ಮನೆಯಲ್ಲಿ ಲಕ್ಷ್ಮಿ ಕೃಪೆ ಪ್ರತಿಯೊಬ್ಬರಿಗೂ ಬೇಕಾಗುತ್ತದೆ. ಅದರೆ ಶಾಸ್ತ್ರಗಳು ಹೇಳುವ ಪ್ರಕಾರ ಲಕ್ಷ್ಮಿಯನ್ನು ಚಂಚಲೇ ಎಂದು ಕರೆಯುತ್ತಾರೆ. ಏಕೆಂದರೆ ಲಕ್ಷ್ಮಿ ಒಂದು ಬಾರಿ ನಿಲ್ಲುವ ಜಾಗದಲ್ಲಿ ಇನ್ನೊಂದು ಬಾರಿ ನಿಲ್ಲುವುದಿಲ್ಲ. ಈ ಕಾರಣದಿಂದ ಲಕ್ಷ್ಮಿಯನ್ನು ಒಲಿಸಿಕೊಂಡು ಅವಳ ಕೃಪೆಯನ್ನು ಪರೆಯಬೇಕು ಎಂದರೆ ಅದು ತುಂಬಾನೇ ಕಷ್ಟ. ಇದಕ್ಕಾಗಿ ಮನೆಯಲ್ಲಿ ಕೆಲವೊಂದು ಉಪಾಯವನ್ನು ಮಾಡಬೇಕಾಗುತ್ತದೆ.
ಮೊದಲು ಸ್ನಾನವನ್ನು ಮಾಡುವ ನೀರಿಗೆ ಒಂದು ಚೀಟಿಕೆ ಅರಿಶಿನವನ್ನು ಹಾಕಿಕೊಂಡು ಮಾಡಬೇಕು. ಇದರಿಂದ ನಿಮ್ಮ ಚರ್ಮಕ್ಕೆ ಸಂಬಂಧಪಟ್ಟಂತ ಸಾಕಷ್ಟು ರೋಗಗಳು ಕಡಿಮೆ ಆಗುತ್ತದೆ. ಇದರ ಜೋತೆಗೆ ದೇವನು ದೇವತೆಗಳ ಅಂಶ ಇರುವುದರಿಂದ ಇದರಿಂದ ಪಾಪಗಳ ನಾಶ ಕೂಡ ಆಗುತ್ತದೆ.
ಇನ್ನು ಮನೆಯಲ್ಲಿ ವಿಶೇಷವಾಗಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಇದೆ ಎಂದರೆ ನಿಮ್ಮ ಮನೆಯ ಪ್ರತಿ ಮೂಲೆಯಲ್ಲಿ ಅರಿಶಿಣದ ರೇಖೆಯನ್ನು ಹಾಕಬೇಕು. ಇದರಿಂದ ಯಾವುದೇ ನಕಾರಾತ್ಮಕ ಶಕ್ತಿಯ ಪ್ರವೇಶ ಕೂಡ ಆಗುವುದಿಲ್ಲ.
ಇನ್ನು ಮನೆಯಲ್ಲಿ ಕಷ್ಟಗಳು ಹೆಚ್ಚಾಗಿದ್ದಾರೆ ಲಕ್ಷ್ಮಿ ಅಥವಾ ವಿಷ್ಣು ಫೋಟೋ ಹಿಂದೆ ಒಂದು ಚಿಕ್ಕ ಪ್ಯಾಕ್ ನಲ್ಲಿ ಅರಿಶಿನವನ್ನು ಹಾಕಿ ಬಚ್ಚಿಡಬೇಕು. ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ಇರುವ ಕಷ್ಟಗಳು ಕಡಿಮೆ ಆಗುತ್ತದೆ.
ಇನ್ನು ಮಾವಿನ ಎಲೆ ತೆಗೆದುಕೊಂಡು ಹಿತ್ತಾಳೆ ಚೊಂಬಿನಲ್ಲಿ ನೀರು ಹಾಕಿ ಹಾಗು ಒಂದು ಚೀಟಿಕೆ ಅರಿಶಿನವನ್ನು ಹಾಕಿ ಇಡೀ ಮನೆಯೆಲ್ಲಾ ಮಾವಿನ ಎಲೆಯಿಂದ ಚಿಮುಕಿಸಬೇಕು. ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ಇರುವ ಸಾಕಷ್ಟು ಕಷ್ಟಗಳು ನಿಮಗೆ ಕಡಿಮೆ ಆಗುತ್ತದೆ ಹಾಗು ಲಕ್ಷ್ಮೀಯಿಂದ ಏನೇ ತೊಂದರೆ ಇದ್ದರು ಕೂಡ ಅದೆಲ್ಲ ಕಡಿಮೆ ಆಗುತ್ತದೆ.
ಇನ್ನು ಅಡುಗೆ ಮನೆಯಲ್ಲಿ ಇರುವ ಅರಿಶಿನ ಡಬ್ಬದಲ್ಲಿ 5 ಒಣ ಮೆಣಸು ಹಾಕಿದರೆ ನಿಮ್ಮ ಜೀವನದಲ್ಲಿ ಇರುವ ಸಾಕಷ್ಟು ಕಷ್ಟಗಳು ನಿವಾರಣೆ ಆಗುತ್ತದೆ ಮತ್ತು ಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ.