ಮಲ/ಸಂಡಾಸ್ ಆಚೆ ಹಾಕುವ ಔಷಧಿ!

ಜಡತ್ವದ ಜೀವನ, ಜಂಕ್ ಫುಡ್, ವ್ಯಾಯಾಮವಿಲ್ಲದೆ ಇರುವುದು ಹಾಗೂ ಒತ್ತಡ ಇವೆಲ್ಲವೂ ಸೇರಿಕೊಂಡು ನಮ್ಮ ಆರೋಗ್ಯದ ಮೇಲೆ ಗಾಢ ಪರಿಣಾಮ ಬೀರುವುದು. ಆದರೆ ಅದು ನಮಗೆ ತಿಳಿದುಬರುವುದು ಕೆಲವೊಂದು ಸಮಸ್ಯೆಗಳು ಬಂದಾಗ ಮಾತ್ರ.

ನಾವು ಇಲ್ಲಿ ಮಾತನಾಡಲು ಹೊರಟಿರುವುದು, ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಎದುರಿಸುವಂತಹ ಮಲಬದ್ಧತೆ ಸಮಸ್ಯೆ. ಅತಿಯಾದ ಒತ್ತಡದ ಜೀವನ. ನಾರಿನಾಂಶ ಕಡಿಮೆ ಇರುವ ಆಹಾರ ಸೇವನೆ ಇದಕ್ಕೆಲ್ಲಾ ಕಾರಣವಾಗಿದೆ.

ಆದರೆ ಪ್ರತಿಯೊಂದು ಸಮಸ್ಯೆಗೂ ಪರಿಹಾರವೆನ್ನುವುದು ಇದ್ದೇ ಇದೆ ಎನ್ನುವಂತೆ ಮಲಬದ್ಧತೆ ಸಮಸ್ಯೆಯನ್ನು ಕೂಡ ಬಗೆಹರಿಸಬಹುದು. ಅದು ಕೂಡ ಕೆಲವೊಂದು ಯೋಗಾಸನಗಳ ಮೂಲಕ.

ಹೌದು, ನಾವಿಲ್ಲಿ ನಿಮಗೆ ಮೂರು ಯೋಗಾಸನಗಳನ್ನು ತಿಳಿಸಿಕೊಡಲಿದ್ದೇವೆ. ಇದನ್ನು ಅಭ್ಯಾಸ ಮಾಡಿದರೆ ಅದರಿಂದ ಖಂಡಿತವಾಗಿಯೂ ನೀವು ಮಲಬದ್ಧತೆ ನಿವಾರಣೆ ಮಾಡಬಹುದು.

​ಮಲಬದ್ಧತೆಗೆ ಯೋಗ ಹೇಗೆ ನೆರವಾಗುವುದು?

ಯೋಗವು ನಿಮ್ಮ ದೇಹವನ್ನು ಫಿಟ್ ಆಗಿ ಇಡುವ ಜತೆಗೆ ಇನ್ನೂ ಹಲವಾರು ರೀತಿಯ ಆರೋಗ್ಯ ಲಾಭಗಳನ್ನು ನೀಡುವುದು. ಇದರಲ್ಲಿ ಮುಖ್ಯವಾಗಿ ಯೋಗಾಸನ ಮಾಡಿದರೆ ಅದು ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿನ ನೋವು ಮತ್ತು ಅದರಿಂದ ಆಗುವಂತಹ ಸಮಸ್ಯೆ ನಿವಾರಣೆ ಮಾಡುವುದು.

​ಹೊಟ್ಟೆಗೆ ಮಸಾಜ್ ಮಾಡಿ

ಯೋಗಾಸನ ಮಾಡುವಾಗ ನಾವು ದೇಹದ ಪ್ರತಿಯೊಂದು ಭಾಗಗಳನ್ನು ತಿರುಗುತ್ತಿದ್ದೇವೆ ಮತ್ತು ಬಾಗಿಸುತ್ತೇವೆ. ಹೀಗಾಗಿ ನಮ್ಮ ಹೊಟ್ಟೆಯ ಮೇಲೆ ಕೂಡ ಇದರ ಪರಿಣಾಮ ಬೀರುವುದು ಮತ್ತು ಕರುಳಿನ ಕ್ರಿಯೆಗಳು ಸರಾಗವಾಗುವುದು.

​ಒತ್ತಡ ನಿಭಾಯಿಸುವುದು

ಮಲಬದ್ಧತೆಗೆ ಅತ್ಯಧಿಕ ಕಾರಣವೆಂದರೆ ಅದು ಒತ್ತಡ. ಹೀಗಾಗಿ ನೀವು ಯೋಗಾಸನ ಮಾಡಿದರೆ ಅದು ಮನಸ್ಸನ್ನು ಶಾಂತವಾಗಿಸುವುದು. ನಾವಿಲ್ಲಿ ನೀಡಿರುವಂತಹ ಮೂರು ಯೋಗಾಸನ ಗಳನ್ನು ಅಭ್ಯಾಸ ಮಾಡಿ ಮತ್ತು ಫಲಿತಾಂಶ ನಿಮಗೆ ತಿಳಿದುಬರುವುದು.

​ಪವನಮುಕ್ತಾಸನ

ಮೊದಲ ಹಂತ: ನೆಲದ ಮೇಲೆ ಯೋಗ ಮ್ಯಾಟ್ ಹಾಕಿ ಹಾಗೆ ಬೆನ್ನ ಮೇಲೆ ಮಲಗಿ.

ಎರಡನೇ ಹಂತ: ಮೊಣಕಾಲನ್ನು ಮಡಚಿಕೊಂಡು ಹಾಗೆ ತೊಡೆಯನ್ನು ಹೊಟ್ಟೆ ಸಮೀಪಕ್ಕೆ ತನ್ನಿ. ಮೊಣಕಾಲುಗಳು ಮತ್ತು ಪಾದಗಳು ಜತೆಯಾಗಿರಲಿ.

ಮೂರನೇ ಹಂತ: ಕೈಗಳನ್ನು ಕಾಲುಗಳ ಹತ್ತಿರಕ್ಕೆ ತಂದು ಹಿಡಿಯಿರಿ.

ನಾಲ್ಕನೇ ಹಂತ: ಕುತ್ತಿಗೆ ಮೇಲೆತ್ತಿ ಮತ್ತು ಗಲ್ಲವನ್ನು ಎದೆಗೆ ಒತ್ತಿಕೊಳ್ಳಿ. ಈಗ ಭಂಗಿಯಲ್ಲಿ ನೀವು 4-5 ಸಕೆಂಡು ಕಾಲ ಇರಿ ಮತ್ತು ಇದರ ಬಳಿಕ ಮೊದಲ ಭಂಗಿಗೆ ಬನ್ನಿ.

​ಮಾಲಾಸನ

ಮೊದಲ ಹಂತ: ಕಾಲುಗಳನ್ನು ಸ್ವಲ್ಪ ಅಗಲ ಮಾಡಿಕೊಂಡು ಹಾಗೆ ಯೋಗ ಮ್ಯಾಟ್ ಮೇಲೆ ನಿಂತುಕೊಳ್ಳಿ.

ಎರಡನೇ ಹಂತ: ಮೊಣಕಾಲನ್ನು ಬಗ್ಗಿಸಿ ಹಾಗೆ ಕುಳಿತುಕೊಳ್ಳಿ ಮತ್ತು ಸ್ಕ್ವಾಟ್ ಭಂಗಿಗೆ ಬನ್ನಿ.

ಮೂರನೇ ಹಂತ: ಮೊಣಕೈಗಳನ್ನು ಮಡಚಿ ಅಂಗೈಯನ್ನು ಜತೆಯಾಗಿ ಇಟ್ಟುಕೊಳ್ಳಿ ಮತ್ತು ಕೈಗಳನ್ನು ಹಾಗೆ ಮೊಣಕಾಲಿನ ಒಳಗೆ ತನ್ನಿ ಮತ್ತು ಮೊಣಕೈಯಿಂದ ಒಳಭಾಗದ ಮೊಣಕಾಲನ್ನು ಒತ್ತಿ.

ನಾಲ್ಕನೇ ಹಂತ: ಬೆನ್ನು, ಕುತ್ತಿಗೆ ನೇರವಾಗಿರಲಿ ಮತ್ತು ಭುಜಗಳು ಆರಾಮವಾಗಿರಲಿ.

ಐದನೇ ಹಂತ: ಈ ಭಂಗಿಯಲ್ಲಿ ನೀವು 4-5 ಸಲ ಉಸಿರು ಎಳೆದು, ಬಿಟ್ಟು ಬಳಿಕ ಆರಾಮ ಮಾಡಿ.

ಬಾಲಾಸನ

ಮೊದಲ ಹಂತ: ಪಾದಗಳು ಮೇಲಕ್ಕೆ ನೋಡುತ್ತಿರುವಂತೆ ಹಾಗೆ ನೀವು ಯೋಗ ಮ್ಯಾಟ್ ಮೇಲೆ ಕುಳಿತುಕೊಳ್ಳಿ. ಪಾದಗಳು ಜತೆಯಾಗಿ ಇರಲಿ ಮತ್ತು ಮೊಣಕಾಲುಗಳು ಸ್ವಲ್ಪ ಅಂತರದಲ್ಲಿರಲಿ. ಎರಡು ಕೈಗಳು ಹಾಗೆ ಬದಿಯಲ್ಲಿರಲಿ.

ಎರಡನೇ ಹಂತ: ಉಸಿರು ಬಿಡಿ ಮತ್ತು ಮುಂಡವನ್ನು ಮುಂದಕ್ಕೆ ತನ್ನಿ, ಹಾಗೆ ತೊಡೆಯ ಮೇಲೆ ಕುಳಿತುಕೊಳ್ಳಿ. ತಲೆಯು ಮ್ಯಾಟ್ ನ್ನು ಸ್ಪರ್ಶಿಸಬೇಕು.

ಮೂರನೇ ಹಂತ: ಈಗ ಕೈಗಳನ್ನು ಹಾಗೆ ಮುಂದೆ ತಂದು ಯೋಗ ಮ್ಯಾಟ್ ಸ್ಪರ್ಶಿಸುವಂತೆ ಇರಲಿ.

ನಾಲ್ಕನೇ ಹಂತ: ಈ ಭಂಗಿಯಲ್ಲಿ 4-5 ಸೆಕೆಂಡುಗಳ ಕಾಲ ಹಾಗೆ ಇರುವಾಗ ಉಸಿರು ತೆಗೆದುಕೊಳ್ಳಿ ಮತ್ತು ಬಿಡಿ. ಇದರ ಬಳಿಕ ನೀವು ಮೊದಲಿನ ಭಂಗಿಗೆ ಬನ್ನಿ.

Leave a Comment