊರಕೆ ತಾಂದ ತಕ್ಷಣ ಬಾಚಿಣಿಕೆ ಸಹಾಯದಿಂದ ಬಾಚಿದರೇ ಅದರಲ್ಲಿ ಇರುವ ದೂಳು ಎಲ್ಲಾ ಕಡಿಮೆ ಆಗುತ್ತದೆ. ಈ ರೀತಿ ಮಾಡಿದರೆ ದೂಳು ಬೀಳುವುದಿಲ್ಲ ಮತ್ತು ಪದೇ ಪದೇ ನೆಲ ವರೆಸುವುದು ತಪ್ಪುತ್ತದೆ.