ದೇವರು ಒಬ್ಬನೇ ಅದರೆ ಅವನಿಗೆ ಇರುವ ಹೆಸರುಗಳು ಬಿರುದುಗಳು ಬೇರೆ ಬೇರೆ ರೀತಿ ಇವೆ.ಶಿವನಿಗೆ ಪರಮೇಶ್ವರ ನೀಲಕಂಠ ವಿಷಕಂಠ ಎಂದು ಕರೆಯುತ್ತಾರೆ. ಅದರೆ ಏಕೆ ಶಿವನಿಗೆ ಹೆಸರು ಬಂದಿದೆ ಅನ್ನೋದನ್ನ ಅನೇಕರು ತಿಳಿದಿಲ್ಲ. ನಮ್ಮ ಹಿಂದೂ ಪುರಾಣದ ಪ್ರಕಾರ ಶಕ್ತಿ ದೇವತೆಯೂ ದುರ್ವಸ ಮುನಿಗಳಿಗೆ ಹೂವಿನ ಹಾರವನ್ನು ಕೊಡುತ್ತಾರೆ. ಅದನ್ನು ಹೊತ್ತುಕೊಂಡು ದೇವಲೋಕಕ್ಕೆ ಹೋಗುವಾಗ ಎದುರಿಗೆ ಇಂದ್ರ ದೇವನು ಐರಾವತದ ಮೇಲೆ ಕುಳಿತು ಸವಾರಿ ಮಾಡುತ್ತ ಬರುತ್ತಾರೆ.
ದೇವಲೋಕದ ರಾಜನೆಂಬ ಗೌರವದಿಂದ ದುರ್ವಸ ಮುನಿಗಳು ತಮ್ಮ ಕೈಯಲ್ಲಿ ಇರುವ ಹಾರಗಳನ್ನು ಇಂದ್ರನಿಗೆ ಹಾಕಲು ಮುಂದಾಗುತ್ತಾರೆ. ಅದರೆ ಇಂದ್ರ ಹಾರವನ್ನು ತನ್ನ ಕೈಯಿಂದ ಸ್ವೀಕರಿಸಿ ಅದನ್ನು ತನ್ನ ವಾಹನ ಐರಾವತ ದಂತಕ್ಕೆ ನೇತಾಕುತ್ತಾರೆ. ಆನೆಗೆ ಹೂವಿನ ಸುಗಂಧದಿಂದ ಕಿರಿಕಿರಿ ಉಂಟಾಗಿ ಅದನ್ನು ಕೆಳಗೆ ಹಾಕಿ ಆ ಹೂವು ಹಾರವನ್ನು ಕಾಲಿನಿಂದ ತುಳಿದು ಹಾಕುತ್ತದೇ.
ದುರ್ವಸ ಮುನಿಗಳು ಮೊದಲೇ ಕೋಪಿಷ್ಠರು ದುರ್ವಸ ಮುನಿಗಳಿಗೆ ಈ ಅವಮಾನವನ್ನು ಸಹಿಸಲು ಸಾಧ್ಯವಾಗುವುದಿಲ್ಲ. ಅವರು ಸಾಕ್ಷಾತ್ ತ್ರಿಮೂರ್ತಿಗಳನ್ನೇ ಪರೀಕ್ಷೇ ಮಾಡಿದವರು ಮತ್ತು ಶ್ರೀಮನ್ ನಾರಾಯಣರನ್ನು ಕಾಲಿನಿಂದ ಒಡೆದವರು. ದುರ್ವಸ ಮುನಿಗಳು ಕೋಪದಿಂದ ಇಂದ್ರನಿಗೆ ದೇವೇಂದ್ರ ಸಿರಿ ಸಂಪತ್ತಿನಿಂದ ಕೂಡಿದ ಸ್ವರ್ಗಕ್ಕೆ ಅಧಿಪತಿ ಆಗಿರುವ ನಿನಗೆ ಇಷ್ಟೊಂದು ಅಹಂಕಾರ. ಅಂತಹ ಸಿರಿ ಸಂಪತ್ತು ಐಶ್ವರ್ಯ ನಿನ್ನಿಂದ ದೂರ ಆಗಲಿ ಎಂದು ಶಾಪ ನೀಡುತ್ತಾರೆ. ಹೀಗೆ ದುರ್ವಸ ಮುನಿಗಳ ಶಾಪದಿಂದ ಅದೆಲ್ಲರ ಒಡತಿಯಾದ ಶ್ರೀ ಮಹಾಲಕ್ಷ್ಮಿ ಸ್ವರ್ಗವನ್ನು ಬಿಟ್ಟು ಹೊರಟುಹೋಗುತ್ತಾಳೆ. ಲಕ್ಷ್ಮಿ ದೇವಿಯು ಸ್ವರ್ಗದಿಂದ ಹೋದಮೇಲೆ ಸ್ವರ್ಗ ಲೋಕ ಕತ್ತಲಿನಿಂದ ಕೂಡಿ ಹೋಗುತ್ತದೆ.
ಆಗ ಸ್ವರ್ಗ ಲೋಕ ಮೃತ್ಯು ಲೋಕದಂತೆ ಕಾಣುವಂತೆ ಆಗುತ್ತದೆ. ಇದರಿಂದ ಕಂಗಲಾದ ದೇವತೆಗಳು ಬ್ರಹ್ಮ ದೇವರ ಮೊರೆ ಹೋಗುತ್ತಾರೆ. ದೇವತೆಗಳು ಬ್ರಹ್ಮ ದೇವನ ಬಳಿ ಬಂದಾಗ ಬ್ರಹ್ಮ ದೇವ ಇವರೆಲ್ಲರನ್ನು ಕರೆದುಕೊಂಡು ಶ್ರೀ ಮಹಾವಿಷ್ಣುವಿನ ಬಳಿ ಹೋಗುತ್ತಾರೆ. ದೇವಲೋಕದ ಸಮಸ್ಸೆ ಬಗ್ಗೆ ತಿಳಿದುಕೊಂಡ ಶ್ರೀ ಮಹಾವಿಷ್ಣು ಇಂದ್ರನು ದೇವತೆಗಳೇ ದುರ್ವಸ ಮುನಿಗಳ ಶಾಪಕ್ಕೆ ಪರಿಹಾರವಿಲ್ಲ. ಅದರಲ್ಲೂ ಇಂದ್ರ ನೀನು ಮಾಡಿರುವ ತಪ್ಪಿಗೆ ಕ್ಷಮೆಯೇ ಇಲ್ಲಾ.
ದುರ್ವಸ ಮುನಿಗಳು ಅವರ ಶಾಪವನ್ನು ಎಂದಿಗೂ ಬದಲಾಯಿಸುವುದಿಲ್ಲ ಹಾಗು ಸಿರಿ ಸಂಪತ್ತು ಐಶ್ವರ್ಯ ಇಲ್ಲದೆ ಸ್ವರ್ಗ ಲೋಕವು ಹೆಚ್ಚಿನ ಕಾಲ ಉಳಿಯುವುದಿಲ್ಲ. ಇದಕ್ಕೆ ಇರುವ ಒಂದೇ ಒಂದು ಪರಿಹಾರ ಅಂದರೆ ಕ್ಷಿರ ಸಾಗರದ ಮಂತನ ಮಾಡಿ ಆಗ ಲಕ್ಷ್ಮಿ ದೇವಿಯು ಮತ್ತೆ ಹುಟ್ಟಿ ಬರುತ್ತಾರೆ. ಅವರೊಂದಿಗೆ ಅನೇಕ ದೇವನು ದೇವತೆಗಳು ಸಹ ಹುಟ್ಟಿ ಬರುತ್ತಾರೆ ಎಂದು ಹೇಳುತ್ತಾರೆ. ಅದರೆ ಸಮುದ್ರ ಮಂತನ ಮಾಡಬೇಕು ಎಂದರೆ ಅಸುರರ ಸಹಾಯವು ಬೇಕಾಗಿರುತ್ತದೆ.
ಹಾಗಾಗಿ ಇಂದ್ರ ಮತ್ತು ದೇವತೆಗಳು ಅಸುರರ ಬಳಿ ಹೋಗೀ ಸಹೋದರರೆ ನಾವು ಕ್ಷಿರ ಸಾಗರವನ್ನು ಮಂತಿಸಿದರೆ ಅದರ ಒಳಗೆ ಇರುವಂತಹ ಅಪಾರ ಸಂಪತ್ತು ನಮ್ಮದಾಗುತ್ತದೆ. ಎಷ್ಟೋ ಸುಂದರವಾದ ಅಪ್ಸರೆಗಳು ಹುಟ್ಟಿಬರುತ್ತಾರೆ. ಅದಕ್ಕಿಂತ ಮುಖ್ಯವಾಗಿ ಅಮೃತ ಹೊರ ಬರುತ್ತದೆ. ಅದನ್ನು ನಾವು ಸೇವಿಸಿದರೆ ನಾವೆಲ್ಲವೂ ಅಮರರು ಆಗಬಹುದು. ನಾವೆಲ್ಲರೀ ಅದನ್ನು ಸಾಮಾನವಾಗಿ ಹಂಚಿಕೊಳ್ಳಬಹುದು ಎಂದು ನಂಬಿಸಿ ಅಸುರರನ್ನು ಜೊತೆಗೆ ಸೇರಿಸಿಕೊಳ್ಳುತ್ತಾರೆ.
ಮೊದಲು ಕ್ಷಿರ ಸಾಗರವನ್ನು ಮಂತಿಸಲು ಮಂದಾರ ಪರ್ವತವನ್ನು ಕಿತ್ತು ತರುತ್ತಾರೆ ಹಾಗೆ ಸಮುದ್ರವನ್ನು ಮಂತಿಸಲು ವಾಸುಕಿ ಸರ್ಪವನ್ನು ಕರೆದು ತರುತ್ತಾರೆ. ಅದರೆ ಮಂದಾರ ಪರ್ವತ ನೀರಿನಲ್ಲಿ ಮುಳುಗಿ ಹೋಗಲು ಆರಂಭಿಸುತ್ತದೆ. ಹಾಗಾಗಿ ಶ್ರೀ ಮಹಾವಿಷ್ಣು ಕೂರ್ಮ ಅವತರ ತಾಳಿ ಆ ಪರ್ವತ ಮುಳುಗಿ ಹೋಗದಂತೆ ಅದರ ಬೆನ್ನಿನ ಮೇಲೆ ಇರಿಸಿಕೊಳ್ಳುತ್ತಾಳೆ. ವಾಸಕಿ ಮುಖದ ಭಾಗ ಅಸುರರು ಹಿಡಿದಿದ್ದಾರೆ ಬಾಲವನ್ನು ದೇವನು ದೇವತೆಗಳು ಹಿಡಿದು ಕೊಂಡು ಇರುತ್ತಾರೆ.
ಸಮುದ್ರ ಮಂತನದಲ್ಲಿ ಮೊದಲು ಹುಟ್ಟಿ ಬಂದ ವಸ್ತುವೆ ಭಯಂಕರವಾದ ವಿಷ. ಅದರ ಪರಿಣಾಮದಿಂದ ದೇವತೆಗಳು ಮತ್ತು ಅಸುರರು ಮೂರ್ಛೆ ಹೋಗುತ್ತಾರೆ. ಇನ್ನು ಈ ವಿಷ ಇಡೀ ಭೂಮಿಯನ್ನೇ ನಾಶ ಮಾಡುತ್ತದೆ ಎಂದು ತಿಳಿದ ಲಯಕರ ಪರಮೇಶ್ವರ ಆ ಇಡೀ ವಿಷವನ್ನು ಸೇವಿಸಿ ಅವರ ಕಂಠದ ಒಳಗೆ ಇರಿಸಿಕೊಳ್ಳುತ್ತಾರೆ. ಇದೆ ಕಾರಣದಿಂದ ನೋಡಿ ಪರಮೇಶ್ವರನ ಕೊರಳು ನೀಲಿ ಬಣ್ಣದಲ್ಲಿ ಇರುತ್ತದೆ. ಅದನ್ನು ನೋಡಿ ಮಹಾವಿಷ್ಣುವೇ ಶಿವನಿಗೆ ನೀಲಕಂಠ ಎಂದು ಬಿರುದನ್ನು ಇಡುತ್ತಾರೆ.