ಅದೃಷ್ಟ ನಮ್ಮನ್ನು ಹುಡುಕಿಕೊಂಡು ಬರಬೇಕು ಎಂದರೆ ಅದೆಷ್ಟೋ ಮಾರ್ಗಗಳು ಇವೆ. ಆಕಸ್ಮಿಕವಾಗಿ ಧನ ಪ್ರಾಪ್ತಿ ಆಕಸ್ಮಿಕವಾಗಿ ಉದ್ಯೋಗ ಪ್ರಾಪ್ತಿ ಆಕಸ್ಮಿಕವಾಗಿ ಐಶ್ವರ್ಯ ಪ್ರಾಪ್ತಿ ಇತ್ಯಾದಿಗಳು ಎಲ್ಲವೂ ಸಹಿತ ಬರುವುದಕ್ಕೆ ಕೆಲವು ಕಾರಣಗಳು ಸಾಧ್ಯವಾಗುತ್ತದೆ. ಲಕ್ಷ್ಮಿ ಪ್ರಾಪ್ತಿಗಾಗಿ ಅದೆಷ್ಟೋ ಹೊರಟವನ್ನು ಮಾಡುತ್ತೇವೆ. ಇನ್ನು ಒಂದು ಮಗು ಹುಟ್ಟಿದಾಗ ಆ ಮಗುವಿಗೆ 6 ಬೆರಳು ಇದ್ದರೆ ಅದು ಅದೃಷ್ಟದ ಸಂಕೇತವಾಗಿದೆ. ಇನ್ನು ಗಂಡು ಮಕ್ಕಳಿಗೆ ಬಲಗೈಯಲ್ಲಿ 6 ಬೆರಳು ಮತ್ತು ಹೆಣ್ಣು ಮಗುವಿನ ಎಡಗೈಯಲ್ಲಿ 6 ಬೆರಳು ಇದ್ದರೆ ಅದು ಆ ಮನೆಯ ಅದೃಷ್ಟದ ಸಂಕೇತ ಎಂದು ಹೇಳಲಾಗಿದೆ. ಹಾಗಾಗಿ 6 ಬೆರಳು ಹುಟ್ಟಿದರೆ ಶಸ್ತ್ರ ಚಿಕಿತ್ಸೆ ಮಾಡಬೇಡಿ.
ಇನ್ನು ಕೆಲವರಿಗೆ ಹಣೆಯ ಭಾಗ ಎತ್ತರವಾಗಿ ವಿಶಾಲವಾಗಿರುತ್ತದೆ. ಇಂತವರ ಅದೃಷ್ಟವು ತುಂಬಾ ಅದೃಷ್ಟವಾದದ್ದು ಕುಟುಂಬದ ಕೀರ್ತಿಯನ್ನು ಬೆಳಗುವ ಜ್ಞಾನದ ಜ್ಯೋತಿಯನ್ನು ಬೆಳಗಿಸುವ ವಿಶೇಷತೆ ಕಂಡು ಬರುವ ಸಾಧ್ಯತೆ ಇರುತ್ತದೆ.
ಇನ್ನು ಕೆಲವರಿಗೆ ಮೂಗು ಉದ್ದವಾಗಿ ಇರುತ್ತದೆ. ಉದ್ದ ಮೂಗು ಅದೃಷ್ಟದ ಸಂಕೇತ ಎಂದು ಹೇಳಲಾಗಿದೆ.ಈ ರೀತಿ ಇದ್ದರೆ ಕುಟುಂಬದವರ ಅಭಿವೃದ್ಧಿಯನ್ನು ಸಾರುವಂತದ್ದು. ಯಾವುದೇ ರಂಗದಲ್ಲಿ ಹೋದರೆ ಅಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆಯುವ ಸಾಧ್ಯತೆ ಇರುವಂತದ್ದು.
ಇನ್ನು ಕೆಲವರಿಗೆ ತಲೆಯಲ್ಲಿ ಎರಡು ಸುಳಿ ಇರುತ್ತದೆ. ಇದು ಕೂಡ ಅದೃಷ್ಟಕ್ಕೆ ಸಂಕೇತವಾದದ್ದು ಮತ್ತು ಎರಡು ಮದುವೆಯ ಯೋಗ ಆಗುವ ಸಾಧ್ಯತೆ ಕೂಡ ಇದೆ.